ರಾಮನಗರ : ಚನ್ನಪಟ್ಟಣದಲ್ಲಿ ಲೋಕಯುಕ್ತ ಬಲೆಗೆ ರೇಷ್ಮೆ ವಿಸ್ತರಣಾ ಅಧಿಕಾರಿ ಪರಮೇಶ್ ಮತ್ತು ರೇಷ್ಮೆ ನೀರಿಕ್ಷಕರು ಯೋಗೇಶ್.

ಚನ್ನಪಟ್ಟಣ ತಾಲ್ಲೂಕಿನ ಸೊಗಾಲದೊಡ್ಡಿ ಗ್ರಾಮದ ಎಲ್ಲಪಾ ರವರ ದೂರಿನ ಮೇಲೆ ಇಂದು ರೇಷ್ಮೆ ವಿಸ್ತರಣಾ ಅಧಿಕಾರಿ ಪರಮೇಶ್ ಮತ್ತು ರೇಷ್ಮೆ ನೀರಿಕ್ಷಕರು ಯೋಗೇಶ್ ರನ್ನು ಲೋಕಯುಕ್ತ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಲ್ಲಪಾ ರವರ ರೇಷ್ಮೆ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲು 40000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ ಅಧಿಕಾರಿಗಳು ಮೊದಲನೇ ಕಂತಿನಲ್ಲಿ 5000 ರೂಪಾಯಿ ಗಳನ್ನು ಮೊದಲು ಪಡೆದಿರುತ್ತಾರೆ, ನಂತರ ಉಳಿಕೆ 15000 ರೂಪಾಯಿ ಹಣ ಪಡೆಯುವಾಗ ಆರೋಪಿ ಪರಮೇಶ್ ನೇರವಾಗಿ ಲೋಕಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುತ್ತರೆ, ನಂತರ ಮತ್ತೊಬ್ಬ ಆರೋಪಿ ಯೋಗೇಶ್ ರವರನ್ನು ಮನೆಯಲ್ಲಿ ಬಂಧಿಸಿ ಪ್ರಕರಣ ಧಾಖಲಿಸಿ ಕೊಳ್ಳಲಾಗಿದೆ.

ಡಿ ವೈ ಎಸ್ ಪಿ ಸುಧೀರ್ ರವರ ಉಸ್ತುವಾರಿಯಲ್ಲಿ, ಲೋಕಯುಕ್ತ ಎಸ್ ಪಿ ಸ್ನೇಹ ರವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಜರುಗಿದ್ದು ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಅನಂತರಮು, ಇನ್ಸ್ಪೆಕ್ಟರ್ ಸಂದೀಪ್, ಇನ್ಸ್ಪೆಕ್ಟರ್ ಹನುಮಂತಕುಮಾರ್, ಸಿಬ್ಬಂದಿಗಳಾದ ರಘು, ಶಿವಕುಮಾರ್ ಎಂ ಇ , ರಮ್ಯ, ಭಾಗ್ಯಮ್ಮ, ಗಂಗಮ್ಮ, ಮಲ್ಲಿಕಾರ್ಜುಜನ್, ಶಂಕರ್, ಶಿವಕುಮಾರ್ ಹಾಗೂ ಇತರರು ಹಾಜರಿದ್ದರು.

Share & Spread
error: Content is protected !!