ಬೆಂಗಳೂರು : ಕೋಟಿ ಕೋಟಿ ಲೋನ್ ಕೊಡಿಸೋದಾಗಿ ವಂಚನೆ ಮಾಡಿದ್ದು, ವಂಚಕರಿಗೆ ಕೊಟ್ಟ ಹಣ ವಾಪಸ್ ಕೇಳಿದ ಉದ್ಯಮಿ ಕಾಲು ಮುರಿದಿದ್ದಾರೆ. ಹೈದ್ರಾಬಾದ್ ಮೂಲದ ರಾಮನೇಶ್ವರ ಕಾಲು ಮುರಿಸಿಕೊಂಡ ಉದ್ಯಮಿಯಾಗಿದ್ದಾರೆ.
ಉದ್ಯಮಿ ರಾಮನೇಶ್ವರ್ ಉದ್ಯಮಕ್ಕಾಗಿ 10 ಕೋಟಿ ಲೋನ್ಗಾಗಿ ಕುಮಾರ್ ಎಂಬಾತನ ಮೊರೆ ಹೋಗಿದ್ದಾರೆ. ಕುಮಾರ್ ತನ್ನ ಏಜನ್ಸಿ ಮೂಲಕ ಸಾಲ ಕೊಡಿಸ್ತೀನಿ ಎಂದಿದ್ದನು. ಕುಮಾರ್ 1 ಪರ್ಸೆಂಟ್ ಬ್ರೋಕರೇಜ್ ಕೊಡ್ಬೇಕು ಎಂದಿದ್ದ, ಉದ್ಯಮಿ ರಾಮನೇಶ್ವರ್ ಲೋನ್ ಮಂಜೂರಾಗೋ ಮುನ್ನವೇ 1 ಕೋಟಿ ಬ್ರೋಕರೇಟ್ ನೀಡಿದ್ದಾರೆ. ಉದ್ಯಮಿ ತಿಂಗಳು ಕಳೆದ್ರೂ ಲೋನ್ ಸಿಗದೇ ಇದ್ದಾಗ ಹಣ ವಾಪಸ್ ಕೇಳಿದ್ದಾರೆ. ಕುಮಾರ್ ಸ್ನೇಹಿತ ಮನೋಜ್ನ ಬಾಗಲೂರು ಮನೆಗೆ ಕರೆದೊಯ್ದಿದ್ದನು. ಈ ವೇಳೆ ಆದಿತ್ಯ, ರಂಜಿತ್, ಶ್ರೀಕಾಂತ್ರೆಡ್ಡಿ ರಾಮನೇಶ್ವರ್ ಕಾರ್ ಅಡ್ಡಗಟ್ಟಿದ್ದಾರೆ. ಕುಮಾರ್ ಸಹಚರರು ಉದ್ಯಮಿ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಬಾಗಲೂರು ಠಾಣೆಗೆ ಉದ್ಯಮಿ ರಾಮನೇಶ್ವರ್ ದೂರು ನೀಡಿದ್ದು, ಪೊಲೀಸರು ಹಲ್ಲೆ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ