ನ್ಯಾಷನಲ್ ಪಬ್ಲಿಕ್ ವಾಯ್ಸ್ ಮತ್ತು ಭ್ರಷ್ಟಚಾರ ವಿರೋಧಿ ಸಂಸ್ಥೆ ಹಾಗೂ ಸುಭಾಷ್ ಸಹಾಯಾಸ್ತ ಟ್ರಸ್ಟ್ ವತಿಯಿಂದ ಸಮಾಜದ ಹಿತರಕ್ಷಣೆ, ದೇಶದ ಏಳಿಗೆಗಾಗಿ ಶ್ರಮಿಸುವವರ ಕಾರ್ಯವನ್ನು ಶ್ಲಾಘಿಸಿ ನೀಡುವ “ಹೆಮ್ಮೆಯ ಭಾರತೀಯ” ಪ್ರಶಸ್ತಿಯನ್ನು ಸಾಮಾಜಿಕ ಕಾರ್ಯಕರ್ತರಾದ ಚನ್ನಪಟ್ಟಣದ ವಂದಾರಗುಪ್ಪೆಯ ಶ್ರೀ ವಿ ಜಿ ಕೃಷ್ಣೇಗೌಡರಿಗೆ ಬೆಂಗಳೂರಿನಲ್ಲಿ ನೀಡಿ ಗೌರವಿಸಲಾಗಿದೆ.
