ಹಾರೋಹಳ್ಳಿ : ಸ್ಟವ್ ಕ್ರಾಫ್ಟ್ ಕಾರ್ಖಾನೆ ಮೇಲೆ ಐ.ಟಿ ದಾಳಿ

ಹಾರೋಹಳ್ಳಿ: ಪಟ್ಟಣದ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶದ 1ನೇ ಹಂತದಲ್ಲಿರುವ ಸ್ಟವ್ ಕ್ರಾಫ್ಟ್ ಕಾರ್ಖಾನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.

ಪೊಲೀಸರೊಂದಿಗೆ ಬೆಳಿಗ್ಗೆಯೇ ಕಾರ್ಖಾನೆಗೆ ಬಂದಿರುವ ಅಧಿಕಾರಿಗಳ ತಂಡ, ಒಳಗಡೆ ಮಧ್ಯಾಹ್ನದವರೆಗೆ ಪರಿಶೀಲನೆ ನಡೆಸಿದೆ. ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದೆ. ಅಧಿಕಾರಿಗಳ ತಂಡ ತೆರಳುವವರೆಗೆ ಕಾರ್ಖಾನೆಯ ದ್ವಾರಗಳನ್ನು ಬಂದ್ ಮಾಡಲಾಗಿತ್ತು. ಒಳಗಡೆ ಯಾರನ್ನೂ ಸಹ ಬಿಡಲಿಲ್ಲ.

ದಾಳಿ ಕುರಿತು ಸ್ಥಳೀಯ ಪೊಲೀಸರಿಗೂ ಮಾಹಿತಿ ಇಲ್ಲ. ಬೆಂಗಳೂರಿನಿಂದಲೇ ಪೊಲೀಸರ ಜೊತೆ ಬಂದಿದ್ದ ಅಧಿಕಾರಿಗಳು, ಕಾರ್ಖಾನೆಯ ಒಳಗಡೆ ಪರಿಶೀಲನೆ ನಡೆಸಿ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದರು.

Share & Spread
error: Content is protected !!