ನವದೆಹಲಿ: ಲೋಕಸಭಾ ಸದಸ್ಯ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಹೊಸ ಕೇಸು ದಾಖಲಿಸಿದೆ. 50 ಲಕ್ಷ ರೂಪಾಯಿ ಅಕ್ರಮ ಹಣ ಪಡೆದು 250 ಚೀನೀ ಪ್ರಜೆಗಳಿಗೆ ವೀಸಾಕ್ಕೆ ಅನುಕೂಲ ಮಾಡಿಕೊಟ್ಟ ಆರೋಪ ಎದುರಾಗಿದೆ.
ಪಿ ಚಿದಂಬಬರಂ ಮತ್ತು ಕಾರ್ತಿ ಚಿದಂಬರಂ ವಿರುದ್ಧ ಹೊಸ ಕೇಸುಗಳಲ್ಲಿ ಸಿಬಿಐ ಇಂದು ಬೆಳಗ್ಗೆ ದೇಶದ ಏಳು ನಗರಗಳಲ್ಲಿ ಈ ಇಬ್ಬರು ನಾಯಕರಿಗೆ ಸೇರಿದ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಚೆನ್ನೈಯಲ್ಲಿರುವ ಚಿದಂಬರಂ ನಿವಾಸ, ಮುಂಬೈಯ ಮೂರು ಕಡೆಗಳಲ್ಲಿ, ಕರ್ನಾಟಕ, ಪಂಜಾಬ್ ಮತ್ತು ಒಡಿಶಾಗಳಲ್ಲಿ ಸಹ ದಾಳಿ ನಡೆಸಲಾಗಿದೆ.
ಚೆನ್ನೈಯ ಲೋಧಿ ಎಸ್ಟೇಟ್‌ನಲ್ಲಿರುವ ಕಾರ್ತಿ ಚಿದಂಬರಂ ಮತ್ತು ರಾಜ್ಯಸಭಾ ಸಂಸದ ಪಿ ಚಿದಂಬರಂ ಅವರ ಅಧಿಕೃತ ನಿವಾಸಕ್ಕೂ ಸಿಬಿಐ ತಂಡ ಭೇಟಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ದಾಳಿಯ ಸುದ್ದಿ ಹೊರಬರುತ್ತಿದ್ದಂತೆ ಟ್ವೀಟ್ ಮಾಡಿರುವ ಕಾರ್ತಿ ಚಿದಂಬರಂ, ಎಷ್ಟು ಸಲ ಎಂದು ಲೆಕ್ಕ ತಪ್ಪಿಹೋಗಿದೆ, ಇದು ದಾಖಲೆಯಾಗಬೇಕು ಎಂದು ಸಿಬಿಐ ದಾಳಿಯ ಬಗ್ಗೆ ಸೂಚಿಸದೆ ಟ್ವೀಟ್ ಮಾಡಿದ್ದಾರೆ.
ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಲ್ಲಿ ಸಿಬಿಐಗೆ ಪ್ರಕರಣದ ಸುಳಿವು ಸಿಕ್ಕಿದೆ, ಇದರಲ್ಲಿ ಕಾರ್ತಿ ಚಿದಂಬರಂ ಈಗಾಗಲೇ ಐಎನ್‌ಎಕ್ಸ್ ಮೀಡಿಯಾಕ್ಕೆ ವಿದೇಶಿ ಹೂಡಿಕೆ ಪ್ರಚಾರ ಮಂಡಳಿ (ಎಫ್‌ಐಪಿಬಿ) ಕ್ಲಿಯರೆನ್ಸ್ ಪಡೆಯುವಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಹಿವಾಟಿನ ಪರಿಶೀಲನೆಯ ನಂತರ, ಪ್ಲಾಂಟ್‌ನಲ್ಲಿ ಕೆಲಸ ಮಾಡಬೇಕಿದ್ದ ಚೀನಾದ ಕಾರ್ಮಿಕರ ವೀಸಾವನ್ನು ಸುಗಮಗೊಳಿಸುವುದಕ್ಕಾಗಿ 50 ಲಕ್ಷ ರೂಪಾಯಿ ಮೌಲ್ಯದ ಪಾವತಿಯನ್ನು ಸಿಬಿಐ ಪತ್ತೆಹಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.