ರಸ್ತೆಯಲ್ಲಿ ದವಸಧಾನ್ಯ ಒಕ್ಕಣೆ ಮಾಡುವುದು ಅಪರಾಧ ವಾಗಿದೆ : ಅಕ್ಕೂರು ಪೊಲೀಸ್ ಠಾಣೆಯ ಪಿ.ಎಸ್.ಐ.ಬಸವರಾಜು

ಚನ್ನಪಟ್ಟಣ,ಜ:೨೩-ರಸ್ತೆಯಲ್ಲಿ ದವಸಧಾನ್ಯ ಒಕ್ಕಣೆ ಮಾಡುವುದು ಅಪರಾಧವಾಗಿದೆ ಎಂದು, ಅಕ್ಕೂರು ಪೊಲೀಸ್ ಠಾಣೆಯ ಪಿ.ಎಸ್.ಐ.ಬಸವರಾಜು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ

ಅವರು ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ಹುಣಸನಹಳ್ಳಿ ಗ್ರಾಮದ ಸೇತುವೆಯ ಮೇಲೆ ರಾಗಿ ಒಕ್ಕಣೆ ಕಾರ್ಯದಲ್ಲಿ ತಲ್ಲೀನರಾಗಿದ್ದ ರೈತರಿಗೆ ಎಚ್ಚರಿಕೆ ನೀಡಿದರು.

ಕಷ್ಟಪಟ್ಟು ಬೆಳೆದ ಬೆಳೆಗಳನ್ನು ತಮ್ಮ ಜಮೀನಿನಲ್ಲಿ ಕಣಗಳನ್ನು ಮಾಡಿಕೊಂಡು ಶುದ್ದವಾದ ಧವಸಧಾನ್ಯವನ್ನು ಪಡೆಯದೆ, ಬೇಗನೆ ಒಕ್ಕಣೆ ಮಾಡಿಕೊಂಡು ಹೋಗಬಹುದು ಎಂದು, ಎಲ್ಲೆಲ್ಲಿಂದಲೋ ಬರುವ ವಾಹನಗಳ ಚಕ್ರದಿಂದ ಒಕ್ಕಣೆಯಾಗುವ ಧವಸಧಾನ್ಯ ಕಲುಷಿತಗೊಂಡು ಅನಾರೋಗ್ಯಕ್ಕೆ ಎಡೆಮಾಡಿಕೊಡುವುದನ್ನು ತಿಳಿ ಹೇಳಿದರು.

ಅಲ್ಲದೆ ರಸ್ತೆಯಲ್ಲಿ ಒಕ್ಕಣೆ ಮಾಡುವುದರಿಂದ ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳಿಗೆ ಪಾದಚಾರಿಗಳಿಗೆ ತೊಂದರೆಯಾಗಿದೆ, ಕಾರಣ ನಿಮ್ಮಗೆ ಒಳ್ಳೆಯ ಉದ್ದೇಶವಾಗಿದ್ದರೂ ಕೂಡ, ವಾಹನಗಳು ರಸ್ತೆಯ ಮೇಲಿನ ಹುಲ್ಲಿನ ಮೇಲೆ ತೆರಳಿದಾಗ ವಾಹನ ಚಕ್ರಗಳು ಜಾರಿ ಅನಾಹುತಗಳು ಸಂಭವಿಸುತ್ತಿವೆ ಎಂದು ತಿಳಿಸಿದರು.

ದ್ವಿಚಕ್ರವಾಹನ ಸವಾರರಿಗೆ ಇನ್ನಿಲ್ಲದ ಸಮಸ್ಯೆ ಎದುರಾಗಿದ್ದು, ರಸ್ತೆಯಲ್ಲಿಯೇ ಒಕ್ಕಣೆ ಕಾರ್ಯಮಾಡಿಕೊಂಡು, ರಸ್ತೆಯಲ್ಲೇ zಧವಸಧಾನ್ಯಗಳನ್ನು ತೂರುವುದರಿಂದ ದ್ವಿಚಕ್ರವಾಹನ ಸವಾರರ ಕಣ್ಣಿಗೆ ಧೂಳು ರಾಚುವುದರಿಂದ ಚಾಲಕನ ನಿಯಂತ್ರಣ ತಪ್ಪಿ ಹಲವಾರು ಅಪಘಾತಗಳು ಆಗಿರುವುದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ಕೆಲ ದಿನಗಳ ಹಿಂದೆ ರಸ್ತೆಯಲ್ಲಿ ಹರಡಿದ ರಾಗಿ ಹುಲ್ಲಿನ ಮೇಲೆ ಕಾರು ಚಾಲನೆಯಲ್ಲಿದ್ದ ಸಂದರ್ಭಲ್ಲಿ, ರಾಗಿಹುಲ್ಲು ಇಂಜಿನ್ ತಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕ್ಷಣಾರ್ಧದಲ್ಲಿ ಕಾರಿನಲ್ಲಿದ್ದ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಕಾರು ನಡುರಸ್ತೆಯಲ್ಲಿಯೇ ಹೊತ್ತು ಉರಿದಿರುವುದು, ರಸ್ತೆಯಲ್ಲಿ ಒಕ್ಕಣೆ ಮಾಡುವುದೇ ಕಾರಣವಾಗಿದೆ ಎಂದು ರೈತರಿಗೆ ವಾಸ್ತವತೆಯನ್ನು ತಿಳಿಸಿದರು.

ಸಾಕಷ್ಟು ಸಾರಿ ಮನವಿ ಮಾಡುತ್ತಿದ್ದೇವೆ ಇದೇ ರೀತಿ ಇಲಾಖೆಯ ಮನವಿ ಧಿಕ್ಕರಿಸುತ್ತಿದ್ದರೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ರಸ್ತೆಯಲ್ಲಿ ಒಕ್ಕಣೆ ಮಾಡುವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವಾಃನ ಚಾಲಕ ಲೋಕೇಶ್ ಜಿ ಹಾಜರಿದ್ದರು

Share & Spread
error: Content is protected !!