ಚನ್ನಪಟ್ಟಣದ ನಾಗರೀಕರ ಆಸ್ತಿಗಳಿಗೆ ಈ ಖಾತೆ ನೀಡಿಕೆಯಲ್ಲಿ ನಡೆಯುತ್ತಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಚನ್ನಪಟ್ಟಣ ನಗರಸಭೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಪುಟ್ಟಸ್ವಾಮಿಯವರನ್ನು ಕೂಡಲೇ ಕರ್ತವ್ಯದಿಂದ ವಜಾ ಮಾಡಬೇಕೆಂದು 20-02-2024 ರಂದು ಬೆಂಗಳೂರಿನ ವಿಕಾಸಸೌಧದ ಯುಡಿ ಕಾರ್ಯದರ್ಶಿ ಅಜಯ್ ನಾಗಭೂಷಣ್ ರವರಿಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ ಡಿಸಿ ಪರಿವರ್ತಕಗಳನ್ನು ಮಾರ್ಗ ಸೂಚಿಗಳ ಪ್ರಕಾರ ಇಲ್ಲದ ಮತ್ತು ಚನ್ನಪಟ್ಟಣ ಯೋಜನಾ ಪ್ರಾಧಿಕಾರದಿಂದ ಅನುಮೋದಿಸಲಾಗಿರದ ಆಸ್ತಿಗಳನ್ನು ಅಧಿಕೃತ ಎಂದು ನೀಡಲಾಗಿರುವ ಹಲವು ದಾಖಲೆಗಳ ಪ್ರತಿಗಳನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಪ್ರಶಾಂತ್, ನಗರಸಭಾ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು ಮಂಜುನಾಥ್, ಸದಸ್ಯರುಗಳಾದ ನಾಗೇಶ್, ಬಾಬು ಹಾಜರಿದ್ದರು