ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಅಂಬಾಡಿಹಳ್ಳಿ ಕಾರ್ಯಕ್ಷೇತ್ರದಲ್ಲಿ ಆಯೋಜನೆ ಮಾಡಲಾಗಿದ್ದ ಸೃಜನಶೀಲ ಕಾರ್ಯಕ್ರಮದ ಸಮಾರೂಪ ಸಮಾರಂಭ

ಚನ್ನಪಟ್ಟಣ,ಫೆ: 12- ಎಲ್ಲಾ ಸಂಪತ್ತುಗಳಿಗಿoತ ಆರೋಗ್ಯ ಸಂಪತ್ತು ಮಹಳ ಮುಖ್ಯವಾಗಿದ್ದು ಅದರಲ್ಲೂ ಹೆಣ್ಣು ಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ, ತಾಲ್ಲೂಕು ಯೋಜನಾಧಿಕಾರಿ ದಿನೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ತಾಲ್ಲೂಕಿನ ಸೋಗಾಲ ವಲಯದ, ಅಂಬಾಡಿಹಳ್ಳಿ ಕಾರ್ಯಕ್ಷೇತ್ರದಲ್ಲಿ ಆಯೋಜನೆ ಮಾಡಲಾಗಿದ್ದ ಸೃಜನಶೀಲ ಕಾರ್ಯಕ್ರಮದ ಸಮಾರೂಪ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಪ್ರತಿನಿತ್ಯ ತನ್ನ ಕುಟುಂಬಕ್ಕಾಗಿ ತನ್ನ ಆರೋಗ್ಯವನ್ನು ಬದಿಗೊತ್ತಿ ತನ್ನ ಕರ್ತವ್ಯವನ್ನು ನಿಭಾಹಿಸುವ ಕುಟುಂಬದ ಕಣ್ಣಾದ ಹೆಣ್ಣುಮಕ್ಕಳು ಸಾಕಷ್ಟು ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ನೋಡಬಹುದಾಗಿದೆ, ಅಂತಹ ಹೆಣ್ಣು ಮಕ್ಕಳನ್ನು ಗುರುತಿಸಿ, ಅವರ ರಕ್ತವನ್ನು ಪರೀಕ್ಷೆಗೊಳಪಡಿಸಿ, ಅವರ ಆರೋಗ್ಯವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಮುಂದಾಗಿರುವುದು, ಅವರ ನಿಷ್ಕಳಂಕ ಸೇವಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿರುವುದ ಹೆಣ್ಣು ಮಕ್ಕಳ ಆದ್ಯ ಕರ್ತವ್ಯವಾಗಿದ್ದು, ಪೌಷ್ಟಿಕತೆಯ ಆಹಾರವನ್ನು ಸೇವನೆ ಮಾಡಬೇಕು ಅದರಲ್ಲೂ ಹಸಿರು ತರಕಾರಿಗಳು,ಹಸಿರುಸೊಪ್ಪು, ಮೊಳೆಕಟ್ಟಿದ ಕಾಳುಗಳು ಹಾಗೂ ಹಣ್ಣುಹಂಪಲು ಸೇವಿಸುವುದರ ಮುಖಾಂತರ ಹೆಣ್ಣು ಮಕ್ಕಳು ಆರೋಗ್ಯದಲ್ಲಿ ಸಧೃಡತೆಯನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು. ಚAದ್ರು ಡಯಗ್ನೋಷ್ಟಿಕ್ ಸೆಂಟರ್‌ನ ವ್ಯದ್ಯ ಡಾ|| ಅಭಿಷೇಕ್ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ನಮ್ಮ ಆಹಾರ ವ್ಯವಸ್ಥೆಯು ಸಂಪೂರ್ಣವಾಗಿ ಬದಲಾವಣೆಯಾಗಿದೆ, ಕೆಮಿಕಲ್ ಮಿಶ್ರಿತ ರುಚಿಕರ ಆಹಾರಕ್ಕೆ ಜೋತು ಬಿದ್ದಿರುವುದುರಿಂದ ನಾವೇ ಸ್ವತಹ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದು ವಿಷಾಧಿಸಿದರು. ಗುಣಮಟ್ಟದ ಆಹಾರವನ್ನು ಸೇವಿಸುವುದರೊಂದಿಗೆ, ಆಹಾಗ್ಗೆ ತಮ್ಮ ಆರೋಗ್ಯದ ಬಗ್ಗೆ ಈ ರೀತಿಯ ಶಿಬಿರಗಳ ಮುಖಾಂತರ ತಪಾಸಣೆಗೊಳಪಡಿಸಿಕೊಂಡಾಗ ಮಾತ್ರ ತಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಲು ಸಾಧ್ಯ ಎಂದರು. ಕೇAದ್ರದ ಸದಸ್ಯೆ ಅಂಕಮ್ಮ ಮಾತನಾಡಿ, ನನ್ನ ಆರೋಗ್ಯ ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಿದ್ದು, ನನ್ನ ಆರ್ಥಿಕ ಸಮಸ್ಯೆಯಿಂದ ಎಲ್ಲಿಯೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದೆ ಇರುವ ಸಂದರ್ಭದಲ್ಲಿ ಶ್ರೀಕ್ಷೇತ್ರ ನನ್ನನ್ನು ಗುರುತಿಸಿ, ನನ್ನ ರಕ್ತವನ್ನು ತಪಾಸಣೆಗೊಳಪಡಿಸಿದಾಗ ನನ್ನ ರಕ್ತ ಪ್ರಮಾಣ ಬಹಳಷ್ಟು ಕಡಿಮೆ ಇರುವುದರಿಂದಲೇ, ನನ್ನ ಆರೋಗ್ಯದಲ್ಲಿ ಬದಲಾವಣೆಯಾಗಲು ಕಾರಣವಾಗಿತ್ತು ಎಂದರು. ಶ್ರೀಕ್ಷೇತ್ರದದಿAದ ನನಗೆ ಉತ್ತಮ ರೀತಿಯಲ್ಲಿ ಔಷೋದಪಚಾರ ಮಾಡಿದ ಪರಿಣಾಮ, ನನ್ನ ದೇಹದಲ್ಲಿ ರಕ್ತ ದ್ವಿಗುಣಗೊಳ್ಳುವುದರ ಜೊತೆಗೆ, ನನ್ನ ಆರೋಗ್ಯ ಉತ್ತಮವಾಗಿದೆ ಎಂದು, ಶ್ರೀಕ್ಷೇತ್ರ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಗೌರಮ್ಮ,ಜ್ಞಾನವಿಕಾಶ ಸಮನ್ವಯಾಧಿಕಾರಿಯಾದ ಸುಜಾತ, ವಲಯ ಮೇಲ್ವಿಚಾರಕರಾದ ಭಾಗ್ಯ, ಸೇವಾ ಪ್ರತಿನಿಧಿಗಳಾದ ಪದ್ಮ,ಐಶ್ರ‍್ಯ ಹಾಗೂ ಹಲವರು ಮುಖಂಡರು ಹಾಜರಿದ್ದರು.

Share & Spread
error: Content is protected !!