ಸಂಗ್ರಾಮ TV ಕನ್ನಡ ಸುದ್ದಿ ವಾಹಿನಿ

ಸಂಗ್ರಾಮ TV ಕನ್ನಡ ಸುದ್ದಿ ವಾಹಿನಿಯು ಹೊಸ ಹೊಸ ಪ್ರಯತ್ನ ಮತ್ತು ಪರಿಕಲ್ಪನೆಗಳನ್ನು ಜನರ ಮುಂದಿಡುತ್ತ ವಿಶಾಲ ಹೃದಯಿಗಳಾದ ಕನ್ನಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಲು ಬರುತ್ತಿದೆ
“ಸಧೃಢ ಸಮಾಜಕ್ಕಾಗಿ”ಎಂಬ ತನ್ನ ಧ್ಯೇಯ ವಾಕ್ಯದಂತೆ ಸಮಾಜದಲ್ಲಿ ಕಂಡು ಬರುವ ಅಂಕು ಡೊಂಕುಗಳನ್ನು ತಿದ್ದುತ್ತ, ನೊಂದವರ ಧ್ವನಿಯಾಗಿ, ಆಡಳಿತ ಯಂತ್ರದಲ್ಲಿನ ದೋಷಗಳನ್ನು ಸರಿಪಡಿಸಲು ಹಲವಾರು ಕುಟುಕು ಕಾರ್ಯಾಚರಣೆ ನಡೆಸಿ ಆ ಮೂಲಕ ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು ತೊಡೆದು ಹಾಕಲು ಸಂಗ್ರಾಮ TV ಕನ್ನಡ ಬರುತ್ತಿದೆ.

ದೃಶ್ಯ ಮಾಧ್ಯಮ ಸದಾ ಪೈಪೋಟಿ ಮೂಲಕ ನಾಗಾಲೋಟದಲ್ಲಿ ಓಡುತ್ತಿರುವ ಒಂದು ಪ್ರಭಲ ಮಾಧ್ಯಮ. ಪೈಪೋಟಿಯ ಭರದಲ್ಲಿ ಜನರ ನಂಬಿಕೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆಯಾಗದ ರೀತಿಯಲ್ಲಿ ನಿರಂತರ ಸುದ್ದಿ ನೀಡುವ ಸಂಗ್ರಾಮ TV ಕನ್ನಡ ಯಾವುದೇ ಘಟನೆಯಿರಲಿ, ಪ್ರಮುಖ ಸುದ್ದಿಯಿರಲಿ ಅತ್ಯಂತ ವೇಗವಾಗಿ ಜನರಿಗೆ ಮುಟ್ಟಿಸುತ್ತದೆ

Share & Spread
error: Content is protected !!