ಚನ್ನಪಟ್ಟಣ ತಾಲೂಕು ಕೊತ್ತನಹಳ್ಳಿ ಗ್ರಾಮದಮೂಲ ನಿವಾಸಿಗಳ ಕ್ಷೇಮಾವೃದ್ದಿ ಸಂಘಕ್ಕೆ ಖಾಲಿ ಇರುವ ಪದಾಧಿಕಾರಿಗಳ ಆಯ್ಕೆಗೆ ಸರ್ವ ಸದಸ್ಯರ ಸಭೆ..

ಚನ್ನಪಟ್ಟಣ ತಾಲೂಕು ಕೊತ್ತನಹಳ್ಳಿ ಗ್ರಾಮದಮೂಲ ನಿವಾಸಿಗಳ ಕ್ಷೇಮಾವೃದ್ದಿ ಸಂಘ. ಸದರಿ ಸಂಘದ ಅಧ್ಯಕ್ಷರಾದಂತಹ ದಿವಂಗತ ರಾಜು ರವರು ಮರಣ ಹೊಂದಿದ್ದು ಹಾಗೂ ಉಪಾಧ್ಯಕ್ಷರಾದಂತ ಚಿಕ್ಕಯ್ಯನವರು ಮರಣ ಹೊಂದಿದ್ದು ಈ ಎರಡು ಸ್ಥಾನಗಳು ಸದರಿ ಸಂಘದಲ್ಲಿ ಖಾಲಿ ಇದ್ದು ಹಾಗೂ ಸದರಿ ಈ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಕೊತ್ತನಹಳ್ಳಿ ಮೂಲ ನಿವಾಸಿಗಳ ಸಮಾಜದ ಮುಖಂಡರುಗಳನ್ನು ಹಾಗೂ ಯುವ ಮುಖಂಡರುಗಳನ್ನು ಸಭೆಯನ್ನು ಕರೆದು ಸದರಿ ಸಂಘಕ್ಕೆ ಸಂಘದ ಪುನಸ್ಚೇತನದ ಬಗ್ಗೆ ಸರ್ವ ಸದಸ್ಯರ ಸಭೆಯನ್ನು ಕರೆಯುವ ಬಗ್ಗೆ,  ಸಮಾಜದ ಮುಖಂಡರುಗಳ ಜೊತೆ ಚರ್ಚಿಸಿ ದಿನಾಂಕವನ್ನು ನಿಗದಿಮಾಡಿ ಸಮಾಜದ ಮುಖಂಡರು ಗಳಿಗೆ ತಿಳಿಸುತ್ತೇವೆ. 2022 ರಲ್ಲಿ ನಮ್ಮ ಸಮಾಜದ ಜಾಗಕ್ಕೆ ಸಂಬಂಧಪಟ್ಟಂತೆ ಸರ್ಕಾರಕ್ಕೆ ಪತ್ರವನ್ನು ಸಹ ಬರೆದಿದ್ದು ಇದರ ಬಗ್ಗೆಯೂ ಸಹ ಗಮನಹರಿಸುವ ಬಗ್ಗೆ ತಮ್ಮ ಸಲಹೆಗಳನ್ನು ಪಡೆದು ಮುಂದಿನ ನಿರ್ಧಾರದ ಬಗ್ಗೆ ಗಮನ ಹರಿಸುತ್ತೇವೆ  ಎಂದು ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಮಾಜಿ ಉಪಾಧ್ಯಕ್ಷರು ಹಾಗೂ ಕೊತ್ತನಹಳ್ಳಿ ಗಂಗಾಮತಸ್ಥರ ಬೆಸ್ತರ ಕ್ಷೇಮಾವತಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ರವರು ತಿಳಿಸಿದರು…

Share & Spread
error: Content is protected !!