ಚನ್ನಪಟ್ಟಣ :
ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಪ್ರಭಾವಿ ನಾಯಕ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಕಾಂಗ್ರೆಸ್ ಪಡಸಾಲೆಯಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ಚನ್ನಪಟ್ಟಣದ ಕಾಂಗ್ರೆಸ್ ನಾಯಕ ರಘುನಂದನ್ ರಾಮಣ್ಣ ಅವರು ಬೆಂಗಳೂರು ಮೈಸೂರು ಇನ್ಪ್ರಾಸ್ಟಕ್ಟರ್ ಕಾರಿಡಾರ್ ಪ್ರದೇಶ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುವ ಕಾರ್ಯಕ್ರಮದಲ್ಲಿ ಸಿಪಿ ಯೋಗೇಶ್ವರ್ ಅವರ ರಾಜಕೀಯ ಕಡುವೈರಿ ಸಂಸದ ಡಿ.ಕೆ. ಸುರೇಶ್ ಜೊತೆ, ನಿಶಾ ಯೋಗೇಶ್ವರ್ ಕಾಣಿಸಿಕೊಳ್ಳುವ ಮುಲಕ ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಕಣಕ್ಕಿಳಿಯಲ್ಲಿದ್ದಾರೆ ಎನ್ನುವ ಸುದ್ದಿಯಿದೆ. ಇದರ ನಡುವೆ, ಯೋಗೇಶ್ವರ್ ಪುತ್ರಿ, ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಂಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ರಘುನಂದನ್ ರಾಮಣ್ಣನವರಿಗೆ ಶುಭಕೋರುವ ಸಲುವಾಗಿ ನಿಶಾ ಯೋಗೇಶ್ವರ್ ಕಚೇರಿಗೆ ಹೋಗಿದ್ದರು ಎನ್ನಲಾಗಿದ್ದು, ಚುನಾವಣೆ ಹೊಸ್ತಿಲಿನಲ್ಲಿ ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದ ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಸಕ್ರಿಯವಾಗಿರುವ ನಿಶಾ ಯೋಗೇಶ್ವರ್ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಕಳೆದ ಕೆಲವು ದಿನಗಳ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನೂ ಸಹ ತನ್ನ ಗೆಳತಿಯೊಂದಿಗೆ ಭೇಟಿ ಮಾಡಿದ್ದ ನಿಶಾ.. ಈ ಮತ್ತೆ ಸಂಸದ ಸುರೇಶ್ ಜೊತೆಗೆ ರಘುನಂದನ್ ರಾಮಣ್ಣ ಅವರಿಗೆ ವಿಷ್ ಮಾಡುವ ನೆಪದಲ್ಲಿ ಕಾಣಿಸಿಕೊಂಡಿರುವ ಮರ್ಮ ಏನು ಎನ್ನುವ ಪ್ರಶ್ನೆ ಜಿಲ್ಲೆಯಲ್ಲಿ ಮೂಡಿದೆ…