ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ. ದಿನಾಂಕ 22 -11- 2023 ಬುದುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಂಗಳೂರು ಹಾಲು ಒಕ್ಕೂಟದ ಬೈರಾಪಟ್ಟಣ ಶೀತಲ ಕೇಂದ್ರದ ಬಳಿ ಹಾಲು ಉತ್ಪಾದಕರ ಸಮಸ್ಯೆಗಳು, ಒಕ್ಕೂಟದ ಧೋರಣೆಗಳನ್ನು ಖಂಡಿಸಿ,ನಮ್ಮ ಹಾಲು – ನಮ್ಮ ಹಕ್ಕು ಪ್ರತಿಪಾದಿಸಲು ಚಳವಳಿ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ. ದಿನಾಂಕ 22 -11- 2023 ಬುದುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಂಗಳೂರು ಹಾಲು ಒಕ್ಕೂಟದ ಬೈರಾಪಟ್ಟಣ ಶೀತಲ ಕೇಂದ್ರದ ಬಳಿ ಹಾಲು ಉತ್ಪಾದಕರ ಸಮಸ್ಯೆಗಳು, ಒಕ್ಕೂಟದ ಧೋರಣೆಗಳನ್ನು ಖಂಡಿಸಿ,ನಮ್ಮ ಹಾಲು – ನಮ್ಮ ಹಕ್ಕು ಪ್ರತಿಪಾದಿಸಲು ಚಳವಳಿ ಹಮ್ಮಿಕೊಳ್ಳಲಾಗಿದೆ,. ಈ ಸಂದರ್ಭದಲ್ಲಿ ಹಾಲಿನ ಖರೀದಿ ಬೆಲೆಯಲ್ಲಿ ಪ್ರತಿ ಲೀಟರ್ಗೆ ಎರಡು ಕಡಿತಗೊಳಿಸಿರುವುದು, ವೈಜ್ಞಾನಿಕವಾಗಿ ಬೆಲೆ ನಿಗದಿ ಪಡಿಸದೆ ಉತ್ಪಾದಕ ರೈತರನ್ನ ವಂಚಿಸುತ್ತಿರುವುದು, ಹಾಲು ಉತ್ಪಾದನೆಯನ್ನು ಮೂಲ ಉತ್ಪಾದಕ ರೈತರ ರೈತೋಧ್ಯಮವನ್ನಾಗಿ ಪರಿಗಣಿಸದೆ ಇರುವುದು,, ಒಕ್ಕೂಟವು ಒಂದು ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸದೆ. ಸರ್ಕಾರದ ಮರ್ಜಿಯಲ್ಲಿ ಸಿಲುಕಿರುವುದು ,,,ಆಡಳಿತಾತ್ಮಕ ವೆಚ್ಚವನ್ನು ನಿಯಂತ್ರಿಸದಿರುವುದು, ಸ್ಥಳೀಯ ಹಾಲು ಮಾರಾಟಕ್ಕೆ 1-50ರೂ ಲೆವಿ ,ಒಕ್ಕೂಟಕ್ಕೆ ಲೆವಿ 1,ಮತ್ತು ಲೆವಿ 2, ಎಂದು ವಸೂಲಿ ಮಾಡುತ್ತಿರುವುದು,, ಟ್ರಸ್ಟ್ ಹೆಸರಲ್ಲಿ ಪ್ರತಿ ಲೀಟರ್ ಮೇಲೆ 17ಪೈಸೆ ನಿಗದಿಸಿ ವಸೂಲಿ ಮಾಡುತ್ತಿರುವುದು,, ಲೀಟರ್ ಲೆಕ್ಕದಲ್ಲಿ ಖರೀದಿ ಕೆಜಿ ಲೆಕ್ಕದಲ್ಲಿ ಹಣ ಪಾವತಿ ಕ್ರಮ ಏಕೆ, ಪಶು ಆಹಾರಗಳ ಬೆಲೆಯು ಎದ್ವಾ ತದ್ವಾ ಏರಿಕೆ ಮಾಡುತ್ತಿರುವುದು,, ನೇಮಕಾತಿಯಲ್ಲಿ ಅಕ್ರಮ,,, ನಿರ್ದೇಶಕರ ಸ್ಥಾನಕ್ಕೆ ಖರೀದಿ ಪೈಪೋಟಿ, ರಾಜಕೀಯ ಪಕ್ಷಗಳ ಒಡಂಬಡಿಕೆ ಹೈನುಗಾರಿಕೆಯ ಮೇಲೆ ಪ್ರತಿಕೂಲ ಪರಿಣಾಮ, ಮುಂತಾದ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ,. ಪ್ರಜ್ಞಾಂತರು ಹಾಗೂ ಹಿರಿಯ ರೈತ ಮುಖಂಡರುಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ , ಪಕ್ಷಾತೀತವಾದ ಈ ಸಭೆಗೆ ಉತ್ಪಾದಕ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತಿಳಿಸಲಾಗಿದೆ. ( ಸಿ ಪುಟ್ಟಸ್ವಾಮಿ, ಸಿದ್ದಪ್ಪ ಎಲೆಕೇರಿ, ದೇವರಾಜು ಲಕ್ಷ್ಮೀನರಸಿಂಹೇಗೌಡ ದೇವರ ಹೊಸಹಳ್ಳಿ, ಮಲ್ಲಿಕಾರ್ಜುನ್ ಗೌಡ ಉಜ್ಜನಹಳ್ಳಿ, ಬೈರ ಶೆಟ್ಟಿಹಳ್ಳಿ ಮಲ್ಲಿಕಾರ್ಜುನ್, ಮುಂತಾದವರು ಈ ಹೇಳಿಕೆಗೆ ಸಹಿ ಮಾಡಿದ್ದಾರೆ,)

Share & Spread
error: Content is protected !!