ಅವರು ನಗರದ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜನೆ ಮಾಡಲಾಗಿದ್ದ,ಜಿಲ್ಲಾ ನ್ಯಾಯಾಲಯ ಹಾಗೂ ಪ್ರಥಮದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಮಹಿಳಾ ಕಾನೂನು ಅರಿವು ಕಾರ್ಯಗಾರದಲ್ಲಿ, ಕಾರ್ಯಗಾರವನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದರು.
ಪ್ರಸಕ್ತ ದಿನಗಳಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾನೂನಿನಲ್ಲಿ ಪರಿಹಾರವಿದ್ದು, ಕಾನೂನು ಅರಿವು ಇಲ್ಲದಿರುವುದರಿಂದಲೇ ಹಲವಾರು ಸಮಸ್ಯೆಗಳನ್ನು ಸೃಷ್ಟಿ ಮಾಡಿಕೊಳ್ಳುವಂತಾಗಿದೆ, ಹೆಣ್ಣು ಮಕ್ಕಳಿಗೆ ಸ್ಬತಂತ್ರ ಭಾರತದಲ್ಲಿ ವಿಶೇಷವಾದ ಕಾನೂನುಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿಯೇ ಹೆಚ್ಚು ಮಹಿಳಾ ವಿದ್ಯಾರ್ಥಿಗಳನ್ನು ಹೊಂದಿರುವ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ತನ್ನದೇ ಆದ ಹೆಸರು ಪಡೆದಿರುವ ನಗರದ ಪ್ರಥಮ ದರ್ಜೆ ಕಾಲೇಜು ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳು ಕಾನೂನಿನ ಅರಿವು ಪಡೆಯಲು ಜಿಲ್ಲಾ ನ್ಯಾಯಾಲಯದಲ್ಲಿಯಾಗಲಿ ಇಲ್ಲಾ ತಾಲ್ಲೂಕು ಮಟ್ಟದ ನ್ಯಾಯಾಲಯದಲ್ಲಿಯಾಗಲಿ ಬೆಳಿಗ್ಗೆ ೧೦ ರಿಂದ ಸಂಜೆ ೬ ರವರೆಗೆ ನುರಿತ ನ್ಯಾಯಾವಾದಿಗಳ ಬಳಿ ತಮ್ಮ ಯಾವುದೇ ರೀತಿಯ ಕಾನೂನು ಸಲಹೆಗಳನ್ನು ಪಡೆಯಬಹುದು ಎಂದರು.
ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಥಮದರ್ಜೆ ಕಾಲೇಜಿನ ಪ್ರಭಾರ ಪ್ರಾನ್ಸುಪಾಲರಾದ ಡಾ|| ರಮೇಶ್ ಹೆಚ್.ಬಿ. ಮಾತನಾಡಿ, ಜಿಲ್ಲಾ ನ್ಯಾಯಾಲಯವೇ ಆಗಮಿಸಿ ಹೆಣ್ಣು ಮಕ್ಕಳಿಗೆ ಕಾನೂನು ಅರಿವು ಮುಡಿಸುತ್ತಿರುವುದು ಸಂತಷದ ವಿಚಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಮಹಿಳಾ ಕೋಶ ಸಮಿತಿಯ ಸಂಚಾಲಕರಾದ ಪ್ರೊಫೆಸರ್ ಡಾ|| ಉಷಾಮಾಲಿನಿ,ಆಂತರಿಕ ಗುಣಮಟ್ಟ ಮೌಲ್ಯಮಾಪನ ಕೋಶದ ಸಹ ಸಂಚಾಲಕರಾದ ಡಾ|| ದೀಪ್ತಿ ಹಾಗೂ ಹಲವಾರು ಮಂದಿ ಉಪನ್ಯಾಶಕರು ಹಾಜರಿದ್ದರು.