ಜನ ಮೆಚ್ಚುವಂತಹ ಹಾಗೂ ಶಾಶ್ವತವಾಗಿ ಉಳಿಯುವಂತಹ ಒಳ್ಳೆಯ ಸೇವಾ ಕೆಲಸಗಳನ್ನು ಮಾಡಿ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ತಿಳಿಸಿದರು. ಅವರು ಪಟ್ಟಣದ ಶತಮಾನೋತ್ಸವ ಭವನದಲ್ಲಿ ಭಾನುವಾರ ಬೊಂಬೆ ನಗರಿಯ ವಿಶ್ರಾಂತ ಅಧ್ಯಾಪಕ ಸಂಘ ಸಂಸ್ಥೆಗಳ ಸೇವಾಕರ್ತ ವಸಂತ್ ಕುಮಾರ್ 60 ರ ಅಭಿನಂದನೆ ಮತ್ತು ಗ್ರಂಥ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಹಣತೆ ಎಂಬ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೂ ಸಾಮಾಜಿಕ ತುಡಿತ ಇರುವುದು ಅಗತ್ಯ, ನನಗಾಗಿ ಬದುಕುವುದಕ್ಕಿಂತ ನಮಗಾಗಿ ಬದುಕಿದಾಗ ಮಾತ್ರ ಸಮಾಜ ನಮ್ಮನ್ನು ಸದಾ ನೆನೆಯುತ್ತದೆ. ಸಮಾಜದ ಮೇಲಿನ ಕಾಳಜಿ ಮತ್ತು ಸೇವಾ ಮನೋಭಾವನೆಯನ್ನು ರೂಡಿಸಿಕೊಂಡು 60 ವಸಂತಗಳನ್ನು ಪೂರೈಸಿರುವ ವಸಂತ್ ಕುಮಾರ್ ರವರು ಸಮಾಜ ನೆನಪಿಸಿಕೊಳ್ಳುವ ರೀತಿಯಲ್ಲಿ ಬದುಕಿದ್ದಾರೆ ಎಂದರು .
ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನ ಅಧ್ಯಕ್ಷ ರಾಮಲಿಂಗೇಶ್ವರ (ಸಿಸಿರಾ) ಪ್ರಸ್ತಾವಿಕವಾಗಿ ಮಾತನಾಡಿದರು. ಅಭಿನಂದನಾ ಸಮಿತಿ ವತಿಯಿಂದ ವಸಂತ್ ಕುಮಾರ್ ರವರಿಗೆ ಹೃತ್ಪೂರ್ವಕವಾಗಿ ಅಭಿನಂದಿಸಲಾಯಿತು. ಸಮಗ್ರ ಶಿಕ್ಷಣ ಕರ್ನಾಟಕದ ನಿರ್ದೇಶಕ ಎಂ. ಪಿ. ಮಾದೇಗೌಡ ಸು.ತ. ರಾಮೇಗೌಡ ಶಿಕ್ಷಣಾಧಿಕಾರಿ ಶಿವಪ್ಪ ,ಡಿ ಪುಟ್ಟಸ್ವಾಮಿ (ಡಿಪಿಎಸ್ ), ಪ್ರಾಂಶುಪಾಲ ಡಾ.ವೆಂಕಟೇಶ್ , ಭಾ.ವಿ.ಪ. ಅಧ್ಯಕ್ಷ ಗುರುಮಾದಯ್ಯ, ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ, ಬೆಸ್ಕಾಂ ಶಿವಲಿಂಗಯ್ಯ ವಿ. ಟಿ. ರಮೇಶ್, ರವಿಕುಮಾರ್ ಗೌಡ, ಆರ್. ಶೇಖರ್, ಡಾ. ಎಚ್ .ಕೃಷ್ಣೇಗೌಡ, ವಕೀಲರ ಸಂಘದ ಮಾಜಿ ಅಧ್ಯಕ್ಷ ಟಿ.ವಿ. ಗಿರೀಶ್ ,ಬಿ.ಎನ್. ಕಾಡಯ್ಯ, ತಿಪ್ರೇಗೌಡ, ಯೋಗಾನಂದ, ಚಕ್ಕೆರೆ ವಿಜೇಂದ್ರ, ಗೋವಿಂದಯ್ಯ, ಜಿ.ಕೆ. ರಂಗನಾಥ್, ಸತ್ಯನಾರಾಯಣ, ಬಿ.ವಿ. ಜಯರಾಮೇಗೌಡ ,ವಿ.ಸಿ. ಚಂದ್ರೇಗೌಡ ,ಬೈ.ಪು. ಪ್ರಭುಸ್ವಾಮಿ, ಟಿ. ಚನ್ನಪ್ಪ , ಶಿವರಾಮ ಭಂಡಾರಿ , ಯು.ಸಿ.ಪ್ರವೀಣ್ ಕುಮಾರ್ ,ಡಾ. ಪವನ್ ಕುಮಾರ್, ಕೃಷ್ಣಮ್ಮ ಸೋಮರಾಜು, ಡಾ. ರಾಜಶ್ರೀ .ಮಮತಾ ಲಕ್ಷ್ಮಣ್ ಗೌಡ , ಎಸ್ .ಪೂರ್ಣಿಮಾ, ಕುಸುಮಲತಾ ,ಪಾರ್ವತಮ್ಮ ಶಿವಪ್ಪ, ರೇಷ್ಮಾ, ರಾಧಿಕಾ ರವಿಕುಮಾರ್ ಗೌಡ , ಶೈಲಜಾಶಿವಾನಂದ, ಪದ್ಮಾವತಿ ಮುತ್ತುರಾಜು , ,ಡಾ. ಸ್ಪೂರ್ತಿ , ಆಶಾಲತಾ ,ಚಂದ್ರಿಕಾ, ಪ್ರಮೀಳಾ ನಾಗರಾಜು, ಮೊದಲಾದವರು ಉಪಸ್ಥಿತರಿದ್ದರು .ಭಾರತ ವಿಕಾಸ್ ಪರಿಷತ್ ಕಣ್ವ ಶಾಖೆ ಮಹಿಳಾ ತಂಡದಿಂದ ಗೀತಕಾಯನ ಕಾರ್ಯಕ್ರಮ ನಡೆಯಿತು, ರಂಗಭೂಮಿ ಕಲಾವಿದರಿಂದ ರಂಗಗೀತೆ ಕಾರ್ಯಕ್ರಮ ನಡೆಯಿತು . ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಸಂತ್ ಕುುಮಾರ್ ರವರನ್ನು ಸನ್ಮಾನಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ತೌಟನಹಳ್ಳಿ ಪುಟ್ಟಸ್ವಾಮಿ ಮಾತನಾಡಿ ಭೂಮಿಯ ಮೇಲಿನ ಸಂತರು ಮನುಷ್ಯನನ್ನು ಮೊದಲು ಮನುಷ್ಯನಾಗಿ ಬದುಕು ಎಂದು ಹೇಳಿದ್ದಾರೆ. ಆದರೆ ಈಗ ಉತ್ತಮ ಮನುಷ್ಯನಾಗಿ ಬದುಕುವುದೇ ಕಷ್ಟವಾಗಿದೆ. ಮನುಷ್ಯನಾಗಿ ಬದುಕುವುದೇ ಅತ್ಯಂತ ಮುಖ್ಯವಾದುದು. ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿವಾಣಿಯಂತೆ ಆಚರಣೆಯಲ್ಲಿ ಮಾನವನಾಗಲು ಪ್ರಯತ್ನಿಸಬೇಕು, ವಸಂತ್ ಕುಮಾರ್ ರವರು ಒಬ್ಬ ಮನುಷ್ಯನಾಗಿ ಬದುಕಿ ಜೀವನದ ಸಾರ್ಥಕತೆ ಕಂಡಿದ್ದಾರೆ ಎಂದರು.