ಚನ್ನಪಟ್ಟಣ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಂಜುನಾಥ ಕೆ. ಅವಿರೋಧ ಆಯ್ಕೆ

ಹಲವಾರು ವರ್ಷಗಳಿಂದ ಯಾವುದೇ ಫಲಾಫೇಕ್ಷೆ ಆಶಿಸದೆ ಜಾತ್ಯಾತೀತ ಜನತಾ ದಳ ಪಕ್ಷಕೆ ದುಡಿದಿದ್ದ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮಂಜುನಾಥ ಕೆ. ಅವರು ಚನ್ನಪಟ್ಟಣ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದರೆ.

ಕಳೆದ ನಗರಸಭಾ ಚುನಾಚವಣೆಯಲ್ಲಿ ಚನ್ನಪಟ್ಟಣದ ೨೦ನೇ ವಾರ್ಡಿನಿಂದ ಭಾರಿ ಅಂತರದಿಂದ  ಗೆದ್ದು ಬಂದಿದ್ದರು.  ಜೆಡಿಎಸ್ ಪಕ್ಷದ ನಿಷ್ಠರಾಗಿದ್ದ ಮಂಜುನಾಥ ಕೆ. ಇದುವರೆಗೂ ಪಕ್ಷದಲ್ಲಿ ಯಾವುದೇ ಸ್ಥಾನಮಾನಕ್ಕು ಆಶಿಸಿರಲಿಲ್ಲ. ಕೇವಲ ಕ್ಷೇತ್ರದಲ್ಲಿ ಪಕ್ಷವನ್ನು ತಳಮಟ್ಟದಿಂದ ಬಲಿಷ್ಟವಾಗಿಸುವುದೇ ಧ್ಯೇಯವಾಗಿ ಇಟ್ಟುಕೊಂಡು ಮುನ್ನೆಡೆಯುತ್ತಿದ್ದರು.
ಇವರ ಪಕ್ಷನಿಷ್ಟೆ, ಸೇವಾಕಾರ್ಯ, ಕ್ಷೇತ್ರಮಟ್ಟದಲ್ಲಿ ಇವರ ದಕ್ಷ ಕೆಲಸಗಳು ಹಾಗೂ ಸಾಮಾರ್ಥ್ಯವನ್ನು ಮನಗಂಡು ಕಡೆಗೂ ಎಚ್.ಡಿ. ಕುಮಾರಸ್ವಾಮಿಯವರು ಇವರಿಗೆ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮನ್ನಣೆ ನೀಡಿದ್ದಾರೆ.

ಅಧಿಕಾರ ವಿಕೇಂದ್ರಿಕರಣದ ಜೊತೆಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ಸುಗಮವಾಗಿ ಶರವೇಗದಲ್ಲಿ ಸಾಗಬೇಕು, ಅಭಿವೃದ್ದಿ ಕಾಮಗಾರಿಗಳ ಮೇಲೆ ನಿಗಾ ಇರಬೇಕು, ಅಧ್ಯಕ್ಷ, ಉಪಾಧ್ಯಕ್ಷರ ಅನುಪಸ್ಥಿತಿಯಲ್ಲಿ ಕೌನ್ಸಿಲ್ ಸಭೆಗಳು ನಡೆಯಬೇಕೆಂಬ ಮಹತ್ವಕಾಂಕ್ಷೆ ಹೊತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾಯಿ ಸಮಿತಿಗಳ ರಚನೆಗೆ ಆಗಿದ್ದು ಅದನ್ನು ಸಮರ್ಥವಾಗಿ ಮಂಜುನಾಥ ಕೆ. ನಿಭಾಯಿಸ ಬಲ್ಲರೆಂದು ನಗರದ ಜನತೆ ಆಶಯ ವ್ಯಕ್ತಪಡಿಸುತ್ತಿದ್ದಾರೆ.

ಹೊಸದಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಂಜುನಾಥ ಕೆ. ನಗರದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನಗರದಲ್ಲಿ ಸಮರ್ಪಕ ಕುಡಿವ ನೀರಿನ ಪೂರೈಕೆ, ಒಳ ರಸ್ತೆಗಳು, ಚರಂಡಿಗಳ ನಿರ್ಮಾಣ ಸೇರಿ ಸ್ಥಾಯಿ ಸಮಿತಿ ಅಧ್ಯಕ್ಷರ ಮಿತಿಯಲ್ಲಿ ಬರುವ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತದೆ ಎಂದು ಹೇಳಿದರು.

ಮಂಜುನಾಥ ಕೆ ಆಯ್ಕೆಯಾದ ಬಳಿಕವಂತು ಪಕ್ಷದ ಕಾರ್ಯಕರ್ತರ ಸಂತಸ ಮುಗಿಲು ಮುಟ್ಟಿ, ಸಿಹಿ ಹಂಚಿ ಸಂಭ್ರಮಿಸಿದರು.

Share & Spread
error: Content is protected !!