ಟಿ. ನರಸೀಪುರ ತಾಲೂಕು ತಲಕಾಡಿನ ಪ್ರಸಿದ್ಧ ಶ್ರೀ ಹಸ್ತಿಕೇರಿ ಮಠದ ಹಿರಿಯ ಸ್ವಾಮೀಜಿಗಳ 106 ನೇ ಗಣರಾಧನೆ ಮಹೋತ್ಸವ ಹಾಗೂ ಲೋಕಕಲ್ಯಾಣಾರ್ಥವಾಗಿ ಶರಣರ ಜಾಗೃತಿ ಕಾರ್ಯಕ್ರಮವನ್ನು ಮೈಸೂರಿನ ಕೆ.ಆರ್. ಕ್ಷೇತ್ರದ ಶಾಸಕರಾದ ಟಿ. ಎಸ್. ವತ್ಸ ರವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು

ಇಂದು ಮೈಸೂರು ಜಿಲ್ಲೆ, ಟಿ. ನರಸೀಪುರ ತಾಲೂಕು ತಲಕಾಡಿನ ಪ್ರಸಿದ್ಧ ಶ್ರೀ ಹಸ್ತಿಕೇರಿ ಮಠದ ಹಿರಿಯ ಸ್ವಾಮೀಜಿಗಳ 106 ನೇ ಗಣರಾಧನೆ ಮಹೋತ್ಸವ ಹಾಗೂ ಲೋಕಕಲ್ಯಾಣಾರ್ಥವಾಗಿ ಶರಣರ ಜಾಗೃತಿ ಕಾರ್ಯಕ್ರಮವನ್ನು ಮೈಸೂರಿನ ಕೆ.ಆರ್. ಕ್ಷೇತ್ರದ ಶಾಸಕರಾದ ಟಿ. ಎಸ್. ವತ್ಸ ರವರು ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪುಣ್ಯ ಪ್ರಸಿದ್ಧ ಸ್ಥಳವಾದ ತಲಕಾಡಿನ ಈ ಕ್ಷೇತ್ರದಲ್ಲಿ ಅಸ್ತಿಕೇರಿ ಮಠ ಹಲವಾರು ದಶಕಗಳಿಂದ ಸಾಮಾಜಿಕ ಸೇವೆ ಶರಣ ಪರಂಪರೆ ಜಾಗೃತಿ ಮೂಡಿಸುತ್ತಿದ್ದು ಯೋಗ ಹಾವು ಕಡಿತಕ್ಕೆ ವಿಶೇಷ ಔಷಧಿ ದಾಸೋಹ, ಶಿಕ್ಷಣ ಒಳಗೊಂಡಂತೆ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಡಾ. ಸಿದ್ಧ ಮಲ್ಲಿಕಾರ್ಜುನ ಸ್ವಾಮೀಜಿಗಳ ಪೂಜ್ಯ ಹಿರಿಯ ಗುರುಗಳು ಪ್ರಾರಂಭಿಸಿದ್ದು ಅಂದಿನಿಂದ ಡಾ.ಸಿದ್ದ ಮಲ್ಲಿಕಾರ್ಜುನ ಸ್ವಾಮೀಜಿಗಳು ನಿರಂತರವಾಗಿ ಸೇವೆ ಮಾಡುತ್ತಾ ಬರುತ್ತಿದ್ದಾರೆ ಈ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.


ಮಂಡ್ಯ ಜಿಲ್ಲಾ ರಾಷ್ಟೀಯ ಬಸವದಳದ ಅಧ್ಯಕ್ಷ ಹಿರಿಯ ವಕೀಲ ಎಂ. ಗುರುಪ್ರಸಾದ್ ಸ್ವಾಗತ ಕೋರಿ ಮಾತನಾಡಿ 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಸ್ವಾಮೀಜಿಗಳು ಈ ಮಠದಲ್ಲಿ ವಿವಿಧ ಕ್ಷೇತ್ರದ ಜನಸಾಮಾನ್ಯರಿಗೆ ಅನುಕೂಲವಾಗುವ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದ್ದು ನಿರಂತರವಾಗಿ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಸೇವೆ ಸಲ್ಲಿಸುವ ಡಾ.ಸಿದ್ದ ಮಲ್ಲಿಕಾರ್ಜುನ ಸ್ವಾಮೀಜಿಗಳಿಗೆ ಇನ್ನು ಹೆಚ್ಚು ಬೆಂಬಲವನ್ನು ಸ್ಥಳೀಯ ಭಕ್ತರು ನೀಡುವಂತೆ ಮನವಿ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ ಜಿಲ್ಲಾಧಿಕಾರಿ ಹಾಗೂ ಸದಾನಂದ ಆಶ್ರಮದ ಅಧ್ಯಕ್ಷರಾದ ವಿ. ಶಂಕರ್ ಅವರು ಮಾತನಾಡಿ ಪವಾಡ ಪುರುಷ ದತ್ತಾತ್ರೇಯ ರವರ ಸಾಧನೆ ಅಪಾರವಾದದ್ದು ನಾವು ಗುರುಗಳನ್ನು ಗೌರವಿಸಿದರೆ ಪ್ರತಿಯೊಬ್ಬ ಮನುಷ್ಯನಿಗೆ ವಿಶೇಷ ಜ್ಞಾನ, ಆಯಸ್ಸು, ಆರೋಗ್ಯ ವೃದ್ಧಿಸುತ್ತದೆ ನಾವು ಮಠ ಮಂದಿರಗಳ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವ ಮುಖಾಂತರ ನಾವು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು ಎಂದರು.

ಆಶೀರ್ವಚನ ನೀಡಿದ ತಲಕಾಡು ಹಸ್ತಿಕೇರಿ ಮಠದ ಪೀಠಾಧ್ಯಕ್ಷರಾದ ಪೂಜ್ಯ ಡಾ.ಸಿದ ಮಲ್ಲಿಕಾರ್ಜುನ ಸ್ವಾಮೀಜಿ ರವರು ಮಾತನಾಡಿ ಹಲವಾರು ದಶಕಗಳಿಂದ ಶ್ರೀಮಠಕ್ಕೆ ವಿವಿಧ ದಾನಿಗಳು ಆರ್ಥಿಕವಾಗಿ ಸೇವೆ ಸಲ್ಲಿಸುತ್ತಿದ್ದು ಅಂತವರ ಸಹಕಾರದಿಂದ ಮಠ ಇನ್ನು ಹೆಚ್ಚು ಹೆಚ್ಚು ಅಭಿವೃದ್ಧಿಯಾಗುತ್ತಿದೆ ಅಂತಹ ಮಹನೀಯರನ್ನು ಗುರುತಿಸಿ ಇಂದು ಶ್ರೀ ಕ್ಷೇತ್ರದಲ್ಲಿ ಗೌರವಿಸಿ ಶರಣು ಸಮರ್ಪಣೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲಾ ಭಕ್ತರು ಶ್ರೀ ಮಠಕ್ಕೆ ಇನ್ನು ಹೆಚ್ಚು ಹೆಚ್ಚು ಸೇವೆ ಮಾಡುವ ಮುಖಾಂತರ ಮಠವನ್ನು ತಾವುಗಳು ಅಭಿವೃದ್ಧಿಗೊಳಿಸು ವಂತೆ ಮನವಿ ಮಾಡಿದರು ಶ್ರೀಮಠ ಭಕ್ತರ ಮಠ ವಾಗಿದ್ದು ತಾವುಗಳು ನಿರಂತರವಾಗಿ ಮಠದ ಶ್ರೇಯಸಿಗೆ ಶ್ರಮಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ಹೇಮಾವತಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು, ಕುಂತೂರು ಮಠದ ಶಿವಪ್ರಭು ಮಹಾಸ್ವಾಮಿ, ನಿವೃತ ಅಧಿಕಾರಿ ಕೆ. ಎಚ್. ತಿಮ್ಮಯ್ಯ ಸೇರಿದಂತೆ ಅನೇಕ ಗಣ್ಯರು ಮಠಾಧೀಶ್ವರರು ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.

ಪೂಜ್ಯ ಪ್ರಕಾಶ್ ಗುರೂಜಿ ರವರು ಪ್ರಸ್ತಾವಿಕವಾಗಿ ಮಾತನಾಡಿ ಹಲವಾರು ದಶಕಗಳಿಂದ ಶ್ರೀಮಠ ನಡೆದು ಬಂದ ದಾರಿ ಹಾಗೂ ಪವಾಡಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ಶರಣ ನಾಗೇಶ್ ಮತ್ತು ತಂಡದವರಿಂದ ವೇದಘೋಷ ಜರುಗಿತು.

ಇದೇ ಸಂದರ್ಭದಲ್ಲಿ ಮಠದ ಅಭಿವೃದ್ಧಿಗೆ ಸಾಧನೆ ಮಾಡಿದ ಶರಣ ಎಸ್. ಬಿ. ಮರಿಯಪ್ಪ, ಶ್ರೀಮತಿ ಗಿರಿಜಾ ಶಾಂತರಾಮ್, ಜಮೀನ್ದಾರ್ ನಾಗರಾಜ ಗೌಡ, ಡಾಕ್ಟರ್ ಸತ್ಯ ಪ್ರಕಾಶ್, ಶ್ರೀಮತಿ ಆಶಾಲತಾ ಪ್ರಕಾಶ್, ಡಾ. ಪ್ರವೀಣ್ ಕುಮಾರ್, ಶ್ರೀಮತಿ ಜಗದಾಂಬ ಸದಾಶಿವಮೂರ್ತಿ, ಶ್ರೀಮತಿ ಮಂಜುಳಾ ಬಿ. ಮಹೇಶ್ ರವರಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳೆಯರಿಗೆ ವಸ್ತ್ರದಾನ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಬರವಣಿಗೆ ಸಾಮಗ್ರಿಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಹಿರಿಯ ವಕೀಲರಾದ ಶ್ರೀಕಂಠ ಪ್ರಸಾದ್, ಮಂಡ್ಯ ಲಿಂಗಾಯತ ವಿದ್ಯಾರ್ಥಿ ನಿಲಯದ ಹಿರಿಯಟ್ರಸ್ಟಿ ಮಲ್ಲಿಕಾರ್ಜುನಯ್ಯ, ಪೂಜ್ಯ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಪೂಜಾ ನಿಶ್ಚಲ ನಿರಂಜನ ದೇಶಿ ಕೇಂದ್ರ ಸ್ವಾಮೀಜಿ ದೊಡ್ಡಬಳ್ಳಾಪುರ, ಮುಡುಕುತೊರೆ ಕಲ್ಲು ಮಠದ ಶ್ರೀ ನಂದಿಕೇಶ್ವರ ಸ್ವಾಮೀಜಿ, ಬಿ.ಜಿ.ಪುರ ಹೊಸಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಹೊಸಮಠ ಸರಗೂರಿನ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಕುಂದೂರು ಶ್ರೀ ಬಸವರಾಜೇಂದ್ರ ಮಹಾಸ್ವಾಮಿಜಿ ಸೇರಿದಂತೆ ಅನೇಕ ಮಠಾಧೀಶರು ಭಕ್ತರು ಸ್ಥಳೀಯರು ಆಗಮಿಸಿದ್ದು ಕಾರ್ಯಕ್ರಮ ಯಶಸ್ವಿಗೊಂಡಿತು.

 

Share & Spread
error: Content is protected !!