ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿ ಸರ್ಕಾರಕ್ಕೆ ಶಿವಸೇನೆಯ ಬಂಡುಕೋರ ಶಾಸಕರಿಂದ ಸಂಕಷ್ಟ ಎದುರಾಗಿರುವ ಹೊತ್ತಿನಲ್ಲಿ ಶಿವಸೇನೆ ಉನ್ನತ ನಾಯಕ ಸಂಜಯ್ ರಾವುತ್ ಮನೆ ಮುಂದೆ ಹಾಕಿದ್ದ ಒಂದು ಬ್ಯಾನರ್ ವೈರಲ್ ಆಗಿದೆ.
ಬ್ಯಾನರ್‌ನಲ್ಲಿ, ‘ನಿಮ್ಮ ದುರಹಂಕಾರವು 4 ದಿನಗಳವರೆಗೆ ಇರುತ್ತದೆ, ನಮ್ಮ ರಾಜ ಬರುತ್ತಾನೆ’ ಎಂದು ಬರೆಯಲಾಗಿದೆ. ಪೋಸ್ಟರ್ ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಾಳಾಸಾಹೇಬ್ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್ ರಾವುತ್ ಮತ್ತು ಇತರ ಪ್ರಮುಖರ ಚಿತ್ರಗಳನ್ನು ಹಾಕಲಾಗಿದೆ.
Maharashtra | A banner, reading 'Your arrogance would last 4 days, our kingship is inherited', seen outside the residence of Shiv Sena leader Sanjay Raut in Mumbai.
The banner has been put up by Shiv Sena Corporator Deepmala Badhe. pic.twitter.com/N4WkJA0riB
— ANI (@ANI) June 22, 2022
ಸಂಜಯ್ ರಾವುತ್ ನಿವಾಸದ ಹೊರಗಿರುವ ಈ ಬ್ಯಾನರ್ ಅನ್ನು ಮುಂಬೈ ಮಹಾನಗರ ಪಾಲಿಕೆಯ ಸದಸ್ಯೆ ದೀಪಮಾಲಾ ಬಢೆ ಎನ್ನುವುವರ ಹೆಸರಿನಲ್ಲಿ ಹಾಕಲಾಗಿದೆ. ಈಗಾಗಲೇ ಮಹಾರಾಷ್ಟ್ರ ಸರ್ಕಾರದ ರಾಜಕೀಯ ಅಸ್ಥಿರತೆ ಕುರಿತಂತೆ ಹಲವು ಬೆಳವಣಿಗೆಗಳು ನಡೆದಿದ್ದು, ಬುಧವಾರ ಮಧ್ಯಾಹ್ನ ಸಿಎಂ ಠಾಕ್ರೆ ಅವರು ರಾಜ್ಯ ಸಚಿವ ಸಂಪುಟ ಸಭೆ ಕರೆದಿದ್ದಾರೆ.