ಮೈಸೂರು ಜಿಲ್ಲೆಯಲ್ಲಿ ಇಂದು ಅಸ್ಪೃಶ್ಯತೆ ನಿವಾರಣೆ ಅರಿವು ಕಾರ್ಯಕ್ರಮ

ಇಂದು, ಮೈಸೂರು ಜಿಲ್ಲೆ, ಹುಣಸೂರು ತಾಲೂಕು, ಗೌವಡಗೆರೆಯಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಜ್ಞಾನಜ್ಯೋತಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹೋಬಳಿ ಮಟ್ಟದ ಅಸ್ಪೃಶ್ಯತೆ ನಿವಾರಣೆ ಅರಿವು ಕಾರ್ಯಗಾರ ಕಾರ್ಯಕ್ರಮವನ್ನು ಗೌಡಗೆರೆ ಶ್ರೀ ನಂಜುಂಡೇಶ್ವರ ವಿದ್ಯಾಸಂಸ್ಥೆಯ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ನಟರಾಜ್ ಸ್ವಾಮೀಜಿ ರವರು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿದರು. 

ನಂತರ ಮಾತನಾಡಿ ಸಮಾಜದಲ್ಲಿ 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಸಾಮಾಜಿಕ ಸಮಾನತೆ ಸಾರಿದ ಮಹಾಪುರುಷರಾಗಿದ್ದು ಪ್ರತಿಯೊಬ್ಬರು ಹಕ್ಕುಗಳನ್ನು ಉಲ್ಲಂಘನೆ ಯಾಗದರೀತಿ ಪ್ರತಿಯೊಬ್ಬರೂ ಸೌಹಾರ್ದಯುತವಾಗಿ ಜೀವನ ಮಾಡಬೇಕಾಗಿದೆ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ ಎಲ್ಲಾ ಸಮುದಾಯದ ರಕ್ಷಣೆ ಮಾಡಿದ್ದಾರೆ, ಅಸ್ಪೃಶ್ಯತೆ ಒಂದು ಪಿಡುಗಾಗಿದ್ದು ಸಮಾಜದ ಜನರು ಸೌಹಾರ್ದತವಾಗಿ ಜೀವನ ನಡೆಸಿದಾಗ ಇಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದರು. 

ವೇದಿಕೆಯಲ್ಲಿ ಉಪತಹಶಿಲ್ದಾರ್ ಶ್ರೀಮತಿ ಶೋಭಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಯಶೋಧ ಬಾಯಿ, ಶ್ರೀಮತಿ ಮಂಜುಳಾ, ಸದಸ್ಯರು ಕಾರ್ಯದರ್ಶಿಗಳು ವಿವಿಧ ಇಲಾಖೆಯ ಮುಖ್ಯಸ್ಥರು ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಯಶೋದಮ್ಮ, ಪಂಚಾಯಿತಿ ಕಾರ್ಯದರ್ಶಿ ರಮೇಶ್, ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಂಡಿತು.
ದೌರ್ಜನ್ಯ ಪ್ರತಿಬಂಧ ಅಧಿನಿಯಮ 1989ರ ಅಸ್ಪೃಶ್ಯತೆ ನಿವಾರಣೆ ಅರಿವು ಕಾರ್ಯಗಾರ 2024 -25 ಅರಿವು ಕಾರ್ಯಗಾರದಲ್ಲಿ ಮಾತನಾಡಿದ ರಾಷ್ಟ್ರೀಯ ಮಾನವ ಹಕ್ಕುಗಳ ತರಬೇತುದಾರ ವಕೀಲ ಎಂ. ಗುರುಪ್ರಸಾದ್ ನಾವು ಕಾನೂನನ್ನು ಗೌರವಿಸಿದರೆ ಕಾನೂನು ನಮ್ಮನ್ನು ರಕ್ಷಿಸುತ್ತದೆ ಎಂಬಂತೆ, ಪ್ರತಿಯೊಬ್ಬರೂ ಕಾನೂನನ್ನು ಗೌರವಿಸಬೇಕಾಗಿದೆ ಅಸ್ಪೃಶ್ಯತೆ ನಿವಾರಣೆ ಪ್ರತಿಬಂಧ ಕಾಯಿದೆ ವಿಶೇಷವಾಗಿ ರಚಿಸಿದ್ದು ಹಕ್ಕು ಉಲ್ಲಂಘನೆಯಾದ ಅನುಸೂಚಿತ ಸಮುದಾಯ ಪರಿಹಾರ ಪಡೆಯಲು ಅರ್ಹರಾಗಿದ್ದು ದೌರ್ಜನ್ಯ ಎಸಗಿದವರ ವಿರುದ್ಧ ತಕ್ಷಣ ಎಫ್. ಐ. ಆರ್. ದಾಖಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಾಗಿದೆ ಎಂದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದರೂ ಎಂದಿಗೂ ಅಸ್ಪೃಶ್ಯತೆ ಅಲ್ಲಲ್ಲಿ ಕಾಣಿಸಿ ಸಾಮಾಜಿಕ ಸೌಹಾರ್ದತೆಗೆ ಭಂಗ ತರುತ್ತಿದೆ ಇದರಿಂದ ಮುಕ್ತರಾಗಲು ಉತ್ತಮ ಮಾರ್ಗ ಶಿಕ್ಷಣ ಪ್ರತಿಯೊಬ್ಬರು ಶಿಕ್ಷಣ ವಂತರಾದಲ್ಲಿ ಜಾತಿ ವ್ಯವಸ್ಥೆಗೆ ಕಡಿವಾಣ ಹಾಕಿ ಸಮ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿ ಸಹೋದರತ್ವ ಬೆಳೆಸಿಕೊಂಡು ಅಭಿವೃದ್ಧಿಗೆ ಒತ್ತು ನೀಡಲು ಸಾಧ್ಯವಾಗುತ್ತದೆ ಎಂದರು. ಯಾವುದೇ ಅನುಸೂಚಿತ ಸಮುದಾಯ ದೌರ್ಜನ್ಯ ಒಳಗಾದ ತಕ್ಷಣ ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅವರಿಗೆ ಆತ್ಮಸ್ಥೈರ್ಯ ತುಂಬಿ ಸಂಬಂಧಪಟ್ಟ ಪೊಲೀಸ್ ನವರಿಗೆ ದೂರು ಸಲ್ಲಿಸುವ ಮುಖಾಂತರ ಕಾನೂನು ಕ್ರಮ ಕೈಗೊಂಡು ಸಾಕ್ಷ ನಾಶವಾಗದ ರೀತಿ ರಕ್ಷಣೆ ಮಾಡಬೇಕಾಗಿದೆ ಎಂದರು. 

Share & Spread
error: Content is protected !!