ಹಾವೇರಿ : ದಿನಾಂಕ 19-12-2024 ರಂದು ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕರ ಜಿಲ್ಲಾ ಹಂತದ ಸಭೆಯನ್ನು ಮಾನ್ಯ ಅಕ್ಷಯ್ ಶ್ರೀಧರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್ ಹಾವೇರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಗುರುಭವನ ಹಾವೇರಿ ಇಲ್ಲಿ ಆಯೋಜಿಸಲಾಗಿತ್ತು.
ಈ ದಿನದ ಕಾರ್ಯಕ್ರಮವನ್ನು ಮಾನ್ಯ ಅಕ್ಷಯ್ ಶ್ರೀಧರ್ ಸಿಇಒ ಜಿಲ್ಲಾ ಪಂಚಾಯತ್ ಹಾವೇರಿ ಅವರು ಉದ್ಘಾಟಿಸಿದರು. ಮಾನ್ಯ ಶ ಶ್ರೀ ಸುರೇಶ್ ಹುಗ್ಗಿ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಹಾವೇರಿ ಇವರು 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆ ಕುರಿತಂತೆ ಮುಖ್ಯ ಶಿಕ್ಷಕರು ಶಾಲಾ ಹಂತದಲ್ಲಿ ಪಠ್ಯಕ್ರಮ ಪೂರೈಸಿಕೊಂಡು ಕಿರುಪರೀಕ್ಷೆಗಳು,ಸರಣಿ ಪರೀಕ್ಷೆಗಳು ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ಮೂಲಕ ಯೋಜನೆ ಕೈಗೊಂಡು ಮಕ್ಕಳನ್ನು ಪರೀಕ್ಷೆ ಎದುರಿಸಲು ತರಬೇತಿಗೊಳಿಸಲು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿದರು.
ಮಾನ್ಯ ಅಕ್ಷಯ್ ಶ್ರೀಧರ್ ಕಾರ್ಯ ನಿರ್ಣಾಧಿಕಾರಿಗಳು ಇಂದಿನಿಂದ ಪರೀಕ್ಷೆಗೆ ಉಳಿದ 90 ದಿನಗಳಲ್ಲಿ ಪ್ರತಿ ಮಗು ಕ್ರಿಯಾತ್ಮಕವಾಗಿ ಓದುವಂತೆ ಮಾಡಿ ಜಿಲ್ಲೆಯ ಫಲಿತಾಂಶ ಅತಿ ಹೆಚ್ಚು ಆಗುವಂತೆ ಮಾಡಬಹುದು. ಮಕ್ಕಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಿ ಕಿರುಪರೀಕ್ಷೆಗಳು ಮತ್ತು ಸರಣಿ ಪರೀಕ್ಷೆಗಳನ್ನು ಪರಿಣಾಮಕಾರಿಯಾಗಿ ಆ ಯೋಜನೆ ಮಾಡಲು ತಿಳಿಸಿದರು. 2ನೇ ಮತ್ತು 4ನೇ ಶನಿವಾರದಂದು ಪಾಲಕರ ಸಭೆಯನ್ನು ನಿಯಮಿತವಾಗಿ ನಡೆಸಲು ತಿಳಿಸಿದರು. ಪರೀಕ್ಷೆಗೆ ಸಂಬಂಧಿಸಿದಂತೆ ಮಕ್ಕಳಿಗೆ ಒತ್ತಡ ಕೊಡದೆ ಮಾಡಲ್ ನಿರುಪರೀಕ್ಷೆಗಳಲ್ಲಿ ಕಡಿಮೆ ಸಾಧನೆ ಮಾಡಿದ ಮಕ್ಕಳ ಕಲಿಕಾ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಕೈಗೊಳ್ಳಲು ತಿಳಿಸಿದರು.


