ಎಚ್.ಡಿ.ದೇವೇಗೌಡರ ದೂರದೃಷ್ಟಿಯ ಫಲವಾಗಿ ನಿರ್ಮಾಣಗೊಂಡ ದೇವೇಗೌಡ ಬ್ಯಾರೇಜ್ ಇಲ್ಲದಿದ್ದರೆ, ಈ ಕ್ಷೇತ್ರ ನೀರಾವರಿ ಆಗುತ್ತಿರಲಿಲ್ಲ ಎಸ್.ಸಿ.ಎಸ್.ಟಿ. ಜೆಡಿಎಸ್ ರಾಜ್ಯಾಧ್ಯಕ್ಷ ಕೆ,ಅನ್ನದಾನಿ:

ದೇಶದ ಮಾಜಿಪ್ರದಾನಿ ಎಚ್.ಡಿ.ದೇವೇಗೌಡರ ದೂರದೃಷ್ಟಿಯ ಫಲವಾಗಿ ನಿರ್ಮಾಣಗೊಂಡ ದೇವೇಗೌಡ ಬ್ಯಾರೇಜ್ ಇಲ್ಲದಿದ್ದರೆ, ಈ ಕ್ಷೇತ್ರ ನೀರಾವರಿ ಆಗುತ್ತಿರಲಿಲ್ಲ ಎಂದು,ಮಳವಳ್ಳಿ ಮಾಜಿ ಶಾಸಕ ಹಾಗೂ ಎಸ್.ಸಿ.ಎಸ್.ಟಿ. ಜೆಡಿಎಸ್ ರಾಜ್ಯಾಧ್ಯಕ್ಷ ಕೆ,ಅನ್ನದಾನಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     ಅವರು ನಗರದ  ಜೆಡಿಎಸ್ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ,೧೯೯೬ರಲ್ಲಿ ಇಗ್ಗಲೂರು ಬಳಿಯಲ್ಲಿ ಮಾಜಿಪ್ರಧಾನಿ ದೇವೇಗೌಡರವರ ಬ್ಯಾರೇಜ್ ನಿರ್ಮಾಣವಾಗಬೇಕಾದರೆ,ಈ ಕ್ಷೇತ್ರದ ಮಾಜಿ ಶಾಸಕರಾಗಿ ಸಚಿವರಾಗಿದ್ದ ದಿವಂಗತ ವರದೇಗೌಡರವರ ಕೊಡುಗೆಯನ್ನು ಇಲ್ಲಿ ಮರೆಯುವಂತಿಲ್ಲ ಎಂದು ವರದೇಗೌಡರ ಬಗ್ಗೆ ಗುಣಗಾನ ಮಾಡಿದರು.

      ಕ್ಷೇತ್ರದ ನೀರಾವರಿಯನ್ನು ನಾನು ಮಾಡಿರುವುದಾಗಿ ಹೇಳಿಕೊಂಡು ಕ್ಷೇತ್ರದಲ್ಲಿ ಮತಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ರವರಿಗೆ ಇದ್ಯಾವುದು ಅರಿವಿಲ್ಲವೇ, ಶಿಂಷಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣವಾಗದಿದ್ದರೇ ನೀವು ಯಾವ ಕೆರೆಗೆ ನೀರು ಬಿಡುತ್ತಿದ್ದೀರಿ ಎಂದು ಟೀಕಾ ಪ್ರಹಾರ ನಡೆಸಿದರು.

     ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ,ಚನ್ನಪಟ್ಟಣ,ಮಾಗಡಿ ಹಾಗೂ ರಾಮನಗರವನ್ನು ಶಾಸ್ವತ ನೀರಾವರಿ ಮಾಡುವ ಉದ್ದೇಶದಿಂದ ಸತ್ತೇಗಾಲ ನೀರಾವರಿ ಯೋಜನೆಯನ್ನು ೫೪೦ ಕೋಟಿರೂ ವೆಚ್ಚದಲ್ಲಿ ಪ್ರಾರಂಭ ಮಾಡಿ ಈಗಾಗಲೇ ಈ ಯೋಜನೆ ಪೂರ್ಣಗೊಂಡಿದೆ, ಇದರಿಂದ ಕಣ್ವಾ ನದಿ, ವೈಜಿ ಗುಡ್ಡ ಹಾಗೂ ಮಂಚನಬಲೆಗೆ ನೀರು ಹರಿಸುವುದಕ್ಕೆ ಈ ಯೋಜನೆ ಸಹಕಾರಿಯಾಗಿದೆ ಎಂದರು.

     ಈ ನೆಲದಲ್ಲಿ ದಲಿತ ಸಮುದಾಯಕ್ಕೆ ಶತ್ರು ಪಕ್ಷವಿದ್ದರೇ ಅದು ಕಾಂಗ್ರೆಸ್ ಪಕ್ಷ ಎಂಬುದರಲ್ಲಿ ಅನುಮಾನವೇ ಇಲ್ಲ, ಸ್ವಾತಂತ್ರ ಪೂರ್ವದಿಂದಲೂ ದಲಿತ ಸಮುದಾಯವನ್ನು ಶೋಷಣೆ ಮಾಡುತ್ತಲೇ ಬಂದ ಪಕ್ಷ ಕಾಂಗ್ರೆಸ್, ಭವ್ಯ ಭಾರತದ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್‌ರವರ ಜೀವಿತ ಅವಧಿಯಲ್ಲಿಯೂ ಅವರನ್ನು ಪ್ರತಿ ಹಂತಹಂತದಲ್ಲಿಯೂ ಕಾಡಿದ ಕಾಂಗ್ರೆಸ್ ಅವರ ಸಾವಿನಲ್ಲೂ ರಾಜಕಾರಣವನ್ನು ಮಾಡಿದರೂ ಈಂತಹ ಪಕ್ಷ ನಮ್ಮ ದಲಿತ ಸಮೂದಾಯಕ್ಕೆ ಬೇಕೇ ಎಂದು ಕಾಂಗ್ರೆಸ್‌ಪಕ್ಷದ ಬಗ್ಗೆ ಟೀಕಾ ಪ್ರಹಾರ ನಡೆಸಿದರು.

       ಎದುರಾಗಿರುವ ಚನ್ನಪಟ್ಟಣ ಉಪಚುನವಣೆಯಲ್ಲಿ ಎನ್.ಡಿ.ಎ.ಅಭ್ಯರ್ಥಿಯಾಗಿರುವ ನಿಖಿಲ್‌ಕುಮಾರಸ್ವಾಮಿರವರನ್ನು ಕ್ಷೇತ್ರದ ದಲಿತ ಸಮುದಾಯ ಬೆಂಬಲಿಸಿ ಈ ಭಾರಿ ಅವರನ್ನು ಶಾಸಕರನ್ನಾಗಿ ಮಾಡಬೇಕಾದ ಜಾವಬ್ದಾರಿ ನಮ್ಮ ಮೇಲಿದೆ ಎಂದು ತಮ್ಮ ಮನವಿಯನ್ನು ಮಾಡಿದರು.

   ಪತ್ರಿಕಾ ಗೋಷ್ಟಿಯಲ್ಲಿ ಎಸ್.ಸಿ.ಎಸ್.ಟಿ.ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೂಡ್ಲೂರು ಸಿದ್ದರಾಮು, ಜೆ.ಡಿ.ಎಸ್.ಎಸ್.ಸಿ.ಎಸ್.ಟಿ.ಘಟಕದ ಪ್ರಧಾನಕಾರ್ಯಧರ್ಶಿ ಕೆಂಗಲ್‌ಮೂರ್ತಿ, ಪ್ರಥಮದರ್ಜೆ ಗುತ್ತಿಗೆದಾರ ದ್ಯಾವಪಟ್ಟಣ ಮಲ್ಲೇಶ್, ಎಸ್.ಸಿ.ಎಸ್.ಟಿ ಘಟಕದ ನಗರ ಅಧ್ಯಕ್ಷ ಕೋಟೆ ಶ್ರೀನಿವಾಸ್, ಮಳೂರು ಪಟ್ಟಣ ಮಲ್ಲೇಶ್,ಮಂಗಳವಾರ ಪೇಟೆ ಸುನೀಲ್,ಕೃಷ್ಣಾಪುರ ಸಿದ್ದಪ್ಪ, ಎಸ್.ಎಂ.ಹಳ್ಳಿ ಸುನೀತಾ, ಮಹಾಲಕ್ಷ್ಮಿ ಹಾಗೂ ಹಲವಾರು ಮುಖಂಡರು ಹಾಜರಿದ್ದರು.

Share & Spread
error: Content is protected !!