*ರೋಟರಿ ಕ್ಲಬ್ ವತಿಯಿಂದ ಚಾರಣ:*

ಚನ್ನಪಟ್ಟಣ :ಜಂಜಾಟದ ಬದುಕಿನಲ್ಲಿ ಮನಷ್ಯರಿಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡು ಬಹು ಪ್ರಮುಖವಾಗಿದ್ದು ಇವುಗಳನ್ನು ಕಾಪಾಡಿಕೊಳ್ಳುವುದು ಕೋಟಿ ಸಂಪಾದನೆಗಿಂತಲೂ ಮಿಗಿಲೆಂದು ರೋಟರಿ ಟಾಯ್ಸ್ ಸಿಟಿಯ ನಿಕಟಪೂರ್ವ ಅಧ್ಯಕ್ಷ ಬೈ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ರೋಟರಿ ಟಾಯ್ಸ್ ಸಿಟಿ ಕ್ಲಬ್ ವತಿಯಿಂದ ತಾಲೂಕಿನ ಇತಿಹಾಸ ಪ್ರಸಿದ್ದ ಮಾಕಳಿ ಹೊಸಹಳ್ಳಿಯ ಕೃಷ್ಣಗಿರಿ ಬೆಟ್ಟಕ್ಕೆ ಕೈಗೊಂಡಿದ್ದ ಚಾರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಾವು ಕೋಟಿ ಕೋಟಿ ಸಂಪಾದಿಸಿದರೂ ಆರೋಗ್ಯ ಹದಗೆಟ್ಟರೇ ನಾವು ಸಂಪಾದಿಸಿರುವ ಎಲ್ಲಾ ಹಣವನ್ನು ಸುರಿದರೂ ಮತ್ತೇ ಆರೋಗ್ಯವನ್ನು ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕೆವಲ ಹಣ,ಹೆಸರು, ಕೀರ್ತಿ ಗಳಿಸುವುದರ ಜೊತೆಗೆ ಆರೋಗ್ಯ ಸಂಪತ್ತನ್ನು ಸಂಪಾದಿಸುವ ಕೆಲಸಕ್ಕೆ ನಾವೆಲ್ಲ ಮುಂದಾಗಬೇಕಿದೆ ಎಂದರು.

ಸಂಘ ಸಂಸ್ಥೆಗಳು ಕೇವಲ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಅವುಗಳ ಕಾರ್ಯವ್ಯಾಪ್ತಿ ಮುಗಿಯುವುದಿಲ್ಲ, ಬದಲಿಗೆ ಕುಟುಂಬ ಪರಿಕಲ್ಪನೆಯಡಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ರೋಟರಿಯಲ್ಲಿನ ಕುಟುಂಬ ಸದಸ್ಯರುಗಳ ಆರೋಗ್ಯ ಸಹ ಬಹುಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಪ್ರತಿವಾರ ಒಂದೂಂದು ಬೆಟ್ಟಗಳಿಗೆ ಚಾರಣ ಮಾಡಿಸುವ ಆ ಮೂಲಕ ನಮ್ಮ ಆರೋಗ್ಯವನ್ನು ಸಹ ಕಾಪಾಡಿಕೊಳ್ಳುವ ಕಾರ್ಯಕ್ಕೆ ಕ್ಲಬ್ ಮುಂದಾಗಿರುವುದಾಗಿ ತಿಳಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಶೇಖರ್ ಲಾಡ್ ಮಾತನಾಡಿ ನಮ್ಮಲ್ಲಿ ಇದೊಂದು ಹೊಸ ರೀತಿಯ ಕಲ್ಪನೆಯಾಗಿದ್ದು, ಇಲ್ಲಿಯ ವರೆಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಮಾತ್ರ ಭಾಗಿಯಾಗುತ್ತಿದ್ದ ನಾವುಗಳು ಇದೀಗ ಕುಟುಂಬ ಸಮೇತ ಟ್ರಕ್ಕಿಂಗ್ ನಲ್ಲೂ ಭಾಗವಹಿಸುತ್ತಿರುವುದು ಹೊಸ ರೀತಿಯ ಖುಷಿಗೆ ಕಾರಣವಾಗಿದೆ ಎಂದರು.

ಚಾರಣದಲ್ಲಿ ಕಾರ್ಯದರ್ಶಿ ಚಕ್ಕೆರೆ ಯೋಗೇಶ್, ಕ್ಲಬ್ ಆಡ್ವೈಸರ್ ನಾಗೇಶ್, ನಿತಿನ್, ರಾಜೇಶ್, ಅಪ್ಪಾಜಿಗೌಡ, ಚಂದನ್, ಅರ್ಜುನ್, ತೇಜಶ್, ಮೋಹನ್, ಜಯರಾಮ್ ಸೇರಿದಂತೆ ಅನೇಕರು ಹಾಜರಿದ್ದರು.

 

Share & Spread
error: Content is protected !!