ಕೆ.ಎಸ್.ಆರ್.ಟಿ.ಸಿ.ಬಸ್‌ನಲ್ಲಿಯೇ ಹೃದಯಾಘಾತವಾಗಿ ವಿವಾಹಿತ ಯುವಕನೊರ್ವ ಸಾವು..

ಚನ್ನಪಟ್ಟಣ,ಫೆ:6- ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವಿವಾಹಿತ ಯುವಕನೊರ್ವ ಹೃದಯಾಘಾತವಾಗಿ ಸಾವನಪ್ಪಿರುವ ಘಟನೆ, ರಾಮನಗರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಎಸ್.ಆರ್.ಟಿ.ಸಿ.ನಿಲ್ದಾಣದಲ್ಲಿ ನಡೆದಿದೆ. ಕೆ.ಎಸ್.ಆರ್.ಟಿ.ಸಿ.ಬಸ್‌ನಲ್ಲಿಯೇ ಹೃದಯಾಘಾತವಾಗಿ ತಮ್ಮ ಮುಂದಿನ ಪ್ರಯಾಣವನ್ನು ನಿಲ್ಲಿಸಿರುವ ಯುವಕ, ವಿನೋದ್ (35) ಎಂದು ಹೇಳಲಾಗಿದ್ದು,ಚನ್ನಪಟ್ಟಣ ತಾಲ್ಲೂಕಿನ ಚನ್ನಂಕೇಗೌಡನದೊಡ್ಡಿ ಗ್ರಾಮದ ಪುಟ್ಟರಾಜು ಎಂಬುವರ ಮಗ ಎಂದು ಹೇಳಲಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯೊOದರಲ್ಲಿ ಉದ್ಯೋಗಿಯಾಗಿದ್ದ ಇವರು, ಪ್ರತಿನಿತ್ಯ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ.ಬಸ್‌ನಲ್ಲಿಯೇ ಪ್ರಯಾಣ ಮಾಡುತ್ತಿದ್ದರೆಂದು ಹೇಳಲಾಗಿದ್ದು,ಎಂದಿನAತೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾಗ, ನಿರ್ವಾಹಕ ಟಿಕೇಟ್ ಕೊಡುವ ಸಂದರ್ಭದಲ್ಲಿ, ಎದೆನೋವು ಕಾಣಿಸಿಕೊಂಡ ಇವರು ತಮ್ಮ ಆಸನದಲ್ಲಿಯೇ ಕುಸಿದು ಬಿದ್ದರೆಂದು ತಿಳಿದು ಬಂದಿದೆ. ತಕ್ಷಣ ಸಹಪ್ರಯಾಣಿಕರು ಹಾಗೂ ಬಸ್ ಸಿಬ್ಬಂದಿ ರಸ್ತೆಯ ಪಕ್ಕದಲ್ಲಿರುವ ಆಸ್ಪತ್ರೆಗೆ ಸಾಗಿಸಿ ತಪಾಸಣೆ ಮಾಡಿದಾಗ, ಆತ ಮೃತಪಟ್ಟಿರುವುದು ಖಾತ್ರಿಯಾಗಿದೆ, ಈ ಪ್ರಕರಣದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ವರ್ಷದ ಹಿಂದೆ ಮೃತನಿಗೆ ಮದುವೆಯಾಗಿತ್ತು ಎಂದು ಹೇಳಲಾಗಿದ್ದು, ಮೃತನ ಶವಸಂಸ್ಕಾರವನ್ನು ಚನ್ನOಕೇಗೌಡನ ದೊಡ್ಡಿಯಲ್ಲಿ ನೆರವೇರಿತು, ಈ ಸಂದರ್ಭದಲ್ಲಿ ಮೃತನ ಕುಟುಂಬದವರ ರೊಧನ ಮುಗಿಲು ಮುಟ್ಟಿತು.

Share & Spread
error: Content is protected !!