ಅವರು ನಗರದ ತಾಪಂ ಸಭಾಂಗಣದಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ, ನಿರ್ವಹಣೆ ಹಾಗೂ ಎಫ್ ಟಿ ಕೆ ಕಿಟ್‌ಗಳ ಬಳಕೆಯ ಬಗ್ಗೆ ನೀರುಗಂಟಿಗಳಿಗೆ ಹಮ್ಮಿಕೊಂಡಿರುವ 2 ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು
ಕೇವಲ ನೀರಿನ ಮೋಟಾರ್ ಆನ್, ಆಫ್ ಮಾಡಿ ವಾಲ್ವ್ ಗಳನ್ನು ತಿರುಗಿಸುವುದಷ್ಟೇ ನೀರುಗಂಟಿಗಳ ಕೆಲಸವಲ್ಲ. ನೀರು ಕುಡಿಯಲು ಯೋಗ್ಯವಾಗಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಬೇಕು. ಇದಕ್ಕಾಗಿ ಸರ್ಕಾರ ನೀಡಿರುವ ಎಫ್ ಟಿ ಕೆ ಕಿಟ್ ಗಳನ್ನು ಸಮಪರ್ಕವಾಗಿ ಬಳಕೆ ಮಾಡಿ. ನೀರಿನ ಶುದ್ಧತೆಯ ಕುರಿತು ಯಾವುದೇ ರೀತಿಯ ಅನುಮಾನ ಬಂದರೂ ತಕ್ಷಣ ನೀರನ್ನು ಪರೀಕ್ಷಿಸಿ, ಅನುಮಾನ ಬರಲಿ ಬಾರದಿರಲಿ ಕಡ್ಡಾಯವಾಗಿ ೧೫ದಿನಗಳಿಗೊಮ್ಮೆ ಕಿಟ್ ಬಳಸಿ ನೀರುನ್ನು ಪರೀಕ್ಷಿಸಿ ಎಂದು ಸೂಚಿಸಿದರು
ತರಬೇತಿ ಕಾರ್ಯಾಗಾರದಲ್ಲಿ ಎಫ್ ಟಿ ಕೆ ಕಿಟ್ ಗಳ ಬಳಕೆಯ ಕುರಿತು ನೀರುಗಂಟಿಗಳಿಗೆ ನಾಲ್ಕು ಹಂತಗಳಲ್ಲಿ ತರಬೇತಿ ನೀಡಲಾಯಿತು. ನೀರಿನಲ್ಲಿ ಕಂಡುಬರುವ ಅಂಶಗಳಾದ ಪಿ ಹೆಚ್, ಗಡಸುತನ, ಕ್ಲೋರೈಡ್, ಫ್ಲೋರೈಡ್, ನೈಟ್ರೇಟ್, ಕಬ್ಬಿಣದಂಶ, ಸಲ್ಫೇಟ್, ಬ್ಯಾಕ್ಟೀರಿಯಾ ಸೇರಿದಂತೆ 8 ಅಂಶಗಳ ಪ್ರಯೋಗಿಕವಾಗಿ ತರಬೇತಿ ನೀಡಲಾಯಿತು.