ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಸಹೋದರನ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು

ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರ ಸಹೋದರ ರಾಘವೇಂದ್ರ ಡಿ ಚನ್ನಣ್ಣನವರ್ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಚಂದ್ರಾ ಲೇಔಟ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ರಾಘವೇಂದ್ರ ತನಗೆ ಗೊತ್ತಿಲ್ಲದೆ ತನ್ನ ಸಂಬಂಧಿಯನ್ನು ಮದುವೆಯಾಗಿದ್ದಾನೆ ಎಂದು ಅವರ ಪತ್ನಿ ಆರೋಪಿಸಿದ್ದಾಳೆ.

ರೋಜಾ ಎಲ್ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಘಟನೆ ಗದಗದಲ್ಲಿ ನಡೆದಿರುವುದರಿಂದ ಅಲ್ಲಿಗೆ ಪ್ರಕರಣವನ್ನು ವರ್ಗಾಯಿಸಲಾಗುವುದು ಎಂದು ಚಂದ್ರ ಲೇಔಟ್ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಘವೇಂದ್ರ ಡಿ ಚನ್ನಣ್ಣವರ್ ಹಾಗೂ ರೋಜಾ ಅವರು 2015 ರಲ್ಲಿ ವಿವಾಹವಾಗಿದ್ದಾರೆ.

 

ಶಿವಮೊಗ್ಗ ಮೂಲದ ರೋಜಾ, ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಆಕೆಯ ಪೋಷಕರು ರಾಘವೇಂದ್ರನ ಕುಟುಂಬಕ್ಕೆ ವರದಕ್ಷಿಣೆಯಾಗಿ ಚಿನ್ನಾಭರಣ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಸ್ವಲ್ಪ ಸಮಯದ ನಂತರ, ತನ್ನ ಪತಿ ತಮ್ಮ ಸಂಬಂಧಿಕರೊಬ್ಬರೊಂದಿಗೆ ಸಂಬಂಧ ಹೊಂದಿರುವುದು ತಿಳಿದುಬಂದಿದೆ.

ಈ ಬಗ್ಗೆ ಆಕೆ ಪ್ರಶ್ನಿಸಿದಾಗ, ರಾಘವೇಂದ್ರ ಇಬ್ಬರೂ ಮಹಿಳೆಯರೊಂದಿಗೆ ವಾಸಿಸಲು ಬಯಸಿದ್ದರಿಂದ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಅವಳಿಗೆ ಅತ್ತೆ ಮಾವ ಸಲಹೆ ನೀಡಿದ್ದಾರೆ. ಆದರೆ, ಅದನ್ನು  ಆಕೆ ನಿರಾಕರಿಸಿದಾಗ ರಾಘವೇಂದ್ರ ಪೋಷಕರಿಂದ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡತೊಡಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಪೊಲೀಸರು ಎಫ್‌ಐಆರ್‌ನಲ್ಲಿ ಒಂದೆರಡು ಹೆಸರುಗಳನ್ನು ಉಲ್ಲೇಖಿಸದ ಕಾರಣ ಮತ್ತು ತನಿಖೆಯಲ್ಲಿ ಪ್ರಭಾವ ಬೀರುತ್ತಿರುವ ಕಾರಣ ನಾನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪರ್ಕಿಸಿದ್ದೇನೆ ಎಂದು ರೋಜಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

Share & Spread
error: Content is protected !!