NDA ಸಮಾವೇಶದಲ್ಲಿ ನೆಲಕ್ಕೆ ಹಣೆ ಇಟ್ಟು ಮನವಿ ಮಾಡಿದ ನಿಖಿಲ್

ಚನ್ನಪಟ್ಟಣ : ತಾಲ್ಲೂಕಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದ ಬೃಹತ್ ಬಹಿರಂಗ ಸಮಾವೇಶದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ದೀರ್ಘದಂಡ ನಮಸ್ಕರಿಸಿ ಭಾಷಣ ಮಾಡಿದರು

NDA ಬೃಹತ್ ಸಮಾವೇಶದಲ್ಲಿ ಮಾತನಾಡಿದ ನಿಖಿಲ್ ಅವರು, ಈ ಚುನಾವಣೆ ನನ್ನ ಜೀವನದ ಅಗ್ನಿ ಪರೀಕ್ಷೆ…ಯಾವ ಪಾತ್ರ ಮಾಡ್ತೀಯಾ ಅಂತ ಜನ ಕೇಳ್ತಾರೆ. ನನಗೆ ಜಾತಿ ಮುಖ್ಯ ಅಲ್ಲ.ನನಗೆ ಗೊತ್ತಿರೋದು ಮನುಷ್ಯತ್ವ ಒಂದೇ ಅಂತ ತಿಳಿಸಿದರು.

*ಯೋಗ್ಯತೆ ಸಂಪಾದನೆ ಮುಖ್ಯ*

 

ನಾನು ನಿಮ್ಮಲ್ಲಿ ಪ್ರಾರ್ಥನೆ ಮಾಡುತ್ತೇನೆ,ಇದು ಪ್ರಾದೇಶಿಕ ಪಕ್ಷದ ಪ್ರಶ್ನೆ.. ಇದು ಎನ್ ಡಿಎ ಕುಟುಂಬದ ಗೌರವದ ಪ್ರಶ್ನೆ..ಭೂಮಿಗೆ ಬಂದ ಮೇಲೆ ಯೋಗ್ಯತೆ ಸಂಪಾದನೆ ಮಾತ್ರ ಮುಖ್ಯ..ಒಂದು ಅವಕಾಶ ಮಾಡಿಕೊಡಿ.ನಿಮ್ಮ ಸೇವೆ ಮಾಡುವುದಕ್ಕೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸಮಾವೇಶದಲ್ಲಿ ಮನವಿ ಮಾಡಿದರು.

 

ಕ್ಷೇತ್ರ ತೆರವಾದ ನಂತರ ಬದಲಾವಣೆ ಬಹಳ ಆಗಿವೆ..ನನ್ನ ಪಾಲಿಗೆ ಈ ಚುನಾವಣೆ ನಿರ್ಣಯಕ..ಎರಡು ಸೋಲಿಗೆ ಎದೆಗುಂದಿಲ್ಲ, ಜನಾಭಿಪ್ರಾಯ ನನ್ನ ಮೇಲೆ ಇತ್ತು. ಕಾಂಗ್ರೆಸ್ ಕುತಂತ್ರದಿಂದ ನಾನು ಸೋತೀರಬಹುದು ಆದರೆ ಫಲಿತಾಂಶ ಬೇರೆ ಆಯ್ತು..ನನ್ನ ಸೋಲಿಗೆ ಕಾರಣ ಚರ್ಚೆ ಬೇಡ ಎಂದು ತಿಳಿಸಿದರು.

*ಯಾವುದೇ ಆಮಿಷಗಳಿಗೆ ಬಲಿಯಾಗಲ್ಲ*

ಕಾರ್ಯಕರ್ತರ ಬಯಕೆಯಂತೆ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದ್ದೇನೆ. ಯಾವ ಕಾರಣಕ್ಕೂ ಕ್ಷೇತ್ರದ ಜನ ಕೂಪನ್ ಗೆ ಬೆಲೆ ನೀಡಲ್ಲ. ಆಮಿಷಗಳಿಗೆ ಬಲಿಯಾಗಲ್ಲ ನಮ್ಮ ಚನ್ನಪಟ್ಟಣ ಜನ ಎಂದರು.

ನಾಮಪತ್ರ ಸಲ್ಲಿಸಿ ಪ್ರಚಾರ ಆರಂಭ ಮಾಡಿದಾಗ ಭಾವನಾತ್ಮಕ ವಾಗಿ ಮಾತಾಡಿದೆ…ನಾನು ಭಾವನೆ ಇರುವ ವ್ಯಕ್ತಿ. ಕಳೆದ 16 ದಿನಗಳಲ್ಲಿ ಬಹಳ ಆಶೀರ್ವಾದ ಪಡೆದಿದ್ದೇನೆ. ನನಗೆ ಆಶೀರ್ವಾದ ಮಾಡಿ ಒಂದು ಪರೀಕ್ಷೆಮಾಡಿ ಈ ಪರೀಕ್ಷೆಯಲ್ಲಿ ನಾನು ಗೆದ್ದರೆ ನೀವೇ ಪರೀಕ್ಷಿಸಿ ಎಂದು ಮನವಿ ಮಾಡಿದರು.

Share & Spread
error: Content is protected !!