ರೈತ ದೇಶದ ಬೆನ್ನೆಲುಬು, ಯಾವುದೇ ಸರ್ಕಾರ ಬಂದರೂ ರೈತರನ್ನು ಗೌರವಿಸುವುದು ಅವರ ಕರ್ತವ್ಯ, ಪರಿಹಾರಕ್ಕಾಗಿ ರೈತ ಆತ್ಮಹತ್ಯೆ ಮಾಡಿಕೊಳ್ಳುವ ಸ್ವಾರ್ಥಿಯಲ್ಲ, ದೇಶಕ್ಕೆ ಅನ್ನ ಹಾಕುವ ರೈತನ ಕಷ್ಟಕ್ಕೆ ಅಧಿಕಾರದಲ್ಲಿರುವ ಸರ್ಕಾರ ಎಷ್ಟು ಗೌರವವನ್ನು ಕೊಡ್ತಾ ಇದೆ ಎಂದು ಶಿವಾನಂದ ಪಾಟೀಲ್ ಹೇಳಿಕೆ ನೋಡಿದರೆ ಗೊತ್ತಾಗುತ್ತೆ.ರೈತರ ಬಗ್ಗೆ ಹಗುರವಾಗಿ ಮಾತನಾಡಿರುವ ಶಿವನಂದ ಪಾಟೀಲ್ ರವರು ಕೂಡಲೇ ರಾಜೀನಾಮೆ ಕೊಡಬೇಕು, ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಮಾಡುವುದಾಗಿ ತಿಳಿಸಿದರು