ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಪ್ರಕರಣದಲ್ಲಿ ಮಾಹಿತಿ ನೀಡಿದ ಕಾರಣಕ್ಕೆ ಕರ್ತವ್ಯ ಲೋಪದ ಎಸಗಿರುವ ಆರೋಪದ ಮೇಲೆ ಪಿಡಿಓ ಅಧಿಕಾರಿ ತುಳಸಿನಾಥ್ ನನ್ನು ಅಧಿಕಾರದಿಂದ ಅಮಾನತು ಮಾಡಲಾಗಿದೆ. ಇಲ್ಲಿನ ಹೆನ್ನಾಗರ ಗ್ರಾಮದ ವೀರಭದ್ರಸ್ವಾಮಿ ಎಂಬವರು ಮಾಹಿತಿ ಹಕ್ಕು ಮೂಲಕ ಮಾಹಿತಿಯನ್ನು ಪಿಡಿಓ ತುಳಸಿನಾಥ್ ಗೆ ಕೇಳಿದ್ದರು.. ಅದರೆ ಮಾಹಿತಿ ನೀಡಿದೆ ಬೇಜವಾಬ್ದಾರಿಯಾಗಿ ನಿರ್ಲಕ್ಷ್ಯ ತೊರಿದ ಕಾರಣಕ್ಕೆ ರಾಜ್ಯ ಮಾಹಿತಿ ಆಯುಕ್ತರು ಎಚ್. ಪಿ. ಸುಧಾಮ್ ದಾಸ್ ರವರ ಪಿಡಿಓ ತುಳಿಸಿನಾಥ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರ ಇದರಿಂದಾಗಿ ಅಧಿಕಾರಿಗಳಿಗೆ ಎದೆಯಲ್ಲಿ ನಡುಕ ಶುರು ವಾಗಿದೆ.
ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಇನ್ನು ಮುಂದೆ ಎಲ್ಲಾ ಸರ್ಕಾರಿ ಮಾಹಿತಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಮಾಹಿತಿಯನ್ನು ನೀಡಬೇಕೆಂಬ ಎಚ್ಚರಿಕೆಯ ಘಂಟೆಯಾಗಿದೆ. ಮಾಹಿತಿ ನೀಡದೆ ಅಥವಾ
ವಿಳಂಬ ಮಾಡಿದಾರೆ ಸರ್ಕಾರಿ ಮಾಹಿತಿ ಅಧಿಕಾರಿಗಳ ಉದ್ಯೋಗಕ್ಕೆ ಕಂಟಕವಾಗಲಿದೆ.