ರಾಮನಗರ, ಜ. 29
ಬುಡಕಟ್ಟು ಜನರ ಅಮೂಲ್ಯವಾದ ಕಲೆಯನ್ನು ಉಳಿಸಿ ಬೆಳೆಸುವಂತೆ ರಾಜ್ಯ ಇರುಳಿಗ ಬುಡಕಟ್ಟು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮಹದೇವಯ್ಯ ಅವರು ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇತ್ತೀಚೆಗೆ ಕನಕಪುರ ಡಾ. ಬಿ. ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಿರಿಜನ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬುಡಕಟ್ಟು ಜನರು ಸಾಕ್ಷರರಾದಾಗ ಅವರ ಏಳಿಗೆ ಸಾಧ್ಯ, ವಿದ್ಯೆ ಜೊತೆಗೆ ಅಳಿವಿನಂಚಿನಲ್ಲಿರುವ ಬುಡಕಟ್ಟು ಕಲೆಯನ್ನು ಕಲಿತು ಮುಂದಿನ ಜನಾಂಗಕ್ಕೆ ಕಲೆಯನ್ನು ಉಳಿಸಿ ಬೆಳೆಸಬೇಕು, ಬುಡಕಟ್ಟು ಜನರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಬಾಬು ಸಮುದಾಯದ ಮುಖಂಡರುಗಳಾದ ನಾಗಯ್ಯ, ಕೃಷ್ಣಮೂರ್ತಿ, ರಾಜು, ಶಿವಣ್ಣ, ವೆಂಕಟರಮಣ, ಕಾಂತರಾಜು, ಪುಟ್ಟಯ್ಯ, ನಿಂಗಯ್ಯ, ಕೃಷ್ಣಪ್ಪ, ಹಳ್ಳಿಮಾರನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೌರಮ್ಮ, ಕಲಾವಿದ ಶ್ರೀನಿವಾಸ್ ಹಾಗೂ ಇತರರು ಉಸ್ಥಿತರಿದ್ದರು.