ಚನ್ನಪಟ್ಟಣ:ನಗರದಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿಯೋರ್ವನನ್ನು ವಿಚಾರಣೆ ಮಾಡಲಾಗಿ ಆತ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಪೋಲಿಸರ ಕಣ್ತಪ್ಪಿಸಿ ತಿರುಗಾಡಿಕೊಂಡಿದ್ದ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಆತನ ಬಳಿ ಇದ್ದ ದ್ವಿಚಕ್ರ ವಾಹನಗಳು ಮತ್ತು ಹಣವನ್ನು ವಶಪಡಿಸಿಕೊಂಡು ಜೈಲಿಗಟ್ಟಿದ್ದಾರೆ.
ಕಳ್ಳನನ್ನು ಬಂಧಿಸಿದ ನಂತರ ಆತನಿಂದ 7 ದ್ವಿಚಕ್ರ ವಾಹನಗಳನ್ನು ಹಾಗೂ ನಂಜನಗೂಡಿನ ದೇವಾಲಯವೊದರಲ್ಲಿ ಕದ್ದಿದ್ದ ಹಣವನ್ನು ವಶಪಡಿಸಿಕೊಳ್ಳುವ ಮುಖಾಂತರ ಭರ್ಜರಿ ಭೇಟೆಯಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ಕೂರಣಗೆರೆ ಗ್ರಾಮದ ವ್ಯಕ್ತಿಯೊಬ್ಬರ ದ್ವಿಚಕ್ರ ವಾಹನ ತಾಲೂಕು ಕಚೇರಿ ಮುಂಭಾಗ ಕಳುವಾಗಿತ್ತು, ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆ ನಡೆಸುತ್ತಿದ್ದು, ಇದೇ ವೇಳೆ ಪೊಲೀಸರಿಗೆ ಈ ವಾಹನ ಕಂಡು ಬಂದಿದ್ದು, ಇದರ ಜಾಡು ಹಿಡಿದು ಹೊರಟಾಗ ಹಲವೆಡೆ ದ್ವಿಚಕ್ರ ವಾಃನಗಳನ್ನು ಕಳ್ಳತನ ಮಾಡುತ್ತಿದ್ದ ಈತ ಸಿಕ್ಕಿ ಹಾಕಿಕೊಂಡಿದ್ದಾನೆ. 
ಕಿರಣ್ ಆಲಿಯಾಸ್ ಸುಧಿ ಬಂಧಿತ ಆರೋಪಿಯಾಗಿದ್ದು, ಮೈಸೂರು ಜಿಲ್ಲೆಯ ಹುಣಸೂರು ನಗರ ವಾಸಿಯಾದ ಈತ ನಗರದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಹಲವು ಕಡೆ ವಾಹನಗಳನ್ನು ಕದ್ದಿರುವುದಾಗಿ ತಿಳಿಸಿ ಪೊಲೀಸರ ಅತಿಥಿಯಾಗಿದ್ದಾನೆ.