87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 20,21, 22 ನೇ ತಾರೀಕು ಮಂಡ್ಯದಲ್ಲಿ ನಡೆಯುವುದರಿಂದ ಕಳೆದ ಐದು ದಿನಗಳಲ್ಲಿ ಮಳವಳ್ಳಿ ತಾಲೂಕಿನಾದ್ಯಂತ ಕನ್ನಡ ರಥ ಸಂಚರಿಸಿ ಅಂತಿಮವಾಗಿ ಮಳವಳ್ಳಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಕನ್ನಡ ಭವನದ ಮುಂದೆ ಸಮ್ಮೇಳನದ ಪ್ರಚಾರ ಜಾತ ಮುಕ್ತಾಯಗೊಂಡಿದ್ದು , ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಳವಳ್ಳಿ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕನ್ನಡ ಭವನದಲ್ಲಿ ತಳಿರು ತೋರಣಗಳಿಂದ ಸಿಂಗರಿಸಿ ಭುವನೇಶ್ವರಿ ಫೋಟೋವನ್ನು ಇರಿಸಿ ಆವರಣವನ್ನು ಸಿಂಗಾರ ಗೊಳಿಸಿದರು ಮೆರವಣಿಗೆಯ ಕನ್ನಡ ರಥ ಕನ್ನಡ ಭವನದ ಮುಂದೆ ಬರಮಾಡಿಕೊಂಡರು.

 

ಅಧ್ಯಕ್ಷರಾದ ಚೇತನ್ ಕುಮಾರ್ ಅವರು ಪುಷ್ಪ ಮಾಲೆಯನ್ನು ಹಾಕಿ ಪುಷ್ಪಾರ್ಚನೆಯನ್ನು ಮಾಡಿದರು ಇದೇ ಸಂದರ್ಭದಲ್ಲಿ ಪುರಸಭೆಯ ಮುಖ್ಯ ಅಧಿಕಾರಿ ಶ್ರೀಮತಿ ನಾಗರತ್ನಮ್ಮ ರವರು ಪ್ರಚಾರ ಕನ್ನಡ ರಥ ಅದ್ದೂರಿಯಾಗಿ ಸಾಗಲು ತಮಟೆ ನಗಾರಿ ಪೂಜಾ ಕುಣಿತವನ್ನು ಪುರಸಭೆ ವತಿಯಿಂದ ಆಯೋಜಿಸಲಾಗಿತ್ತು ಪುರಸಭೆಯ ಅಧ್ಯಕ್ಷರು ಸದಸ್ಯರು ಕನ್ನಡ ಅಭಿಮಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಚುಂಚಣ್ಣ ರವರು ಕನ್ನಡ ರಥ ತಾಲೂಕಿನಲ್ಲಿ ಸಡಗರ ಸಂಭ್ರಮದಿಂದ ಸಂಚರಿಸಿ ಅದ್ದೂರಿಯಾಗಿ ಪ್ರಚಾರ ಹಾಗೂ ಜಾಗೃತಿ ಜಾತ ನಡೆದಿದೆ ಯಶಸ್ವಿಗೆ ಸಹಕರಿಸಿದ ಹೃದಯವಂತ ಕನ್ನಡದ ಮನಸುಗಳಿಗೆ ಹೃದಯ ಸ್ಪರ್ಶಿ ಧನ್ಯವಾದಗಳು ತಿಳಿಸಿದರು

Share & Spread
error: Content is protected !!