ಬಾಲುಪಬ್ಲಿಕ್ ಶಾಲೆಯಲ್ಲಿ ಕಾನೂನು ಅರಿವು, ಜೀತ ಪದ್ದತಿ ನಿರ್ಮೂಲನೆ ದಿನಾಚರಣೆಯ ಸಮಾರಂಭ

ಚನ್ನಪಟ್ಟಣ,ಫೆ:9 -ಆಟಪಾಠದಲ್ಲಿ ತೊಡಗಿಕೊಂಡು ಸುಂದರವಾದ ಭವಿಷ್ಯವನ್ನು ಕಾಣುವ ಮುಗ್ದ ಮಕ್ಕಳನ್ನು ಯಾವುದೇ ರೀತಿಯ ಕೆಲಸಗಳಿಗೆ ಬಳಸಿಕೊಳ್ಳುವುದು ಅಪರಾಧವಾಗಿದೆ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮರೀಗೌಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದ, ಬಾಲು ಪಬ್ಲಿಕ್ ಶಾಲೆ, ಬಾಲು ಆಸ್ಪತ್ರೆ , ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲ್ಲೂಕು ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿನ ಕಾನೂನು ಅರಿವು, ಜೀತ ಪದ್ದತಿ ನಿರ್ಮೂಲನೆ ದಿನಾಚರಣೆಯ ಸಮಾರಂಭದಲ್ಲಿ, ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದರು. ತಮ್ಮ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಮುಗ್ದ ಮಕ್ಕಳನ್ನು ಶಾಲೆಗೆ ಕಳುಹಿಸದೆ, ವಿವಿಧ ರೀತಿಯ ಕೆಲಸಗಳಿಗೆ ಹಚ್ಚುವುದರಿಂದ,ಮುAದಿನ ಮಕ್ಕಳ ಭವಿಷ್ಯ ಕಮರುವುದರ ಜೊತೆಯಲ್ಲಿಯೇ ನಿಮ್ಮ ಕುಟುಂಬಗಳು ಕಷ್ಟದ ಸಂಕೋಲೆಯಲ್ಲಿ ನರಳುವಂತಾಗುತ್ತದೆ ಎಂದು ತಿಳಿಸಿದರು. ಆಪ್ರಾಪ್ತ ಮಕ್ಕಳನ್ನು ಕಾರ್ಮಿಕರಾಗಿ ದುಡಿಸಿಕೊಳ್ಳುವುದು ಅಪರಾಧವಾಗಿರುವುದರ ಜೊತೆಯಲ್ಲಿ ಮಕ್ಕಳನ್ನು ಸೇರಿಸುವುದು ಕೂಡ ಅಪರಾಧವಾಗಿರುತ್ತದೆ, ಸರ್ಕಾರ ಜೀತ ಪದ್ದತಿಯಲ್ಲಿರುವ ,ಶಾಲೆ ಬಿಟ್ಟ ಮಕ್ಕಳಿಗೆ ಹಾಗೂ ವಿವಿಧ ಕಾರಣಗಳಿಗೆ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನು ಮತ್ತೆ ಶಾಲೆಗೆ ದಾಖಲಿಸಿಕೊಳ್ಳಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದ ಅವರು ಭವಿಷ್ಯದ ಉಜ್ವಲ ಪ್ರಜೆಗಳಾದ ಮಕ್ಕಳು,ತಮ್ಮ ಸುತ್ತಮುತ್ತ ಯಾರಾದರೂ 18 ವರ್ಷದಿಂದ ಕೆಳಮಟ್ಟ ಮಕ್ಕಳು ಅಂದರೆ ಅಪ್ರಾಪ್ತ ಮಕ್ಕಳು ಕೆಲ ಮನೆಗಳಲ್ಲಿ ಜೀತ ಪದ್ದತಿ ಮಾಡುವುದು, ಗ್ಯಾರೆಜ್, ರೇಷ್ಮೆಗಿರಣಿ, ಹೋಟೆಲ್ ಹಾಗೂ ಇತರೆ ಕಡೆ ಕೆಲಸ ಮಾಡುವವರು ಕಂಡು ಬಂದರೆ ಕೂಡಲೇ ಸಂಬAಧಿಸಿದ ಪೊಲೀಸ್‌ಠಾಣೆಗೆ ಮಾಹಿತಿ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಮುಖ್ಯ ಬಾಷಣಕಾರರಾಗಿ ಮಾತನಾಡಿದ ತಾಲ್ಲೂಕು ವಕೀಲರ ಸಂಘದ,ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಸುನೀಲ್ ರಾಜ್ ಅರಸ್, ಜೀತಪದ್ದತಿ ಎಂಬುದು ದೊಡ್ಡ ಪಿಡುಗಾಗಿದ್ದು. ಅದರಲ್ಲೂ ಆಪ್ರಾಪ್ತ ಮಕ್ಕಳನ್ನು ಜೀತಕ್ಕೆ ಬಳಸಿಕೊಳ್ಳುವುದು ಅಪರಾಧವಾಗಿದ ಎಂದು ಹಲವಾರು ಮಾಹಿತಿಗಳನ್ನು ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಜಂಟಿ ಕಾರ್ಯದರ್ಶಿ ವಿ.ಬಾಲಸುಬ್ರಮಣ್ಯಂ, ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ತಡೆಯುವಲ್ಲಿ ಪೊಲೀಸ್ ಇಲಾಖೆಗೆ ವಿದ್ಯಾರ್ಥಿಗಳು ಸಹಕಾರ ನೀಡಬೇಕಾಗಿರುವುದು ಜಾಬಾಬ್ದಾರಿಯಾಗಿದೆ, ಈ ನಿಟ್ಟಿನಲ್ಲಿ ಶಾಲೆಯ ವಿದ್ಯಾರ್ಥಿಗಳು ಸಮಾಜ ಮುಖೇನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ವಿ.ವೆಂಕಟಸುಬ್ಬಯ್ಯ ಚಟ್ಟಿ,  ಶಾಲೆಯ ಪ್ರಾಂಶುಪಾಲರಾದ ಕವಿತಾ ಹಾಗೂ ಹಲವಾರು ಮಂದಿ ಹಾಜರಿದ್ದರು.

Share & Spread
error: Content is protected !!