ರಾಮನಗರ – ಸಂಗ್ರಾಮ TV https://sangramatv.com News & Entertainment Thu, 02 Jul 2026 11:25:13 +0000 en-US hourly 1 https://wordpress.org/?v=7.0.2 https://sangramatv.com/wp-content/uploads/2022/12/cropped-124565656-32x32.png ರಾಮನಗರ – ಸಂಗ್ರಾಮ TV https://sangramatv.com 32 32 ಹಾರೋಹಳ್ಳಿ ತಾಲೂಕಿನಲ್ಲಿ ರಾಮನಗರ ಲೋಕಯುಕ್ತ ವತಿಯಿಂದ ಸಾರ್ವಜನಿಕ ಕುಂದು – ಕೊರತೆ ಸಭೆ, 22 ಅರ್ಜಿಗಳು ಸ್ವೀಕೃತ. https://sangramatv.com/archives/1366 Wed, 19 Feb 2025 16:43:00 +0000 https://sangramatv.com/?p=1366

ರಾಮನಗರ : ಜಿಲ್ಲೆ ಲೋಕಯುಕ್ತ ವತಿಯಿಂದ ಸಾರ್ವಜನಿಕ ಕುಂದು ಕೊರತೆ ಸಭೆಯನ್ನು ಹಾರೋಹಳ್ಳಿ ತಾಲ್ಲೂಕು ಕಛೇರಿ ಆವರಣ, ಹಾರೋಹಳ್ಳಿ ತಾಲೂಕ್ಕಿನಲ್ಲಿ ಆಯೋಜನೆ ಮಾಡಲಾಗಿತ್ತು.

ನೇರವಾಗಿ ಸಾರ್ವಜನಿಕರು ಅವರ ಸಮಸ್ಯೆಬಗ್ಗೆ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಕಂದಾಯ ಇಲಾಖೆಗೆ ಸಂಬಂಧ 12 ಅರ್ಜಿ, ಎ ಡಿ ಎಲ್ ಆರ್ ಸಂಬಂಧ 2 ಅರ್ಜಿ, ಪಿ ಡಬ್ಲ್ಯೂ ಡಿ ಇಲಾಖೆ ಸಂಬಂಧ 2 ಅರ್ಜಿ, ಪಟ್ಟಣ ಪಂಚಾಯತ್ ಹಾರೋಹಳ್ಳಿ ಸಂಬಂಧ 3 ಅರ್ಜಿ, ಯೋಜನಾ ಪ್ರಾಧಿಕಾರ ಸಂಬಂಧ 1 ಅರ್ಜಿ ಮತ್ತು ಇತರೆ 2 ಅರ್ಜಿ ಒಟ್ಟು 22 ಅರ್ಜಿಗಳು ಸ್ವೀಕೃತಿಯಾಗಿದೆ.

ಈ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳಾದ , ಎಸ್. ಪಿ ಸ್ನೇಹ, DYSP ಸುಧೀರ್, ಇನ್ಸ್ಪೆಕ್ಟರ್ ಅನಂತ್ ರಾಮ್, ಸಂದೀಪ್ , ಹನುಮಂತ ಕುಮಾರ್, ಹಾಗೂ ಸಿಬ್ಬಂದಿಗಳು ಹಾಜರಿದ್ದರು.

]]>
ರಾಮನಗರ : ಚನ್ನಪಟ್ಟಣದಲ್ಲಿ ಲೋಕಯುಕ್ತ ಬಲೆಗೆ ರೇಷ್ಮೆ ವಿಸ್ತರಣಾ ಅಧಿಕಾರಿ ಪರಮೇಶ್ ಮತ್ತು ರೇಷ್ಮೆ ನೀರಿಕ್ಷಕರು ಯೋಗೇಶ್. https://sangramatv.com/archives/1357 Mon, 17 Feb 2025 16:36:13 +0000 https://sangramatv.com/?p=1357 ಚನ್ನಪಟ್ಟಣ ತಾಲ್ಲೂಕಿನ ಸೊಗಾಲದೊಡ್ಡಿ ಗ್ರಾಮದ ಎಲ್ಲಪಾ ರವರ ದೂರಿನ ಮೇಲೆ ಇಂದು ರೇಷ್ಮೆ ವಿಸ್ತರಣಾ ಅಧಿಕಾರಿ ಪರಮೇಶ್ ಮತ್ತು ರೇಷ್ಮೆ ನೀರಿಕ್ಷಕರು ಯೋಗೇಶ್ ರನ್ನು ಲೋಕಯುಕ್ತ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಲ್ಲಪಾ ರವರ ರೇಷ್ಮೆ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲು 40000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ ಅಧಿಕಾರಿಗಳು ಮೊದಲನೇ ಕಂತಿನಲ್ಲಿ 5000 ರೂಪಾಯಿ ಗಳನ್ನು ಮೊದಲು ಪಡೆದಿರುತ್ತಾರೆ, ನಂತರ ಉಳಿಕೆ 15000 ರೂಪಾಯಿ ಹಣ ಪಡೆಯುವಾಗ ಆರೋಪಿ ಪರಮೇಶ್ ನೇರವಾಗಿ ಲೋಕಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುತ್ತರೆ, ನಂತರ ಮತ್ತೊಬ್ಬ ಆರೋಪಿ ಯೋಗೇಶ್ ರವರನ್ನು ಮನೆಯಲ್ಲಿ ಬಂಧಿಸಿ ಪ್ರಕರಣ ಧಾಖಲಿಸಿ ಕೊಳ್ಳಲಾಗಿದೆ.

ಡಿ ವೈ ಎಸ್ ಪಿ ಸುಧೀರ್ ರವರ ಉಸ್ತುವಾರಿಯಲ್ಲಿ, ಲೋಕಯುಕ್ತ ಎಸ್ ಪಿ ಸ್ನೇಹ ರವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಜರುಗಿದ್ದು ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಅನಂತರಮು, ಇನ್ಸ್ಪೆಕ್ಟರ್ ಸಂದೀಪ್, ಇನ್ಸ್ಪೆಕ್ಟರ್ ಹನುಮಂತಕುಮಾರ್, ಸಿಬ್ಬಂದಿಗಳಾದ ರಘು, ಶಿವಕುಮಾರ್ ಎಂ ಇ , ರಮ್ಯ, ಭಾಗ್ಯಮ್ಮ, ಗಂಗಮ್ಮ, ಮಲ್ಲಿಕಾರ್ಜುಜನ್, ಶಂಕರ್, ಶಿವಕುಮಾರ್ ಹಾಗೂ ಇತರರು ಹಾಜರಿದ್ದರು.

]]>
ರಾಮನಗರ : ನಕಲಿ ಲೋಕಯುಕ್ತ ಅಧಿಕಾರಿ ಪೊಲೀಸ್ ಬಲೆಗೆ. https://sangramatv.com/archives/1352 Mon, 17 Feb 2025 16:27:09 +0000 https://sangramatv.com/?p=1352

ರಾಮನಗರ ಜಿಲ್ಲೆಯ AC ಕಛೇರಿಗೆ ಲೋಕಯುಕ್ತ ಅಧಿಕಾರಿ ಎಂದು ಇಂದು ಮದ್ಯಾಹ್ನ 2:30 ರ ಸಮಯದಲ್ಲಿ ಜಾನ್ ಎಂಬ ವೆಕ್ತಿ ಬೇಟಿ ನೀಡಿರುತ್ತಾನೆ.

ಈ ಸಂದರ್ಭದಲ್ಲಿ ಆತನ ನಡುವಳಿಕೆಮೇಲೆ ಅನುಮಾನಗೊಂಡ AC ಯವರು ರಾಮನಗರ ಲೋಕಯುಕ್ತ ಕಛೇರಿಗೆ ಮಾಹಿತಿ ನೀಡಿ ನಂತರ ಪರಿಶೀಲಿಸಿದಾಗ ಆತ ನಕಲಿ ಲೋಕಯುಕ್ತ, ಹೆಸರು ಜಾನ್ ಎಂದು ತಿಳಿದುಬಂದಿದ್ದು ಆತನನ್ನು ಬಂಧಿಸಿ ಐಜೂರು ಠಾಣೆಯಲ್ಲಿ FIR ಧಾಖಲು ಮಾಡಲಾಗಿದೆ.

]]>
ಕಿಲ್ಕಾರಿ ಸೇವೆಯಿಂದ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ https://sangramatv.com/archives/1348 Wed, 22 Jan 2025 14:53:35 +0000 https://sangramatv.com/?p=1348 ರಾಮನಗರ :  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹ ಭಾಗಿತ್ವದಲ್ಲಿ ಕಾರ್ಯಗತಗೊಳಿಸಲಾಗಿರುವ ಕಿಲ್ಕಾರಿ ಮೊಬೈಲ್ ಕರೆ ಸೇವೆ ಕುರಿತು ಆಶಾ ಮೇಲ್ವಿಚಾರಕರಿಗೆ ಹಾಗೂ ಆಶಾ ಸುಗಮಕಾರರಿಗೆ ತರಬೇತಿಯನ್ನು ಆಯೋಜಿಸಲಾಗಿತ್ತು.

ಡಾ. ಅಶ್ವಿನಿ, ರಾಜ್ಯ ಕಿಲ್ಕಾರಿ ಸಂಯೋಜಕಿ ತರಬೇತಿಗೆ ಚಾಲನೆ ನೀಡಿ ನಂತರ ಮಾತನಾಡುತ್ತಾ ಕಿಲ್ಕಾರಿಯು ಭಾರತದಲ್ಲಿ ಮೊಬೈಲ್ ಆಧಾರಿತ ಆರೋಗ್ಯ ಸೇವೆಯಾಗಿದ್ದು, ಗರ್ಭಿಣಿಯರು ಮತ್ತು ತಾಯಂದಿರಿಗೆ ಉಚಿತ ಆಡಿಯೋ ಸಂದೇಶಗಳನ್ನು ಒದಗಿಸುತ್ತದೆ. ಭಾರತದ ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ೨೦೧೬ ರಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಿಲ್ಕಾರಿ ಕಾರ್ಯಕ್ರಮವು ಖಅಊ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮಹಿಳೆಯರಿಗೆ ವಾರಕ್ಕೆ ಒಂದು ಬಾರಿ (ಸಾಪ್ತಾಹಿಕ) ಆಡಿಯೋ ಸಂದೇಶಗಳನ್ನು ಕಳುಹಿಸುತ್ತದೆ. ಸಂದೇಶಗಳು ಪ್ರತಿ ತಾಯಿಯ ಗರ್ಭಾವಸ್ಥೆಯ ಅವಧಿಗೆ ಅನುಗುಣವಾಗಿದ್ದು ಗರ್ಭಿಣಿಗೆ ನಾಲ್ಕು ತಿಂಗಳಿನಿಂದ ಹಾಗೂ ಒಂದು ವರ್ಷದೊಳಗಿನ ಮಗುವಿರುವ ತಾಯಂದಿರಿಗೆ ದೂರವಾಣಿ ಸಂಖ್ಯೆ: ೦೧೨೪೪೪೫೧೬೬೦ ಇಂದ ಕರೆ ಬರುತ್ತದೆ. ಈ ಸೇವೆ ಸಂಪೂರ್ಣ ಉಚಿತವಾಗಿರುತ್ತದೆ. ಸಂದೇಶಗಳು ಗರ್ಭಾವಸ್ಥೆ, ಹೆರಿಗೆ ಮತ್ತು ಮಗುವಿನ ಆರೈಕೆಯಂತಹ ವಿಷಯಗಳನ್ನು ಒಳಗೊಂಡಿದೆ. ಕಾರ್ಯಕ್ರಮವು ಹೊಸ ಮತ್ತು ನಿರೀಕ್ಷಿತ ತಾಯಂದಿರನ್ನು ತಮ್ಮ ಶಿಶುಗಳಿಗೆ ಆರೋಗ್ಯಕರ ಆಯ್ಕೆಗಳನ್ನು ಮಾಡಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಕಿಲ್ಕಾರಿಯಿಂದಾಗುವ ಪ್ರಯೋಜನಗಳ ಕುರಿತು ಮಾತನಾಡುತ್ತಾ ಕಾರ್ಯಕ್ರಮವು ತಾಯಂದಿರು ಮತ್ತು ಕುಟುಂಬಗಳು ತಮ್ಮ ಶಿಶುಗಳಿಗೆ ಆರೋಗ್ಯಕರ ಆಯ್ಕೆಗಳನ್ನು ಮಾಡಲು ಸಹಾಯ ಮಾಡುತ್ತದೆ. ಕುಟುಂಬಗಳು ಆರೋಗ್ಯ ಸೇವೆಗಳನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ. ಸಾಂಕ್ರಾಮಿಕ ಸಮಯದಲ್ಲಿ ದೈಹಿಕ ಭೇಟಿಗಳು ಕಷ್ಟಕರವಾದಾಗ ಕಿಲ್ಕಾರಿ ಸೇವೆ ವಿಶೇಷವಾಗಿ ಉಪಯುಕ್ತವಾಗಿದೆ. ಕಿಲ್ಕಾರಿ ಸಂದೇಶವನ್ನು ಮೂರುಬಾರಿ ಸತತವಾಗಿ ಕರೆಯ ಮುಖಾಂತರ ತಲುಪಿಸಲು ಪ್ರಯತ್ನಿಸಲಾಗುತ್ತದೆ. ಒಂದುವೇಳೆ ಕರೆಯನ್ನು ಸ್ವೀಕರಿಸಲು ಲಭ್ಯವಾಗದಿದ್ದಲ್ಲಿ ಅಥವಾ ಅದನ್ನು ತಪ್ಪಿಸಿಕೊಂಡರೆ ಅಥವಾ ಯಾವುದೇ ಸಂದೇಶವನ್ನು ಮತ್ತೆ ಕೇಳಲು ಬಯಸಿದರೆ ನಿಮ್ಮ ನೊಂದಾಯಿತ ಮೊಬೈಲ್ ನಂಬರಿನಿAದ ೧೪೪೨೩ ಗೆ ಕರೆ ಮಾಡುವ ಮೂಲಕ ಪುನಃ ಸಂದೇಶವನ್ನು ನೀವು ಕೇಳಬಹುದು. ಸತತವಾಗಿ ಮೂರುಬಾರಿ ಕರೆಯನ್ನು ಸ್ವೀಕರಿಸದಿದ್ದರೆ ಕಿಲ್ಕಾರಿ ಸೇವೆ ಸ್ಥಗಿತಗೊಳ್ಳುತ್ತದೆ ಎಂದು ತಿಳಿಸಿದರು.

 

ಡಾ. ರಾಜು.ವಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಮಾತನಾಡುತ್ತಾ ತಾಯಿ ಮರಣ ಮತ್ತು ಶಿಶುಮರಣವನ್ನು ತಡೆಗಟ್ಟುವ ಸಲುವಾಗಿ ಕಿಲ್ಕಾರಿ ಮೊಬೈಲ್ ಸೇವೆಯನ್ನು ಜಾರಿಗೆ ತರಲಾಗಿದ್ದು. ಗರ್ಭಿಣಿ ಮತ್ತು ತಾಯಂದಿರಿಗೆ ವಹಿಸಬೇಕಾದ ಕಾಳಜಿ, ಲಸಿಕೆ, ಪೌಷ್ಠಿಕ ಆಹಾರ ಹಾಗೂ ಇತರೆ ತಪಾಸಣೆಗೆ ಸಹಾಯಕವಾಗುವ ನಿಟ್ಟಿನಲ್ಲಿ ದೇಶದಾದ್ಯಂತ ಎಲ್ಲಾ ಭಾಷೆಗಳಲ್ಲಿ ಕಿಲ್ಕಾರಿ ಮೊಬೈಲ್ ಕರೆ ಆರಂಭಿಸಲಾಗಿದೆ. ಈ ಸೇವೆಯನ್ನು ಪಡೆಯಲು ಗರ್ಭಿಣಿ ಸ್ತ್ರೀ ಆರ್.ಸಿ.ಹೆಚ್. ಪೋರ್ಟಲ್‌ನಲ್ಲಿ ನೊಂದಣಿ ಸಮಯದಲ್ಲಿ ಗರ್ಭಿಣಿಯ ಅಥವಾ ಕುಟುಂಬದ ಸದಸ್ಯರ ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗಿರುತ್ತದೆ. ಪ್ರತಿವಾರ ಕರೆ ಮಾಡುವ ಕಾಳಜಿವಹಿಸಲಾಗುವುದು. ಆದ್ದರಿಂದ ಪ್ರತಿಯೊಬ್ಬ ಗರ್ಭಿಣಿ ಹಾಗೂ ತಾಯಿಯು ಕಿಲ್ಕಾರಿ ಸೇವೆಯಿಂದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

 

ಶ್ರೀಮತಿ ಅರ್ಪಿತ, ಕೆ.ಜೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಾತನಾಡುತ್ತಾ ಕಿಲ್ಕಾರಿ ಸೇವೆಯನ್ನು ಪಡೆಯುವಂತೆ ಗರ್ಭಿಣಿ ಸ್ತ್ರೀಯರಿಗೆ ಮತ್ತು ತಾಯಂದಿರಿಗೆ ಲಸಿಕಾ ಸತ್ರದ ವೇಳೆ, ತಪಾಸಣಾ ಸಮಯದಲ್ಲಿ, ಪಿ.ಎಂ.ಎಸ್.ಎಂ .ಎ ಕಾರ್ಯಕ್ರಮದಲ್ಲಿ, ತಾಯಂದಿರ ಸಭೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರಚಾರ ಕೈಗೊಂಡು ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಸುದಾರಿಸುವಲ್ಲಿ ಕಿಲ್ಕಾರಿ ಸಹಾಯಕ ಎಂದು ತಿಳಿಸಿದರು.

 

ಈ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತ.ಕೆ.ಜೆ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ನಾಗೇಶ್, ಎಂ & ಇ ವ್ಯವಸ್ಥಾಪಕರಾದ ಶಿವಶಂಕರೆಗೌಡ, ಪ್ರಸಾದ್, ಗೀತಾ, ಆಶಾ ಮೇಲ್ವಿಚಾರಕರು ಹಾಗೂ ಆಶಾ ಸುಗಮಕಾರರು ಹಾಜರಿದ್ದರು.

]]>
ಎಂ.ಕೆ ದೊಡ್ಡಿ ಪೊಲೀಸರಿಂದ ಇಬ್ಬರು ಮನೆಗಳ್ಳರ ಬಂಧನ. https://sangramatv.com/archives/1345 Fri, 17 Jan 2025 16:42:57 +0000 https://sangramatv.com/?p=1345

ದಿನಾಂಕ:05.01.2025 ರಂದು ಮಧ್ಯಾಹ್ನ, ಎಂ.ಕೆ ದೊಡ್ಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಗೌಡಗೆರೆ ಗ್ರಾಮದ ಮನೆಯೊಂದರಲ್ಲಿ ಬೀಗ ಮುರಿದು, ಮನೆಯಲ್ಲಿದ್ದ ಚಿನ್ನದ ಒಡವೆಗಳು ಹಾಗೂ 10,000/- ರೂ ನಗದು ಹಣವನ್ನು ಕಳ್ಳತನ ಮಾಡಿರುವ ಬಗ್ಗೆ ಪಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಎಂ.ಕೆ ದೊಡ್ಡಿ ಪೊಲೀಸ್‌ ಠಾಣೆ ಮೊ.ಸಂ: 02/2025, ಕಲಂ 331 (3), 305 ಬಿ.ಎನ್.ಎಸ್‌ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಸದರಿ ಪ್ರಕರಣದಲ್ಲಿ ತನಿಖೆ ನಡೆಸಿ, ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ, ದಿನಾಂಕ: 11.01.2025 ರಂದು ಆರೋಪಿಯನ್ನು ಬಂಧಿಸಿ, ಆತನನ್ನು ವಿಚಾರಣೆ ಮಾಡಿ, ಕಳ್ಳತನ ಮಾಡಿದ್ದ 60 ಗ್ರಾಂ ಚಿನ್ನಾಭರಣಗಳನ್ನು ಅಮಾನತ್ತು ಪಡಿಸಿಕೊಂಡು, ಒಟ್ಟು 3 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಎಂ.ಕೆ ದೊಡ್ಡಿ ಪೊಲೀಸ್‌ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಯಶ್ವಸಿಯಾಗಿರುತ್ತಾರೆ.

ಪತ್ತೆಯಾದ ಪ್ರಕರಣಗಳು:

1. ಎಂ.ಕೆ ದೊಡ್ಡಿ ಪೊಲೀಸ್‌ ಠಾಣೆ ಮೊ.ಸಂ: 02/2025, ಕಲಂ 331 (3), 305 ಬಿ.ಎನ್.ಎಸ್‌.

2. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ : 215/2024 ಕಲಂ 305, 331(3) ಬಿ.ಎನ್.ಎಸ್‌.

3. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ : 119/2024 ಕಲಂ 457, 380 ಐ.ಪಿ.ಸಿ.

ದಿನಾಂಕ:10.01.2025 ರಂದು ಮಧ್ಯಾಹ್ನ, ಎಂ.ಕೆ ದೊಡ್ಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಮಾಕಳಿ ಗ್ರಾಮದ ಮನೆಯೊಂದರಲ್ಲಿ ಬೀಗ ಮುರಿದು, ಮನೆಯಲ್ಲಿದ್ದ ಚಿನ್ನದ ಒಡವೆಗಳು ಹಾಗೂ 63,000/- ರೂ ನಗದು ಹಣವನ್ನು ಕಳ್ಳತನ ಮಾಡಿರುವ ಬಗ್ಗೆ ಪಿರ್ಯಾದುದಾರರು ನೀಡಿದ ದೂರಿನ ಮೇರೆಗೆ, ಎಂ.ಕೆ ದೊಡ್ಡಿ ಪೊಲೀಸ್‌ ಠಾಣೆ ಮೊ.ಸಂ: 03/2025, ಕಲಂ 331 (3), 305 ಬಿ.ಎನ್.ಎಸ್‌ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

 

ಸದರಿ ಪ್ರಕರಣದಲ್ಲಿ ತನಿಖೆ ನಡೆಸಿ, ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ, ಆತನನ್ನು ಬಂಧಿಸಿ, ಕಳ್ಳತನ ಮಾಡಿದ್ದ 14.2 ಗ್ರಾಂ ಚಿನ್ನಾಭರಣ, 25,000/- ರೂ ನಗದು ಹಾಗೂ 1 ದ್ವಿಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಂಡು, ಪ್ರಕರಣವನ್ನು ಪತ್ತೆ ಮಾಡುವಲ್ಲಿ ಎಂ.ಕೆ ದೊಡ್ಡಿ ಪೊಲೀಸ್‌ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಯಶ್ವಸಿಯಾಗಿರುತ್ತಾರೆ.

]]>
185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕಾ ಕಾರ್ಯಕ್ಕೆ ಜಿಲ್ಲಾಡಳಿತ ಸಜ್ಜು: ಯಶವಂತ್ ವಿ. ಗುರುಕರ್ https://sangramatv.com/archives/1312 Thu, 21 Nov 2024 16:01:27 +0000 https://sangramatv.com/?p=1312 ರಾಮನಗರ : 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕಾ ಕಾರ್ಯಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದ್ದು, ನ. 23ರ ಶನಿವಾರ ರಾಮನಗರದ ಅರ್ಚಕರಹಳ್ಳಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ತಿಳಿಸಿದರು.

ಅವರು ನ.21ರ ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಅಂದು ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳ ಸಮಕ್ಷಮದಲ್ಲಿ ಬೆಳಿಗ್ಗೆ 6.45ಕ್ಕೆ ಮತಯಂತ್ರಗಳನ್ನಿಟ್ಟಿರುವ ಸ್ಟಾçಂಗ್ ರೂಂ ಅನ್ನು ತೆರೆಯಲಾಗುವುದು. 7.30ಕ್ಕೆ ಅಂಚೆ ಮತಗಳ ಎಣಿಕೆ ಕಾರ್ಯ ಪ್ರಾರಂಭಿಸಲಾಗುವುದು, ಬೆಳಿಗ್ಗೆ 8 ಗಂಟೆಗೆ ಇವಿಎಂ ಯಂತ್ರಗಳ ಮತ ಎಣಿಕೆ ಆರಂಭವಾಗಲಿದೆ, ಒಟ್ಟಾರೆ 20 ಸುತ್ತುಗಳಲ್ಲಿ ಮತ ಎಣಿಕಾ ಕಾರ್ಯ ನಡೆಯಲಿದೆ ಎಂದವರು ಮಾಹಿತಿ ನೀಡಿದರು.

ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 3 ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಒಂದು ಕೊಠಡಿಯಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ. ಇನ್ನೆರಡು ಕೊಠಡಿಗಳಲ್ಲಿ ಇವಿಎಂ ಮತ ಯಂತ್ರಗಳ ಮತ ಎಣಿಕೆ ನಡೆಯಲಿದೆ, 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,06,886 (ಶೇ.88.81) ಮತಗಳು ಚಲಾವಣೆಗೊಂಡಿದೆ. 14 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿಯೊಂದು ಟೇಬಲ್‌ಗಳಿಗೂ ಎರಡು ರಾಜಕೀಯ ಪಕ್ಷದ ಏಜೆಂಟರುಗಳಿಗೆ ಪಾಸ್ ನೀಡಲಾಗಿದೆ. ಪಕ್ಷೇತರದ ಏಜೆಂಟರುಗಳಿಗೂ ಸಹ ಪಾಸ್‌ಗಳನ್ನು ನೀಡಲಾಗಿದೆ. ಟೇಬಲ್‌ವೈಸ್ ರಾಂಡಮ್ ಆಗಿ 27 ಜನರಿಗೆ ಪಾಸ್‌ಗಳನ್ನು ನೀಡಲಾಗಿದೆ ಎಂದರು.

ಮತ ಎಣಿಕೆಗೆ 69 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 250 ಜನ ಏಜೆಂಟರುಗಳು ಇರುತ್ತಾರೆ. ಬಿಗಿಯಾದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ, ಅಂದು ಜಿಲ್ಲೆಯಾದ್ಯಂತ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಹಾಗೂ 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಬಿನೋಯ್ ಗೋಷ್ಠಿಯಲ್ಲಿದ್ದರು.



]]>
NDA ಸಮಾವೇಶದಲ್ಲಿ ನೆಲಕ್ಕೆ ಹಣೆ ಇಟ್ಟು ಮನವಿ ಮಾಡಿದ ನಿಖಿಲ್ https://sangramatv.com/archives/1306 Mon, 11 Nov 2024 11:36:14 +0000 https://sangramatv.com/?p=1306 ಚನ್ನಪಟ್ಟಣ : ತಾಲ್ಲೂಕಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದ ಬೃಹತ್ ಬಹಿರಂಗ ಸಮಾವೇಶದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ದೀರ್ಘದಂಡ ನಮಸ್ಕರಿಸಿ ಭಾಷಣ ಮಾಡಿದರು

NDA ಬೃಹತ್ ಸಮಾವೇಶದಲ್ಲಿ ಮಾತನಾಡಿದ ನಿಖಿಲ್ ಅವರು, ಈ ಚುನಾವಣೆ ನನ್ನ ಜೀವನದ ಅಗ್ನಿ ಪರೀಕ್ಷೆ…ಯಾವ ಪಾತ್ರ ಮಾಡ್ತೀಯಾ ಅಂತ ಜನ ಕೇಳ್ತಾರೆ. ನನಗೆ ಜಾತಿ ಮುಖ್ಯ ಅಲ್ಲ.ನನಗೆ ಗೊತ್ತಿರೋದು ಮನುಷ್ಯತ್ವ ಒಂದೇ ಅಂತ ತಿಳಿಸಿದರು.

*ಯೋಗ್ಯತೆ ಸಂಪಾದನೆ ಮುಖ್ಯ*

 

ನಾನು ನಿಮ್ಮಲ್ಲಿ ಪ್ರಾರ್ಥನೆ ಮಾಡುತ್ತೇನೆ,ಇದು ಪ್ರಾದೇಶಿಕ ಪಕ್ಷದ ಪ್ರಶ್ನೆ.. ಇದು ಎನ್ ಡಿಎ ಕುಟುಂಬದ ಗೌರವದ ಪ್ರಶ್ನೆ..ಭೂಮಿಗೆ ಬಂದ ಮೇಲೆ ಯೋಗ್ಯತೆ ಸಂಪಾದನೆ ಮಾತ್ರ ಮುಖ್ಯ..ಒಂದು ಅವಕಾಶ ಮಾಡಿಕೊಡಿ.ನಿಮ್ಮ ಸೇವೆ ಮಾಡುವುದಕ್ಕೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸಮಾವೇಶದಲ್ಲಿ ಮನವಿ ಮಾಡಿದರು.

 

ಕ್ಷೇತ್ರ ತೆರವಾದ ನಂತರ ಬದಲಾವಣೆ ಬಹಳ ಆಗಿವೆ..ನನ್ನ ಪಾಲಿಗೆ ಈ ಚುನಾವಣೆ ನಿರ್ಣಯಕ..ಎರಡು ಸೋಲಿಗೆ ಎದೆಗುಂದಿಲ್ಲ, ಜನಾಭಿಪ್ರಾಯ ನನ್ನ ಮೇಲೆ ಇತ್ತು. ಕಾಂಗ್ರೆಸ್ ಕುತಂತ್ರದಿಂದ ನಾನು ಸೋತೀರಬಹುದು ಆದರೆ ಫಲಿತಾಂಶ ಬೇರೆ ಆಯ್ತು..ನನ್ನ ಸೋಲಿಗೆ ಕಾರಣ ಚರ್ಚೆ ಬೇಡ ಎಂದು ತಿಳಿಸಿದರು.

*ಯಾವುದೇ ಆಮಿಷಗಳಿಗೆ ಬಲಿಯಾಗಲ್ಲ*

ಕಾರ್ಯಕರ್ತರ ಬಯಕೆಯಂತೆ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದ್ದೇನೆ. ಯಾವ ಕಾರಣಕ್ಕೂ ಕ್ಷೇತ್ರದ ಜನ ಕೂಪನ್ ಗೆ ಬೆಲೆ ನೀಡಲ್ಲ. ಆಮಿಷಗಳಿಗೆ ಬಲಿಯಾಗಲ್ಲ ನಮ್ಮ ಚನ್ನಪಟ್ಟಣ ಜನ ಎಂದರು.

ನಾಮಪತ್ರ ಸಲ್ಲಿಸಿ ಪ್ರಚಾರ ಆರಂಭ ಮಾಡಿದಾಗ ಭಾವನಾತ್ಮಕ ವಾಗಿ ಮಾತಾಡಿದೆ…ನಾನು ಭಾವನೆ ಇರುವ ವ್ಯಕ್ತಿ. ಕಳೆದ 16 ದಿನಗಳಲ್ಲಿ ಬಹಳ ಆಶೀರ್ವಾದ ಪಡೆದಿದ್ದೇನೆ. ನನಗೆ ಆಶೀರ್ವಾದ ಮಾಡಿ ಒಂದು ಪರೀಕ್ಷೆಮಾಡಿ ಈ ಪರೀಕ್ಷೆಯಲ್ಲಿ ನಾನು ಗೆದ್ದರೆ ನೀವೇ ಪರೀಕ್ಷಿಸಿ ಎಂದು ಮನವಿ ಮಾಡಿದರು.

]]>
ಸುಗಂಧ ಸಂಗೀತ ಕಾರ್ಯಕ್ರಮ ಸಂಪನ್ನ https://sangramatv.com/archives/1303 Mon, 04 Nov 2024 13:37:08 +0000 https://sangramatv.com/?p=1303 ರಾಮನಗರ, ನ. 04 : ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ, ಕೇಂದ್ರ ಸಂಸ್ಕೃತಿ ಸಚಿವಾಲಯ, ಪ್ರವಾಸೋದ್ಯಮ ಇಲಾಖೆ ಮತ್ತು ಸಂಗೀತ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ರಾಜ್ಯದ ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯ ಆಚರಣೆಯಾದ ಮೈಸೂರು ಸಂಗೀತ ಸುಗಂಧ ಉತ್ಸವವನ್ನು-2024ರ ಕಾರ್ಯಕ್ರಮವನ್ನು ನ.8 ರಿಂದ 10 ರವರೆಗೆ ಮೈಸೂರಿನಲ್ಲಿ ಆಯೋಜಿಸಲಾಗುತ್ತಿದೆ.

ಈ ಕಾರ್ಯಕ್ರಮದ ಅಂಗವಾಗಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಶ್ರೀ ಅಪ್ರಮೇಯ ಸ್ವಾಮಿ ದೇವಾಲಯದಲ್ಲಿ ಇತ್ತೀಚೆಗೆ ಖ್ಯಾತ ಗಾಯಕ ಟಿ.ವಿ. ರಾಮಪ್ರಸಾದ್ ಮತ್ತು ತಂಡದವರಿAದ ಸುಗಂಧ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರವಿ ಕುಮಾರ್ ಎಚ್.ಡಿ., ಭಾರತೀಯ ಪ್ರವಾಸೋದ್ಯಮ ಮಂತ್ರಾಲಯ ಅಧಿಕಾರಿ ಚಂದ್ರನಾಯ್ಕ, ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧಿಕಾರಿ ವಿಜಯ್ ಸಿಂಗ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

]]>
ಎಚ್.ಡಿ.ದೇವೇಗೌಡರ ದೂರದೃಷ್ಟಿಯ ಫಲವಾಗಿ ನಿರ್ಮಾಣಗೊಂಡ ದೇವೇಗೌಡ ಬ್ಯಾರೇಜ್ ಇಲ್ಲದಿದ್ದರೆ, ಈ ಕ್ಷೇತ್ರ ನೀರಾವರಿ ಆಗುತ್ತಿರಲಿಲ್ಲ ಎಸ್.ಸಿ.ಎಸ್.ಟಿ. ಜೆಡಿಎಸ್ ರಾಜ್ಯಾಧ್ಯಕ್ಷ ಕೆ,ಅನ್ನದಾನಿ: https://sangramatv.com/archives/1300 Fri, 01 Nov 2024 13:42:58 +0000 https://sangramatv.com/?p=1300 ದೇಶದ ಮಾಜಿಪ್ರದಾನಿ ಎಚ್.ಡಿ.ದೇವೇಗೌಡರ ದೂರದೃಷ್ಟಿಯ ಫಲವಾಗಿ ನಿರ್ಮಾಣಗೊಂಡ ದೇವೇಗೌಡ ಬ್ಯಾರೇಜ್ ಇಲ್ಲದಿದ್ದರೆ, ಈ ಕ್ಷೇತ್ರ ನೀರಾವರಿ ಆಗುತ್ತಿರಲಿಲ್ಲ ಎಂದು,ಮಳವಳ್ಳಿ ಮಾಜಿ ಶಾಸಕ ಹಾಗೂ ಎಸ್.ಸಿ.ಎಸ್.ಟಿ. ಜೆಡಿಎಸ್ ರಾಜ್ಯಾಧ್ಯಕ್ಷ ಕೆ,ಅನ್ನದಾನಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     ಅವರು ನಗರದ  ಜೆಡಿಎಸ್ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ,೧೯೯೬ರಲ್ಲಿ ಇಗ್ಗಲೂರು ಬಳಿಯಲ್ಲಿ ಮಾಜಿಪ್ರಧಾನಿ ದೇವೇಗೌಡರವರ ಬ್ಯಾರೇಜ್ ನಿರ್ಮಾಣವಾಗಬೇಕಾದರೆ,ಈ ಕ್ಷೇತ್ರದ ಮಾಜಿ ಶಾಸಕರಾಗಿ ಸಚಿವರಾಗಿದ್ದ ದಿವಂಗತ ವರದೇಗೌಡರವರ ಕೊಡುಗೆಯನ್ನು ಇಲ್ಲಿ ಮರೆಯುವಂತಿಲ್ಲ ಎಂದು ವರದೇಗೌಡರ ಬಗ್ಗೆ ಗುಣಗಾನ ಮಾಡಿದರು.

      ಕ್ಷೇತ್ರದ ನೀರಾವರಿಯನ್ನು ನಾನು ಮಾಡಿರುವುದಾಗಿ ಹೇಳಿಕೊಂಡು ಕ್ಷೇತ್ರದಲ್ಲಿ ಮತಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ರವರಿಗೆ ಇದ್ಯಾವುದು ಅರಿವಿಲ್ಲವೇ, ಶಿಂಷಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣವಾಗದಿದ್ದರೇ ನೀವು ಯಾವ ಕೆರೆಗೆ ನೀರು ಬಿಡುತ್ತಿದ್ದೀರಿ ಎಂದು ಟೀಕಾ ಪ್ರಹಾರ ನಡೆಸಿದರು.

     ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ,ಚನ್ನಪಟ್ಟಣ,ಮಾಗಡಿ ಹಾಗೂ ರಾಮನಗರವನ್ನು ಶಾಸ್ವತ ನೀರಾವರಿ ಮಾಡುವ ಉದ್ದೇಶದಿಂದ ಸತ್ತೇಗಾಲ ನೀರಾವರಿ ಯೋಜನೆಯನ್ನು ೫೪೦ ಕೋಟಿರೂ ವೆಚ್ಚದಲ್ಲಿ ಪ್ರಾರಂಭ ಮಾಡಿ ಈಗಾಗಲೇ ಈ ಯೋಜನೆ ಪೂರ್ಣಗೊಂಡಿದೆ, ಇದರಿಂದ ಕಣ್ವಾ ನದಿ, ವೈಜಿ ಗುಡ್ಡ ಹಾಗೂ ಮಂಚನಬಲೆಗೆ ನೀರು ಹರಿಸುವುದಕ್ಕೆ ಈ ಯೋಜನೆ ಸಹಕಾರಿಯಾಗಿದೆ ಎಂದರು.

     ಈ ನೆಲದಲ್ಲಿ ದಲಿತ ಸಮುದಾಯಕ್ಕೆ ಶತ್ರು ಪಕ್ಷವಿದ್ದರೇ ಅದು ಕಾಂಗ್ರೆಸ್ ಪಕ್ಷ ಎಂಬುದರಲ್ಲಿ ಅನುಮಾನವೇ ಇಲ್ಲ, ಸ್ವಾತಂತ್ರ ಪೂರ್ವದಿಂದಲೂ ದಲಿತ ಸಮುದಾಯವನ್ನು ಶೋಷಣೆ ಮಾಡುತ್ತಲೇ ಬಂದ ಪಕ್ಷ ಕಾಂಗ್ರೆಸ್, ಭವ್ಯ ಭಾರತದ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್‌ರವರ ಜೀವಿತ ಅವಧಿಯಲ್ಲಿಯೂ ಅವರನ್ನು ಪ್ರತಿ ಹಂತಹಂತದಲ್ಲಿಯೂ ಕಾಡಿದ ಕಾಂಗ್ರೆಸ್ ಅವರ ಸಾವಿನಲ್ಲೂ ರಾಜಕಾರಣವನ್ನು ಮಾಡಿದರೂ ಈಂತಹ ಪಕ್ಷ ನಮ್ಮ ದಲಿತ ಸಮೂದಾಯಕ್ಕೆ ಬೇಕೇ ಎಂದು ಕಾಂಗ್ರೆಸ್‌ಪಕ್ಷದ ಬಗ್ಗೆ ಟೀಕಾ ಪ್ರಹಾರ ನಡೆಸಿದರು.

       ಎದುರಾಗಿರುವ ಚನ್ನಪಟ್ಟಣ ಉಪಚುನವಣೆಯಲ್ಲಿ ಎನ್.ಡಿ.ಎ.ಅಭ್ಯರ್ಥಿಯಾಗಿರುವ ನಿಖಿಲ್‌ಕುಮಾರಸ್ವಾಮಿರವರನ್ನು ಕ್ಷೇತ್ರದ ದಲಿತ ಸಮುದಾಯ ಬೆಂಬಲಿಸಿ ಈ ಭಾರಿ ಅವರನ್ನು ಶಾಸಕರನ್ನಾಗಿ ಮಾಡಬೇಕಾದ ಜಾವಬ್ದಾರಿ ನಮ್ಮ ಮೇಲಿದೆ ಎಂದು ತಮ್ಮ ಮನವಿಯನ್ನು ಮಾಡಿದರು.

   ಪತ್ರಿಕಾ ಗೋಷ್ಟಿಯಲ್ಲಿ ಎಸ್.ಸಿ.ಎಸ್.ಟಿ.ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೂಡ್ಲೂರು ಸಿದ್ದರಾಮು, ಜೆ.ಡಿ.ಎಸ್.ಎಸ್.ಸಿ.ಎಸ್.ಟಿ.ಘಟಕದ ಪ್ರಧಾನಕಾರ್ಯಧರ್ಶಿ ಕೆಂಗಲ್‌ಮೂರ್ತಿ, ಪ್ರಥಮದರ್ಜೆ ಗುತ್ತಿಗೆದಾರ ದ್ಯಾವಪಟ್ಟಣ ಮಲ್ಲೇಶ್, ಎಸ್.ಸಿ.ಎಸ್.ಟಿ ಘಟಕದ ನಗರ ಅಧ್ಯಕ್ಷ ಕೋಟೆ ಶ್ರೀನಿವಾಸ್, ಮಳೂರು ಪಟ್ಟಣ ಮಲ್ಲೇಶ್,ಮಂಗಳವಾರ ಪೇಟೆ ಸುನೀಲ್,ಕೃಷ್ಣಾಪುರ ಸಿದ್ದಪ್ಪ, ಎಸ್.ಎಂ.ಹಳ್ಳಿ ಸುನೀತಾ, ಮಹಾಲಕ್ಷ್ಮಿ ಹಾಗೂ ಹಲವಾರು ಮುಖಂಡರು ಹಾಜರಿದ್ದರು.



]]>
ಏ.9 ಮಾಗಡಿಯ ತಿರುಮಲೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಜಾತ್ರಾ/ಬ್ರಹ್ಮರಥೋತ್ಸವ : ಶಿವಾನಂದ ಮೂರ್ತಿ https://sangramatv.com/archives/1284 Thu, 07 Mar 2024 13:02:55 +0000 https://sangramatv.com/?p=1284 ರಾಮನಗರ, ಮಾ 07 :

ಮಾಗಡಿ ಟೌನಿನ ತಿರುಮಲೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ 2024ನೇ ಸಾಲಿನ ಜಾತ್ರಾ/ಬ್ರಹ್ಮರಥೋತ್ಸವವು ಏಪ್ರಿಲ್ 9 ರಿಂದ ಪ್ರಾರಂಭವಾಗಿ ಮೇ 8ರ ವರೆಗೆ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಾತ್ರಾ ಸಂದರ್ಭದಲ್ಲಿ ವಿದ್ಯುತ್‌ನಲ್ಲಿ ಯಾವುದೇ ಆಡಚಣೆಯಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಕೈಗೊಳ್ಳಬೇಕು ಹಾಗೂ ಯಾವುದೇ ಅವಘಡ ಸಂಭವಿಸದoತೆ ಅಗ್ನಿಶಾಮಕ ದಳ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಾತ್ರಾ/ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ವಿದ್ಯುತ್ ದೀಪಾಲಂಕಾರ ಮಾಡುವಂತೆ ಸಂಬoಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಆರೋಗ್ಯ ಇಲಾಖೆ ವತಿಯಿಂದ ಅಂಬ್ಯುಲೆನ್ಸ್ ವ್ಯವಸ್ಥೆ ಮತ್ತು ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಬೇಕು ಹಾಗೂ ರಾಸುಗಳಿಗೆ ಚಿಕಿತ್ಸೆ ನೀಡಲು ಪಶುಪಾಲನಾ ಇಲಾಖೆ ವತಿಯಿಂದ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಬೇಕು ಎಂದು ತಿಳಿಸಿದರು.

ಆಯಾ ಇಲಾಖೆಗಳಿಗೆ ವಹಿಸಿಕೊಟ್ಟ ಕಾರ್ಯಕ್ರಮದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನೆರವೇರಿಸಬೇಕು ಎಂದರು.

ಸಭೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.



]]>