ಅಂತರಾಜ್ಯ ದರೋಡೆಕೋರರನ್ನು ಎಡೆಮುರಿ ಕಟ್ಟಿ ಬಂಧಿಸುವಲ್ಲಿ ಕುಂಬಳಗೋಡು ಪೊಲೀಸರ ಸಾಧನೆ

ದರೋಡೆ ಹಾಗೂ ಮನೆ ದೋಚುತ್ತಿದ್ದ ಅಂತರಾಜ್ಯ ದರೋಡೆಕೋರರನ್ನು ಎಡೆಮುರಿ ಕಟ್ಟಿ ಬಂಧಿಸುವಲ್ಲಿ ಕುಂಬಳಗೋಡು ಪೊಲೀಸ್ ಠಾಣೆಯ ಪೊಲೀಸರು ಸಾಧನೆ ಮೆರೆದಿದ್ದಾರೆ ಒಟ್ಟು ಐದು ದರೋಡೆ ಹಾಗೂ ವಿವಿಧ ಮನೆದೋಚುವ ಪ್ರಕರಣವನ್ನು ಪತ್ತೆ ಮಾಡಿ ಆರೋಪಿಗಳಿಂದ ಬಾರಿ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಹಾಗೂ ಒಂದು ಲ್ಯಾಪ್ಟಾಪ್ ಸೇರಿ 22 ಲಕ್ಷದ 80 ಸಾವಿರ ರೂಪಾಯಿಗಳ ಮೌಲ್ಯವನ್ನು ವಶಪಡಿಸಿಕೊಂಡು ಐನಾತಿ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ ವಿ ಸುರೇಶ್ , ರಾಮಚಂದ್ರಯ್ಯ ಹಾಗೂ ಮಾಗಡಿ ಉಪವಿಭಾಗದ ಪೊಲೀಸ್ ಉಪಾಧ್ಯಕ್ಷರಾದ ಪ್ರವೀಣ್ ಮಾರ್ಗದರ್ಶನದಲ್ಲಿ ಕುಂಬಳಗೂಡು ಪೊಲೀಸ್ ಠಾಣೆಯ ಕಡಕ್ ಪೊಲೀಸ್ ಅಧಿಕಾರಿ ಮಂಜುನಾಥ್ ಜಿ ನೇತೃತ್ವದಲ್ಲಿ ದರೋಡೆಕೋರರ ಪತ್ತೆಗೆ ತಮ್ಮದೇ ಆದ ಖಡಕ್ ಪೊಲೀಸ್ ತಂಡವನ್ನು ರಚನೆ ಮಾಡಿಕೊಂಡಿದರು. ಖಡಕ್ ಪೊಲೀಸ್ ತಂಡದಲ್ಲಿ ಠಾಣೆಯ ಪಿಎಸ್ಐ ಗಳಾದ ಭೀಮೇಶಯ್ಯ ,ಪುರಂದರ, ಸಿಬ್ಬಂದಿಗಳಾದ ಅಜೀಮುದ್ದೀನ್ ಲೋಕೇಶ್ ಮಂಜುನಾಥ್ ಪುನೀತ್ ಕೆಂಪಣ್ಣ ಸ್ವಾಮಿ ಸಣ್ಣಬಸವ ಬಸವರಾಜ್ ತಂದ ದರೋಡೆ ಕೊರರಿಗೆ ಬಲೆ ಬೀಸಿದ್ದರು, ದರೋಡೆಕರರ ಮಾಹಿತಿಯನ್ನು ಕಲೆ ಹಾಕಿದ ಸಿಪಿಐ ಮಂಜುನಾಥ್ ಜಿ ತಂಡ ವಿವಿಧ ಕಡೆ ಆರೋಪಿಗಳನ್ನು ಬಂಧಿಸಿದ್ದಾರೆ ದರೋಡೆಕೋರರಿಂದ ಕುಂಬಳಗೂಡು ಪೋಲಿಸ್ ಠಾಣೆಯ ವ್ಯಾಪ್ತಿಯ 9.5 ಗ್ರಾಂ ಚಿನ್ನದ ಗಟ್ಟಿ, 25 ಗ್ರಾಂ ಚಿನ್ನದ ಸರ, 25 ಗ್ರಾಂ ಚಿನ್ನದ ಎರಡು ಕೈ ಬಳೆಗಳು,, ಐದು ಗ್ರಾಂ ಚಿನ್ನದ ಉಂಗುರ, 225 ಗ್ರಾಂ ಚಿನ್ನದ ಅಭರಣಗಳು, 2 ಕೆ.ಜಿ ಬೆಳ್ಳಿ ಆಭರಣಗಳು, ಮೈಸೂರು ನಗರ ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಚ್‌ಪಿ ಕಂಪನಿಯ ಒಂದು ಲ್ಯಾಪ್ಟಾಪ್, ಒಂದು ಜೊತೆ ಬೆಳ್ಳಿ ದೀಪ ಎಲ್ಲ ಸೇರಿ ಒಟ್ಟು 22 ಲಕ್ಷ 80 ಸಾವಿರ ಮೌಲ್ಯವನ್ನು ವಶಪಡಿಸಿಕೊಂಡಿದ್ದಾರೆ ಈಗಾಗಲೇ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಅಂತರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಕುಂಬಳಗೂಡು ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ್ ಜಿ ಉಗಾರ್ ಹಾಗೂ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಶ್ಲಾಘನೆ ವ್ಯಕ್ತಪಡಿಸಿದ್ದಾ

Share & Spread
error: Content is protected !!