ರಾಜ್ಯ – ಸಂಗ್ರಾಮ TV https://sangramatv.com News & Entertainment Wed, 22 Jan 2025 14:55:17 +0000 en-US hourly 1 https://wordpress.org/?v=7.0 https://sangramatv.com/wp-content/uploads/2022/12/cropped-124565656-32x32.png ರಾಜ್ಯ – ಸಂಗ್ರಾಮ TV https://sangramatv.com 32 32 ಕಿಲ್ಕಾರಿ ಸೇವೆಯಿಂದ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ https://sangramatv.com/archives/1348 Wed, 22 Jan 2025 14:53:35 +0000 https://sangramatv.com/?p=1348 ರಾಮನಗರ :  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹ ಭಾಗಿತ್ವದಲ್ಲಿ ಕಾರ್ಯಗತಗೊಳಿಸಲಾಗಿರುವ ಕಿಲ್ಕಾರಿ ಮೊಬೈಲ್ ಕರೆ ಸೇವೆ ಕುರಿತು ಆಶಾ ಮೇಲ್ವಿಚಾರಕರಿಗೆ ಹಾಗೂ ಆಶಾ ಸುಗಮಕಾರರಿಗೆ ತರಬೇತಿಯನ್ನು ಆಯೋಜಿಸಲಾಗಿತ್ತು.

ಡಾ. ಅಶ್ವಿನಿ, ರಾಜ್ಯ ಕಿಲ್ಕಾರಿ ಸಂಯೋಜಕಿ ತರಬೇತಿಗೆ ಚಾಲನೆ ನೀಡಿ ನಂತರ ಮಾತನಾಡುತ್ತಾ ಕಿಲ್ಕಾರಿಯು ಭಾರತದಲ್ಲಿ ಮೊಬೈಲ್ ಆಧಾರಿತ ಆರೋಗ್ಯ ಸೇವೆಯಾಗಿದ್ದು, ಗರ್ಭಿಣಿಯರು ಮತ್ತು ತಾಯಂದಿರಿಗೆ ಉಚಿತ ಆಡಿಯೋ ಸಂದೇಶಗಳನ್ನು ಒದಗಿಸುತ್ತದೆ. ಭಾರತದ ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ೨೦೧೬ ರಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಿಲ್ಕಾರಿ ಕಾರ್ಯಕ್ರಮವು ಖಅಊ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮಹಿಳೆಯರಿಗೆ ವಾರಕ್ಕೆ ಒಂದು ಬಾರಿ (ಸಾಪ್ತಾಹಿಕ) ಆಡಿಯೋ ಸಂದೇಶಗಳನ್ನು ಕಳುಹಿಸುತ್ತದೆ. ಸಂದೇಶಗಳು ಪ್ರತಿ ತಾಯಿಯ ಗರ್ಭಾವಸ್ಥೆಯ ಅವಧಿಗೆ ಅನುಗುಣವಾಗಿದ್ದು ಗರ್ಭಿಣಿಗೆ ನಾಲ್ಕು ತಿಂಗಳಿನಿಂದ ಹಾಗೂ ಒಂದು ವರ್ಷದೊಳಗಿನ ಮಗುವಿರುವ ತಾಯಂದಿರಿಗೆ ದೂರವಾಣಿ ಸಂಖ್ಯೆ: ೦೧೨೪೪೪೫೧೬೬೦ ಇಂದ ಕರೆ ಬರುತ್ತದೆ. ಈ ಸೇವೆ ಸಂಪೂರ್ಣ ಉಚಿತವಾಗಿರುತ್ತದೆ. ಸಂದೇಶಗಳು ಗರ್ಭಾವಸ್ಥೆ, ಹೆರಿಗೆ ಮತ್ತು ಮಗುವಿನ ಆರೈಕೆಯಂತಹ ವಿಷಯಗಳನ್ನು ಒಳಗೊಂಡಿದೆ. ಕಾರ್ಯಕ್ರಮವು ಹೊಸ ಮತ್ತು ನಿರೀಕ್ಷಿತ ತಾಯಂದಿರನ್ನು ತಮ್ಮ ಶಿಶುಗಳಿಗೆ ಆರೋಗ್ಯಕರ ಆಯ್ಕೆಗಳನ್ನು ಮಾಡಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಕಿಲ್ಕಾರಿಯಿಂದಾಗುವ ಪ್ರಯೋಜನಗಳ ಕುರಿತು ಮಾತನಾಡುತ್ತಾ ಕಾರ್ಯಕ್ರಮವು ತಾಯಂದಿರು ಮತ್ತು ಕುಟುಂಬಗಳು ತಮ್ಮ ಶಿಶುಗಳಿಗೆ ಆರೋಗ್ಯಕರ ಆಯ್ಕೆಗಳನ್ನು ಮಾಡಲು ಸಹಾಯ ಮಾಡುತ್ತದೆ. ಕುಟುಂಬಗಳು ಆರೋಗ್ಯ ಸೇವೆಗಳನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ. ಸಾಂಕ್ರಾಮಿಕ ಸಮಯದಲ್ಲಿ ದೈಹಿಕ ಭೇಟಿಗಳು ಕಷ್ಟಕರವಾದಾಗ ಕಿಲ್ಕಾರಿ ಸೇವೆ ವಿಶೇಷವಾಗಿ ಉಪಯುಕ್ತವಾಗಿದೆ. ಕಿಲ್ಕಾರಿ ಸಂದೇಶವನ್ನು ಮೂರುಬಾರಿ ಸತತವಾಗಿ ಕರೆಯ ಮುಖಾಂತರ ತಲುಪಿಸಲು ಪ್ರಯತ್ನಿಸಲಾಗುತ್ತದೆ. ಒಂದುವೇಳೆ ಕರೆಯನ್ನು ಸ್ವೀಕರಿಸಲು ಲಭ್ಯವಾಗದಿದ್ದಲ್ಲಿ ಅಥವಾ ಅದನ್ನು ತಪ್ಪಿಸಿಕೊಂಡರೆ ಅಥವಾ ಯಾವುದೇ ಸಂದೇಶವನ್ನು ಮತ್ತೆ ಕೇಳಲು ಬಯಸಿದರೆ ನಿಮ್ಮ ನೊಂದಾಯಿತ ಮೊಬೈಲ್ ನಂಬರಿನಿAದ ೧೪೪೨೩ ಗೆ ಕರೆ ಮಾಡುವ ಮೂಲಕ ಪುನಃ ಸಂದೇಶವನ್ನು ನೀವು ಕೇಳಬಹುದು. ಸತತವಾಗಿ ಮೂರುಬಾರಿ ಕರೆಯನ್ನು ಸ್ವೀಕರಿಸದಿದ್ದರೆ ಕಿಲ್ಕಾರಿ ಸೇವೆ ಸ್ಥಗಿತಗೊಳ್ಳುತ್ತದೆ ಎಂದು ತಿಳಿಸಿದರು.

 

ಡಾ. ರಾಜು.ವಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಮಾತನಾಡುತ್ತಾ ತಾಯಿ ಮರಣ ಮತ್ತು ಶಿಶುಮರಣವನ್ನು ತಡೆಗಟ್ಟುವ ಸಲುವಾಗಿ ಕಿಲ್ಕಾರಿ ಮೊಬೈಲ್ ಸೇವೆಯನ್ನು ಜಾರಿಗೆ ತರಲಾಗಿದ್ದು. ಗರ್ಭಿಣಿ ಮತ್ತು ತಾಯಂದಿರಿಗೆ ವಹಿಸಬೇಕಾದ ಕಾಳಜಿ, ಲಸಿಕೆ, ಪೌಷ್ಠಿಕ ಆಹಾರ ಹಾಗೂ ಇತರೆ ತಪಾಸಣೆಗೆ ಸಹಾಯಕವಾಗುವ ನಿಟ್ಟಿನಲ್ಲಿ ದೇಶದಾದ್ಯಂತ ಎಲ್ಲಾ ಭಾಷೆಗಳಲ್ಲಿ ಕಿಲ್ಕಾರಿ ಮೊಬೈಲ್ ಕರೆ ಆರಂಭಿಸಲಾಗಿದೆ. ಈ ಸೇವೆಯನ್ನು ಪಡೆಯಲು ಗರ್ಭಿಣಿ ಸ್ತ್ರೀ ಆರ್.ಸಿ.ಹೆಚ್. ಪೋರ್ಟಲ್‌ನಲ್ಲಿ ನೊಂದಣಿ ಸಮಯದಲ್ಲಿ ಗರ್ಭಿಣಿಯ ಅಥವಾ ಕುಟುಂಬದ ಸದಸ್ಯರ ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗಿರುತ್ತದೆ. ಪ್ರತಿವಾರ ಕರೆ ಮಾಡುವ ಕಾಳಜಿವಹಿಸಲಾಗುವುದು. ಆದ್ದರಿಂದ ಪ್ರತಿಯೊಬ್ಬ ಗರ್ಭಿಣಿ ಹಾಗೂ ತಾಯಿಯು ಕಿಲ್ಕಾರಿ ಸೇವೆಯಿಂದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

 

ಶ್ರೀಮತಿ ಅರ್ಪಿತ, ಕೆ.ಜೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಾತನಾಡುತ್ತಾ ಕಿಲ್ಕಾರಿ ಸೇವೆಯನ್ನು ಪಡೆಯುವಂತೆ ಗರ್ಭಿಣಿ ಸ್ತ್ರೀಯರಿಗೆ ಮತ್ತು ತಾಯಂದಿರಿಗೆ ಲಸಿಕಾ ಸತ್ರದ ವೇಳೆ, ತಪಾಸಣಾ ಸಮಯದಲ್ಲಿ, ಪಿ.ಎಂ.ಎಸ್.ಎಂ .ಎ ಕಾರ್ಯಕ್ರಮದಲ್ಲಿ, ತಾಯಂದಿರ ಸಭೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರಚಾರ ಕೈಗೊಂಡು ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಸುದಾರಿಸುವಲ್ಲಿ ಕಿಲ್ಕಾರಿ ಸಹಾಯಕ ಎಂದು ತಿಳಿಸಿದರು.

 

ಈ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತ.ಕೆ.ಜೆ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ನಾಗೇಶ್, ಎಂ & ಇ ವ್ಯವಸ್ಥಾಪಕರಾದ ಶಿವಶಂಕರೆಗೌಡ, ಪ್ರಸಾದ್, ಗೀತಾ, ಆಶಾ ಮೇಲ್ವಿಚಾರಕರು ಹಾಗೂ ಆಶಾ ಸುಗಮಕಾರರು ಹಾಜರಿದ್ದರು.

]]>
ವಿದ್ಯಾರ್ಥಿಗಳಲ್ಲಿ ಸಮಯ ನಿರ್ವಹಣೆ ಬಹಳ ಮುಖ್ಯ: ಡಾ. ಶಿವಕುಮಾರ್ https://sangramatv.com/archives/1192 Tue, 30 Jan 2024 12:29:43 +0000 https://sangramatv.com/?p=1192 ರಾಮನಗರ, ಜ. 30               

ವಿದ್ಯಾಥಿಗಳು ತಮ್ಮ ಅಮೂಲ್ಯವಾದ ಜೀವನದಲ್ಲಿ ಯೋಜಿತ ರೂಪದಲ್ಲಿ ಅಭ್ಯಾಸಮಾಡುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಅಕ್ಕ ಐಎಎಸ್ ಅಕಾಡೆಮಿಯ ಸಂಸ್ಥಾಪಕ ಡಾ. ಶಿವಕುಮಾರ್ ಅವರು ತಿಳಿಸಿದರು.

ಅವರು ಜ. 30ರ ಮಂಗಳವಾರ ಬೆಂಗಳೂರು ವಿಶ್ವವಿದ್ಯಾಲಯದ ರಾಮನಗರ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಶೈಕ್ಷಣಿಕ ಮುನ್ನೋಟ ಹಾಗೂ ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಮಗೆ ದೊರೆಯುವ ಸಮಯವನ್ನು ಯೋಜಿತವಾಗಿ ಬಳಸಿಕೊಂಡು ಪಠ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು, ಶಿಕ್ಷಣ ಪೂರ್ಣಗೊಳ್ಳುವ ವರೆಗೂ ಅದನ್ನು ಶ್ರದ್ದೆಯಿಂದ ಪಾಲಿಸುವುದನ್ನು ಅಳವಡಿಸಿಕೊಳ್ಳಬೇಕು, ಅದರಿಂದ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. 15-25ರ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಕನಿಷ್ಠ ದಿನಕ್ಕೆ 6 ಗಂಟೆಗಳ ಕಾಲ ಅಭ್ಯಾಸ ಮಾಡುವುದನ್ನು ರೂಢಿಸಿಕೊಂಡಲ್ಲಿ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು.

ಜ್ಞಾನವೇ ಶಕ್ತಿ. ಜ್ಞಾನಕ್ಕೆ ಜಗತ್ತಿನಾದ್ಯಂತ ಬೆಲೆಯಿದೆ ಆದರಿಂದ ನಿಮ್ಮ ಧನಾತ್ಮಕವಾದ ಆಸಕ್ತಿಯನ್ನು ಗುರುತಿಸಿಕೊಂಡು ಅದಕ್ಕೆ ಪೂರಕವಾದ ಸಿದ್ಧತೆ, ತರಬೇತಿ ಮತ್ತು ಮಾರ್ಗದರ್ಶನವನ್ನು ತೆಗೆದುಕೊಂಡಲ್ಲಿ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮನಗರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ. ಡೊಮಿನಿಕ್ ಅವರು ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಹೆಚ್ಚು ಉದ್ಯೋಗಾವಕಾಶಗಳಿರುವ ಸೇವಾವಲಯ, ಸ್ವ ಉದ್ಯೋಗ, ತಂತ್ರಜ್ಞಾನ ಮುಕ್ತ ಆವಿಷ್ಕಾರ ಜಾಗತಿಕ ತಂತ್ರಜ್ಞಾನ ಕ್ಷೇತ್ರಗಳತ್ತ ವಿದ್ಯಾರ್ಥಿಗಳು ತಮ್ಮ ಗಮನ ಹರಿಸುವುದರೊಂದಿಗೆ ತಮ್ಮ ಬದುಕನ್ನು ರೂಪಿಸಕೊಳ್ಳಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳಲ್ಲಿ ಶಿಸ್ತು, ನೈತಿಕತೆ ಅತ್ಯಗತ್ಯ ಎಂದರು.

ಸಮಾರಂಭ ದಲ್ಲಿ ಎಲ್ಲಾ ವಿಭಾಗದ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

]]>
ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ : ರಾಮನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ರಶ್ಮಿ ಮಹೇಶ್ https://sangramatv.com/archives/1183 Mon, 29 Jan 2024 17:36:32 +0000 https://sangramatv.com/?p=1183 ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಕೆಲವೊಂದು ಸರ್ಕಾರಿ ಕಚೇರಿಗಳು ಹಾಗೂ ವಸತಿ ನಿಲಯಗಳು ಸರ್ಕಾರದ ಕಟ್ಟಡಗಳಿಗೆ ಸ್ಥಳಾಂತರವಾಗಲು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು (ವಿಪತ್ತು ನಿರ್ವಹಣೆ) ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ರಶ್ಮಿ ಮಹೇಶ್ ಅವರು ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಡಿ. 29ರ ಸೋಮವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ರಶ್ಮಿ ಮಹೇಶ್ ಅವರು ಸರ್ಕಾರದ ಯಾವುದೇ ಇಲಾಖೆಯ ಜಿಲ್ಲಾ, ತಾಲೂಕು ಮಟ್ಟದ ಕಚೇರಿಗಳು ಇನ್ನೂ ಕೂಡ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಲ್ಲೀ, ಕೂಡಲೇ ಅವುಗಳು ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರವಾಗಬೇಕು, ಚನ್ನಪಟ್ಟಣ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆ 5 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿದೆ, ಕೂಡಲೇ ಇದನ್ನು ಲೋಕೋಪಯೋಗಿ ಇಲಾಖೆಯಿಂದ ಸಂಬAಧಿಸಿದ ಇಲಾಖೆ ವಶಕ್ಕೆ ಪಡೆದು ಅಲ್ಲಿಯೇ ಕಾರ್ಯರಂಭ ಮಾಡಲು ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮಗಳಲ್ಲಿ ಸ್ವೀಕೃತಿಯಾಗಿರುವ ಅಹವಾಲುಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಶೀಘ್ರವಾಗಿ ಬಗೆಹರಿಸುವಂತೆ ಅವರು ಸಂಬAಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕನಕಪುರ ತಾಲ್ಲೂಕಿನ ಗರಳಾಪುರ ಮತ್ತು ಇತರೆ 12 ಕೆರೆಗಳಿಗೆ ಅರ್ಕಾವತಿ ಜಲಾಶಯದ ಹಿನ್ನೀರಿನಿಂದ ನೀರನ್ನು ಎರಡು ಹಂತಗಳಲ್ಲಿ ಏತ ನೀರಾವರಿ ಮೂಲಕ ಎತ್ತಿ ತುಂಬಿಸಲು ಉದ್ದೇಶಿಸಲಾಗಿದೆ. ಕಾವೇರಿ ನದಿ ಸತ್ತೆಗಾಲ ಸಮೀಪದ ಆಣೆಕಟ್ಟೆಯಿಂದ ಗುರುತ್ವಾಕರ್ಷಣೆ ಮೂಲಕ ಇಗ್ಗಲೂರಿನ ಎಚ್.ಡಿ. ದೇವೇಗೌಡ ಬ್ಯಾರೇಜಿಗೆ ನೀರನ್ನು ಹರಿಸಿ, ಹಾಲಿ ಇರುವ ಕೆರೆ ತುಂಬಿಸುವ ಯೋಜನೆಗಳಿಗೆ ನೀರಿನ ಲಭ್ಯತೆಯನ್ನು ಹೆಚ್ಚಿಸುವುದು ಹಾಗೂ ಅಲ್ಲಿಂದ ನೀರನ್ನು ಎತ್ತಿ ಮಂಚನಬೆಲೆ ಮತ್ತು ವೈ.ಜಿ ಗುಡ್ಡ ಜಲಾಶಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದರು.

ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹಾಗೂ ದೊಡ್ಡಾಲಹಳ್ಳಿ ಹೋಬಳಿಯ ಸುಮಾರು 8 ಗ್ರಾಮಗಳ ಜಮೀನುಗಳಿಗೆ ಸೂಕ್ಷö್ಮ ಹನಿ ನೀರಾವರಿ ಮುಖಾಂತರ ನೀರನ್ನು ಒದಗಿಸಲು ಯೋಜಿಸಲಾಗಿರುತ್ತದೆ ಎಂದು ತಿಳಿಸಿದರು.

ಸ್ನಾತಕೋತ್ತರ ಪದವಿ ಕಾಲೇಜು: ರಾಮನಗರ ಜಿಲ್ಲೆಯ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯಲು ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಿಗೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸ್ನಾತಕೋತ್ತರ ಕೇಂದ್ರ ತೆರೆಯಲು 10 ಎಕರೆ ನಿವೇಶನ ಮಂಜೂರು ಮಾಡಲಾಗಿದೆ ಹಾಗೂ 14.6 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ಹಾಗೂ ಅಗತ್ಯವಿರುವ ಐಚ್ಚಿಕ ವಿಷಯಗಳನ್ನು ಪದವಿ ಕಾಲೇಜುಗಳ ಪ್ರಾಂಶುಪಾಲರು ಸಂಬಂದಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತರಗತಿಗಳನ್ನು ಪ್ರಾರಂಭಿಸಲು ಕ್ರಮವಹಿಸುವಂತೆ ತಿಳಿಸಿದರು.

ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಜಿಲ್ಲೆಯ ಪ್ರತಿಯೊಬ್ಬ ನಾಗರೀಕರಿಗೂ ತಲುಪಬೇಕು, ಆ ದಿಸೆಯಲ್ಲಿ ಅಧಿಕಾರಿಗಳು ಶ್ರಮಿಸಬೇಕು, ಈ ಸಂದರ್ಭದಲ್ಲಿ ಸಮಸ್ಯೆಗಳು ಎದುರಾದಲ್ಲೀ ಅದನ್ನು ಬಗೆಹರಿಸಬೇಕು ಎಂದು ಹೇಳಿದರು.

ರಾಮನಗರ ಜಿಲ್ಲೆಯಲ್ಲಿ ಒಟ್ಟು 23 ಜಿಲ್ಲಾ ಮಟ್ಟದ ಕಚೇರಿಗಳಲ್ಲಿ ಮತ್ತು ಒಟ್ಟು 14 ತಾಲ್ಲೂಕು ಮಟ್ಟದ ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶವನ್ನು ಅನುಷ್ಠಾನಗೊಳಿಸಲಾಗಿದೆ ಎಂದ ಅವರು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆ ಹಾಗೂ ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ಲಭಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಉಪನ್ಯಾಸಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

2023ರ ಡಿಸೆಂಬರ್‌ನಲ್ಲಿ ಜಿಲ್ಲೆಯಲ್ಲಿರುವ ಒಟ್ಟು 2,65,115 ಪಡಿತರ ಚೀಟಿದಾರರ 8,78,838 ಫಲಾನುಭವಿಗಳಿಗೆ 14,49,81,100 ರೂ.ಗಳ ಹಣವನ್ನು ಯಶಸ್ವಿಯಾಗಿ ಪಾವತಿಸಲಾಗಿದೆ. 2023ರ ಜುಲೈ ಅಂತ್ಯಕ್ಕೆ ಸಮರ್ಪಕವಾದ ಬ್ಯಾಂಕ್ ಮಾಹಿತಿ ಇಲ್ಲದ 39,991 ಫಲಾನುಭವಿಗಳ ಪೈಕಿ 27,470 ಫಲಾನುಭವಿಗಳ ಬ್ಯಾಂಕ್ ಖಾತೆ ವಿವರಗಳನ್ನು ಸರಿಪಡಿಸಲಾಗಿದೆ. ಬಾಕಿ ಉಳಿದ ಫಲಾನುಭವಿಗಳ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮವಹಿಸಿ, ಅವರ ಖಾತೆಗಳಿಗೆ ಹಣ ಪಾವತಿಸುವಂತೆ ನಿರ್ದೇಶನ ನೀಡಿದರು.

ರೆವಿನ್ಯೂ ನಕ್ಷೆಯಲ್ಲಿ ರಸ್ತೆ ಇದ್ದರೂ ಕೆಲ ಹಳ್ಳಿಗಳಲ್ಲಿ ರಸ್ತೆ ಸಮಸ್ಯೆಗಳ ಬಗ್ಗೆ ಜನತಾ ದರ್ಶನದಲ್ಲಿ ಮನವಿ ಪತ್ರಗಳನ್ನು ಸಲ್ಲಿಸುತ್ತಿದ್ದಾರೆ. ಇನ್ನು ಮುಂದೆ ಈ ರೀತಿ ಮನವಿ ಪತ್ರ ಸ್ವೀಕರಿಸಿದಲ್ಲಿ ಸಂಬAಧ ಪಟ್ಟ ತಹಶೀಲ್ದಾರ್ ಗಳನ್ನು ನೇರ ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ವೆಬ್‌ಸೈಟ್‌ನಲ್ಲಿ ಕಡ್ಡಾಯ ಹಾಜರಾತಿ ಪ್ರಕಟ: ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ 10 ಗಂಟೆಗೆ ಕಚೇರಿಗೆ ಹಾಜರಾಗಬೇಕು, ನಿಗದಿತ ಸಮಯದೊಳಗೆ ಹಾಜರಾದ ಬಗ್ಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಜಿಲ್ಲಾಧಿಕಾರಿಗಳ ಅಥವಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ  ವೆಬ್‌ಸೈಟಿನಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡುವಂತೆ ಸೂಚಿಸಿದರು.

ಸಭೆಗೆ ಗೈರು ಅಧಿಕಾರಿಗಳಿಗೆ ನೋಟಿಸ್: ಸಭೆಗೆ ಗೈರುಹಾಜರಾಗಿದ್ದ ಕೆಆರ್‌ಡಿಎಲ್, ನಿರ್ಮಿತಿ ಕೇಂದ್ರದ  ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ಸಂಬಂದಿಸಿದವರಿಗೆ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಉಪ ವಿಭಾಗಾಧಿಕಾರಿ ಬಿನೋಯ್ ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಚಿಕ್ಕಸುಬ್ಬಯ್ಯ ವೇದಿಕೆಯಲ್ಲಿದ್ದರು,ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

]]>
ರಾಮನಗರ : ಕೂಸಿನ ಮನೆ ಪ್ರಗತಿ ಪರಿಶೀಲನಾ ಸಭೆ https://sangramatv.com/archives/1176 Fri, 26 Jan 2024 17:38:36 +0000 https://sangramatv.com/?p=1176 ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು (ಪಂ.ರಾಜ್) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಕೂಸಿನ ಮನೆ ಪ್ರಗತಿ ಪರಿಶೀಲನಾ ಸಭೆಯು ವಿಡಿಯೋ ಸಂವಾದದ ಮೂಲಕ ನಡೆಯಿತು. ರಾಮನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ದಿಗ್ವಿಜಯ್ ಬೋಡ್ಕೆ ಅವರು ಈ ಸಂವಾದದಲ್ಲಿ ಭಾಗಿಯಾಗಿದ್ದರು.

ಈ ವೇಳೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಚಿಕ್ಕಸುಬ್ಬಯ್ಯ, ಯೋಜನಾ ನಿರ್ದೇಶಕರಾದ ಮಂಜುನಾಥಸ್ವಾಮಿ, ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು, ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಹಾಗೂ ನರೇಗಾ ಶಾಖೆ ಸಿಬ್ಬಂದಿಗಳು ಹಾಜರಿದ್ದರು

]]>
ದೇಶದ ಸಾರ್ವಭೌಮತೆಗೆ ಧಕ್ಕೆ ಬಾರದಂತೆ ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಅಭಿವೃದ್ಧಿಯೆಡೆಗೆ ಸಾಗುತ್ತಿರುವ ರಾಜ್ಯ ಕರ್ನಾಟಕ: ರಾಮಲಿಂಗಾರೆಡ್ಡಿ https://sangramatv.com/archives/1168 Fri, 26 Jan 2024 17:26:35 +0000 https://sangramatv.com/?p=1168 ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜ. 26ರ ಶುಕ್ರವಾರ ಆಯೋಜಿಸಲಾಗಿದ್ದ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಾರಿಗೆ, ಮುಜರಾಯಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು.

ಭಾರತವು ಸ್ವಾತಂತ್ರ್ಯ ನಂತರ 1950 ರ ಜನವರಿ 26 ರಂದು ತನ್ನದೇ ಸಂವಿಧಾನ ಜಾರಿಗೊಳಿಸಿ ಸ್ವತಂತ್ರ ಗಣತಂತ್ರ ರಾಷ್ಟçವಾಯಿತು. ಇದರಿಂದಾಗಿ ಜನವರಿ 26, ಭಾರತೀಯರಿಗೆ ಮಹತ್ವದ ದಿನ. ಈ ಸಂದರ್ಭದಲ್ಲಿ ಸಂವಿಧಾನದ ಆಶಯದಂತೆ ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಲಭ್ಯವಾಗುವ ಸಮ ಸಮಾಜ ನಿರ್ಮಾಣದ ದಾರಿಗಳನ್ನು ಬಲಪಡಿಸಲು ಚಿಂತಿಸಬೇಕು. ತಾಯ್ನಾಡಿನ ಸ್ವಾತಂತ್ರಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಮಹಾತ್ಮ ಗಾಂಧೀಜಿ ಮತ್ತು ಇತರ  ದೇಶ ಪ್ರೇಮಿಗಳು ಹಾಗೂ ನಾಯಕರ ತ್ಯಾಗ ಬಲಿದಾನಗಳನ್ನು ನಾವು ಸ್ಮರಿಸಲೇಬೇಕು.

            ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ 562 ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ದೇಶವನ್ನು ಒಂದುಗೂಡಿಸಿ ದೇಶದ ಏಕತೆ, ಅಖಂಡತೆಯನ್ನು ಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಭಾರತÀದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾ ಬಾಯಿ ಪಟೇಲ್ ಅವರನ್ನು ಹಾಗೂ ಅವರ ಸಾಧನೆಗಳನ್ನು ಸ್ಮರಿಸಲೇಬೇಕು.

ಅನಕ್ಷರತೆ, ಅನಾರೋಗ್ಯ, ಹಸಿವು ಮತ್ತು ಬಡತನದಲ್ಲಿದ್ದ ದೇಶವನ್ನು ಮುನ್ನಡೆಸಿದ ನಾಯಕರನ್ನು ನಾವು ಸ್ಮರಿಸಿ ಗೌರವಿಸೋಣ, ಜೊತೆಗೆ ಇಂದಿನ ಮತ್ತು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಪ್ರಮುಖ ಜವಾಬ್ದಾರಿಯನ್ನು ಎಲ್ಲರೂ ಅರಿತು ಕೊಳ್ಳೋಣ.

ಜಗತ್ತಿಗೆ ಮಾತೃಪ್ರೇಮ, ಪ್ರಜ್ಞೆ, ಸಮತೆ ಮತ್ತು ಮಮತೆಯನ್ನು ಬೋಧಿಸಿದ ಪರಂಪರೆ ನಮ್ಮದು. ರಾಜಪ್ರಭುತ್ವ ಮತ್ತು ಊಳಿಗಮಾನ್ಯ ವ್ಯವಸ್ಥೆಯನ್ನು ಧಿಕ್ಕರಿಸಿ

1)        ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ದೇಶ.

2)        ಪ್ರಜೆಗಳೇ ಪ್ರಭುಗಳು ಎಂದು ಭಾವಿಸಿರುವ ದೇಶ:

3)        ಹಲವು ಧರ್ಮಗಳು ಮತ್ತು ಆಚರಣೆಗಳನ್ನು ಒಂದೇ ಮಣ್ಣಿನಲ್ಲಿ ಪೋಷಿಸುತ್ತಿರುವ ದೇಶ ನಮ್ಮದು.

4)        ಇಂತಹ ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಜನಪರಂಪರೆಯನ್ನು ಧೀರ್ಘಕಾಲ ಉಳಿಸಿ ಬೆಳಸಿಕೊಂಡು ಬಾಳಲು ನಮ್ಮ ಭಾರತೀಯ ಸಂವಿಧಾನ ದಾರಿ ದೀಪವಾಗಿದೆ.

            ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ದೇಶಕ್ಕೆ ಅತ್ಯಂತ ಶ್ರೇಷ್ಠ ಸಂವಿಧಾನ ರಚಿಸಿಕೊಟ್ಟು ದೇಶದ ಮುನ್ನಡೆಗೆ ದಾರಿದೀಪ ನೀಡಿರುವ ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೃತಜ್ಞತಭಾವದಿಂದ ಸ್ಮರಿಸೋಣ.

ಡಾ. ಬಿ.ಆರ್. ಅಂಬೇಡ್ಕರ್ ರವರ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಮಿತಿಯ ಸದಸ್ಯರುಗಳಾದ 1) ಶ್ರೀ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, 2) ಶ್ರೀ ಎನ್. ಗೋಪಾಲಸ್ವಾಮಿ,

3) ಶ್ರೀ ಮಾಧವರಾವ್, 4) ಶ್ರೀ ಕೆ.ಎಂ ಮುನ್ಷಿ, 5) ಶ್ರೀ ಮಹಮದ್ ಸಾದುಲ್ಲ, 6) ಶ್ರೀ ಬಿ.ಎಲ್. ಮಿತ್ತರ್, 7) ಶ್ರೀ ಡಿ.ಪಿ. ಖೇತಾನ್ ಅವರು 1946 ಡಿಸೆಂಬರ್ 9ರಿಂದ ಸತತವಾಗಿ ಸಭೆ ಸೇರಿ, ಪ್ರಪಂಚದ 60 ದೇಶಗಳ ಸಂವಿಧಾನವನ್ನು ಗಣನೆಗೆ ತೆಗೆದುಕೊಂಡು ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ಆಚರಣೆಗೆ ತಂದ ಕಾಯ್ದೆ, ಕಾನೂನುಗಳು, ಪರಿಗಣಿಸಿ ಸುಧೀರ್ಘವಾಗಿ ಎಲ್ಲಾ ಅಂಶಗಳನ್ನು ಪರಿಗಣಿಸಿ ಭಾರತಕ್ಕೆ ಅನ್ವಯವಾಗುವ ಅತ್ಯುತ್ತಮವಾದ ಸಂವಿಧಾನವನ್ನು ರಚಿಸಿ, 1949ರ ನವೆಂಬರ್ 26 ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಮುಂದೆ ಅಧಿಕೃತವಾಗಿ 1950ರ ಜನವರಿ 26 ರಿಂದ ಸಂವಿಧಾನ ಜಾರಿಗೊಂಡು ಭಾರತ ಗಣತಂತ್ರವಾಯಿತು.

1930ರ ಜನವರಿ 26ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್‌ನ ಲಾಹೋರ್ ಅಧಿವೇಶನದಲ್ಲಿ “ಪೂರ್ಣ ಸ್ವರಾಜ್” ನಿರ್ಣಯವನ್ನು ಅಂಗೀಕರಿಸಲಾಯಿತು. ಈ ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ಜನವರಿ 26ರಂದೇ ಸಂವಿಧಾನ ಪ್ರಾರಂಭದ ದಿನಾಂಕವೆAದು ನಿರ್ದಿಷ್ಟವಾಗಿ ಆಯ್ಕೆ ಮಾಡಿಕೊಂಡಿತು.

ಅಂದಿನಿAದ ಜಾರಿಗೊಂಡ ಸಂವಿಧಾನವು ಇಂದಿನವರೆಗೆ ಹಲವಾರು ತಿದ್ದುಪಡಿಗಳನ್ನು ಪ್ರಸ್ತುತ ಪರಿಸ್ಥಿತಿಗಳಿಗೆ ಅನುಗುಣವಾಗಿ ಸಂಸತ್ತು ಅಂಗೀಕಾರ ಮಾಡಿ ಆಚರಣೆಗೆ ತಂದಿದೆ.

ಡಾ. ಬಿ.ಆರ್. ಅಂಬೇಡ್ಕರ್ ದೂರದೃಷ್ಠಿಯ ಫಲವಾಗಿ, ಮೂಲಭೂತ ಹಕ್ಕುಗಳಾದ 1) ಸಮಾನತೆಯ ಹಕ್ಕು, 2) ಸ್ವಾತಂತ್ರ್ಯದ ಹಕ್ಕು, 3) ಶೋಷಣೆಯ ವಿರುದ್ಧ ಹಕ್ಕು, 4) ಧಾರ್ಮಿಕ 5) ಸ್ವಾತಂತ್ರ್ಯದ ಹಕ್ಕು, 6) ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕು, 7) ಸಂವಿಧಾನಾತ್ಮಕ ಪರಿಹಾರ ಹಕ್ಕುಗಳು ಸಂವಿಧಾನ ಒಳಗೊಂಡಿದೆ.

ಸಂವಿಧಾನ ರಚನೆಗೂ ಮುನ್ನ ಶತಶತಮಾನಗಳಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಸರ್ವರೀತಿಯಲ್ಲಿ ತುಳಿತಕ್ಕೊಳಗಾದ ಜನರನ್ನು ಸಂವಿಧಾನದ ಆಶಯದಂತೆ ಮೇಲೆಕೆತ್ತುವ ನಿಟ್ಟಿನಲ್ಲಿ ಸ್ವಾತಂತ್ರ್ಯ ಬಂದ ನಂತರ ಎಲ್ಲರನ್ನು ಸಮಾನ ರೀತಿಯಿಂದ ಕಂಡು ಎಲ್ಲರಿಗೂ ಸಮಾನ ಅವಕಾಶಗಳು ದೊರಕಿಸುವ ನಿಟ್ಟಿನಲ್ಲಿ ಎಲ್ಲಾ ಸರ್ಕಾರಗಳು ಕಾರ್ಯನಿರ್ವಹಿಸಿರುವುದನ್ನು ನಾವು ಗಮನಿಸಬಹುದಾಗಿದೆ.

ದೇಶದ ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ

1)        ಪಂಚವಾರ್ಷಿಕ ಯೋಜನೆಗಳು,

2)        ಭೂಸುಧಾರಣಾ ಕಾಯ್ದೆ

3)        ಬ್ಯಾಂಕುಗಳ ರಾಷ್ಟ್ರೀಕರಣ

4)        ಇನ್ನು ಹಲವಾರು ಜನಪರ ಕಾರ್ಯಕ್ರಮಗಳನ್ನು ಕೈಗೊಂಡು ಅವಕಾಶ ವಂಚಿತರಿಗೆ ಸಕಲವು ದೊರಕುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮವಹಿಸುತ್ತವೆ.

ಭಾರತ ಸಂವಿಧಾನ ರಚನೆ ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ರವರು ಅನಾರೋಗ್ಯದಿಂದ ಬಳಲುತ್ತಿದ್ದರೂ ತಮ್ಮ 65 ನೇ ವರ್ಷದಲ್ಲಿ ಸಹಪಾಠಿಗಳೊಂದಿಗೆ,

“There is still so much to be done.. so much to be done” ಎಂದು ಹೇಳುತ್ತಾ 6ನೇ ಡಿಸೆಂಬರ್ 1956ರಲ್ಲಿ ದೆಹಲಿಯಲ್ಲಿ ನಿಧನರಾದರು. ಇವರು ಶಿಕ್ಷಣ, ಸಂಘಟನೆ ಮತ್ತು ಸಂಘರ್ಷ ಧ್ಯೇಯಗಳನ್ನಿಟ್ಟುಕೊಂಡು ಸಂಸದೀಯ ಪಟುವಾಗಿ ಅರ್ಥಶಾಸ್ತçಜ್ಞರಾಗಿ, ಇವರ ಸಾಧನೆಗೆ ಕೃತಜ್ಞಾಪೂರ್ವಕವಾಗಿ ಭಾರತ ಸರ್ಕಾರ ಮರಣೊತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು 1990ರಲ್ಲಿ ನೀಡಿ ಗೌರವಿಸಿದೆ.

ಸ್ವಾತಂತ್ರ ನಂತರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಜವಹರಲಾಲ್ ನೆಹರು ರವರಿಂದ ಇಲ್ಲಿಯವರೆಗೆ ಎಲ್ಲಾ ಪ್ರಧಾನ ಮಂತ್ರಿಗಳು ಸಂವಿಧಾನದಲ್ಲಿನ ಮುಖ್ಯ ಅಂಶಗಳನ್ನು ಈಡೇರಿಸುತ್ತಾ, ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಸಂವಿಧಾನ ರೂಪಿಸಿಕೊಟ್ಟ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡು ಭಾರತದ ಸಾರ್ವಭೌಮತೆಗೆ ಧಕ್ಕೆ ಬಾರದಂತೆ ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಅಭಿವೃದ್ಧಿಯೆಡೆಗೆ ಸಾಗುತ್ತಿರುವ ರಾಜ್ಯ ನಮ್ಮ ಕರ್ನಾಟಕ.

 ಇಂದು ಕರ್ನಾಟಕದ ಸಾಧನೆ ಅನೇಕ ರಾಜ್ಯಗಳಿಗೆ ಮಾದರಿಯಾಗಿದೆ. ಜ್ಞಾನಾಧಾರಿತ ಮಾನವ ಸಂಪನ್ಮೂಲ, ಪ್ರಾಕೃತಿಕ ಸಂಪತ್ತು, ವೈಶಿಷ್ಟ ಪೂರ್ಣ ಸಾಮಾಜಿಕ ಚಿಂತನೆ, ಪ್ರಯೋಗಶೀಲ ಆಡಳಿತ ಕರ್ನಾಟಕದ ಹೆಗ್ಗುರುತಾಗಿದೆ.

 ರಾಜ್ಯವನ್ನಾಳಿದ ಮುಖ್ಯಮಂತ್ರಿಗಳಾದ ಶ್ರೀ ಕೆ.ಸಿ. ರೆಡ್ಡಿ, ಶ್ರೀ ಕೆಂಗಲ್ ಹನುಮಂತಯ್ಯ, ಕಡಿದಾಳ್ ರವರಿಂದ ಇಂದಿನ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರೆಗೂ  ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸಿರುವುದನ್ನು ಕಾಣಬಹುದು.

 ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್‌ರವರ ನೇತೃತ್ವದ ನಮ್ಮ ಸರ್ಕಾರವು ಅಬಲರನ್ನು ಸಬಲರನ್ನಾಗಿ ಮಾಡಲು, ದೇಶದಲ್ಲಿ ಮಾದರಿಯಾಗಿ, 1) ಗೃಹಜ್ಯೋತಿ, 2) ಗೃಹಲಕ್ಷಿö್ಮÃ, 3) ಶಕ್ತಿ, 4) ಅನ್ನಭಾಗ್ಯ ಹಾಗೂ 5) ಯುವನಿಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದು ಪ್ರತಿ ಕುಟುಂಬಕ್ಕೆ ಕನಿಷ್ಠ ವರ್ಷಕ್ಕೆ 40,000 ರೂ.ಗಳ ಆದಾಯಗಳಿಸುವ ಅವಕಾಶಗಳನ್ನು ಕರ್ನಾಟಕದ ಜನರಿಗೆ ನಮ್ಮ ಸರ್ಕಾರ ಕಲ್ಪಿಸಿಕೊಟ್ಟಿದೆ.

ಚುನಾವಣೆ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿ ಭರವಸೆಗಳನ್ನು 100 ಕ್ಕೆ 100 ಈಡೇರಿಸಿದ್ದು, “ನುಡಿದಂತೆ ನಡೆದಿದ್ದೇವೆ”. ಅಭಿವೃದ್ಧಿ ದೃಷ್ಠಿಯಿಂದ ನಾವು ಜೊತೆಯಾಗಿ ಹೋಗೋಣ ಎಲ್ಲಾ ರೀತಿಯಲ್ಲಿಯೂ ಸಹಕಾರ ನೀಡಿ ಜಿಲ್ಲೆಯ ಅಭಿವೃದ್ಧಿ ಜೊತೆಗೆ ರಾಜ್ಯ ಮತ್ತು ದೇಶದ ಯಶಸ್ಸಿಗೂ ಶ್ರಮಿಸೋಣವೆಂದು ಆಶಿಸುತ್ತಾ ಎಲ್ಲರಿಗೂ ಮತ್ತೊಮ್ಮೆ “ಗಣರಾಜ್ಯೋತ್ಸವ” ದ ಶುಭ ಹಾರೈಕೆಗಳನ್ನು ತಿಳಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹಾಗೂ ವಿವಿಧ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು.

ಶಾಸಕರಾದ ಇಕ್ಬಾಲ್ ಹುಸೇನ್, ನಗರಸಭೆ ಅಧ್ಯಕ್ಷರಾದ ವಿಜಯಕುಮಾರಿ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

 

 

]]>
ರಸ್ತೆಯಲ್ಲಿ ದವಸಧಾನ್ಯ ಒಕ್ಕಣೆ ಮಾಡುವುದು ಅಪರಾಧ ವಾಗಿದೆ : ಅಕ್ಕೂರು ಪೊಲೀಸ್ ಠಾಣೆಯ ಪಿ.ಎಸ್.ಐ.ಬಸವರಾಜು https://sangramatv.com/archives/1147 Wed, 24 Jan 2024 04:38:23 +0000 https://sangramatv.com/?p=1147

ಚನ್ನಪಟ್ಟಣ,ಜ:೨೩-ರಸ್ತೆಯಲ್ಲಿ ದವಸಧಾನ್ಯ ಒಕ್ಕಣೆ ಮಾಡುವುದು ಅಪರಾಧವಾಗಿದೆ ಎಂದು, ಅಕ್ಕೂರು ಪೊಲೀಸ್ ಠಾಣೆಯ ಪಿ.ಎಸ್.ಐ.ಬಸವರಾಜು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ

ಅವರು ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ಹುಣಸನಹಳ್ಳಿ ಗ್ರಾಮದ ಸೇತುವೆಯ ಮೇಲೆ ರಾಗಿ ಒಕ್ಕಣೆ ಕಾರ್ಯದಲ್ಲಿ ತಲ್ಲೀನರಾಗಿದ್ದ ರೈತರಿಗೆ ಎಚ್ಚರಿಕೆ ನೀಡಿದರು.

ಕಷ್ಟಪಟ್ಟು ಬೆಳೆದ ಬೆಳೆಗಳನ್ನು ತಮ್ಮ ಜಮೀನಿನಲ್ಲಿ ಕಣಗಳನ್ನು ಮಾಡಿಕೊಂಡು ಶುದ್ದವಾದ ಧವಸಧಾನ್ಯವನ್ನು ಪಡೆಯದೆ, ಬೇಗನೆ ಒಕ್ಕಣೆ ಮಾಡಿಕೊಂಡು ಹೋಗಬಹುದು ಎಂದು, ಎಲ್ಲೆಲ್ಲಿಂದಲೋ ಬರುವ ವಾಹನಗಳ ಚಕ್ರದಿಂದ ಒಕ್ಕಣೆಯಾಗುವ ಧವಸಧಾನ್ಯ ಕಲುಷಿತಗೊಂಡು ಅನಾರೋಗ್ಯಕ್ಕೆ ಎಡೆಮಾಡಿಕೊಡುವುದನ್ನು ತಿಳಿ ಹೇಳಿದರು.

ಅಲ್ಲದೆ ರಸ್ತೆಯಲ್ಲಿ ಒಕ್ಕಣೆ ಮಾಡುವುದರಿಂದ ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳಿಗೆ ಪಾದಚಾರಿಗಳಿಗೆ ತೊಂದರೆಯಾಗಿದೆ, ಕಾರಣ ನಿಮ್ಮಗೆ ಒಳ್ಳೆಯ ಉದ್ದೇಶವಾಗಿದ್ದರೂ ಕೂಡ, ವಾಹನಗಳು ರಸ್ತೆಯ ಮೇಲಿನ ಹುಲ್ಲಿನ ಮೇಲೆ ತೆರಳಿದಾಗ ವಾಹನ ಚಕ್ರಗಳು ಜಾರಿ ಅನಾಹುತಗಳು ಸಂಭವಿಸುತ್ತಿವೆ ಎಂದು ತಿಳಿಸಿದರು.

ದ್ವಿಚಕ್ರವಾಹನ ಸವಾರರಿಗೆ ಇನ್ನಿಲ್ಲದ ಸಮಸ್ಯೆ ಎದುರಾಗಿದ್ದು, ರಸ್ತೆಯಲ್ಲಿಯೇ ಒಕ್ಕಣೆ ಕಾರ್ಯಮಾಡಿಕೊಂಡು, ರಸ್ತೆಯಲ್ಲೇ zಧವಸಧಾನ್ಯಗಳನ್ನು ತೂರುವುದರಿಂದ ದ್ವಿಚಕ್ರವಾಹನ ಸವಾರರ ಕಣ್ಣಿಗೆ ಧೂಳು ರಾಚುವುದರಿಂದ ಚಾಲಕನ ನಿಯಂತ್ರಣ ತಪ್ಪಿ ಹಲವಾರು ಅಪಘಾತಗಳು ಆಗಿರುವುದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ಕೆಲ ದಿನಗಳ ಹಿಂದೆ ರಸ್ತೆಯಲ್ಲಿ ಹರಡಿದ ರಾಗಿ ಹುಲ್ಲಿನ ಮೇಲೆ ಕಾರು ಚಾಲನೆಯಲ್ಲಿದ್ದ ಸಂದರ್ಭಲ್ಲಿ, ರಾಗಿಹುಲ್ಲು ಇಂಜಿನ್ ತಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕ್ಷಣಾರ್ಧದಲ್ಲಿ ಕಾರಿನಲ್ಲಿದ್ದ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಕಾರು ನಡುರಸ್ತೆಯಲ್ಲಿಯೇ ಹೊತ್ತು ಉರಿದಿರುವುದು, ರಸ್ತೆಯಲ್ಲಿ ಒಕ್ಕಣೆ ಮಾಡುವುದೇ ಕಾರಣವಾಗಿದೆ ಎಂದು ರೈತರಿಗೆ ವಾಸ್ತವತೆಯನ್ನು ತಿಳಿಸಿದರು.

ಸಾಕಷ್ಟು ಸಾರಿ ಮನವಿ ಮಾಡುತ್ತಿದ್ದೇವೆ ಇದೇ ರೀತಿ ಇಲಾಖೆಯ ಮನವಿ ಧಿಕ್ಕರಿಸುತ್ತಿದ್ದರೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ರಸ್ತೆಯಲ್ಲಿ ಒಕ್ಕಣೆ ಮಾಡುವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವಾಃನ ಚಾಲಕ ಲೋಕೇಶ್ ಜಿ ಹಾಜರಿದ್ದರು

]]>
ರಾಮನಗರ ಜಿಲ್ಲೆಯಾದ್ಯಾಂತ ಜನವರಿ 26 ರಿಂದ ಸಂವಿಧಾನ ಜಾಗೃತಿ ಜಾಥಾ.. https://sangramatv.com/archives/1136 Mon, 22 Jan 2024 17:39:37 +0000 https://sangramatv.com/?p=1136 ರಾಮನಗರ: ಜ. 22: ಇದೇ ಜನವರಿ 26 ರಿಂದ ಫೆಬ್ರವರಿ 24ರ ವರೆಗೆ ಸಂವಿಧಾನ ಜಾಗೃತಿ ಜಾಥಾ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ದಿಗ್ವಿಜಯ್ ಬೋಡ್ಕೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆದ ಸಂವಿಧಾನ ದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ಮಟ್ಟದ ಸಮ್ಮೇಳನದ ಅಂಗವಾಗಿ ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳುವ ಸಂಬಂಧ ಕರೆಯಲಾದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ನಿರ್ದೇಶನದಂತೆ ಸಂವಿಧಾನ ಜಾಗೃತಿ ಜಾಥಾ ಸ್ಥಬ್ದ ಚಿತ್ರವು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಲಿದೆ. ಸಂವಿಧಾನ ಮೌಲ್ಯಗಳು ಮತ್ತು ಆಶಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಜಾಥಾದ ಉದ್ದೇಶ ಎಂದು ಹೇಳಿದ ಅವರು ಜಾಥಾಕ್ಕೆ ಜನವರಿ 26 ರಂದು ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡುವರು. ಜನವರಿ 26 ರಿಂದ ಆರಂಭವಾಗುವ ಜಾಥಾ ಫೆಬ್ರವರಿ 23 ರವರಿಗೆ ನಡೆಯಲಿದೆ ಎಂದರು.
ಕಾರ್ಯಕ್ರಮಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಜಾಥಾದ ವ್ಯವಸ್ಥೆ ಕುರಿತು ನಿಗಾ ವಹಿಸುವಂತೆ ಸೂಚಿಸಲಾಗಿದೆ. ಸ್ಥಬ್ದ ಚಿತ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಪರಿಕಲ್ಪನೆ, ಅವರ ಪ್ರತಿಮೆ, ಕ್ಷೇತ್ರದ ಪ್ರಮುಖ ವ್ಯಕ್ತಿಗಳ ಮಾಹಿತಿ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಸರ್ಕಾರದ ಐದು ಯೋಜನೆಗಳನ್ನು ಸ್ಥಬ್ದ ಚಿತ್ರದಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಅಲ್ಲಿ ಸಂವಿಧಾನದ ಕುರಿತು ಅರಿವು ಮೂಡಿಸಲಾಗುವುದಲ್ಲದೆ, ಪಂಚಾಯಿತಿ ವತಿಯಿಂದ ಪ್ರಬಂಧ, ಚಿತ್ರಕಲೆ, ಭಾಷಣ ಸ್ಪರ್ಧೆ ಸೇರಿದಂತೆ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಉಪ ಕಾರ್ಯದರ್ಶಿ ಚಿಕ್ಕಸುಬ್ಬಯ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶಾಂತಿಪ್ರಿಯಾ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳು ಅಧ್ಯಕ್ಷರು, ಪದಾಧಿಕಾರಿಗಳು ಆದ ಶಿವಕುಮಾರಸ್ವಾಮಿ, ಶಿವಕುಮಾರ್, ಶಿವಪ್ರಕಾಶ್ , ಸಂಪಾದಕ ಚಲುವರಾಜು, ಗುಡ್ಡೆ ವೆಂಕಟೇಶ್, ದೊಡ್ಡಯ್ಯ, ಕೃಷ್ಣಮೂರ್ತಿ, ವಾಸು, ಮಲ್ಲಿಕಾರ್ಜುನ್, ರಮೇಶ್, ಶೇಖರ್, ಹರೀಶ್ ಬಾಲು ಹಾಗೂ ಇತರರು ಹಾಜರಿದ್ದರು.

]]>
ಚನ್ನಪಟ್ಟಣದ ಪ್ರಥಮದರ್ಜೆ ಕಾಲೇಜಿನಲ್ಲಿ ಮಹಿಳಾ ಕಾನೂನು ಅರಿವು ಕಾರ್ಯಕ್ರಮದಲ್ಲಿ ರಾಮನಗರ ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸಮಿತಿ ಅಧಿಕಾರದ ಸದಸ್ಯ ಕಾರ್ಯಧರ್ಶಿಗಳಾದ ಅನಿತಾ ಎಂ.ಪಿ ರವರು ಭಾಗಿಯಾಗಿದ್ದರು https://sangramatv.com/archives/1126 Thu, 18 Jan 2024 15:18:39 +0000 https://sangramatv.com/?p=1126 ಚನ್ನಪಟ್ಟಣ,ಜ:೧೮-ಭಾರತದ ಪುಣ್ಯಭೂಮಿಯಲ್ಲಿ ಹೆಣ್ಣು ಮಕ್ಕಳಿಗೆ ವಿಶೆಷವಾದ ಸ್ಥಾನ ನೀಡಿದೆ ಎಂದು ರಾಮನಗರ ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸಮಿತಿ ಅಧಿಕಾರದ ಸದಸ್ಯ ಕಾರ್ಯಧರ್ಶಿಗಳಾದ ಅನಿತಾ ಎಂ.ಪಿ.ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಅವರು ನಗರದ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜನೆ ಮಾಡಲಾಗಿದ್ದ,ಜಿಲ್ಲಾ ನ್ಯಾಯಾಲಯ ಹಾಗೂ ಪ್ರಥಮದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಮಹಿಳಾ ಕಾನೂನು ಅರಿವು ಕಾರ್ಯಗಾರದಲ್ಲಿ, ಕಾರ್ಯಗಾರವನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದರು.

ಪ್ರಸಕ್ತ ದಿನಗಳಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾನೂನಿನಲ್ಲಿ ಪರಿಹಾರವಿದ್ದು, ಕಾನೂನು ಅರಿವು ಇಲ್ಲದಿರುವುದರಿಂದಲೇ ಹಲವಾರು ಸಮಸ್ಯೆಗಳನ್ನು ಸೃಷ್ಟಿ ಮಾಡಿಕೊಳ್ಳುವಂತಾಗಿದೆ, ಹೆಣ್ಣು ಮಕ್ಕಳಿಗೆ ಸ್ಬತಂತ್ರ ಭಾರತದಲ್ಲಿ ವಿಶೇಷವಾದ ಕಾನೂನುಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿಯೇ ಹೆಚ್ಚು ಮಹಿಳಾ ವಿದ್ಯಾರ್ಥಿಗಳನ್ನು ಹೊಂದಿರುವ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ತನ್ನದೇ ಆದ ಹೆಸರು ಪಡೆದಿರುವ ನಗರದ ಪ್ರಥಮ ದರ್ಜೆ ಕಾಲೇಜು ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಹೆಣ್ಣು ಮಕ್ಕಳು ಕಾನೂನಿನ ಅರಿವು ಪಡೆಯಲು ಜಿಲ್ಲಾ ನ್ಯಾಯಾಲಯದಲ್ಲಿಯಾಗಲಿ ಇಲ್ಲಾ ತಾಲ್ಲೂಕು ಮಟ್ಟದ ನ್ಯಾಯಾಲಯದಲ್ಲಿಯಾಗಲಿ ಬೆಳಿಗ್ಗೆ ೧೦ ರಿಂದ ಸಂಜೆ ೬ ರವರೆಗೆ ನುರಿತ ನ್ಯಾಯಾವಾದಿಗಳ ಬಳಿ ತಮ್ಮ ಯಾವುದೇ ರೀತಿಯ ಕಾನೂನು ಸಲಹೆಗಳನ್ನು ಪಡೆಯಬಹುದು ಎಂದರು.

ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಥಮದರ್ಜೆ ಕಾಲೇಜಿನ ಪ್ರಭಾರ ಪ್ರಾನ್ಸುಪಾಲರಾದ ಡಾ|| ರಮೇಶ್ ಹೆಚ್.ಬಿ. ಮಾತನಾಡಿ, ಜಿಲ್ಲಾ ನ್ಯಾಯಾಲಯವೇ ಆಗಮಿಸಿ ಹೆಣ್ಣು ಮಕ್ಕಳಿಗೆ ಕಾನೂನು ಅರಿವು ಮುಡಿಸುತ್ತಿರುವುದು ಸಂತಷದ ವಿಚಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

    ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಮಹಿಳಾ ಕೋಶ ಸಮಿತಿಯ ಸಂಚಾಲಕರಾದ ಪ್ರೊಫೆಸರ್ ಡಾ|| ಉಷಾಮಾಲಿನಿ,ಆಂತರಿಕ ಗುಣಮಟ್ಟ ಮೌಲ್ಯಮಾಪನ ಕೋಶದ ಸಹ ಸಂಚಾಲಕರಾದ ಡಾ|| ದೀಪ್ತಿ ಹಾಗೂ ಹಲವಾರು ಮಂದಿ ಉಪನ್ಯಾಶಕರು ಹಾಜರಿದ್ದರು.

]]>
ಇಂದು ಚನ್ನಪಟ್ಟಣದ ಕುವೆಂಪುನಗರದಲ್ಲಿ ನ್ಯಾಚುರಲ್ ಗ್ಯಾಸ್ ಲೈನ್ ಚಾರ್ಜ್ ಮಾಡಲಾಗಿದ್ದು. https://sangramatv.com/archives/1112 Fri, 05 Jan 2024 16:00:15 +0000 https://sangramatv.com/?p=1112 ಇಂದು ಚನ್ನಪಟ್ಟಣದ ಕುವೆಂಪುನಗರದ 3ನೇ ಕ್ರಾಸ್, 4ನೇ ಕ್ರಾಸ್ ,5ನೇ ಕ್ರಾಸ್ ,6ನೇ ಕ್ರಾಸ್ ಮತ್ತು 7ಕ್ರಾಸ್‌ನಲ್ಲಿ ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ಲೈನ್ ಲಿಮಿಟೆಡ್ ನಾ ಗ್ಯಾಸ್ ಪೈಪ್ ಲೈನ್ ಚಾರ್ಜ್ ಮಾಡಲಾಗಿದ್ದು ಇದರ ಉದ್ಘಾಟನೆಯನ್ನು ನಗರದ ರಂಜಿತ್ ವೆಂಕಟಪ್ಪ ನೀಲಕಂಠನಹಳ್ಳಿ ಮತ್ತು ನಗರಸಭೆ ಸದಸ್ಯರಾದ ರೇವಣ್ಣನ ಅವರು ನೆರವೇರಿಸಿದರು

]]>
ಇಂದು ಜಾನಪದ ಲೋಕದಲ್ಲಿ ಮಕ್ಕಳ ಕಲರವ. https://sangramatv.com/archives/1098 Sat, 09 Dec 2023 15:48:48 +0000 https://sangramatv.com/?p=1098 ಜಾನಪದ ಲೋಕದಲ್ಲಿ ಮಕ್ಕಳ ಕಲರವ. ಬೆಂಗಳೂರಿನ ವೈದೇಹಿ ಸ್ಕೂಲ್ ಆಫ್ ಎಕ್ಸಲೆನ್ಸ್ ಮತ್ತು ಮಡಿವಾಳದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಜಾನಪದ ಕಲಾ ವೈಭವವನ್ನು ಕಣ್ತುಂಬಿಕೊಂಡರು. ಮಲ್ಲಯ್ಯ ಇವರ ಹಾಡುಗಾರಿಕೆ, ಕೂಟಗಲ್ ಮಹೇಶ್ ತಂಡದವರ ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದರು.. ಕ್ಯೂರೇಟರ್ ಡಾ.ರವಿ ಯು ಎಂ, ಜಾನಪದ ಲೋಕ ಪರಿಚಯ ಮಾಡಿಕೊಟ್ಟರು.

]]>