ಇತ್ತೀಚಿನ ಮೂರು ಕೃಷಿ ಕಾಯ್ದೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಲೋಕಸಭಾ ಅಧಿವೇಶನಕ್ಕೆ ಅಡ್ಡಿಪಡಿಸಿದ್ದರಿಂದ ಗುರುವಾರ ಪದೇ ಪದೇ ಮುಂದೂಡಲಾಯಿತು.
ನವದೆಹಲಿ: ಇತ್ತೀಚಿನ ಮೂರು ಕೃಷಿ ಕಾಯ್ದೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಲೋಕಸಭಾ ಅಧಿವೇಶನಕ್ಕೆ ಅಡ್ಡಿಪಡಿಸಿದ್ದರಿಂದ ಗುರುವಾರ ಪದೇ ಪದೇ ಮುಂದೂಡಲಾಯಿತು.
ಪದೇ ಪದೇ ಮುಂದೂಡಿಕೆ ನಂತರ ಸಂಜೆ 4 ಗಂಟೆಗೆ ಮತ್ತೆ ಅಧಿವೇಶನ ಆರಂಭವಾಯಿತು. ಈ ವೇಳೆ ಅಧ್ಯಕ್ಷರಾಗಿದ್ದ ಭರ್ತುಹಾರಿ ಮಹತಾಬ್ ಅವರು ಪ್ರತಿಭಟನಾ ನಿರತ ಸದಸ್ಯರನ್ನು ತಮ್ಮ ಆಸನಗಳಿಗೆ ಹಿಂತಿರುಗುವಂತೆ ಕೇಳಿಕೊಂಡಾಗಲೂ ಸದಸ್ಯರು ಮಾತುಗಳನ್ನು ಕೇಳದೆ ಪ್ರತಿಭಟನೆ ಮುಂದುವರೆಸಿದ್ದವು.
ಈ ಹಿನ್ನಲೆಯಲ್ಲಿ ಲೋಕಸಭೆ ಅಧಿವೇಶನವನ್ನು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಗಿದೆ.
ಪೆಗಾಸಸ್ ಬೇಹುಗಾರಿಕೆ ವಿವಾದ ಮತ್ತು ಮೂರು ಕೃಷಿ ಕಾಯ್ದೆ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಹಲವಾರು ವಿಷಯಗಳ ಕುರಿತು ಪ್ರತಿಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಕೋಲಾಹಲ ಸೃಷ್ಟಿಸಿದ್ದರು.