ಸಂಗ್ರಾಮ TV https://sangramatv.com News & Entertainment Sat, 15 Mar 2025 15:43:40 +0000 en-US hourly 1 https://wordpress.org/?v=6.7.2 https://sangramatv.com/wp-content/uploads/2022/12/cropped-124565656-32x32.png ಸಂಗ್ರಾಮ TV https://sangramatv.com 32 32 ಮೈಸೂರು ಜಿಲ್ಲೆಯಲ್ಲಿ ಇಂದು ಅಸ್ಪೃಶ್ಯತೆ ನಿವಾರಣೆ ಅರಿವು ಕಾರ್ಯಕ್ರಮ https://sangramatv.com/archives/1371 Sat, 15 Mar 2025 15:43:40 +0000 https://sangramatv.com/?p=1371 ಇಂದು, ಮೈಸೂರು ಜಿಲ್ಲೆ, ಹುಣಸೂರು ತಾಲೂಕು, ಗೌವಡಗೆರೆಯಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಜ್ಞಾನಜ್ಯೋತಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹೋಬಳಿ ಮಟ್ಟದ ಅಸ್ಪೃಶ್ಯತೆ ನಿವಾರಣೆ ಅರಿವು ಕಾರ್ಯಗಾರ ಕಾರ್ಯಕ್ರಮವನ್ನು ಗೌಡಗೆರೆ ಶ್ರೀ ನಂಜುಂಡೇಶ್ವರ ವಿದ್ಯಾಸಂಸ್ಥೆಯ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ನಟರಾಜ್ ಸ್ವಾಮೀಜಿ ರವರು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿದರು. 

ನಂತರ ಮಾತನಾಡಿ ಸಮಾಜದಲ್ಲಿ 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಸಾಮಾಜಿಕ ಸಮಾನತೆ ಸಾರಿದ ಮಹಾಪುರುಷರಾಗಿದ್ದು ಪ್ರತಿಯೊಬ್ಬರು ಹಕ್ಕುಗಳನ್ನು ಉಲ್ಲಂಘನೆ ಯಾಗದರೀತಿ ಪ್ರತಿಯೊಬ್ಬರೂ ಸೌಹಾರ್ದಯುತವಾಗಿ ಜೀವನ ಮಾಡಬೇಕಾಗಿದೆ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ ಎಲ್ಲಾ ಸಮುದಾಯದ ರಕ್ಷಣೆ ಮಾಡಿದ್ದಾರೆ, ಅಸ್ಪೃಶ್ಯತೆ ಒಂದು ಪಿಡುಗಾಗಿದ್ದು ಸಮಾಜದ ಜನರು ಸೌಹಾರ್ದತವಾಗಿ ಜೀವನ ನಡೆಸಿದಾಗ ಇಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದರು. 

ವೇದಿಕೆಯಲ್ಲಿ ಉಪತಹಶಿಲ್ದಾರ್ ಶ್ರೀಮತಿ ಶೋಭಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಯಶೋಧ ಬಾಯಿ, ಶ್ರೀಮತಿ ಮಂಜುಳಾ, ಸದಸ್ಯರು ಕಾರ್ಯದರ್ಶಿಗಳು ವಿವಿಧ ಇಲಾಖೆಯ ಮುಖ್ಯಸ್ಥರು ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಯಶೋದಮ್ಮ, ಪಂಚಾಯಿತಿ ಕಾರ್ಯದರ್ಶಿ ರಮೇಶ್, ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಂಡಿತು.
ದೌರ್ಜನ್ಯ ಪ್ರತಿಬಂಧ ಅಧಿನಿಯಮ 1989ರ ಅಸ್ಪೃಶ್ಯತೆ ನಿವಾರಣೆ ಅರಿವು ಕಾರ್ಯಗಾರ 2024 -25 ಅರಿವು ಕಾರ್ಯಗಾರದಲ್ಲಿ ಮಾತನಾಡಿದ ರಾಷ್ಟ್ರೀಯ ಮಾನವ ಹಕ್ಕುಗಳ ತರಬೇತುದಾರ ವಕೀಲ ಎಂ. ಗುರುಪ್ರಸಾದ್ ನಾವು ಕಾನೂನನ್ನು ಗೌರವಿಸಿದರೆ ಕಾನೂನು ನಮ್ಮನ್ನು ರಕ್ಷಿಸುತ್ತದೆ ಎಂಬಂತೆ, ಪ್ರತಿಯೊಬ್ಬರೂ ಕಾನೂನನ್ನು ಗೌರವಿಸಬೇಕಾಗಿದೆ ಅಸ್ಪೃಶ್ಯತೆ ನಿವಾರಣೆ ಪ್ರತಿಬಂಧ ಕಾಯಿದೆ ವಿಶೇಷವಾಗಿ ರಚಿಸಿದ್ದು ಹಕ್ಕು ಉಲ್ಲಂಘನೆಯಾದ ಅನುಸೂಚಿತ ಸಮುದಾಯ ಪರಿಹಾರ ಪಡೆಯಲು ಅರ್ಹರಾಗಿದ್ದು ದೌರ್ಜನ್ಯ ಎಸಗಿದವರ ವಿರುದ್ಧ ತಕ್ಷಣ ಎಫ್. ಐ. ಆರ್. ದಾಖಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಾಗಿದೆ ಎಂದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದರೂ ಎಂದಿಗೂ ಅಸ್ಪೃಶ್ಯತೆ ಅಲ್ಲಲ್ಲಿ ಕಾಣಿಸಿ ಸಾಮಾಜಿಕ ಸೌಹಾರ್ದತೆಗೆ ಭಂಗ ತರುತ್ತಿದೆ ಇದರಿಂದ ಮುಕ್ತರಾಗಲು ಉತ್ತಮ ಮಾರ್ಗ ಶಿಕ್ಷಣ ಪ್ರತಿಯೊಬ್ಬರು ಶಿಕ್ಷಣ ವಂತರಾದಲ್ಲಿ ಜಾತಿ ವ್ಯವಸ್ಥೆಗೆ ಕಡಿವಾಣ ಹಾಕಿ ಸಮ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿ ಸಹೋದರತ್ವ ಬೆಳೆಸಿಕೊಂಡು ಅಭಿವೃದ್ಧಿಗೆ ಒತ್ತು ನೀಡಲು ಸಾಧ್ಯವಾಗುತ್ತದೆ ಎಂದರು. ಯಾವುದೇ ಅನುಸೂಚಿತ ಸಮುದಾಯ ದೌರ್ಜನ್ಯ ಒಳಗಾದ ತಕ್ಷಣ ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅವರಿಗೆ ಆತ್ಮಸ್ಥೈರ್ಯ ತುಂಬಿ ಸಂಬಂಧಪಟ್ಟ ಪೊಲೀಸ್ ನವರಿಗೆ ದೂರು ಸಲ್ಲಿಸುವ ಮುಖಾಂತರ ಕಾನೂನು ಕ್ರಮ ಕೈಗೊಂಡು ಸಾಕ್ಷ ನಾಶವಾಗದ ರೀತಿ ರಕ್ಷಣೆ ಮಾಡಬೇಕಾಗಿದೆ ಎಂದರು. 

]]>
ಹಾರೋಹಳ್ಳಿ ತಾಲೂಕಿನಲ್ಲಿ ರಾಮನಗರ ಲೋಕಯುಕ್ತ ವತಿಯಿಂದ ಸಾರ್ವಜನಿಕ ಕುಂದು – ಕೊರತೆ ಸಭೆ, 22 ಅರ್ಜಿಗಳು ಸ್ವೀಕೃತ. https://sangramatv.com/archives/1366 Wed, 19 Feb 2025 16:43:00 +0000 https://sangramatv.com/?p=1366

ರಾಮನಗರ : ಜಿಲ್ಲೆ ಲೋಕಯುಕ್ತ ವತಿಯಿಂದ ಸಾರ್ವಜನಿಕ ಕುಂದು ಕೊರತೆ ಸಭೆಯನ್ನು ಹಾರೋಹಳ್ಳಿ ತಾಲ್ಲೂಕು ಕಛೇರಿ ಆವರಣ, ಹಾರೋಹಳ್ಳಿ ತಾಲೂಕ್ಕಿನಲ್ಲಿ ಆಯೋಜನೆ ಮಾಡಲಾಗಿತ್ತು.

ನೇರವಾಗಿ ಸಾರ್ವಜನಿಕರು ಅವರ ಸಮಸ್ಯೆಬಗ್ಗೆ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಕಂದಾಯ ಇಲಾಖೆಗೆ ಸಂಬಂಧ 12 ಅರ್ಜಿ, ಎ ಡಿ ಎಲ್ ಆರ್ ಸಂಬಂಧ 2 ಅರ್ಜಿ, ಪಿ ಡಬ್ಲ್ಯೂ ಡಿ ಇಲಾಖೆ ಸಂಬಂಧ 2 ಅರ್ಜಿ, ಪಟ್ಟಣ ಪಂಚಾಯತ್ ಹಾರೋಹಳ್ಳಿ ಸಂಬಂಧ 3 ಅರ್ಜಿ, ಯೋಜನಾ ಪ್ರಾಧಿಕಾರ ಸಂಬಂಧ 1 ಅರ್ಜಿ ಮತ್ತು ಇತರೆ 2 ಅರ್ಜಿ ಒಟ್ಟು 22 ಅರ್ಜಿಗಳು ಸ್ವೀಕೃತಿಯಾಗಿದೆ.

ಈ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳಾದ , ಎಸ್. ಪಿ ಸ್ನೇಹ, DYSP ಸುಧೀರ್, ಇನ್ಸ್ಪೆಕ್ಟರ್ ಅನಂತ್ ರಾಮ್, ಸಂದೀಪ್ , ಹನುಮಂತ ಕುಮಾರ್, ಹಾಗೂ ಸಿಬ್ಬಂದಿಗಳು ಹಾಜರಿದ್ದರು.

]]>
ರಾಮನಗರ : ಚನ್ನಪಟ್ಟಣದಲ್ಲಿ ಲೋಕಯುಕ್ತ ಬಲೆಗೆ ರೇಷ್ಮೆ ವಿಸ್ತರಣಾ ಅಧಿಕಾರಿ ಪರಮೇಶ್ ಮತ್ತು ರೇಷ್ಮೆ ನೀರಿಕ್ಷಕರು ಯೋಗೇಶ್. https://sangramatv.com/archives/1357 Mon, 17 Feb 2025 16:36:13 +0000 https://sangramatv.com/?p=1357 ಚನ್ನಪಟ್ಟಣ ತಾಲ್ಲೂಕಿನ ಸೊಗಾಲದೊಡ್ಡಿ ಗ್ರಾಮದ ಎಲ್ಲಪಾ ರವರ ದೂರಿನ ಮೇಲೆ ಇಂದು ರೇಷ್ಮೆ ವಿಸ್ತರಣಾ ಅಧಿಕಾರಿ ಪರಮೇಶ್ ಮತ್ತು ರೇಷ್ಮೆ ನೀರಿಕ್ಷಕರು ಯೋಗೇಶ್ ರನ್ನು ಲೋಕಯುಕ್ತ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಲ್ಲಪಾ ರವರ ರೇಷ್ಮೆ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲು 40000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ ಅಧಿಕಾರಿಗಳು ಮೊದಲನೇ ಕಂತಿನಲ್ಲಿ 5000 ರೂಪಾಯಿ ಗಳನ್ನು ಮೊದಲು ಪಡೆದಿರುತ್ತಾರೆ, ನಂತರ ಉಳಿಕೆ 15000 ರೂಪಾಯಿ ಹಣ ಪಡೆಯುವಾಗ ಆರೋಪಿ ಪರಮೇಶ್ ನೇರವಾಗಿ ಲೋಕಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುತ್ತರೆ, ನಂತರ ಮತ್ತೊಬ್ಬ ಆರೋಪಿ ಯೋಗೇಶ್ ರವರನ್ನು ಮನೆಯಲ್ಲಿ ಬಂಧಿಸಿ ಪ್ರಕರಣ ಧಾಖಲಿಸಿ ಕೊಳ್ಳಲಾಗಿದೆ.

ಡಿ ವೈ ಎಸ್ ಪಿ ಸುಧೀರ್ ರವರ ಉಸ್ತುವಾರಿಯಲ್ಲಿ, ಲೋಕಯುಕ್ತ ಎಸ್ ಪಿ ಸ್ನೇಹ ರವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಜರುಗಿದ್ದು ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಅನಂತರಮು, ಇನ್ಸ್ಪೆಕ್ಟರ್ ಸಂದೀಪ್, ಇನ್ಸ್ಪೆಕ್ಟರ್ ಹನುಮಂತಕುಮಾರ್, ಸಿಬ್ಬಂದಿಗಳಾದ ರಘು, ಶಿವಕುಮಾರ್ ಎಂ ಇ , ರಮ್ಯ, ಭಾಗ್ಯಮ್ಮ, ಗಂಗಮ್ಮ, ಮಲ್ಲಿಕಾರ್ಜುಜನ್, ಶಂಕರ್, ಶಿವಕುಮಾರ್ ಹಾಗೂ ಇತರರು ಹಾಜರಿದ್ದರು.

]]>
ರಾಮನಗರ : ನಕಲಿ ಲೋಕಯುಕ್ತ ಅಧಿಕಾರಿ ಪೊಲೀಸ್ ಬಲೆಗೆ. https://sangramatv.com/archives/1352 Mon, 17 Feb 2025 16:27:09 +0000 https://sangramatv.com/?p=1352

ರಾಮನಗರ ಜಿಲ್ಲೆಯ AC ಕಛೇರಿಗೆ ಲೋಕಯುಕ್ತ ಅಧಿಕಾರಿ ಎಂದು ಇಂದು ಮದ್ಯಾಹ್ನ 2:30 ರ ಸಮಯದಲ್ಲಿ ಜಾನ್ ಎಂಬ ವೆಕ್ತಿ ಬೇಟಿ ನೀಡಿರುತ್ತಾನೆ.

ಈ ಸಂದರ್ಭದಲ್ಲಿ ಆತನ ನಡುವಳಿಕೆಮೇಲೆ ಅನುಮಾನಗೊಂಡ AC ಯವರು ರಾಮನಗರ ಲೋಕಯುಕ್ತ ಕಛೇರಿಗೆ ಮಾಹಿತಿ ನೀಡಿ ನಂತರ ಪರಿಶೀಲಿಸಿದಾಗ ಆತ ನಕಲಿ ಲೋಕಯುಕ್ತ, ಹೆಸರು ಜಾನ್ ಎಂದು ತಿಳಿದುಬಂದಿದ್ದು ಆತನನ್ನು ಬಂಧಿಸಿ ಐಜೂರು ಠಾಣೆಯಲ್ಲಿ FIR ಧಾಖಲು ಮಾಡಲಾಗಿದೆ.

]]>
ಕಿಲ್ಕಾರಿ ಸೇವೆಯಿಂದ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ https://sangramatv.com/archives/1348 Wed, 22 Jan 2025 14:53:35 +0000 https://sangramatv.com/?p=1348 ರಾಮನಗರ :  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹ ಭಾಗಿತ್ವದಲ್ಲಿ ಕಾರ್ಯಗತಗೊಳಿಸಲಾಗಿರುವ ಕಿಲ್ಕಾರಿ ಮೊಬೈಲ್ ಕರೆ ಸೇವೆ ಕುರಿತು ಆಶಾ ಮೇಲ್ವಿಚಾರಕರಿಗೆ ಹಾಗೂ ಆಶಾ ಸುಗಮಕಾರರಿಗೆ ತರಬೇತಿಯನ್ನು ಆಯೋಜಿಸಲಾಗಿತ್ತು.

ಡಾ. ಅಶ್ವಿನಿ, ರಾಜ್ಯ ಕಿಲ್ಕಾರಿ ಸಂಯೋಜಕಿ ತರಬೇತಿಗೆ ಚಾಲನೆ ನೀಡಿ ನಂತರ ಮಾತನಾಡುತ್ತಾ ಕಿಲ್ಕಾರಿಯು ಭಾರತದಲ್ಲಿ ಮೊಬೈಲ್ ಆಧಾರಿತ ಆರೋಗ್ಯ ಸೇವೆಯಾಗಿದ್ದು, ಗರ್ಭಿಣಿಯರು ಮತ್ತು ತಾಯಂದಿರಿಗೆ ಉಚಿತ ಆಡಿಯೋ ಸಂದೇಶಗಳನ್ನು ಒದಗಿಸುತ್ತದೆ. ಭಾರತದ ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ೨೦೧೬ ರಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಿಲ್ಕಾರಿ ಕಾರ್ಯಕ್ರಮವು ಖಅಊ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮಹಿಳೆಯರಿಗೆ ವಾರಕ್ಕೆ ಒಂದು ಬಾರಿ (ಸಾಪ್ತಾಹಿಕ) ಆಡಿಯೋ ಸಂದೇಶಗಳನ್ನು ಕಳುಹಿಸುತ್ತದೆ. ಸಂದೇಶಗಳು ಪ್ರತಿ ತಾಯಿಯ ಗರ್ಭಾವಸ್ಥೆಯ ಅವಧಿಗೆ ಅನುಗುಣವಾಗಿದ್ದು ಗರ್ಭಿಣಿಗೆ ನಾಲ್ಕು ತಿಂಗಳಿನಿಂದ ಹಾಗೂ ಒಂದು ವರ್ಷದೊಳಗಿನ ಮಗುವಿರುವ ತಾಯಂದಿರಿಗೆ ದೂರವಾಣಿ ಸಂಖ್ಯೆ: ೦೧೨೪೪೪೫೧೬೬೦ ಇಂದ ಕರೆ ಬರುತ್ತದೆ. ಈ ಸೇವೆ ಸಂಪೂರ್ಣ ಉಚಿತವಾಗಿರುತ್ತದೆ. ಸಂದೇಶಗಳು ಗರ್ಭಾವಸ್ಥೆ, ಹೆರಿಗೆ ಮತ್ತು ಮಗುವಿನ ಆರೈಕೆಯಂತಹ ವಿಷಯಗಳನ್ನು ಒಳಗೊಂಡಿದೆ. ಕಾರ್ಯಕ್ರಮವು ಹೊಸ ಮತ್ತು ನಿರೀಕ್ಷಿತ ತಾಯಂದಿರನ್ನು ತಮ್ಮ ಶಿಶುಗಳಿಗೆ ಆರೋಗ್ಯಕರ ಆಯ್ಕೆಗಳನ್ನು ಮಾಡಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಕಿಲ್ಕಾರಿಯಿಂದಾಗುವ ಪ್ರಯೋಜನಗಳ ಕುರಿತು ಮಾತನಾಡುತ್ತಾ ಕಾರ್ಯಕ್ರಮವು ತಾಯಂದಿರು ಮತ್ತು ಕುಟುಂಬಗಳು ತಮ್ಮ ಶಿಶುಗಳಿಗೆ ಆರೋಗ್ಯಕರ ಆಯ್ಕೆಗಳನ್ನು ಮಾಡಲು ಸಹಾಯ ಮಾಡುತ್ತದೆ. ಕುಟುಂಬಗಳು ಆರೋಗ್ಯ ಸೇವೆಗಳನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ. ಸಾಂಕ್ರಾಮಿಕ ಸಮಯದಲ್ಲಿ ದೈಹಿಕ ಭೇಟಿಗಳು ಕಷ್ಟಕರವಾದಾಗ ಕಿಲ್ಕಾರಿ ಸೇವೆ ವಿಶೇಷವಾಗಿ ಉಪಯುಕ್ತವಾಗಿದೆ. ಕಿಲ್ಕಾರಿ ಸಂದೇಶವನ್ನು ಮೂರುಬಾರಿ ಸತತವಾಗಿ ಕರೆಯ ಮುಖಾಂತರ ತಲುಪಿಸಲು ಪ್ರಯತ್ನಿಸಲಾಗುತ್ತದೆ. ಒಂದುವೇಳೆ ಕರೆಯನ್ನು ಸ್ವೀಕರಿಸಲು ಲಭ್ಯವಾಗದಿದ್ದಲ್ಲಿ ಅಥವಾ ಅದನ್ನು ತಪ್ಪಿಸಿಕೊಂಡರೆ ಅಥವಾ ಯಾವುದೇ ಸಂದೇಶವನ್ನು ಮತ್ತೆ ಕೇಳಲು ಬಯಸಿದರೆ ನಿಮ್ಮ ನೊಂದಾಯಿತ ಮೊಬೈಲ್ ನಂಬರಿನಿAದ ೧೪೪೨೩ ಗೆ ಕರೆ ಮಾಡುವ ಮೂಲಕ ಪುನಃ ಸಂದೇಶವನ್ನು ನೀವು ಕೇಳಬಹುದು. ಸತತವಾಗಿ ಮೂರುಬಾರಿ ಕರೆಯನ್ನು ಸ್ವೀಕರಿಸದಿದ್ದರೆ ಕಿಲ್ಕಾರಿ ಸೇವೆ ಸ್ಥಗಿತಗೊಳ್ಳುತ್ತದೆ ಎಂದು ತಿಳಿಸಿದರು.

 

ಡಾ. ರಾಜು.ವಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಮಾತನಾಡುತ್ತಾ ತಾಯಿ ಮರಣ ಮತ್ತು ಶಿಶುಮರಣವನ್ನು ತಡೆಗಟ್ಟುವ ಸಲುವಾಗಿ ಕಿಲ್ಕಾರಿ ಮೊಬೈಲ್ ಸೇವೆಯನ್ನು ಜಾರಿಗೆ ತರಲಾಗಿದ್ದು. ಗರ್ಭಿಣಿ ಮತ್ತು ತಾಯಂದಿರಿಗೆ ವಹಿಸಬೇಕಾದ ಕಾಳಜಿ, ಲಸಿಕೆ, ಪೌಷ್ಠಿಕ ಆಹಾರ ಹಾಗೂ ಇತರೆ ತಪಾಸಣೆಗೆ ಸಹಾಯಕವಾಗುವ ನಿಟ್ಟಿನಲ್ಲಿ ದೇಶದಾದ್ಯಂತ ಎಲ್ಲಾ ಭಾಷೆಗಳಲ್ಲಿ ಕಿಲ್ಕಾರಿ ಮೊಬೈಲ್ ಕರೆ ಆರಂಭಿಸಲಾಗಿದೆ. ಈ ಸೇವೆಯನ್ನು ಪಡೆಯಲು ಗರ್ಭಿಣಿ ಸ್ತ್ರೀ ಆರ್.ಸಿ.ಹೆಚ್. ಪೋರ್ಟಲ್‌ನಲ್ಲಿ ನೊಂದಣಿ ಸಮಯದಲ್ಲಿ ಗರ್ಭಿಣಿಯ ಅಥವಾ ಕುಟುಂಬದ ಸದಸ್ಯರ ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗಿರುತ್ತದೆ. ಪ್ರತಿವಾರ ಕರೆ ಮಾಡುವ ಕಾಳಜಿವಹಿಸಲಾಗುವುದು. ಆದ್ದರಿಂದ ಪ್ರತಿಯೊಬ್ಬ ಗರ್ಭಿಣಿ ಹಾಗೂ ತಾಯಿಯು ಕಿಲ್ಕಾರಿ ಸೇವೆಯಿಂದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

 

ಶ್ರೀಮತಿ ಅರ್ಪಿತ, ಕೆ.ಜೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಾತನಾಡುತ್ತಾ ಕಿಲ್ಕಾರಿ ಸೇವೆಯನ್ನು ಪಡೆಯುವಂತೆ ಗರ್ಭಿಣಿ ಸ್ತ್ರೀಯರಿಗೆ ಮತ್ತು ತಾಯಂದಿರಿಗೆ ಲಸಿಕಾ ಸತ್ರದ ವೇಳೆ, ತಪಾಸಣಾ ಸಮಯದಲ್ಲಿ, ಪಿ.ಎಂ.ಎಸ್.ಎಂ .ಎ ಕಾರ್ಯಕ್ರಮದಲ್ಲಿ, ತಾಯಂದಿರ ಸಭೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರಚಾರ ಕೈಗೊಂಡು ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಸುದಾರಿಸುವಲ್ಲಿ ಕಿಲ್ಕಾರಿ ಸಹಾಯಕ ಎಂದು ತಿಳಿಸಿದರು.

 

ಈ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತ.ಕೆ.ಜೆ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ನಾಗೇಶ್, ಎಂ & ಇ ವ್ಯವಸ್ಥಾಪಕರಾದ ಶಿವಶಂಕರೆಗೌಡ, ಪ್ರಸಾದ್, ಗೀತಾ, ಆಶಾ ಮೇಲ್ವಿಚಾರಕರು ಹಾಗೂ ಆಶಾ ಸುಗಮಕಾರರು ಹಾಜರಿದ್ದರು.

]]>
ಎಂ.ಕೆ ದೊಡ್ಡಿ ಪೊಲೀಸರಿಂದ ಇಬ್ಬರು ಮನೆಗಳ್ಳರ ಬಂಧನ. https://sangramatv.com/archives/1345 Fri, 17 Jan 2025 16:42:57 +0000 https://sangramatv.com/?p=1345

ದಿನಾಂಕ:05.01.2025 ರಂದು ಮಧ್ಯಾಹ್ನ, ಎಂ.ಕೆ ದೊಡ್ಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಗೌಡಗೆರೆ ಗ್ರಾಮದ ಮನೆಯೊಂದರಲ್ಲಿ ಬೀಗ ಮುರಿದು, ಮನೆಯಲ್ಲಿದ್ದ ಚಿನ್ನದ ಒಡವೆಗಳು ಹಾಗೂ 10,000/- ರೂ ನಗದು ಹಣವನ್ನು ಕಳ್ಳತನ ಮಾಡಿರುವ ಬಗ್ಗೆ ಪಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಎಂ.ಕೆ ದೊಡ್ಡಿ ಪೊಲೀಸ್‌ ಠಾಣೆ ಮೊ.ಸಂ: 02/2025, ಕಲಂ 331 (3), 305 ಬಿ.ಎನ್.ಎಸ್‌ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಸದರಿ ಪ್ರಕರಣದಲ್ಲಿ ತನಿಖೆ ನಡೆಸಿ, ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ, ದಿನಾಂಕ: 11.01.2025 ರಂದು ಆರೋಪಿಯನ್ನು ಬಂಧಿಸಿ, ಆತನನ್ನು ವಿಚಾರಣೆ ಮಾಡಿ, ಕಳ್ಳತನ ಮಾಡಿದ್ದ 60 ಗ್ರಾಂ ಚಿನ್ನಾಭರಣಗಳನ್ನು ಅಮಾನತ್ತು ಪಡಿಸಿಕೊಂಡು, ಒಟ್ಟು 3 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಎಂ.ಕೆ ದೊಡ್ಡಿ ಪೊಲೀಸ್‌ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಯಶ್ವಸಿಯಾಗಿರುತ್ತಾರೆ.

ಪತ್ತೆಯಾದ ಪ್ರಕರಣಗಳು:

1. ಎಂ.ಕೆ ದೊಡ್ಡಿ ಪೊಲೀಸ್‌ ಠಾಣೆ ಮೊ.ಸಂ: 02/2025, ಕಲಂ 331 (3), 305 ಬಿ.ಎನ್.ಎಸ್‌.

2. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ : 215/2024 ಕಲಂ 305, 331(3) ಬಿ.ಎನ್.ಎಸ್‌.

3. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ : 119/2024 ಕಲಂ 457, 380 ಐ.ಪಿ.ಸಿ.

ದಿನಾಂಕ:10.01.2025 ರಂದು ಮಧ್ಯಾಹ್ನ, ಎಂ.ಕೆ ದೊಡ್ಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಮಾಕಳಿ ಗ್ರಾಮದ ಮನೆಯೊಂದರಲ್ಲಿ ಬೀಗ ಮುರಿದು, ಮನೆಯಲ್ಲಿದ್ದ ಚಿನ್ನದ ಒಡವೆಗಳು ಹಾಗೂ 63,000/- ರೂ ನಗದು ಹಣವನ್ನು ಕಳ್ಳತನ ಮಾಡಿರುವ ಬಗ್ಗೆ ಪಿರ್ಯಾದುದಾರರು ನೀಡಿದ ದೂರಿನ ಮೇರೆಗೆ, ಎಂ.ಕೆ ದೊಡ್ಡಿ ಪೊಲೀಸ್‌ ಠಾಣೆ ಮೊ.ಸಂ: 03/2025, ಕಲಂ 331 (3), 305 ಬಿ.ಎನ್.ಎಸ್‌ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

 

ಸದರಿ ಪ್ರಕರಣದಲ್ಲಿ ತನಿಖೆ ನಡೆಸಿ, ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ, ಆತನನ್ನು ಬಂಧಿಸಿ, ಕಳ್ಳತನ ಮಾಡಿದ್ದ 14.2 ಗ್ರಾಂ ಚಿನ್ನಾಭರಣ, 25,000/- ರೂ ನಗದು ಹಾಗೂ 1 ದ್ವಿಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಂಡು, ಪ್ರಕರಣವನ್ನು ಪತ್ತೆ ಮಾಡುವಲ್ಲಿ ಎಂ.ಕೆ ದೊಡ್ಡಿ ಪೊಲೀಸ್‌ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಯಶ್ವಸಿಯಾಗಿರುತ್ತಾರೆ.

]]>
ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕರ ಜಿಲ್ಲಾ ಹಂತದ ಸಭೆಯನ್ನು ಮಾನ್ಯ ಅಕ್ಷಯ್ ಶ್ರೀಧರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್ ಹಾವೇರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಗುರುಭವನ ಹಾವೇರಿ ಇಲ್ಲಿ ಆಯೋಜಿಸಲಾಗಿತ್ತು. https://sangramatv.com/archives/1340 Fri, 20 Dec 2024 16:43:04 +0000 https://sangramatv.com/?p=1340

ಹಾವೇರಿ : ದಿನಾಂಕ 19-12-2024 ರಂದು ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕರ ಜಿಲ್ಲಾ ಹಂತದ ಸಭೆಯನ್ನು ಮಾನ್ಯ ಅಕ್ಷಯ್ ಶ್ರೀಧರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್ ಹಾವೇರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಗುರುಭವನ ಹಾವೇರಿ ಇಲ್ಲಿ ಆಯೋಜಿಸಲಾಗಿತ್ತು.

ಈ ದಿನದ ಕಾರ್ಯಕ್ರಮವನ್ನು ಮಾನ್ಯ ಅಕ್ಷಯ್ ಶ್ರೀಧರ್ ಸಿಇಒ ಜಿಲ್ಲಾ ಪಂಚಾಯತ್ ಹಾವೇರಿ ಅವರು ಉದ್ಘಾಟಿಸಿದರು. ಮಾನ್ಯ ಶ ಶ್ರೀ ಸುರೇಶ್ ಹುಗ್ಗಿ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಹಾವೇರಿ ಇವರು 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆ ಕುರಿತಂತೆ ಮುಖ್ಯ ಶಿಕ್ಷಕರು ಶಾಲಾ ಹಂತದಲ್ಲಿ ಪಠ್ಯಕ್ರಮ ಪೂರೈಸಿಕೊಂಡು ಕಿರುಪರೀಕ್ಷೆಗಳು,ಸರಣಿ ಪರೀಕ್ಷೆಗಳು ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ಮೂಲಕ ಯೋಜನೆ ಕೈಗೊಂಡು ಮಕ್ಕಳನ್ನು ಪರೀಕ್ಷೆ ಎದುರಿಸಲು ತರಬೇತಿಗೊಳಿಸಲು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿದರು.

ಮಾನ್ಯ ಅಕ್ಷಯ್ ಶ್ರೀಧರ್ ಕಾರ್ಯ ನಿರ್ಣಾಧಿಕಾರಿಗಳು ಇಂದಿನಿಂದ ಪರೀಕ್ಷೆಗೆ ಉಳಿದ 90 ದಿನಗಳಲ್ಲಿ ಪ್ರತಿ ಮಗು ಕ್ರಿಯಾತ್ಮಕವಾಗಿ ಓದುವಂತೆ ಮಾಡಿ ಜಿಲ್ಲೆಯ ಫಲಿತಾಂಶ ಅತಿ ಹೆಚ್ಚು ಆಗುವಂತೆ ಮಾಡಬಹುದು. ಮಕ್ಕಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಿ ಕಿರುಪರೀಕ್ಷೆಗಳು ಮತ್ತು ಸರಣಿ ಪರೀಕ್ಷೆಗಳನ್ನು ಪರಿಣಾಮಕಾರಿಯಾಗಿ ಆ ಯೋಜನೆ ಮಾಡಲು ತಿಳಿಸಿದರು. 2ನೇ ಮತ್ತು 4ನೇ ಶನಿವಾರದಂದು ಪಾಲಕರ ಸಭೆಯನ್ನು ನಿಯಮಿತವಾಗಿ ನಡೆಸಲು ತಿಳಿಸಿದರು. ಪರೀಕ್ಷೆಗೆ ಸಂಬಂಧಿಸಿದಂತೆ ಮಕ್ಕಳಿಗೆ ಒತ್ತಡ ಕೊಡದೆ ಮಾಡಲ್ ನಿರುಪರೀಕ್ಷೆಗಳಲ್ಲಿ ಕಡಿಮೆ ಸಾಧನೆ ಮಾಡಿದ ಮಕ್ಕಳ ಕಲಿಕಾ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಕೈಗೊಳ್ಳಲು ತಿಳಿಸಿದರು.

  ನಂತರ ಈ ದಿನದ ಕಾರ್ಯಕ್ರಮದ ಪ್ರಮುಖ ಭಾಗವಾಗಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಶ್ರೀ ಎ ಎಮ್ ಪಿ ವಾಗೀಶ್ ರಾಜ್ಯಮಟ್ಟದ ಮಾಹಿತಿ ಹಕ್ಕು ಸಂಪನ್ಮೂಲ ವ್ಯಕ್ತಿ ಹೊಳೆಗುಂದಿ ಇವರು ಮಾಹಿತಿ ಹಕ್ಕು ಅಧಿನಿಯಮ 2005 ಸವಾಲುಗಳು ಮತ್ತು ಪರಿಹಾರಗಳ ಕುರಿತು ಸುದೀರ್ಘವಾಗಿ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡುವುದರೊಂದಿಗೆ ಮಾರ್ಗದರ್ಶನ ಮಾಡಿದರು.

ಶ್ರೀಮತಿ ಪ್ರಜ್ಞಾ ಆನಂದ್ ಡಿವೈಎಸ್ಪಿ ಇವರು ಸೈಬರ್ ಕ್ರೈಂ ಕುರಿತಾದ ಸೂಕ್ಷ್ಮತೆಗಳನ್ನು ಮತ್ತು ಮೋಸ ಮಾಡುವ ಜಾಲಗಳ ಕುರಿತಾದ ಜಾಗೃತಿ ಮೂಡಿಸಿದರು. ಶ್ರೀ ಗೆಜ್ಜಿ ಹಳ್ಳಿ ಪೊಲೀಸ್ ಇಲಾಖೆ ಅಧಿಕಾರಿಗಳು ಫೋಕ್ಸೋ ಕಾಯ್ದೆ ಕುರಿತು ಕಿಶೋರಾವಸ್ಥೆಯಲ್ಲಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಾನೂನು ಅರಿವು ಮೂಡಿಸುವ ಉಪನ್ಯಾಸ ಮಾಡಿದರು. ಹಾಗೆಯೇ ಶ್ರೀ ಎಲ್ ವೈ ಶಿರಕೋಳ್ ಅಡಿಷನಲ್ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಇವರು ಅಪರಾಧ ತಡೆ ಕುರಿತು ಜಾಗೃತಿ ಕುರಿತಾದ ನಿದರ್ಶನಗಳನ್ನು ನೀಡುವುದರೊಂದಿಗೆ ಮಾರ್ಗದರ್ಶನ ಮಾಡಿದರು. ಶ್ರೀ ಮಂಜಪ್ಪ ಆರ್ ಪ್ರಭಾರಿ ನೋಡಲ್ ಅಧಿಕಾರಿಗಳು ಜಿಲ್ಲಾ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಇವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಈ ದಿನದ ಕಾರ್ಯಗಾರದಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿಷಯ ಪ್ರವೀಕ್ಷಕರು, ಶಿಕ್ಷಣ ಸಂಯೋಜಕರು ಮತ್ತು ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದು ಕಾರ್ಯಕ್ರಮದ ಫಲಾನುಭವಿಗಳಾಗಿದ್ದರು.

]]>
https://sangramatv.com/archives/1336 Thu, 05 Dec 2024 17:02:27 +0000 https://sangramatv.com/?p=1336 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 20,21, 22 ನೇ ತಾರೀಕು ಮಂಡ್ಯದಲ್ಲಿ ನಡೆಯುವುದರಿಂದ ಕಳೆದ ಐದು ದಿನಗಳಲ್ಲಿ ಮಳವಳ್ಳಿ ತಾಲೂಕಿನಾದ್ಯಂತ ಕನ್ನಡ ರಥ ಸಂಚರಿಸಿ ಅಂತಿಮವಾಗಿ ಮಳವಳ್ಳಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಕನ್ನಡ ಭವನದ ಮುಂದೆ ಸಮ್ಮೇಳನದ ಪ್ರಚಾರ ಜಾತ ಮುಕ್ತಾಯಗೊಂಡಿದ್ದು , ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಳವಳ್ಳಿ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕನ್ನಡ ಭವನದಲ್ಲಿ ತಳಿರು ತೋರಣಗಳಿಂದ ಸಿಂಗರಿಸಿ ಭುವನೇಶ್ವರಿ ಫೋಟೋವನ್ನು ಇರಿಸಿ ಆವರಣವನ್ನು ಸಿಂಗಾರ ಗೊಳಿಸಿದರು ಮೆರವಣಿಗೆಯ ಕನ್ನಡ ರಥ ಕನ್ನಡ ಭವನದ ಮುಂದೆ ಬರಮಾಡಿಕೊಂಡರು.

 

ಅಧ್ಯಕ್ಷರಾದ ಚೇತನ್ ಕುಮಾರ್ ಅವರು ಪುಷ್ಪ ಮಾಲೆಯನ್ನು ಹಾಕಿ ಪುಷ್ಪಾರ್ಚನೆಯನ್ನು ಮಾಡಿದರು ಇದೇ ಸಂದರ್ಭದಲ್ಲಿ ಪುರಸಭೆಯ ಮುಖ್ಯ ಅಧಿಕಾರಿ ಶ್ರೀಮತಿ ನಾಗರತ್ನಮ್ಮ ರವರು ಪ್ರಚಾರ ಕನ್ನಡ ರಥ ಅದ್ದೂರಿಯಾಗಿ ಸಾಗಲು ತಮಟೆ ನಗಾರಿ ಪೂಜಾ ಕುಣಿತವನ್ನು ಪುರಸಭೆ ವತಿಯಿಂದ ಆಯೋಜಿಸಲಾಗಿತ್ತು ಪುರಸಭೆಯ ಅಧ್ಯಕ್ಷರು ಸದಸ್ಯರು ಕನ್ನಡ ಅಭಿಮಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಚುಂಚಣ್ಣ ರವರು ಕನ್ನಡ ರಥ ತಾಲೂಕಿನಲ್ಲಿ ಸಡಗರ ಸಂಭ್ರಮದಿಂದ ಸಂಚರಿಸಿ ಅದ್ದೂರಿಯಾಗಿ ಪ್ರಚಾರ ಹಾಗೂ ಜಾಗೃತಿ ಜಾತ ನಡೆದಿದೆ ಯಶಸ್ವಿಗೆ ಸಹಕರಿಸಿದ ಹೃದಯವಂತ ಕನ್ನಡದ ಮನಸುಗಳಿಗೆ ಹೃದಯ ಸ್ಪರ್ಶಿ ಧನ್ಯವಾದಗಳು ತಿಳಿಸಿದರು

]]>
https://sangramatv.com/archives/1329 Thu, 28 Nov 2024 17:21:12 +0000 https://sangramatv.com/?p=1329

ಮಳವಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ವತಿಯಿಂದ ಡಿಸೆಂಬರ್ 20, 21, 22 ನೇ ತಾರೀಕು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಜರುಗುವುದರಿಂದ ಸಮ್ಮೇಳನದ ಜಾಗೃತಿ ಹಾಗೂ ಪ್ರಚಾರ ಕಾರ್ಯಕ್ರಮ ಸರ್ಕಾರಿ ಪ್ರೌಢಶಾಲೆ ಆಲದಹಳ್ಳಿ ಶಾಲೆಯಲ್ಲಿ ಜರುಗಿತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲದಳ್ಳಿ ಶಾಲಾ ಮಕ್ಕಳು ಶಿಕ್ಷಕರು ಜೊತೆಗೂಡಿ ಊರಿನ ಪ್ರಮುಖ ಬೀದಿಗಳಲ್ಲಿ ಜಾತ ಹೊರಟು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಶಿಕ್ಷಕರು ವಿದ್ಯಾರ್ಥಿಗಳು ಕನ್ನಡಪರ ಘೋಷಣೆಯನ್ನು ಕೂಗಿ ಮಾನವ ಸರಪಳಿ ನಿರ್ಮಿಸಿ ಸಮ್ಮೇಳನದ ಯಶಸ್ವಿಗೆ ಕರೆ ನೀಡಿದರು.

ಗೌರವ ಕಾರ್ಯದರ್ಶಿ ಚುಂಚಣ್ಣ ಕಲ್ಲಾರೆ ಪುರ ಮಾತನಾಡಿ ನುಡಿ ಜಾತ್ರೆಗೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಲು ಕರೆ ನೀಡಿದರು ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುವಂತೆ ಆಗ್ರಹಿಸಿದರು ನಂತರ ಕನ್ನಡ ನಾಡು ನುಡಿಯ ಬಗ್ಗೆ ರಸಪ್ರಶ್ನೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಶಾಲೆಯಲ್ಲಿ ಜರುಗಿತು.

ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು ಕಾರ್ಯಕ್ರಮದಲ್ಲಿ ಕಸಬಾ ಹೋಬಳಿ ಘಟಕದ ಅಧ್ಯಕ್ಷರಾದ ಕೃಷ್ಣ ಆಗಸನಪುರ ಕಿರುಗಾವಲು ಹೋಬಳಿ ಘಟಕದ ಅಧ್ಯಕ್ಷರಾದ ಸಿದ್ದರಾಜು ಗಟ್ಟಿಕೊಪ್ಪಲು ಉಪಾಧ್ಯಕ್ಷರಾದ ಶಿವರಾಜ್ ಸಿಎಂ ಕೋಶಾಧ್ಯಕ್ಷರಾದ ಮಾದೇಗೌಡ ಮುಖ್ಯ ಶಿಕ್ಷಕರಾದ ಪ್ರಭುಲಿಂಗ ಸ್ವಾಮಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಮಹದೇವು ಪಿಡಿಒ ಲಿಂಗರಾಜು ಹಾಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚೆಲುವರಾಜು ಶಾಲೆಯ ಶಿಕ್ಷಕರಾದ ಜಯಪ್ರದ ಅಕ್ಷತಾ ಶಿವಶಂಕರ್ ಲತಮಣಿ ನಾಗರಾಜು ಸಿದ್ದೇಶ್ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದ

]]>
ಟಿ. ನರಸೀಪುರ ತಾಲೂಕು ತಲಕಾಡಿನ ಪ್ರಸಿದ್ಧ ಶ್ರೀ ಹಸ್ತಿಕೇರಿ ಮಠದ ಹಿರಿಯ ಸ್ವಾಮೀಜಿಗಳ 106 ನೇ ಗಣರಾಧನೆ ಮಹೋತ್ಸವ ಹಾಗೂ ಲೋಕಕಲ್ಯಾಣಾರ್ಥವಾಗಿ ಶರಣರ ಜಾಗೃತಿ ಕಾರ್ಯಕ್ರಮವನ್ನು ಮೈಸೂರಿನ ಕೆ.ಆರ್. ಕ್ಷೇತ್ರದ ಶಾಸಕರಾದ ಟಿ. ಎಸ್. ವತ್ಸ ರವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು https://sangramatv.com/archives/1321 Tue, 26 Nov 2024 16:56:42 +0000 https://sangramatv.com/?p=1321 ಇಂದು ಮೈಸೂರು ಜಿಲ್ಲೆ, ಟಿ. ನರಸೀಪುರ ತಾಲೂಕು ತಲಕಾಡಿನ ಪ್ರಸಿದ್ಧ ಶ್ರೀ ಹಸ್ತಿಕೇರಿ ಮಠದ ಹಿರಿಯ ಸ್ವಾಮೀಜಿಗಳ 106 ನೇ ಗಣರಾಧನೆ ಮಹೋತ್ಸವ ಹಾಗೂ ಲೋಕಕಲ್ಯಾಣಾರ್ಥವಾಗಿ ಶರಣರ ಜಾಗೃತಿ ಕಾರ್ಯಕ್ರಮವನ್ನು ಮೈಸೂರಿನ ಕೆ.ಆರ್. ಕ್ಷೇತ್ರದ ಶಾಸಕರಾದ ಟಿ. ಎಸ್. ವತ್ಸ ರವರು ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪುಣ್ಯ ಪ್ರಸಿದ್ಧ ಸ್ಥಳವಾದ ತಲಕಾಡಿನ ಈ ಕ್ಷೇತ್ರದಲ್ಲಿ ಅಸ್ತಿಕೇರಿ ಮಠ ಹಲವಾರು ದಶಕಗಳಿಂದ ಸಾಮಾಜಿಕ ಸೇವೆ ಶರಣ ಪರಂಪರೆ ಜಾಗೃತಿ ಮೂಡಿಸುತ್ತಿದ್ದು ಯೋಗ ಹಾವು ಕಡಿತಕ್ಕೆ ವಿಶೇಷ ಔಷಧಿ ದಾಸೋಹ, ಶಿಕ್ಷಣ ಒಳಗೊಂಡಂತೆ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಡಾ. ಸಿದ್ಧ ಮಲ್ಲಿಕಾರ್ಜುನ ಸ್ವಾಮೀಜಿಗಳ ಪೂಜ್ಯ ಹಿರಿಯ ಗುರುಗಳು ಪ್ರಾರಂಭಿಸಿದ್ದು ಅಂದಿನಿಂದ ಡಾ.ಸಿದ್ದ ಮಲ್ಲಿಕಾರ್ಜುನ ಸ್ವಾಮೀಜಿಗಳು ನಿರಂತರವಾಗಿ ಸೇವೆ ಮಾಡುತ್ತಾ ಬರುತ್ತಿದ್ದಾರೆ ಈ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.


ಮಂಡ್ಯ ಜಿಲ್ಲಾ ರಾಷ್ಟೀಯ ಬಸವದಳದ ಅಧ್ಯಕ್ಷ ಹಿರಿಯ ವಕೀಲ ಎಂ. ಗುರುಪ್ರಸಾದ್ ಸ್ವಾಗತ ಕೋರಿ ಮಾತನಾಡಿ 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಸ್ವಾಮೀಜಿಗಳು ಈ ಮಠದಲ್ಲಿ ವಿವಿಧ ಕ್ಷೇತ್ರದ ಜನಸಾಮಾನ್ಯರಿಗೆ ಅನುಕೂಲವಾಗುವ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದ್ದು ನಿರಂತರವಾಗಿ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಸೇವೆ ಸಲ್ಲಿಸುವ ಡಾ.ಸಿದ್ದ ಮಲ್ಲಿಕಾರ್ಜುನ ಸ್ವಾಮೀಜಿಗಳಿಗೆ ಇನ್ನು ಹೆಚ್ಚು ಬೆಂಬಲವನ್ನು ಸ್ಥಳೀಯ ಭಕ್ತರು ನೀಡುವಂತೆ ಮನವಿ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ ಜಿಲ್ಲಾಧಿಕಾರಿ ಹಾಗೂ ಸದಾನಂದ ಆಶ್ರಮದ ಅಧ್ಯಕ್ಷರಾದ ವಿ. ಶಂಕರ್ ಅವರು ಮಾತನಾಡಿ ಪವಾಡ ಪುರುಷ ದತ್ತಾತ್ರೇಯ ರವರ ಸಾಧನೆ ಅಪಾರವಾದದ್ದು ನಾವು ಗುರುಗಳನ್ನು ಗೌರವಿಸಿದರೆ ಪ್ರತಿಯೊಬ್ಬ ಮನುಷ್ಯನಿಗೆ ವಿಶೇಷ ಜ್ಞಾನ, ಆಯಸ್ಸು, ಆರೋಗ್ಯ ವೃದ್ಧಿಸುತ್ತದೆ ನಾವು ಮಠ ಮಂದಿರಗಳ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವ ಮುಖಾಂತರ ನಾವು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು ಎಂದರು.

ಆಶೀರ್ವಚನ ನೀಡಿದ ತಲಕಾಡು ಹಸ್ತಿಕೇರಿ ಮಠದ ಪೀಠಾಧ್ಯಕ್ಷರಾದ ಪೂಜ್ಯ ಡಾ.ಸಿದ ಮಲ್ಲಿಕಾರ್ಜುನ ಸ್ವಾಮೀಜಿ ರವರು ಮಾತನಾಡಿ ಹಲವಾರು ದಶಕಗಳಿಂದ ಶ್ರೀಮಠಕ್ಕೆ ವಿವಿಧ ದಾನಿಗಳು ಆರ್ಥಿಕವಾಗಿ ಸೇವೆ ಸಲ್ಲಿಸುತ್ತಿದ್ದು ಅಂತವರ ಸಹಕಾರದಿಂದ ಮಠ ಇನ್ನು ಹೆಚ್ಚು ಹೆಚ್ಚು ಅಭಿವೃದ್ಧಿಯಾಗುತ್ತಿದೆ ಅಂತಹ ಮಹನೀಯರನ್ನು ಗುರುತಿಸಿ ಇಂದು ಶ್ರೀ ಕ್ಷೇತ್ರದಲ್ಲಿ ಗೌರವಿಸಿ ಶರಣು ಸಮರ್ಪಣೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲಾ ಭಕ್ತರು ಶ್ರೀ ಮಠಕ್ಕೆ ಇನ್ನು ಹೆಚ್ಚು ಹೆಚ್ಚು ಸೇವೆ ಮಾಡುವ ಮುಖಾಂತರ ಮಠವನ್ನು ತಾವುಗಳು ಅಭಿವೃದ್ಧಿಗೊಳಿಸು ವಂತೆ ಮನವಿ ಮಾಡಿದರು ಶ್ರೀಮಠ ಭಕ್ತರ ಮಠ ವಾಗಿದ್ದು ತಾವುಗಳು ನಿರಂತರವಾಗಿ ಮಠದ ಶ್ರೇಯಸಿಗೆ ಶ್ರಮಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ಹೇಮಾವತಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು, ಕುಂತೂರು ಮಠದ ಶಿವಪ್ರಭು ಮಹಾಸ್ವಾಮಿ, ನಿವೃತ ಅಧಿಕಾರಿ ಕೆ. ಎಚ್. ತಿಮ್ಮಯ್ಯ ಸೇರಿದಂತೆ ಅನೇಕ ಗಣ್ಯರು ಮಠಾಧೀಶ್ವರರು ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.

ಪೂಜ್ಯ ಪ್ರಕಾಶ್ ಗುರೂಜಿ ರವರು ಪ್ರಸ್ತಾವಿಕವಾಗಿ ಮಾತನಾಡಿ ಹಲವಾರು ದಶಕಗಳಿಂದ ಶ್ರೀಮಠ ನಡೆದು ಬಂದ ದಾರಿ ಹಾಗೂ ಪವಾಡಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ಶರಣ ನಾಗೇಶ್ ಮತ್ತು ತಂಡದವರಿಂದ ವೇದಘೋಷ ಜರುಗಿತು.

ಇದೇ ಸಂದರ್ಭದಲ್ಲಿ ಮಠದ ಅಭಿವೃದ್ಧಿಗೆ ಸಾಧನೆ ಮಾಡಿದ ಶರಣ ಎಸ್. ಬಿ. ಮರಿಯಪ್ಪ, ಶ್ರೀಮತಿ ಗಿರಿಜಾ ಶಾಂತರಾಮ್, ಜಮೀನ್ದಾರ್ ನಾಗರಾಜ ಗೌಡ, ಡಾಕ್ಟರ್ ಸತ್ಯ ಪ್ರಕಾಶ್, ಶ್ರೀಮತಿ ಆಶಾಲತಾ ಪ್ರಕಾಶ್, ಡಾ. ಪ್ರವೀಣ್ ಕುಮಾರ್, ಶ್ರೀಮತಿ ಜಗದಾಂಬ ಸದಾಶಿವಮೂರ್ತಿ, ಶ್ರೀಮತಿ ಮಂಜುಳಾ ಬಿ. ಮಹೇಶ್ ರವರಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳೆಯರಿಗೆ ವಸ್ತ್ರದಾನ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಬರವಣಿಗೆ ಸಾಮಗ್ರಿಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಹಿರಿಯ ವಕೀಲರಾದ ಶ್ರೀಕಂಠ ಪ್ರಸಾದ್, ಮಂಡ್ಯ ಲಿಂಗಾಯತ ವಿದ್ಯಾರ್ಥಿ ನಿಲಯದ ಹಿರಿಯಟ್ರಸ್ಟಿ ಮಲ್ಲಿಕಾರ್ಜುನಯ್ಯ, ಪೂಜ್ಯ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಪೂಜಾ ನಿಶ್ಚಲ ನಿರಂಜನ ದೇಶಿ ಕೇಂದ್ರ ಸ್ವಾಮೀಜಿ ದೊಡ್ಡಬಳ್ಳಾಪುರ, ಮುಡುಕುತೊರೆ ಕಲ್ಲು ಮಠದ ಶ್ರೀ ನಂದಿಕೇಶ್ವರ ಸ್ವಾಮೀಜಿ, ಬಿ.ಜಿ.ಪುರ ಹೊಸಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಹೊಸಮಠ ಸರಗೂರಿನ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಕುಂದೂರು ಶ್ರೀ ಬಸವರಾಜೇಂದ್ರ ಮಹಾಸ್ವಾಮಿಜಿ ಸೇರಿದಂತೆ ಅನೇಕ ಮಠಾಧೀಶರು ಭಕ್ತರು ಸ್ಥಳೀಯರು ಆಗಮಿಸಿದ್ದು ಕಾರ್ಯಕ್ರಮ ಯಶಸ್ವಿಗೊಂಡಿತು.

 

]]>