ಮಳವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನವಂಬರ್ 26ರ ಸಂವಿಧಾನ ದಿನಾಚರಣೆ ಹಾಗೂ ವೀರಯೋಧರ ಹುತಾತ್ಮ ದಿನದ ಅಂಗವಾಗಿ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಲೇಖನ ಸಾಮಗ್ರಿ ವಿತರಣೆ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮಕ್ಕೆ ಮೊದಲು ಶಿಕ್ಷಕರು ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯನ್ನು ಓದಿದರು ಅತಿಥಿ ಶಿಕ್ಷಕ ಚುಂಚಣ್ಣ ರವರು ಸಂವಿಧಾನ ಪೀಠಿಕೆಯನ್ನು ಬೋಧಿಸಿದರು ಕಾರ್ಯಕ್ರಮವನ್ನು ಶ್ರೀಯುತ ವೆಂಕಟೇಶ್ ರವರು ಅಭಿಯಂತರರು ಜಿಲ್ಲಾ ಪಂಚಾಯತಿ ಮಂಡ್ಯ ಹಾಗೂ ಗಣ್ಯರು ಸಸ್ಯಕ್ಕೆ ನೀರು ಹಾಕುವುದರ ಮೂಲಕ ಬಾಬಾ ಸಾಹೇಬರು ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಉದ್ಘಾಟಿಸಿದರು ಮಾತನಾಡಿ ಸಂವಿಧಾನ ದಿನಾಚರಣೆ ಉತ್ತಮವಾಗಿ ಕಾರ್ಯಕ್ರಮ ಆಯೋಜಿಸಲಿದ್ದು ಎಲ್ಲ ಮಕ್ಕಳು ಶಿಕ್ಷಣವನ್ನು ಪಡೆಯಬೇಕು ಬಾಬಾ ಸಾಹೇಬ್ರು ಶಿಕ್ಷಣದ ಮಹತ್ವವನ್ನು ತಿಳಿಸಿದ್ದಾರೆ ಸಂವಿಧಾನ ಗ್ರಂಥವನ್ನು ಬರೆದು ಎಲ್ಲರನ್ನೂ ಸಮಾನತೆಯಿಂದ ಕಾಣಬೇಕು ಎಂದರು .
ಕಾರ್ಯಕ್ರಮದಲ್ಲಿ ಹಾಡ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ಚೆಲುವರಾಜರವರು ಅಖಿಲ ಕರ್ನಾಟಕ ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ಶಿವಣ್ಣರವರು ಶ್ರೀಯುತ ಕೃಷ್ಣ ಆಗಸನಪುರ ಅಧ್ಯಕ್ಷರು ಕಸಬಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಚಿಕ್ಕಣ್ಣ ರವರು ಗ್ರಾಮ ಪಂಚಾಯತಿ ಸದಸ್ಯರು ಚಂದ್ರಶೇಖರ್ ರವರು ಸ್‌ಡಿಎಂಸಿ ಅಧ್ಯಕ್ಷರು ರಾಜು ಎಂ ರವರು ಮುಖ್ಯ ಶಿಕ್ಷಕರು ಚುಂಚಣ್ಣ ಅತಿಥಿ ಶಿಕ್ಷಕರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು