ಬೆಂಗಳೂರು: ರಾಜ್ಯದ 3,762 ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಅಂಗವೈಕಲ್ಯ ಅಡ್ಡಿಯಾಗಿಲ್ಲ. ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅದರಲ್ಲೂ ಅವರಲ್ಲಿ ಹತ್ತು ಮಂದಿ 625 ರಲ್ಲಿ 611 ರಿಂದ 622 ಅಂಕಗಳನ್ನು ಗಳಿಸಿದ್ದಾರೆ.
ಬೆಂಗಳೂರು ದಕ್ಷಿಣ ಹೊನ್ನಗನಹಟ್ಟಿಯ ಕರ್ನಾಟಕ ಪಬ್ಲಿಕ್ ಶಾಲೆಯ ದಿವ್ಯಾಂಗ ವಿದ್ಯಾರ್ಥಿ ಡಿ.ಸಿ. ನೂತನ್ ಪೂಜಾರ್ 625 ಅಂಕಗಳ ಪೈಕಿ 613 ಅಂಕ ಗಳಿಸಿದ್ದಾನೆ. ಈತ ಟಾಪ್ 10 ದಿವ್ಯಾಂಗ ವಿದ್ಯಾರ್ಥಿಗಳಲ್ಲಿ ಒಬ್ಬನಾಗಿದ್ದಾನೆ. ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಂಡು ಐಐಎಸ್ ಅಧಿಕಾರಿಯಾಗಬೇಕೆಂಬುದು ಈತನ ಗುರಿಯಾಗಿದೆ. ಅದಕ್ಕಾಗಿ ಪಿಯುಸಿಯಲ್ಲಿ ಕಲಾ ವಿಷಯ ತೆಗೆದುಕೊಳ್ಳಲು ಯೋಜಿಸಿದ್ದಾನೆ.
ನಮ್ಮ ಅಂಗವೈಕಲ್ಯದ ಬಗ್ಗೆ ದೂಷಿಸುವ ಬದಲು ಉತ್ತಮ ಪ್ರಯತ್ನ, ಶ್ರಮದಿಂದ ಯಶಸ್ಸು ಗಳಿಸಬಹುದು ಎಂದು ನೂತನ್ ಹೇಳಿದ್ದಾರೆ. ಕನ್ನಡ ಪ್ರೊಫೆಸರ್ ಡಾ. ಚಿತ್ತಯ್ಯ ಪೂಜಾರ್ ಮತ್ತು ಎ.ಜಿ ಶ್ರೀಲಕ್ಷ್ಮಿ ಅವರ ಮಗನಾಗಿರುವ ನೂತನ್ ಹುಟ್ಟಿನಿಂದಲೇ ದಿವ್ಯಾಂಗತೆ ಇದ್ದರೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾನೆ.
ಪರೀಕ್ಷೆ ತಯಾರಿಗಾಗಿ ಆತ ಯಾವ ರೀತಿ ಯೂ ಟ್ಯೂಬ್ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾಗಿ ಪ್ರಿನ್ಸಿಪಾಲ್ ಮೃತ್ಯುಂಜಯ ವಿವರಿಸಿದರು.