ಚನ್ನಪಟ್ಟಣ,ಫೆ:9-ಎಲ್ಲಾ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಬಹಳ ಮುಖ್ಯವಾಗಿದೆ ಎಂದು ಚಂದ್ರು ಡಯಗ್ನೋಷ್ಟಿಕ್ ಸಂಟರ್‌ನ ಸಂಸ್ಥಾಪಕಾರದ ವಿ.ಸಿ.ಚಂದ್ರೇಗೌಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ, ನಗರದ ಚಂದ್ರು ಡಯಗ್ನೋಷ್ಟಿಕ್ ಸೆಂಟರ್‌ನಿಂದ, ಉಚಿತ ಮದುಮೇಹ ಹಾಗೂ ರಕ್ತದೊತ್ತಡ ತಪಾಸಣೆಯನ್ನು ವಾಯುವಿಹಾರಕ್ಕೆ ಬರುವ ಯುವಕರು ವೃದ್ದರಿಗೆ ಮೆದುಮೇಹ ಹಾಗೂ ರಕ್ತದೊತ್ತಡವನ್ನು ಪರೀಕ್ಷೆ ಮಾಡುವುದರ ಮುಖಾಂತರ ಚಾಲನೆ ನೀಡಿ ಮಾತನಾಡಿದರು. ಪ್ರಸಕ್ತ ದಿನಗಳಲ್ಲಿನ ನಮ್ಮ ಆಹಾರ ಪದ್ದತಿಗಳಿಂದ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸಗಳಿರುವುದರ ಜೊತೆಗೆ, ನೂರು ಮಂದಿಯಲ್ಲಿ ಶೇ 50 ರಷ್ಟು ಮಂದಿಗೆ ಶುಗರ್ ಹಾಗೂ ಬಿಪಿ ಕಂಡು ಬರುತ್ತಿರುವುದು ಕಳವಳಕಾರಿಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಶುಗರ್,ಬಿಪಿ ಬಂದ ಮೇಲೆ ಪಶ್ಚಾತಾಪ ಪಡುವುದಕ್ಕಿಂತ, ಅವುಗಳು ಬರದಂತೆ ಎಚ್ಚರವಹಿಸುವುದು ಉತ್ತಮ ಬೆಳವಣಿಗೆಯಾಗಿದೆ,ಒಂದು ವೇಳೆ ಈ ಲಕ್ಷಣಗಳು ಕಂಡು ಬಂದರೆ ತಕ್ಷಣ ಸೂಕ್ತ ಸಮಯದಲ್ಲಿ ತಮ್ಮ ರಕ್ತ ಪರೀಕ್ಷೆ ಮಾಡಿಕೊಂಡು, ವೈದ್ಯರ ಸಲಹೆ ಮೇರೆಗೆ ಔಷದಿಗಳನ್ನು ಪಡೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು. ಚಂದ್ರು ಡಯಗ್ನೋಷ್ಟಿಕ್ ಸೆಂಟರ್‌ನಿಂದ ಪ್ರತಿ ಶುಕ್ರವಾರ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಜನರ ಆರೋಗ್ಯದ ದೃಷ್ಟಿಯಿಂದ ಉಚಿತವಾಗಿ ಶುಗರ್ ಹಾಗೂ ಬಿಪಿ ತಪಾಸಣೆ ಮಾಡುತ್ತಿರುವುದರ ಜೊತೆಯಲ್ಲಿ ಔಷೋದಪಚಾರ ನೀಡುತ್ತಿರುವುದಾಗಿ ತಿಳಿಸಿದರು. ಈ ದಿನ ಮುಂಜಾನೆಯಿಂದಲೇ ಶುಗರ್ ಹಾಗೂ ಬಿಪಿ ತಪಾಸಣೆ ಮಾಡಲಾಗುತ್ತಿದ್ದು, ವಾಕಿಂಗ್ ಬರುವ ಸುಮಾರು 100ಕ್ಕೂ ಹೆಚ್ಚು ಮಂದಿಗೆ ತಪಾಸಣೆ ಮಾಡುತ್ತಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಚಂದ್ರು ಡಯಗ್ನೋಷ್ಟಿಕ್ ಸೆಂಟರ್‌ನ ಪ್ರಮುಖರಾದ ಪಾರ್ಥಸಾರಥಿ,ಗಂಗಾಧರ್,ವಿಘ್ನೇಶ್ ಹಾಗೂ ಹಲವಾರು ಮಂದಿ ಮುಖಂಡರು ಹಾಜರಿದ್ದರು.