ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ತಮ್ಮ ಯುರೋಪ್ ದೇಶಗಳ ಪ್ರವಾಸದಲ್ಲಿ ಮೊದಲಿಗೆ ಜರ್ಮನಿಯ ಬರ್ಲಿನ್ ಗೆ ಬಂದು ತಲುಪಿದ್ದಾರೆ. ಅಲ್ಲಿ ಅನಿವಾಸಿ ಭಾರತೀಯರಿಂದ ಪ್ರಧಾನಿ ಮೋದಿಯವರಿಗೆ ಪ್ರೀತಿಯ ಅಭೂತಪೂರ್ವ ಸ್ವಾಗತ ದೊರೆಯಿತು.
ಇನ್ನೊಬ್ಬ ಬಾಲಕ ದೇಶಭಕ್ತಿಗೀತೆಯನ್ನು ಹಾಡಿ ಪ್ರಧಾನಿ ಮೋದಿಯವರ ಮನಸೂರೆಗೊಂಡನು. ಅದನ್ನು ಮೋದಿಯವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಬರ್ಲಿನ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ತಮ್ಮ ಯುರೋಪ್ ದೇಶಗಳ ಪ್ರವಾಸದಲ್ಲಿ ಮೊದಲಿಗೆ ಜರ್ಮನಿಯ ಬರ್ಲಿನ್ ಗೆ ಬಂದು ತಲುಪಿದ್ದಾರೆ. ಅಲ್ಲಿ ಅನಿವಾಸಿ ಭಾರತೀಯರಿಂದ ಪ್ರಧಾನಿ ಮೋದಿಯವರಿಗೆ ಪ್ರೀತಿಯ ಅಭೂತಪೂರ್ವ ಸ್ವಾಗತ ದೊರೆಯಿತು.
ಪ್ರಧಾನಿಯವರು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಅಲ್ಲದೆ ಭಾರತ-ಜರ್ಮನಿ ಅಂತರ ಸರ್ಕಾರ ಸಮಾಲೋಚಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಬರ್ಲಿನ್ ತಲುಪಿದ ನಂತರ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಇಂದು, ನಾನು ಚಾನ್ಸೆಲರ್ Olaf Scholz ಅವರೊಂದಿಗೆ ಉದ್ಯಮಿಗಳೊಂದಿಗೆ ಮಾತುಕತೆ ನಡೆಸುತ್ತೇನೆ. ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತೇನೆ. ಈ ಭೇಟಿಯು ಭಾರತ ಮತ್ತು ಜರ್ಮನಿ ನಡುವಿನ ಸ್ನೇಹವನ್ನು ಹೆಚ್ಚಿಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಮೋದಿ ಮತ್ತು ಓಲಾಫ್ ಅವರು 6 ನೇ ಭಾರತ-ಜರ್ಮನಿ ಅಂತರ-ಸರ್ಕಾರಿ ಸಮಾಲೋಚನೆಯಲ್ಲಿ ಭಾಗವಹಿಸಲಿದ್ದಾರೆ. 2021 ರಲ್ಲಿ, ಭಾರತ ಮತ್ತು ಜರ್ಮನಿ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70 ವರ್ಷಗಳ ಸ್ಮರಣಾರ್ಥವಾಗಿ ಮತ್ತು 2000ರಿಂದ ಜರ್ಮನಿ ಕಾರ್ಯತಂತ್ರದ ಪಾಲುದಾರವಾಗಿದೆ ಎಂದು ಮೋದಿ ಹೇಳಿದ್ದಾರೆ.
“ನಮ್ಮಿಬ್ಬರಿಗೂ ಸಂಬಂಧಿಸಿದ ಕಾರ್ಯತಂತ್ರದ, ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಚಾನ್ಸೆಲರ್ ಸ್ಕೋಲ್ಜ್ ಅವರೊಂದಿಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಉಭಯ ನಾಯಕರು ಉನ್ನತ ಮಟ್ಟದ ದುಂಡುಮೇಜಿನ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಎರಡೂ ದೇಶಗಳ ಉನ್ನತ ಸಿಇಒಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಅಭೂತಪೂರ್ವ ಸ್ವಾಗತ: ಪ್ರಧಾನಿ ಮೋದಿಯವರು ಬರ್ಲಿನ್ ಗೆ ಬಂದಿಳಿದಾಗ ಅಲ್ಲಿನ ಭಾರತೀಯ ನಿವಾಸಿಗಳಿಂದ ಅಭೂತಪೂರ್ವ ಸ್ವಾಗತ ದೊರೆಯಿತು. ಓರ್ವ ಬಾಲಕಿ ತಾನು ಬಿಡಿಸಿದ ಮೋದಿಯವರ ಚಿತ್ರವನ್ನು ಪ್ರಧಾನಿಯವರಿಗೆ ನೀಡಿದಾಗ ಅದನ್ನು ನೋಡಿ ಖುಷಿಪಟ್ಟ ಪ್ರಧಾನಿ ಅದರಲ್ಲಿ ಸಹಿ ಹಾಕಿದರು.
It was early morning in Berlin yet several people from the Indian community came by. Was wonderful connecting with them. India is proud of the accomplishments of our diaspora. pic.twitter.com/RfCyCqJkPY
— Narendra Modi (@narendramodi) May 2, 2022