ಬೆಳಗಾವಿ : ಬೆಳಗಾವಿ ಅಧಿವೇಶನ ಇತಿಹಾಸದಲ್ಲೇ ಭಾರೀ ಭದ್ರತೆ ಮಾಡಲಾಗಿದ್ದು, 5000ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಬಂದೋಬಸ್ತ್ ನೀಡಲಾಗುತ್ತಿದೆ.
ಬೆಳಗಾವಿಯಲ್ಲಿ 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಆಳವಡಿಕೆ ಮಾಡಲಾಗಿದೆ. 6 ಡ್ರೋನ್ ಕ್ಯಾಮೆರಾಗಳ ಮೂಲಕ ಬೆಳಗಾವಿ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಸುವರ್ಣ ಸೌಧದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸುವರ್ಣಸೌಧ ಬಳಿ ಸೆಂಟ್ರಲೈಸಡ್ ಕಮಾಂಡ್ ಸೆಂಟರ್ ಸ್ಥಾಪನೆ ಮಾಡಲಾಗಿದ್ದು, ಮುಖ್ಯ ದ್ವಾರದ ಭದ್ರತೆ ಮೇಲೆ ಒಬ್ಬ IPS ಅಧಿಕಾರಿ ನಿಗಾ ವಹಿಸಲಾಗಿದೆ. ಒಟ್ಟು 6 ಮಂದಿ IPS ಅಧಿಕಾರಿಗಳಿಗೆ ಬಂದೋಬಸ್ತ್ ಜವಾಬ್ದಾರಿ ನೀಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲದೇ ಬೇರೆ-ಬೇರೆ ಜಿಲ್ಲೆಗಳಿಂದ ಸಿಬ್ಬಂದಿ ಕರೆಸಿ ಭದ್ರತೆ ನೀಡಲಾಗುತ್ತಿದೆ.
ಇಂದಿನಿಂದ 10 ದಿನ ಟೈಟ್ ಇರಲಿದ್ದು, ಕಮಕ್..ಕಿಮಕ್ ಅಂದ್ರೆ ಅಂದರ್ ಆಗೋದು ಗ್ಯಾರೆಂಟಿ, ಬಾಲ ಬಿಚ್ಚಿದ್ರೆ ಅಲ್ಲೇ ಡ್ರಾ..ಅಲ್ಲೇ ಬಹುಮಾನ. ಕಿರಿಕ್ ಮಾಡಿದ್ರೆ MES ಆದ್ರೂ ಬಿಡಲ್ಲ.. ಯಾರಾದ್ರೂ ಬಿಡಲ್ಲ ಎಂದು ADGP, ಕಾನೂನು ಸುವ್ಯವಸ್ಥೆ ಅಲೋಕ್ ಕುಮಾರ್ ಹೇಳಿದ್ಧಾರೆ.
ಸುವರ್ಣಸೌಧದ ಸುತ್ತ ಪೊಲೀಸ್ ಭದ್ರಕೋಟೆ ಆಳವಡಿಸಲಾಗಿದೆ. ಬೆಳಗಾವಿ ಗಡಿ ಪ್ರದೇಶದಲ್ಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಡ್ರೋನ್, ಗರುಡಾ, ಸಶಸ್ತ್ರ ಪಡೆಗಳಿಂದಲೂ ಹದ್ದಿನ ಕಣ್ಣು, 5000ಕ್ಕೂ ಹೆಚ್ಚು ಪೊಲೀಸರು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಚಿಕ್ಕಮಗಳೂರು, ಮಂಡ್ಯ ಸೇರಿ ಬೇರೆಡೆಯಿಂದ ಪೊಲೀಸರ ನಿಯೋಜನೆ ಮಾಡಲಾಗಿದೆ. ಐವರು IPS ಅಧಿಕಾರಿಗಳು ಬಂದೋಬಸ್ತ್ ಮೇಲೆ ಕಣ್ಣಿಡಲಿದ್ದಾರೆ.8 DySP, 35 DSPಗಳಿಂದ ಬಂದೋಬಸ್ತ್ ಉಸ್ತುವಾರಿ, ಬೆಳಗಾವಿಯಲ್ಲಿ 35 KSRP ತುಕಡಿ, ಜಿಲ್ಲಾದ್ಯಂತ 5 ತುಕಡಿ ನಿಯೋಜನೆ, ಗಡಿ ಭಾಗದಲ್ಲಿ 21 ಕಡೆ ಚೆಕ್ಪೋಸ್ಟ್ಗಳ ನಿರ್ಮಾಣ ಮಾಡಲಾಗಿದೆ.
ADGP, ಕಾನೂನು ಸುವ್ಯವಸ್ಥೆ ಅಲೋಕ್ ಕುಮಾರ್ ಅವರು ಭದ್ರತೆ ಪರಿಶೀಲನೆ ನಂತರ ಮಾತನಾಡಿ ಹೊರಗಿನಿಂದ ಬಂದು ಗಲಾಟೆ ಸೃಷ್ಟಿಮಾಡಿದ್ರೆ ಸುಮ್ಮನೆ ಬಿಡಲ್ಲ, ಪ್ರತಿಭಟನೆಗಳಿಗೆ ಕೊಂಡಸಕೊಪ್ಪದಲ್ಲಿ ಸ್ಥಳಾವಕಾಶ ಮಾಡಲಾಗಿದೆ. ಬೆಳಗಾವಿಯಲ್ಲಿ ಪೊಲೀಸ್ ಕಮಾಂಡ್ ಸೆಂಟರ್ ಸ್ಥಾಪನೆ ಮಾಡಲಾಗಿದೆ. ಸುವರ್ಣ ಸೌಧದಲ್ಲೇ ಕುಳಿತು ಬೆಳಗಾವಿ ಚಲನ-ವಲನದ ಮೇಲೆ ಕಣ್ಣು ಇಡಲಾಗುತ್ತದೆ. 6 ಡ್ರೋನ್ಗಳನ್ನು ಬಳಸಿ ಸುವರ್ಣ ಸೌಧ, ಬೆಳಗಾವಿಯ ಮೇಲೆ ಕಣ್ಣು, ಗರುಡಾ ಪಡೆಯನ್ನೂ ಬಳಸಿ ಬೆಳಗಾವಿಗೆ ಬಂದೋಬಸ್ತ್ ನೀಡಲಾಗುತ್ತದೆ. ಮಹಾಮೇಳಾವ್ ವೇಳೆ ಯಾವುದೇ ಗೊಂದಲ ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.