ಚನ್ನಪಟ್ಟಣದ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಬಡಮಕಾನ್‌ನಲ್ಲಿ ಮನೆಯ ಆವರಣದಲ್ಲೆ ಒಂದು ಕೆಜಿಯಷ್ಟು ಗಾಂಜಾ ಗಿಡ ಪತ್ತೆ!!

ಚನ್ನಪಟ್ಟಣ, ಫೆ:6- ನಗರ ವೃತ್ತ ನಿರೀಕ್ಷಕ ದಾಳಿ ಮಾಡಿ, ಮನೆಯ ಬಳಿ ಬೆಳೆದಿದ್ದ ಲಕ್ಷಂತರರೂ ಮೌಲ್ಯ ಗಾಂಜಾ ಗಿಡವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿರುವ ಘಟನೆ, ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಬಡಮಕಾನ್‌ನಲ್ಲಿ ನಡೆದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರಡ್ಡಿ, ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸುರೇಶ್, ಲಕ್ಷಿನಾರಾಯಣ ಹಾಗೂ ತಾಲ್ಲೂಕು ಪೊಲೀಸ್ ಉಪವಿಭಾಗಾಧಿಕಾರಿ ಗಿರಿ ಮಾರ್ಗದರ್ಶನದಲ್ಲಿ ಕೆಲ ದಿನಗಳ ಹಿಂದೆ ಬಂದ ನಗರ ವೃತ್ತ ನಿರೀಕ್ಷಕ ರವಿಕಿರಣ್, ಪೂರ್ವ ಪೊಲೀಸ್ ಠಾಣೆಯ ಎ.ಎಸ್.ಐ.ಆಕಾಶ್, ಪಿ.ಎಸ್.ಐ.ಮಾದೇಶ್ ಸಿಬ್ಬಂದಿಗಳಾದ ರವಿಹಿರೇಮನಿ,ರವಿಕೋಡಿಹಳ್ಳಿ,ಪ್ರವೀಣ್ ಕುರುಡೇಕರ್,ಕಾಶಿನಾಥ್ ಕಾರ್ಯಚರಣೆಯಲ್ಲಿ ತೊಡಗಿದ್ದರು. ಬಂಧಿತ ಆರೋಪಿಯನ್ನು ನುರುಲ್ಲಾ ಪಾಷ(55) ಎಂದು ಹೇಳಲಾಗಿದ್ದು, ಬಡಮಕಾನ್ ನಿವಾಸಿ ಉಸ್ಮಾನ್‌ಪಾಷ ಎಂಬುವರ ಮಗನಾದ ಈತ ತಮ್ಮ ಮನೆಯ ಆವರಣದಲ್ಲಿ ಒಂದು ಕೆಜಿಯಷ್ಟು ಗಾಂಜಾ ಗಿಡವನ್ನು ಬೆಳಸಿದ್ದನೆಂದು ಹೇಳಲಾಗಿದ್ದು, ಪೊಲೀಸರ ಬಂಧನಕ್ಕೆ ಒಳಗಾಗಿರುವ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಗರವೃತ್ತ ನಿರೀಕ್ಷಕರಾಗಿ ಬಂದ ಮೂರೇ ದಿನದಲ್ಲಿ ನಗರದ ಅಪರಾಧಗಳ ಬಗ್ಗೆ ಗಮನ ಹರಿಸಿರುವ ರವಿಕಿರಣ್ ತಮ್ಮದೇ ಆದ ತಂಡವನ್ನು ಕಟ್ಟಿಕೊಂಡು, ಅಕ್ರಮವಾಗಿ ಗಾಂಜಾಗಿಡವನ್ನು ಪತ್ತೆಮಾಡಿ ಬಂಧಿಸಿರುವುದರ ಬಗ್ಗೆ ಸಾರ್ವಜನಿಕರಲ್ಲಿ ಶ್ಲಾಘನೆ ವ್ಯಕ್ತವಾಗಿದೆ

Share & Spread
error: Content is protected !!