ರಾಮನಗರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ನಡೆದ ಕ್ಯಾನ್ಸರ್ ಹಾಗೂ ಟಿ. ಬಿ ಯ ತಪಾಸಣೆ ಶಿಬಿರ ಯಶಸ್ವಿ ..

ದಿನಾಂಕ 4/08/2022 ರಂದು ಭಾರತೀಯ ರೆಡ್ ಕ್ರಾಸ್, ಕಿದ್ವಾಯಿ ಸಂಸ್ಥೆಯ ವೈದ್ಯರು ಹಾಗೂ ರಾಮನಗರ ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಕ್ಯಾನ್ಸರ್ ತಪಾಸಣೆ ಹಾಗೂ ಟಿ. ಬಿ ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದ್ದು, ಮುಖ್ಯ ಅತಿಥಿಗಳಾಗಿ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶ್ರೀಮತಿ ಉಮಾ ಮಹಾದೇವನ್ ಹಾಗೂ ಜಿಲ್ಲೆಯ ಸಿಇಓ ಡಾ ದಿಗ್ವಿಜಯ್ ಬೊಡಕೆ ಮತ್ತು ಜಿಲ್ಲಾ ಅರೋಗ್ಯಧಿಕಾರಿ ಡಾ ಕಾಂತರಾಜ್, ಜಿಲ್ಲಾ ರೆಡ್ ಕ್ರಾಸ್ ಸಭಾಪತಿ HV ಶೇಷಾದ್ರಿ ಅಯ್ಯರ್, ರಾಜ್ಯ ಶಾಖೆಯ ಪ್ರತಿನಿಧಿ ವಿ. ಬಾಲಕೃಷ್ಣ ಹಾಗೂ ಕಮಿಟಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

Share & Spread
error: Content is protected !!