ಚನ್ನಪಟ್ಟಣ ನಗರದ ಕೋಟೆಯಲ್ಲಿ ನಿಜಶರಣ ವಚನಕಾರ ಶ್ರೀ ಮಡಿವಾಳ ಮಾಚಿದೇವರ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಜಯಂತೋತ್ಸವವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಕಸ್ತೂರಿ ಕರ್ನಾಟಕ ಜನಪದ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಎಲೆ ಮರಿ ಕಾಯಿಯಂತೆ ಸಮಾಜದ ಕೊಳಕನ್ನು ಹಸನು ಮಾಡುತ್ತಿರುವ ಮಡಿವಾಳ ಸಮುದಾಯ ಮುಖ್ಯ ವಾಹಿನಿಗೆ ಬರಬೇಕೆಂದರು..
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಉಪನ್ಯಾಸಕರಾದ ಶೈಲಜ, ಪರಮೇಶ್ವರನ ಅಂಶವಾದ ವೀರಭಧ್ರನ ಮತ್ತೊಂದು ಅವತಾರವೇ ಮಡಿವಾಳ ಮಾಚಿದೇವ ಎಂಬ ಹಲವಾರು ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರು ಮಾಹಿಗೆಗೌಡ, ಭಾರತ್ ವಿಕಾಸ್ ಪರಿಷತ್ ಅಧ್ಯಕ್ಷ ಗುರು ಮಾದಯ್ಯ, ನಿವೃತ್ತ ಮುಖ್ಯ ಶಿಕ್ಷಕ ವಸಂತ್ ಕುಮಾರ್, ಸಮುದಾಯದ ಯುವ ಮುಖಂಡರುಗಳು ಹಾಜರಿದ್ದರು..