ಪಾಕಿಸ್ತಾನ ಸೇನೆಯ ಮೇಲೆ ದಾಳಿ ನಡೆಸಿ 9 ಮಂದಿ ಸೈನಿಕರನ್ನು ತಾಲಿಬಾನ್ ಒತ್ತೆಯಾಳಾಗಿರಿಸಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಸ್ಲಾಮಾಬಾದ್ನ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ಭಾನುವಾರ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಭಯೋತ್ಪಾದನಾ ನಿಗ್ರಹ ಇಲಾಖೆಯನ್ನು (ಸಿಟಿಡಿ) ಗುರಿಯಾಗಿಸಿಕೊಂಡಿದೆ. ಬನ್ನು ಕಂಟೋನ್ಮೆಂಟ್ ಸೆಂಟರ್ನಲ್ಲಿ ನಡೆದ ಈ ದಾಳಿಯಲ್ಲಿ ಹಲವು ಪಾಕಿಸ್ತಾನಿ ಸೈನಿಕರು ಮತ್ತು CTD ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು CNN News18 ವರದಿ ಮಾಡಿದೆ, ಈ ದಾಳಿಯಲ್ಲಿ ತಾಲಿಬಾನ್ ಅನೇಕ ಸೈನಿಕರನ್ನು ಒತ್ತೆಯಾಳಾಗಿ ಇರಿಸಿದೆ. 9 ಯೋಧರು ಒತ್ತೆಯಾಳುಗಳಾಗಿದ್ದಾರೆ ಎಂದು ಭಯೋತ್ಪಾದಕರು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತಿಳಿಸಲಾಗಿದೆ. 15-20 ಜನರನ್ನು ಒತ್ತೆಯಾಳಾಗಿಟ್ಟುಕೊಂಡು ಇಡೀ ಕಟ್ಟಡವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು ಎನ್ನಲಾಗಿದೆ.
ಮೂಲಗಳ ಪ್ರಕಾರ, ಟಿಟಿಪಿ ಸದಸ್ಯರು ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ. ಮತ್ತೊಂದೆಡೆ, ಅವರು CTD ಪ್ರಧಾನ ಕಚೇರಿಯಿಂದ ವೀಡಿಯೊವನ್ನು ಸಹ ಬಿಡುಗಡೆ ಮಾಡಿದ್ದಾರೆ. ಸುಬೇದಾರ್ ಮೇಜರ್ ಖುರ್ಷಿದ್ ಅಕ್ರಮ್ ಸೇರಿ 8 ಯೋಧರನ್ನು ಒತ್ತೆಯಾಳಾಗಿ ಇರಿಸಲಾಗಿದೆ ಎಂದು ಹೇಳಲಾಗಿದೆ. ಅಫ್ಘಾನಿಸ್ತಾನಕ್ಕೆ ತೆರಳಲು ಮಾರ್ಗವನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.