ಬೆಂಗಳೂರು: ಶುಕ್ರವಾರ ರಾತ್ರಿ ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ನಡೆದ ಜಗಳದಲ್ಲಿ 30 ವರ್ಷದ ಮಂಗಳಮುಖಿಯನ್ನು ಲಾಡ್ಜ್‌ನಲ್ಲಿ ಆಕೆಯ ಪುರುಷ ಸ್ನೇಹಿತನೇ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಸಂತ್ರಸ್ತೆ ಮತ್ತೆ ಚಾಕುವಿನಿಂದ ಇರಿದ ನಂತರ ಆರೋಪಿಗೆ ಗಂಭೀರ ಗಾಯಗಳಾಗಿವೆ. ಮೃತ ಸಂಜನಾ ಕಲಬುರಗಿ ಮೂಲದವರಾಗಿದ್ದು, ಕತ್ರಿಗುಪ್ಪೆಯಲ್ಲಿ ವಾಸವಿದ್ದರು. ಆರೋಪಿ ಅಂಕಿತ್ (32) ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಟನ್ಪೇಟೆಯ ಶಿವಾಸ್ ಲಾಡ್ಜ್‌ನಲ್ಲಿ ಅರ್ಚನಾ ಮೇಲೆ ಹಲ್ಲೆಯಾಗಿತ್ತು. ಹಲ್ಲೆ ನಡೆಸಿ ಐದಾರು ಕಡೆ ಚಾಕು ಇರಿಯಲಾಗಿತ್ತು. ಮತ್ತೋರ್ವ ಮಂಗಳಮುಖಿ ಅಂಕಿತ್ (30)ಗೆ ಚಿಕಿತ್ಸೆ ಮುಂದುವರಿದಿದೆ. ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರಿ 10.45ರ ಸುಮಾರಿಗೆ ಸಂಜನಾ ಇಬ್ಬರು ಪುರುಷ ಸ್ನೇಹಿತರ ಜೊತೆ ಲಾಡ್ಜ್‌ಗೆ ಬಂದಿದ್ದರು ಮತ್ತು ಸ್ವಲ್ಪ ಸಮಯದ ನಂತರ ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ಜಗಳವಾಡಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಅಂಕಿತ್ ಎಂಬಾತ ತನ್ನ ಸ್ನೇಹಿತ ಆನಂದ್ ಜೊತೆಗೂಡಿ ಸಂಜನಾ ಮೇಲೆ ಕೋಪದ ಭರದಲ್ಲಿ ಪದೇ ಪದೇ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಹೇಳಿದ್ದಾರೆ.
ತಪ್ಪಿಸಿಕೊಳ್ಳುವ ಉದ್ದೇಶದಿಂದ ಸಂಜನಾ ಚಾಕು ಕಸಿದುಕೊಂಡು ಅಂಕಿತ್‌ಗೆ ಇರಿದಿದ್ದಾಳೆ. ಕಿರುಚಾಟದಿಂದ ಎಚ್ಚೆತ್ತ ಲಾಡ್ಜ್ ಸಿಬ್ಬಂದಿ, ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ, ಅಲ್ಲಿ ಶನಿವಾರ ಸಂಜನಾ ಅವರು ಸಾವನ್ನಪ್ಪಿದ್ದು. ಕಾಟನ್‌ಪೇಟೆ ಪೊಲೀಸರು ಆನಂದನನ್ನು ಬಂಧಿಸಿದ್ದಾರೆ. ಅಂಕಿತ್ ಮತ್ತು ಆನಂದ್ ಖಾಸಗಿ ಆಸ್ಪತ್ರೆಯ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದರು.