ಮಳವಳ್ಳಿ – ಸಂಗ್ರಾಮ TV https://sangramatv.com News & Entertainment Thu, 05 Dec 2024 17:02:27 +0000 en-US hourly 1 https://wordpress.org/?v=6.7.1 https://sangramatv.com/wp-content/uploads/2022/12/cropped-124565656-32x32.png ಮಳವಳ್ಳಿ – ಸಂಗ್ರಾಮ TV https://sangramatv.com 32 32 https://sangramatv.com/archives/1336 Thu, 05 Dec 2024 17:02:27 +0000 https://sangramatv.com/?p=1336 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 20,21, 22 ನೇ ತಾರೀಕು ಮಂಡ್ಯದಲ್ಲಿ ನಡೆಯುವುದರಿಂದ ಕಳೆದ ಐದು ದಿನಗಳಲ್ಲಿ ಮಳವಳ್ಳಿ ತಾಲೂಕಿನಾದ್ಯಂತ ಕನ್ನಡ ರಥ ಸಂಚರಿಸಿ ಅಂತಿಮವಾಗಿ ಮಳವಳ್ಳಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಕನ್ನಡ ಭವನದ ಮುಂದೆ ಸಮ್ಮೇಳನದ ಪ್ರಚಾರ ಜಾತ ಮುಕ್ತಾಯಗೊಂಡಿದ್ದು , ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಳವಳ್ಳಿ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕನ್ನಡ ಭವನದಲ್ಲಿ ತಳಿರು ತೋರಣಗಳಿಂದ ಸಿಂಗರಿಸಿ ಭುವನೇಶ್ವರಿ ಫೋಟೋವನ್ನು ಇರಿಸಿ ಆವರಣವನ್ನು ಸಿಂಗಾರ ಗೊಳಿಸಿದರು ಮೆರವಣಿಗೆಯ ಕನ್ನಡ ರಥ ಕನ್ನಡ ಭವನದ ಮುಂದೆ ಬರಮಾಡಿಕೊಂಡರು.

 

ಅಧ್ಯಕ್ಷರಾದ ಚೇತನ್ ಕುಮಾರ್ ಅವರು ಪುಷ್ಪ ಮಾಲೆಯನ್ನು ಹಾಕಿ ಪುಷ್ಪಾರ್ಚನೆಯನ್ನು ಮಾಡಿದರು ಇದೇ ಸಂದರ್ಭದಲ್ಲಿ ಪುರಸಭೆಯ ಮುಖ್ಯ ಅಧಿಕಾರಿ ಶ್ರೀಮತಿ ನಾಗರತ್ನಮ್ಮ ರವರು ಪ್ರಚಾರ ಕನ್ನಡ ರಥ ಅದ್ದೂರಿಯಾಗಿ ಸಾಗಲು ತಮಟೆ ನಗಾರಿ ಪೂಜಾ ಕುಣಿತವನ್ನು ಪುರಸಭೆ ವತಿಯಿಂದ ಆಯೋಜಿಸಲಾಗಿತ್ತು ಪುರಸಭೆಯ ಅಧ್ಯಕ್ಷರು ಸದಸ್ಯರು ಕನ್ನಡ ಅಭಿಮಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಚುಂಚಣ್ಣ ರವರು ಕನ್ನಡ ರಥ ತಾಲೂಕಿನಲ್ಲಿ ಸಡಗರ ಸಂಭ್ರಮದಿಂದ ಸಂಚರಿಸಿ ಅದ್ದೂರಿಯಾಗಿ ಪ್ರಚಾರ ಹಾಗೂ ಜಾಗೃತಿ ಜಾತ ನಡೆದಿದೆ ಯಶಸ್ವಿಗೆ ಸಹಕರಿಸಿದ ಹೃದಯವಂತ ಕನ್ನಡದ ಮನಸುಗಳಿಗೆ ಹೃದಯ ಸ್ಪರ್ಶಿ ಧನ್ಯವಾದಗಳು ತಿಳಿಸಿದರು

]]>
https://sangramatv.com/archives/1329 Thu, 28 Nov 2024 17:21:12 +0000 https://sangramatv.com/?p=1329

ಮಳವಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ವತಿಯಿಂದ ಡಿಸೆಂಬರ್ 20, 21, 22 ನೇ ತಾರೀಕು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಜರುಗುವುದರಿಂದ ಸಮ್ಮೇಳನದ ಜಾಗೃತಿ ಹಾಗೂ ಪ್ರಚಾರ ಕಾರ್ಯಕ್ರಮ ಸರ್ಕಾರಿ ಪ್ರೌಢಶಾಲೆ ಆಲದಹಳ್ಳಿ ಶಾಲೆಯಲ್ಲಿ ಜರುಗಿತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲದಳ್ಳಿ ಶಾಲಾ ಮಕ್ಕಳು ಶಿಕ್ಷಕರು ಜೊತೆಗೂಡಿ ಊರಿನ ಪ್ರಮುಖ ಬೀದಿಗಳಲ್ಲಿ ಜಾತ ಹೊರಟು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಶಿಕ್ಷಕರು ವಿದ್ಯಾರ್ಥಿಗಳು ಕನ್ನಡಪರ ಘೋಷಣೆಯನ್ನು ಕೂಗಿ ಮಾನವ ಸರಪಳಿ ನಿರ್ಮಿಸಿ ಸಮ್ಮೇಳನದ ಯಶಸ್ವಿಗೆ ಕರೆ ನೀಡಿದರು.

ಗೌರವ ಕಾರ್ಯದರ್ಶಿ ಚುಂಚಣ್ಣ ಕಲ್ಲಾರೆ ಪುರ ಮಾತನಾಡಿ ನುಡಿ ಜಾತ್ರೆಗೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಲು ಕರೆ ನೀಡಿದರು ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುವಂತೆ ಆಗ್ರಹಿಸಿದರು ನಂತರ ಕನ್ನಡ ನಾಡು ನುಡಿಯ ಬಗ್ಗೆ ರಸಪ್ರಶ್ನೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಶಾಲೆಯಲ್ಲಿ ಜರುಗಿತು.

ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು ಕಾರ್ಯಕ್ರಮದಲ್ಲಿ ಕಸಬಾ ಹೋಬಳಿ ಘಟಕದ ಅಧ್ಯಕ್ಷರಾದ ಕೃಷ್ಣ ಆಗಸನಪುರ ಕಿರುಗಾವಲು ಹೋಬಳಿ ಘಟಕದ ಅಧ್ಯಕ್ಷರಾದ ಸಿದ್ದರಾಜು ಗಟ್ಟಿಕೊಪ್ಪಲು ಉಪಾಧ್ಯಕ್ಷರಾದ ಶಿವರಾಜ್ ಸಿಎಂ ಕೋಶಾಧ್ಯಕ್ಷರಾದ ಮಾದೇಗೌಡ ಮುಖ್ಯ ಶಿಕ್ಷಕರಾದ ಪ್ರಭುಲಿಂಗ ಸ್ವಾಮಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಮಹದೇವು ಪಿಡಿಒ ಲಿಂಗರಾಜು ಹಾಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚೆಲುವರಾಜು ಶಾಲೆಯ ಶಿಕ್ಷಕರಾದ ಜಯಪ್ರದ ಅಕ್ಷತಾ ಶಿವಶಂಕರ್ ಲತಮಣಿ ನಾಗರಾಜು ಸಿದ್ದೇಶ್ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದ

]]>