#Fake#Fakeddoctor#sangramatv – ಸಂಗ್ರಾಮ TV https://sangramatv.com News & Entertainment Thu, 15 Dec 2022 03:49:59 +0000 en-US hourly 1 https://wordpress.org/?v=6.7.1 https://sangramatv.com/wp-content/uploads/2022/12/cropped-124565656-32x32.png #Fake#Fakeddoctor#sangramatv – ಸಂಗ್ರಾಮ TV https://sangramatv.com 32 32 ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ನಕಲಿ ವೈದ್ಯರ ಹಾವಳಿ https://sangramatv.com/archives/604 Thu, 15 Dec 2022 03:49:59 +0000 https://sangramatv.com/?p=604 ಬೆಂಗಳೂರು: ಸಣ್ಣಪುಟ್ಟ ಜ್ವರ, ನೋವು, ಕಾಯಿಲೆ, ಯಾವುದೇ ಆರೋಗ್ಯ ಸಮಸ್ಯೆ ಇರಲಿ. ನಾವು ಮೊದಲು ಹೋಗುವುದೇ ವೈದ್ಯರ ಬಳಿ. ವೈದ್ಯೋ ನಾರಾಯಣೋ ಹರಿ ಎಂಬಂತೆ ನಮ್ಮ ಆರೋಗ್ಯ ಸಮಸ್ಯೆಗೆ ಮದ್ದು ಕೊಟ್ಟು ಹೊಸ ಜೀವನಕ್ಕೆ ದಾರಿ ತೋರಿಸುವ ವೈದ್ಯರು ನಕಲಿ(Fake Doctor) ಆದ್ರೆ ಹೇಗೆ? ದುಡ್ಡಿಗಾಗಿ ಫೇಕ್ ಸರ್ಟಿಫಿಕೇಟ್​ ಪಡೆದು ಚಿಕಿತ್ಸೆ ಕೊಡುವ ನಕಲಿ ವೈದ್ಯರಿಂದ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ನಕಲಿ ವೈದ್ಯನ ನಿರ್ಲಕ್ಷ್ಯಕ್ಕೆ ಮಹಿಳೆ ಶೋಚನೀಯ ಸ್ಥಿತಿಗೆ ತಲುಪಿದ್ದಾರೆ.

ಬೆಂಗಳೂರಿನ ಹೆಗ್ಗನಹಳ್ಳಿ, ಸಂಜೀವಿನಿ ನಗರದಲ್ಲಿದ್ದ ಸಹನಾ ಪಾಲಿ ಕ್ಲಿನಿಕ್​ ನಡೆಸುತ್ತಿದ್ದ ಮಾಲೀಕ ಕುಮಾರಸ್ವಾಮಿ, ನಕಲಿ ವೈದ್ಯ ನಾಗರಾಜ್​ನನ್ನು ರಾಜಗೋಪಾಲ್ ನಗರ ಪೊಲೀಸರು ಬಂಧಿಸಿದ್ದಾರೆ. ಕಳೆದ ಸೆಪ್ಟೆಂಬರ್ 25ರಂದು ಜ್ಯೋತಿ ಎಂಬ ಮಹಿಳೆ ಜ್ವರ ಎಂದು ಸಹನಾ ಪಾಲಿ ಕ್ಲಿನಿಕ್​ಗೆ ಚಿಕಿತ್ಸೆಗೆ ಹೋಗಿದ್ದರು. ಆಗ ನಕಲಿ ವೈದ್ಯ ನಾಗರಾಜ್ ಮಹಿಳೆಯ ಸೊಂಟಕ್ಕೆ ಇಂಜೆಕ್ಷನ್ ನೀಡಿದ್ದ. ಒಂದೇ ಜಾಗಕ್ಕೆ ಎರಡು‌ ಬಾರಿ ಇಂಜೆಕ್ಷನ್ ಚುಚ್ಚಿದ್ದ. ಆದಾಗಿ ಎರಡು ದಿನಕ್ಕೆ ಇಂಜೆಕ್ಷನ್ ಕೊಟ್ಟ ಜಾಗದಲ್ಲಿ ನೋವು ಶುರುವಾಗಿತ್ತು.  ನಂತರ ಇಂಜೆಕ್ಷನ್ ಕೊಟ್ಟ ಜಾಗ ಸಂಪೂರ್ಣ ಕಪ್ಪಾಗಲು ಶುರುವಾಗಿತ್ತು. ಇದರಿಂದ ಆತಂಕಗೊಂಡ ಜ್ಯೋತಿ ನೋವಿದೆ, ಊತವಿದೆ ಎಂದು ಮತ್ತೆ ಕ್ಲಿನಿಕ್​ಗೆ ಹೋಗಿದ್ದರು. ಆಗ ಹಚ್ಚಿಕೊಳ್ಳಲು ಕ್ರೀಮ್ ಒಂದನ್ನು ನೀಡಿ ನಕಲಿ ವೈದ್ಯ ನಾಗರಾಜ್ ಕಳಿಸಿದ್ದಾನೆ. ಆದರೆ ಅದು ಕಡಿಮೆಯಾಗದೆ ಇಂಜೆಕ್ಷನ್ ಕೊಟ್ಟಿದ್ದ ಜಾಗದಲ್ಲಿ ಕೀವು ಬರಲು ಶುರುವಾಗಿದೆ. ಈ ಬಗ್ಗೆ ಕೇಳಲು ಆಸ್ಪತ್ರೆಗೆ ಹೋದ್ರೆ ಪರಿಹಾರ ಕೊಡ್ತೇನೆ ಯಾರಿಗೂ ಈ ವಿಚಾರ ತಿಳಿಸಬೇಡಿ ಎಂದು ವೈದ್ಯ ನಾಗರಾಜ್ ಸವಣೂರ ಮಹಿಳೆಗೆ ಮನವಿ ಮಾಡಿದ್ದಾನೆ. ನಂತರ ಬೇರೊಂದು ಆಸ್ಪತ್ರೆಗೆ ಹೋದಾಗ ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದಾರೆ.

ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡ್ತಿದ್ದ ಜ್ಯೋತಿ, ನಕಲಿ ವೈದ್ಯ ನಾಗರಾಜ್ ನಿರ್ಲಕ್ಷ್ಯಕ್ಕೆ ಯಾತನೆ ಅನುಭವಿಸುತ್ತಿದ್ದಾರೆ. ಸದ್ಯ ಆಪರೇಷನ್ ಮಾಡಿದ್ರು ಕೂಡ ಸಮಸ್ಯೆ ಸರಿಯಾಗಿಲ್ಲ. ವೈದ್ಯ ನಾಗರಾಜ್ ಇಂಜೆಕ್ಷನ್ ಕೊಟ್ಟಿರುವ ಜಾಗದಲ್ಲಿ ಆಪರೇಷನ್ ಮಾಡಿ 8 ಒಲಿಗೆ ಹಾಕಿದ್ರು ಕೂಡ ಇನ್ನು ಕೀವು ತುಂಬಿಕೊಳ್ಳುತ್ತಿರೋದು ಜ್ಯೋತಿ ಆರೋಗ್ಯಕ್ಕೆ ಕುತ್ತುತಂದಿದೆ. ಸದ್ಯ ಆಸ್ಪತ್ರೆ ವೈದ್ಯ ನಾಗರಾಜ್, ಕ್ಲಿನಿಕ್ ‌ಮಾಲೀಕರಾದ ಕುಮಾರ ಸ್ವಾಮಿ ಹಾಗೂ ಡಾ ನಿವೇದಿತಾ ವಿರುದ್ದ ರಾಜಗೋಪಾಲ್ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ಎಫ್ಐಆರ್ ದಾಖಲಿಸಿಕೊಂಡು ವೈದ್ಯ ನಾಗರಾಜ್ ನನ್ನ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ನಾಗರಾಜ್ ವೈದ್ಯನೆ ಅಲ್ಲ ಅನ್ನೋದು ಬೆಳಕಿಗೆ ಬಂದಿದೆ. ನಾಗರಾಜ್ ಹಾಗೂ ಮಾಲೀಕ ಕುಮಾರಸ್ವಾಮಿ ಮಾತ ಕ್ಲಿನಿಕ್ ಮತ್ತು ಸಹಾನಾ ಪಾಲಿ ಕ್ಲಿನಿಕ್ ಎಂಬ ಎರಡು ಕ್ಲಿನಿಕ್​ಗಳನ್ನು ನಡೆಸುತ್ತಿದ್ದಾರೆ.

]]>