ಚನ್ನಪಟ್ಟಣ – ಸಂಗ್ರಾಮ TV https://sangramatv.com News & Entertainment Mon, 17 Feb 2025 16:49:01 +0000 en-US hourly 1 https://wordpress.org/?v=7.0 https://sangramatv.com/wp-content/uploads/2022/12/cropped-124565656-32x32.png ಚನ್ನಪಟ್ಟಣ – ಸಂಗ್ರಾಮ TV https://sangramatv.com 32 32 ರಾಮನಗರ : ಚನ್ನಪಟ್ಟಣದಲ್ಲಿ ಲೋಕಯುಕ್ತ ಬಲೆಗೆ ರೇಷ್ಮೆ ವಿಸ್ತರಣಾ ಅಧಿಕಾರಿ ಪರಮೇಶ್ ಮತ್ತು ರೇಷ್ಮೆ ನೀರಿಕ್ಷಕರು ಯೋಗೇಶ್. https://sangramatv.com/archives/1357 Mon, 17 Feb 2025 16:36:13 +0000 https://sangramatv.com/?p=1357 ಚನ್ನಪಟ್ಟಣ ತಾಲ್ಲೂಕಿನ ಸೊಗಾಲದೊಡ್ಡಿ ಗ್ರಾಮದ ಎಲ್ಲಪಾ ರವರ ದೂರಿನ ಮೇಲೆ ಇಂದು ರೇಷ್ಮೆ ವಿಸ್ತರಣಾ ಅಧಿಕಾರಿ ಪರಮೇಶ್ ಮತ್ತು ರೇಷ್ಮೆ ನೀರಿಕ್ಷಕರು ಯೋಗೇಶ್ ರನ್ನು ಲೋಕಯುಕ್ತ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಲ್ಲಪಾ ರವರ ರೇಷ್ಮೆ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲು 40000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ ಅಧಿಕಾರಿಗಳು ಮೊದಲನೇ ಕಂತಿನಲ್ಲಿ 5000 ರೂಪಾಯಿ ಗಳನ್ನು ಮೊದಲು ಪಡೆದಿರುತ್ತಾರೆ, ನಂತರ ಉಳಿಕೆ 15000 ರೂಪಾಯಿ ಹಣ ಪಡೆಯುವಾಗ ಆರೋಪಿ ಪರಮೇಶ್ ನೇರವಾಗಿ ಲೋಕಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುತ್ತರೆ, ನಂತರ ಮತ್ತೊಬ್ಬ ಆರೋಪಿ ಯೋಗೇಶ್ ರವರನ್ನು ಮನೆಯಲ್ಲಿ ಬಂಧಿಸಿ ಪ್ರಕರಣ ಧಾಖಲಿಸಿ ಕೊಳ್ಳಲಾಗಿದೆ.

ಡಿ ವೈ ಎಸ್ ಪಿ ಸುಧೀರ್ ರವರ ಉಸ್ತುವಾರಿಯಲ್ಲಿ, ಲೋಕಯುಕ್ತ ಎಸ್ ಪಿ ಸ್ನೇಹ ರವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಜರುಗಿದ್ದು ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಅನಂತರಮು, ಇನ್ಸ್ಪೆಕ್ಟರ್ ಸಂದೀಪ್, ಇನ್ಸ್ಪೆಕ್ಟರ್ ಹನುಮಂತಕುಮಾರ್, ಸಿಬ್ಬಂದಿಗಳಾದ ರಘು, ಶಿವಕುಮಾರ್ ಎಂ ಇ , ರಮ್ಯ, ಭಾಗ್ಯಮ್ಮ, ಗಂಗಮ್ಮ, ಮಲ್ಲಿಕಾರ್ಜುಜನ್, ಶಂಕರ್, ಶಿವಕುಮಾರ್ ಹಾಗೂ ಇತರರು ಹಾಜರಿದ್ದರು.

]]>
ಎಂ.ಕೆ ದೊಡ್ಡಿ ಪೊಲೀಸರಿಂದ ಇಬ್ಬರು ಮನೆಗಳ್ಳರ ಬಂಧನ. https://sangramatv.com/archives/1345 Fri, 17 Jan 2025 16:42:57 +0000 https://sangramatv.com/?p=1345

ದಿನಾಂಕ:05.01.2025 ರಂದು ಮಧ್ಯಾಹ್ನ, ಎಂ.ಕೆ ದೊಡ್ಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಗೌಡಗೆರೆ ಗ್ರಾಮದ ಮನೆಯೊಂದರಲ್ಲಿ ಬೀಗ ಮುರಿದು, ಮನೆಯಲ್ಲಿದ್ದ ಚಿನ್ನದ ಒಡವೆಗಳು ಹಾಗೂ 10,000/- ರೂ ನಗದು ಹಣವನ್ನು ಕಳ್ಳತನ ಮಾಡಿರುವ ಬಗ್ಗೆ ಪಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಎಂ.ಕೆ ದೊಡ್ಡಿ ಪೊಲೀಸ್‌ ಠಾಣೆ ಮೊ.ಸಂ: 02/2025, ಕಲಂ 331 (3), 305 ಬಿ.ಎನ್.ಎಸ್‌ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಸದರಿ ಪ್ರಕರಣದಲ್ಲಿ ತನಿಖೆ ನಡೆಸಿ, ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ, ದಿನಾಂಕ: 11.01.2025 ರಂದು ಆರೋಪಿಯನ್ನು ಬಂಧಿಸಿ, ಆತನನ್ನು ವಿಚಾರಣೆ ಮಾಡಿ, ಕಳ್ಳತನ ಮಾಡಿದ್ದ 60 ಗ್ರಾಂ ಚಿನ್ನಾಭರಣಗಳನ್ನು ಅಮಾನತ್ತು ಪಡಿಸಿಕೊಂಡು, ಒಟ್ಟು 3 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಎಂ.ಕೆ ದೊಡ್ಡಿ ಪೊಲೀಸ್‌ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಯಶ್ವಸಿಯಾಗಿರುತ್ತಾರೆ.

ಪತ್ತೆಯಾದ ಪ್ರಕರಣಗಳು:

1. ಎಂ.ಕೆ ದೊಡ್ಡಿ ಪೊಲೀಸ್‌ ಠಾಣೆ ಮೊ.ಸಂ: 02/2025, ಕಲಂ 331 (3), 305 ಬಿ.ಎನ್.ಎಸ್‌.

2. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ : 215/2024 ಕಲಂ 305, 331(3) ಬಿ.ಎನ್.ಎಸ್‌.

3. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ : 119/2024 ಕಲಂ 457, 380 ಐ.ಪಿ.ಸಿ.

ದಿನಾಂಕ:10.01.2025 ರಂದು ಮಧ್ಯಾಹ್ನ, ಎಂ.ಕೆ ದೊಡ್ಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಮಾಕಳಿ ಗ್ರಾಮದ ಮನೆಯೊಂದರಲ್ಲಿ ಬೀಗ ಮುರಿದು, ಮನೆಯಲ್ಲಿದ್ದ ಚಿನ್ನದ ಒಡವೆಗಳು ಹಾಗೂ 63,000/- ರೂ ನಗದು ಹಣವನ್ನು ಕಳ್ಳತನ ಮಾಡಿರುವ ಬಗ್ಗೆ ಪಿರ್ಯಾದುದಾರರು ನೀಡಿದ ದೂರಿನ ಮೇರೆಗೆ, ಎಂ.ಕೆ ದೊಡ್ಡಿ ಪೊಲೀಸ್‌ ಠಾಣೆ ಮೊ.ಸಂ: 03/2025, ಕಲಂ 331 (3), 305 ಬಿ.ಎನ್.ಎಸ್‌ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

 

ಸದರಿ ಪ್ರಕರಣದಲ್ಲಿ ತನಿಖೆ ನಡೆಸಿ, ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ, ಆತನನ್ನು ಬಂಧಿಸಿ, ಕಳ್ಳತನ ಮಾಡಿದ್ದ 14.2 ಗ್ರಾಂ ಚಿನ್ನಾಭರಣ, 25,000/- ರೂ ನಗದು ಹಾಗೂ 1 ದ್ವಿಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಂಡು, ಪ್ರಕರಣವನ್ನು ಪತ್ತೆ ಮಾಡುವಲ್ಲಿ ಎಂ.ಕೆ ದೊಡ್ಡಿ ಪೊಲೀಸ್‌ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಯಶ್ವಸಿಯಾಗಿರುತ್ತಾರೆ.

]]>
185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕಾ ಕಾರ್ಯಕ್ಕೆ ಜಿಲ್ಲಾಡಳಿತ ಸಜ್ಜು: ಯಶವಂತ್ ವಿ. ಗುರುಕರ್ https://sangramatv.com/archives/1312 Thu, 21 Nov 2024 16:01:27 +0000 https://sangramatv.com/?p=1312 ರಾಮನಗರ : 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕಾ ಕಾರ್ಯಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದ್ದು, ನ. 23ರ ಶನಿವಾರ ರಾಮನಗರದ ಅರ್ಚಕರಹಳ್ಳಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ತಿಳಿಸಿದರು.

ಅವರು ನ.21ರ ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಅಂದು ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳ ಸಮಕ್ಷಮದಲ್ಲಿ ಬೆಳಿಗ್ಗೆ 6.45ಕ್ಕೆ ಮತಯಂತ್ರಗಳನ್ನಿಟ್ಟಿರುವ ಸ್ಟಾçಂಗ್ ರೂಂ ಅನ್ನು ತೆರೆಯಲಾಗುವುದು. 7.30ಕ್ಕೆ ಅಂಚೆ ಮತಗಳ ಎಣಿಕೆ ಕಾರ್ಯ ಪ್ರಾರಂಭಿಸಲಾಗುವುದು, ಬೆಳಿಗ್ಗೆ 8 ಗಂಟೆಗೆ ಇವಿಎಂ ಯಂತ್ರಗಳ ಮತ ಎಣಿಕೆ ಆರಂಭವಾಗಲಿದೆ, ಒಟ್ಟಾರೆ 20 ಸುತ್ತುಗಳಲ್ಲಿ ಮತ ಎಣಿಕಾ ಕಾರ್ಯ ನಡೆಯಲಿದೆ ಎಂದವರು ಮಾಹಿತಿ ನೀಡಿದರು.

ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 3 ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಒಂದು ಕೊಠಡಿಯಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ. ಇನ್ನೆರಡು ಕೊಠಡಿಗಳಲ್ಲಿ ಇವಿಎಂ ಮತ ಯಂತ್ರಗಳ ಮತ ಎಣಿಕೆ ನಡೆಯಲಿದೆ, 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,06,886 (ಶೇ.88.81) ಮತಗಳು ಚಲಾವಣೆಗೊಂಡಿದೆ. 14 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿಯೊಂದು ಟೇಬಲ್‌ಗಳಿಗೂ ಎರಡು ರಾಜಕೀಯ ಪಕ್ಷದ ಏಜೆಂಟರುಗಳಿಗೆ ಪಾಸ್ ನೀಡಲಾಗಿದೆ. ಪಕ್ಷೇತರದ ಏಜೆಂಟರುಗಳಿಗೂ ಸಹ ಪಾಸ್‌ಗಳನ್ನು ನೀಡಲಾಗಿದೆ. ಟೇಬಲ್‌ವೈಸ್ ರಾಂಡಮ್ ಆಗಿ 27 ಜನರಿಗೆ ಪಾಸ್‌ಗಳನ್ನು ನೀಡಲಾಗಿದೆ ಎಂದರು.

ಮತ ಎಣಿಕೆಗೆ 69 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 250 ಜನ ಏಜೆಂಟರುಗಳು ಇರುತ್ತಾರೆ. ಬಿಗಿಯಾದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ, ಅಂದು ಜಿಲ್ಲೆಯಾದ್ಯಂತ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಹಾಗೂ 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಬಿನೋಯ್ ಗೋಷ್ಠಿಯಲ್ಲಿದ್ದರು.

]]>
NDA ಸಮಾವೇಶದಲ್ಲಿ ನೆಲಕ್ಕೆ ಹಣೆ ಇಟ್ಟು ಮನವಿ ಮಾಡಿದ ನಿಖಿಲ್ https://sangramatv.com/archives/1306 Mon, 11 Nov 2024 11:36:14 +0000 https://sangramatv.com/?p=1306 ಚನ್ನಪಟ್ಟಣ : ತಾಲ್ಲೂಕಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದ ಬೃಹತ್ ಬಹಿರಂಗ ಸಮಾವೇಶದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ದೀರ್ಘದಂಡ ನಮಸ್ಕರಿಸಿ ಭಾಷಣ ಮಾಡಿದರು

NDA ಬೃಹತ್ ಸಮಾವೇಶದಲ್ಲಿ ಮಾತನಾಡಿದ ನಿಖಿಲ್ ಅವರು, ಈ ಚುನಾವಣೆ ನನ್ನ ಜೀವನದ ಅಗ್ನಿ ಪರೀಕ್ಷೆ…ಯಾವ ಪಾತ್ರ ಮಾಡ್ತೀಯಾ ಅಂತ ಜನ ಕೇಳ್ತಾರೆ. ನನಗೆ ಜಾತಿ ಮುಖ್ಯ ಅಲ್ಲ.ನನಗೆ ಗೊತ್ತಿರೋದು ಮನುಷ್ಯತ್ವ ಒಂದೇ ಅಂತ ತಿಳಿಸಿದರು.

*ಯೋಗ್ಯತೆ ಸಂಪಾದನೆ ಮುಖ್ಯ*

 

ನಾನು ನಿಮ್ಮಲ್ಲಿ ಪ್ರಾರ್ಥನೆ ಮಾಡುತ್ತೇನೆ,ಇದು ಪ್ರಾದೇಶಿಕ ಪಕ್ಷದ ಪ್ರಶ್ನೆ.. ಇದು ಎನ್ ಡಿಎ ಕುಟುಂಬದ ಗೌರವದ ಪ್ರಶ್ನೆ..ಭೂಮಿಗೆ ಬಂದ ಮೇಲೆ ಯೋಗ್ಯತೆ ಸಂಪಾದನೆ ಮಾತ್ರ ಮುಖ್ಯ..ಒಂದು ಅವಕಾಶ ಮಾಡಿಕೊಡಿ.ನಿಮ್ಮ ಸೇವೆ ಮಾಡುವುದಕ್ಕೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸಮಾವೇಶದಲ್ಲಿ ಮನವಿ ಮಾಡಿದರು.

 

ಕ್ಷೇತ್ರ ತೆರವಾದ ನಂತರ ಬದಲಾವಣೆ ಬಹಳ ಆಗಿವೆ..ನನ್ನ ಪಾಲಿಗೆ ಈ ಚುನಾವಣೆ ನಿರ್ಣಯಕ..ಎರಡು ಸೋಲಿಗೆ ಎದೆಗುಂದಿಲ್ಲ, ಜನಾಭಿಪ್ರಾಯ ನನ್ನ ಮೇಲೆ ಇತ್ತು. ಕಾಂಗ್ರೆಸ್ ಕುತಂತ್ರದಿಂದ ನಾನು ಸೋತೀರಬಹುದು ಆದರೆ ಫಲಿತಾಂಶ ಬೇರೆ ಆಯ್ತು..ನನ್ನ ಸೋಲಿಗೆ ಕಾರಣ ಚರ್ಚೆ ಬೇಡ ಎಂದು ತಿಳಿಸಿದರು.

*ಯಾವುದೇ ಆಮಿಷಗಳಿಗೆ ಬಲಿಯಾಗಲ್ಲ*

ಕಾರ್ಯಕರ್ತರ ಬಯಕೆಯಂತೆ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದ್ದೇನೆ. ಯಾವ ಕಾರಣಕ್ಕೂ ಕ್ಷೇತ್ರದ ಜನ ಕೂಪನ್ ಗೆ ಬೆಲೆ ನೀಡಲ್ಲ. ಆಮಿಷಗಳಿಗೆ ಬಲಿಯಾಗಲ್ಲ ನಮ್ಮ ಚನ್ನಪಟ್ಟಣ ಜನ ಎಂದರು.

ನಾಮಪತ್ರ ಸಲ್ಲಿಸಿ ಪ್ರಚಾರ ಆರಂಭ ಮಾಡಿದಾಗ ಭಾವನಾತ್ಮಕ ವಾಗಿ ಮಾತಾಡಿದೆ…ನಾನು ಭಾವನೆ ಇರುವ ವ್ಯಕ್ತಿ. ಕಳೆದ 16 ದಿನಗಳಲ್ಲಿ ಬಹಳ ಆಶೀರ್ವಾದ ಪಡೆದಿದ್ದೇನೆ. ನನಗೆ ಆಶೀರ್ವಾದ ಮಾಡಿ ಒಂದು ಪರೀಕ್ಷೆಮಾಡಿ ಈ ಪರೀಕ್ಷೆಯಲ್ಲಿ ನಾನು ಗೆದ್ದರೆ ನೀವೇ ಪರೀಕ್ಷಿಸಿ ಎಂದು ಮನವಿ ಮಾಡಿದರು.

]]>
ಎಚ್.ಡಿ.ದೇವೇಗೌಡರ ದೂರದೃಷ್ಟಿಯ ಫಲವಾಗಿ ನಿರ್ಮಾಣಗೊಂಡ ದೇವೇಗೌಡ ಬ್ಯಾರೇಜ್ ಇಲ್ಲದಿದ್ದರೆ, ಈ ಕ್ಷೇತ್ರ ನೀರಾವರಿ ಆಗುತ್ತಿರಲಿಲ್ಲ ಎಸ್.ಸಿ.ಎಸ್.ಟಿ. ಜೆಡಿಎಸ್ ರಾಜ್ಯಾಧ್ಯಕ್ಷ ಕೆ,ಅನ್ನದಾನಿ: https://sangramatv.com/archives/1300 Fri, 01 Nov 2024 13:42:58 +0000 https://sangramatv.com/?p=1300 ದೇಶದ ಮಾಜಿಪ್ರದಾನಿ ಎಚ್.ಡಿ.ದೇವೇಗೌಡರ ದೂರದೃಷ್ಟಿಯ ಫಲವಾಗಿ ನಿರ್ಮಾಣಗೊಂಡ ದೇವೇಗೌಡ ಬ್ಯಾರೇಜ್ ಇಲ್ಲದಿದ್ದರೆ, ಈ ಕ್ಷೇತ್ರ ನೀರಾವರಿ ಆಗುತ್ತಿರಲಿಲ್ಲ ಎಂದು,ಮಳವಳ್ಳಿ ಮಾಜಿ ಶಾಸಕ ಹಾಗೂ ಎಸ್.ಸಿ.ಎಸ್.ಟಿ. ಜೆಡಿಎಸ್ ರಾಜ್ಯಾಧ್ಯಕ್ಷ ಕೆ,ಅನ್ನದಾನಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     ಅವರು ನಗರದ  ಜೆಡಿಎಸ್ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ,೧೯೯೬ರಲ್ಲಿ ಇಗ್ಗಲೂರು ಬಳಿಯಲ್ಲಿ ಮಾಜಿಪ್ರಧಾನಿ ದೇವೇಗೌಡರವರ ಬ್ಯಾರೇಜ್ ನಿರ್ಮಾಣವಾಗಬೇಕಾದರೆ,ಈ ಕ್ಷೇತ್ರದ ಮಾಜಿ ಶಾಸಕರಾಗಿ ಸಚಿವರಾಗಿದ್ದ ದಿವಂಗತ ವರದೇಗೌಡರವರ ಕೊಡುಗೆಯನ್ನು ಇಲ್ಲಿ ಮರೆಯುವಂತಿಲ್ಲ ಎಂದು ವರದೇಗೌಡರ ಬಗ್ಗೆ ಗುಣಗಾನ ಮಾಡಿದರು.

      ಕ್ಷೇತ್ರದ ನೀರಾವರಿಯನ್ನು ನಾನು ಮಾಡಿರುವುದಾಗಿ ಹೇಳಿಕೊಂಡು ಕ್ಷೇತ್ರದಲ್ಲಿ ಮತಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ರವರಿಗೆ ಇದ್ಯಾವುದು ಅರಿವಿಲ್ಲವೇ, ಶಿಂಷಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣವಾಗದಿದ್ದರೇ ನೀವು ಯಾವ ಕೆರೆಗೆ ನೀರು ಬಿಡುತ್ತಿದ್ದೀರಿ ಎಂದು ಟೀಕಾ ಪ್ರಹಾರ ನಡೆಸಿದರು.

     ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ,ಚನ್ನಪಟ್ಟಣ,ಮಾಗಡಿ ಹಾಗೂ ರಾಮನಗರವನ್ನು ಶಾಸ್ವತ ನೀರಾವರಿ ಮಾಡುವ ಉದ್ದೇಶದಿಂದ ಸತ್ತೇಗಾಲ ನೀರಾವರಿ ಯೋಜನೆಯನ್ನು ೫೪೦ ಕೋಟಿರೂ ವೆಚ್ಚದಲ್ಲಿ ಪ್ರಾರಂಭ ಮಾಡಿ ಈಗಾಗಲೇ ಈ ಯೋಜನೆ ಪೂರ್ಣಗೊಂಡಿದೆ, ಇದರಿಂದ ಕಣ್ವಾ ನದಿ, ವೈಜಿ ಗುಡ್ಡ ಹಾಗೂ ಮಂಚನಬಲೆಗೆ ನೀರು ಹರಿಸುವುದಕ್ಕೆ ಈ ಯೋಜನೆ ಸಹಕಾರಿಯಾಗಿದೆ ಎಂದರು.

     ಈ ನೆಲದಲ್ಲಿ ದಲಿತ ಸಮುದಾಯಕ್ಕೆ ಶತ್ರು ಪಕ್ಷವಿದ್ದರೇ ಅದು ಕಾಂಗ್ರೆಸ್ ಪಕ್ಷ ಎಂಬುದರಲ್ಲಿ ಅನುಮಾನವೇ ಇಲ್ಲ, ಸ್ವಾತಂತ್ರ ಪೂರ್ವದಿಂದಲೂ ದಲಿತ ಸಮುದಾಯವನ್ನು ಶೋಷಣೆ ಮಾಡುತ್ತಲೇ ಬಂದ ಪಕ್ಷ ಕಾಂಗ್ರೆಸ್, ಭವ್ಯ ಭಾರತದ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್‌ರವರ ಜೀವಿತ ಅವಧಿಯಲ್ಲಿಯೂ ಅವರನ್ನು ಪ್ರತಿ ಹಂತಹಂತದಲ್ಲಿಯೂ ಕಾಡಿದ ಕಾಂಗ್ರೆಸ್ ಅವರ ಸಾವಿನಲ್ಲೂ ರಾಜಕಾರಣವನ್ನು ಮಾಡಿದರೂ ಈಂತಹ ಪಕ್ಷ ನಮ್ಮ ದಲಿತ ಸಮೂದಾಯಕ್ಕೆ ಬೇಕೇ ಎಂದು ಕಾಂಗ್ರೆಸ್‌ಪಕ್ಷದ ಬಗ್ಗೆ ಟೀಕಾ ಪ್ರಹಾರ ನಡೆಸಿದರು.

       ಎದುರಾಗಿರುವ ಚನ್ನಪಟ್ಟಣ ಉಪಚುನವಣೆಯಲ್ಲಿ ಎನ್.ಡಿ.ಎ.ಅಭ್ಯರ್ಥಿಯಾಗಿರುವ ನಿಖಿಲ್‌ಕುಮಾರಸ್ವಾಮಿರವರನ್ನು ಕ್ಷೇತ್ರದ ದಲಿತ ಸಮುದಾಯ ಬೆಂಬಲಿಸಿ ಈ ಭಾರಿ ಅವರನ್ನು ಶಾಸಕರನ್ನಾಗಿ ಮಾಡಬೇಕಾದ ಜಾವಬ್ದಾರಿ ನಮ್ಮ ಮೇಲಿದೆ ಎಂದು ತಮ್ಮ ಮನವಿಯನ್ನು ಮಾಡಿದರು.

   ಪತ್ರಿಕಾ ಗೋಷ್ಟಿಯಲ್ಲಿ ಎಸ್.ಸಿ.ಎಸ್.ಟಿ.ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೂಡ್ಲೂರು ಸಿದ್ದರಾಮು, ಜೆ.ಡಿ.ಎಸ್.ಎಸ್.ಸಿ.ಎಸ್.ಟಿ.ಘಟಕದ ಪ್ರಧಾನಕಾರ್ಯಧರ್ಶಿ ಕೆಂಗಲ್‌ಮೂರ್ತಿ, ಪ್ರಥಮದರ್ಜೆ ಗುತ್ತಿಗೆದಾರ ದ್ಯಾವಪಟ್ಟಣ ಮಲ್ಲೇಶ್, ಎಸ್.ಸಿ.ಎಸ್.ಟಿ ಘಟಕದ ನಗರ ಅಧ್ಯಕ್ಷ ಕೋಟೆ ಶ್ರೀನಿವಾಸ್, ಮಳೂರು ಪಟ್ಟಣ ಮಲ್ಲೇಶ್,ಮಂಗಳವಾರ ಪೇಟೆ ಸುನೀಲ್,ಕೃಷ್ಣಾಪುರ ಸಿದ್ದಪ್ಪ, ಎಸ್.ಎಂ.ಹಳ್ಳಿ ಸುನೀತಾ, ಮಹಾಲಕ್ಷ್ಮಿ ಹಾಗೂ ಹಲವಾರು ಮುಖಂಡರು ಹಾಜರಿದ್ದರು.

]]>
ಮತ್ತೊಮ್ಮೆ ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಂಡ ಸಿ.ಪಿ.ಯೋಗೇಶ್ವರ್ ರವರ ಪುತ್ರಿ ನಿಶಾ ಯೋಗೇಶ್ವ‌ರ್ https://sangramatv.com/archives/1276 Mon, 04 Mar 2024 11:09:37 +0000 https://sangramatv.com/?p=1276 ಚನ್ನಪಟ್ಟಣ :

ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಪ್ರಭಾವಿ ನಾಯಕ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವ‌ರ್ ಕಾಂಗ್ರೆಸ್ ಪಡಸಾಲೆಯಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ಚನ್ನಪಟ್ಟಣದ ಕಾಂಗ್ರೆಸ್ ನಾಯಕ ರಘುನಂದನ್ ರಾಮಣ್ಣ ಅವರು ಬೆಂಗಳೂರು ಮೈಸೂರು ಇನ್ಪ್ರಾಸ್ಟಕ್ಟರ್ ಕಾರಿಡಾರ್ ಪ್ರದೇಶ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುವ ಕಾರ್ಯಕ್ರಮದಲ್ಲಿ ಸಿಪಿ ಯೋಗೇಶ್ವರ್ ಅವರ ರಾಜಕೀಯ ಕಡುವೈರಿ ಸಂಸದ ಡಿ.ಕೆ. ಸುರೇಶ್ ಜೊತೆ, ನಿಶಾ ಯೋಗೇಶ್ವ‌ರ್ ಕಾಣಿಸಿಕೊಳ್ಳುವ ಮುಲಕ ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಕಣಕ್ಕಿಳಿಯಲ್ಲಿದ್ದಾರೆ ಎನ್ನುವ ಸುದ್ದಿಯಿದೆ. ಇದರ ನಡುವೆ, ಯೋಗೇಶ್ವರ್ ಪುತ್ರಿ, ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಂಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ರಘುನಂದನ್ ರಾಮಣ್ಣನವರಿಗೆ ಶುಭಕೋರುವ ಸಲುವಾಗಿ ನಿಶಾ ಯೋಗೇಶ್ವರ್ ಕಚೇರಿಗೆ ಹೋಗಿದ್ದರು ಎನ್ನಲಾಗಿದ್ದು, ಚುನಾವಣೆ ಹೊಸ್ತಿಲಿನಲ್ಲಿ ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದ ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಸಕ್ರಿಯವಾಗಿರುವ ನಿಶಾ ಯೋಗೇಶ್ವರ್ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಕಳೆದ ಕೆಲವು ದಿನಗಳ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನೂ ಸಹ ತನ್ನ ಗೆಳತಿಯೊಂದಿಗೆ ಭೇಟಿ ಮಾಡಿದ್ದ ನಿಶಾ.. ಈ ಮತ್ತೆ ಸಂಸದ ಸುರೇಶ್ ಜೊತೆಗೆ ರಘುನಂದನ್ ರಾಮಣ್ಣ ಅವರಿಗೆ ವಿಷ್ ಮಾಡುವ ನೆಪದಲ್ಲಿ ಕಾಣಿಸಿಕೊಂಡಿರುವ ಮರ್ಮ ಏನು ಎನ್ನುವ ಪ್ರಶ್ನೆ ಜಿಲ್ಲೆಯಲ್ಲಿ ಮೂಡಿದೆ…

]]>
ಚನ್ನಪಟ್ಟಣ ನಗರಸಭಾ ಪೌರಾಯುಕ್ತರ ವಿರುದ್ಧ ಯುಡಿ ಕಾರ್ಯದರ್ಶಿ ಅಜಯ್ ನಾಗ್ ಭೂಷಣ್ ಗೆ ದೂರು ನೀಡಿದ ನಗರಸಭಾ ಅಧ್ಯಕ್ಷರು ಮತ್ತು ಸದಸ್ಯರುಗಳು https://sangramatv.com/archives/1258 Tue, 20 Feb 2024 16:17:05 +0000 https://sangramatv.com/?p=1258 ಚನ್ನಪಟ್ಟಣದ ನಾಗರೀಕರ ಆಸ್ತಿಗಳಿಗೆ ಈ ಖಾತೆ ನೀಡಿಕೆಯಲ್ಲಿ ನಡೆಯುತ್ತಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಚನ್ನಪಟ್ಟಣ ನಗರಸಭೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಪುಟ್ಟಸ್ವಾಮಿಯವರನ್ನು ಕೂಡಲೇ ಕರ್ತವ್ಯದಿಂದ ವಜಾ ಮಾಡಬೇಕೆಂದು 20-02-2024 ರಂದು ಬೆಂಗಳೂರಿನ ವಿಕಾಸಸೌಧದ ಯುಡಿ ಕಾರ್ಯದರ್ಶಿ ಅಜಯ್ ನಾಗಭೂಷಣ್ ರವರಿಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ.

ದೂರಿನಲ್ಲಿ ಡಿಸಿ ಪರಿವರ್ತಕಗಳನ್ನು ಮಾರ್ಗ ಸೂಚಿಗಳ ಪ್ರಕಾರ ಇಲ್ಲದ ಮತ್ತು ಚನ್ನಪಟ್ಟಣ ಯೋಜನಾ ಪ್ರಾಧಿಕಾರದಿಂದ ಅನುಮೋದಿಸಲಾಗಿರದ ಆಸ್ತಿಗಳನ್ನು ಅಧಿಕೃತ ಎಂದು ನೀಡಲಾಗಿರುವ ಹಲವು ದಾಖಲೆಗಳ ಪ್ರತಿಗಳನ್ನು ನೀಡಲಾಗಿದೆ.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಪ್ರಶಾಂತ್, ನಗರಸಭಾ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು ಮಂಜುನಾಥ್, ಸದಸ್ಯರುಗಳಾದ ನಾಗೇಶ್, ಬಾಬು ಹಾಜರಿದ್ದರು

]]>
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಅಂಬಾಡಿಹಳ್ಳಿ ಕಾರ್ಯಕ್ಷೇತ್ರದಲ್ಲಿ ಆಯೋಜನೆ ಮಾಡಲಾಗಿದ್ದ ಸೃಜನಶೀಲ ಕಾರ್ಯಕ್ರಮದ ಸಮಾರೂಪ ಸಮಾರಂಭ https://sangramatv.com/archives/1252 Mon, 12 Feb 2024 14:49:03 +0000 https://sangramatv.com/?p=1252 ಚನ್ನಪಟ್ಟಣ,ಫೆ: 12- ಎಲ್ಲಾ ಸಂಪತ್ತುಗಳಿಗಿoತ ಆರೋಗ್ಯ ಸಂಪತ್ತು ಮಹಳ ಮುಖ್ಯವಾಗಿದ್ದು ಅದರಲ್ಲೂ ಹೆಣ್ಣು ಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ, ತಾಲ್ಲೂಕು ಯೋಜನಾಧಿಕಾರಿ ದಿನೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ತಾಲ್ಲೂಕಿನ ಸೋಗಾಲ ವಲಯದ, ಅಂಬಾಡಿಹಳ್ಳಿ ಕಾರ್ಯಕ್ಷೇತ್ರದಲ್ಲಿ ಆಯೋಜನೆ ಮಾಡಲಾಗಿದ್ದ ಸೃಜನಶೀಲ ಕಾರ್ಯಕ್ರಮದ ಸಮಾರೂಪ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಪ್ರತಿನಿತ್ಯ ತನ್ನ ಕುಟುಂಬಕ್ಕಾಗಿ ತನ್ನ ಆರೋಗ್ಯವನ್ನು ಬದಿಗೊತ್ತಿ ತನ್ನ ಕರ್ತವ್ಯವನ್ನು ನಿಭಾಹಿಸುವ ಕುಟುಂಬದ ಕಣ್ಣಾದ ಹೆಣ್ಣುಮಕ್ಕಳು ಸಾಕಷ್ಟು ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ನೋಡಬಹುದಾಗಿದೆ, ಅಂತಹ ಹೆಣ್ಣು ಮಕ್ಕಳನ್ನು ಗುರುತಿಸಿ, ಅವರ ರಕ್ತವನ್ನು ಪರೀಕ್ಷೆಗೊಳಪಡಿಸಿ, ಅವರ ಆರೋಗ್ಯವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಮುಂದಾಗಿರುವುದು, ಅವರ ನಿಷ್ಕಳಂಕ ಸೇವಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿರುವುದ ಹೆಣ್ಣು ಮಕ್ಕಳ ಆದ್ಯ ಕರ್ತವ್ಯವಾಗಿದ್ದು, ಪೌಷ್ಟಿಕತೆಯ ಆಹಾರವನ್ನು ಸೇವನೆ ಮಾಡಬೇಕು ಅದರಲ್ಲೂ ಹಸಿರು ತರಕಾರಿಗಳು,ಹಸಿರುಸೊಪ್ಪು, ಮೊಳೆಕಟ್ಟಿದ ಕಾಳುಗಳು ಹಾಗೂ ಹಣ್ಣುಹಂಪಲು ಸೇವಿಸುವುದರ ಮುಖಾಂತರ ಹೆಣ್ಣು ಮಕ್ಕಳು ಆರೋಗ್ಯದಲ್ಲಿ ಸಧೃಡತೆಯನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು. ಚAದ್ರು ಡಯಗ್ನೋಷ್ಟಿಕ್ ಸೆಂಟರ್‌ನ ವ್ಯದ್ಯ ಡಾ|| ಅಭಿಷೇಕ್ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ನಮ್ಮ ಆಹಾರ ವ್ಯವಸ್ಥೆಯು ಸಂಪೂರ್ಣವಾಗಿ ಬದಲಾವಣೆಯಾಗಿದೆ, ಕೆಮಿಕಲ್ ಮಿಶ್ರಿತ ರುಚಿಕರ ಆಹಾರಕ್ಕೆ ಜೋತು ಬಿದ್ದಿರುವುದುರಿಂದ ನಾವೇ ಸ್ವತಹ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದು ವಿಷಾಧಿಸಿದರು. ಗುಣಮಟ್ಟದ ಆಹಾರವನ್ನು ಸೇವಿಸುವುದರೊಂದಿಗೆ, ಆಹಾಗ್ಗೆ ತಮ್ಮ ಆರೋಗ್ಯದ ಬಗ್ಗೆ ಈ ರೀತಿಯ ಶಿಬಿರಗಳ ಮುಖಾಂತರ ತಪಾಸಣೆಗೊಳಪಡಿಸಿಕೊಂಡಾಗ ಮಾತ್ರ ತಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಲು ಸಾಧ್ಯ ಎಂದರು. ಕೇAದ್ರದ ಸದಸ್ಯೆ ಅಂಕಮ್ಮ ಮಾತನಾಡಿ, ನನ್ನ ಆರೋಗ್ಯ ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಿದ್ದು, ನನ್ನ ಆರ್ಥಿಕ ಸಮಸ್ಯೆಯಿಂದ ಎಲ್ಲಿಯೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದೆ ಇರುವ ಸಂದರ್ಭದಲ್ಲಿ ಶ್ರೀಕ್ಷೇತ್ರ ನನ್ನನ್ನು ಗುರುತಿಸಿ, ನನ್ನ ರಕ್ತವನ್ನು ತಪಾಸಣೆಗೊಳಪಡಿಸಿದಾಗ ನನ್ನ ರಕ್ತ ಪ್ರಮಾಣ ಬಹಳಷ್ಟು ಕಡಿಮೆ ಇರುವುದರಿಂದಲೇ, ನನ್ನ ಆರೋಗ್ಯದಲ್ಲಿ ಬದಲಾವಣೆಯಾಗಲು ಕಾರಣವಾಗಿತ್ತು ಎಂದರು. ಶ್ರೀಕ್ಷೇತ್ರದದಿAದ ನನಗೆ ಉತ್ತಮ ರೀತಿಯಲ್ಲಿ ಔಷೋದಪಚಾರ ಮಾಡಿದ ಪರಿಣಾಮ, ನನ್ನ ದೇಹದಲ್ಲಿ ರಕ್ತ ದ್ವಿಗುಣಗೊಳ್ಳುವುದರ ಜೊತೆಗೆ, ನನ್ನ ಆರೋಗ್ಯ ಉತ್ತಮವಾಗಿದೆ ಎಂದು, ಶ್ರೀಕ್ಷೇತ್ರ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಗೌರಮ್ಮ,ಜ್ಞಾನವಿಕಾಶ ಸಮನ್ವಯಾಧಿಕಾರಿಯಾದ ಸುಜಾತ, ವಲಯ ಮೇಲ್ವಿಚಾರಕರಾದ ಭಾಗ್ಯ, ಸೇವಾ ಪ್ರತಿನಿಧಿಗಳಾದ ಪದ್ಮ,ಐಶ್ರ‍್ಯ ಹಾಗೂ ಹಲವರು ಮುಖಂಡರು ಹಾಜರಿದ್ದರು.

]]>
ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಉಚಿತ ಮದುಮೇಹ ಹಾಗೂ ರಕ್ತದೊತ್ತಡ ತಪಾಸಣೆ.. https://sangramatv.com/archives/1245 Fri, 09 Feb 2024 16:08:57 +0000 https://sangramatv.com/?p=1245 ಚನ್ನಪಟ್ಟಣ,ಫೆ:9-ಎಲ್ಲಾ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಬಹಳ ಮುಖ್ಯವಾಗಿದೆ ಎಂದು ಚಂದ್ರು ಡಯಗ್ನೋಷ್ಟಿಕ್ ಸಂಟರ್‌ನ ಸಂಸ್ಥಾಪಕಾರದ ವಿ.ಸಿ.ಚಂದ್ರೇಗೌಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ, ನಗರದ ಚಂದ್ರು ಡಯಗ್ನೋಷ್ಟಿಕ್ ಸೆಂಟರ್‌ನಿಂದ, ಉಚಿತ ಮದುಮೇಹ ಹಾಗೂ ರಕ್ತದೊತ್ತಡ ತಪಾಸಣೆಯನ್ನು ವಾಯುವಿಹಾರಕ್ಕೆ ಬರುವ ಯುವಕರು ವೃದ್ದರಿಗೆ ಮೆದುಮೇಹ ಹಾಗೂ ರಕ್ತದೊತ್ತಡವನ್ನು ಪರೀಕ್ಷೆ ಮಾಡುವುದರ ಮುಖಾಂತರ ಚಾಲನೆ ನೀಡಿ ಮಾತನಾಡಿದರು. ಪ್ರಸಕ್ತ ದಿನಗಳಲ್ಲಿನ ನಮ್ಮ ಆಹಾರ ಪದ್ದತಿಗಳಿಂದ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸಗಳಿರುವುದರ ಜೊತೆಗೆ, ನೂರು ಮಂದಿಯಲ್ಲಿ ಶೇ 50 ರಷ್ಟು ಮಂದಿಗೆ ಶುಗರ್ ಹಾಗೂ ಬಿಪಿ ಕಂಡು ಬರುತ್ತಿರುವುದು ಕಳವಳಕಾರಿಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಶುಗರ್,ಬಿಪಿ ಬಂದ ಮೇಲೆ ಪಶ್ಚಾತಾಪ ಪಡುವುದಕ್ಕಿಂತ, ಅವುಗಳು ಬರದಂತೆ ಎಚ್ಚರವಹಿಸುವುದು ಉತ್ತಮ ಬೆಳವಣಿಗೆಯಾಗಿದೆ,ಒಂದು ವೇಳೆ ಈ ಲಕ್ಷಣಗಳು ಕಂಡು ಬಂದರೆ ತಕ್ಷಣ ಸೂಕ್ತ ಸಮಯದಲ್ಲಿ ತಮ್ಮ ರಕ್ತ ಪರೀಕ್ಷೆ ಮಾಡಿಕೊಂಡು, ವೈದ್ಯರ ಸಲಹೆ ಮೇರೆಗೆ ಔಷದಿಗಳನ್ನು ಪಡೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು. ಚಂದ್ರು ಡಯಗ್ನೋಷ್ಟಿಕ್ ಸೆಂಟರ್‌ನಿಂದ ಪ್ರತಿ ಶುಕ್ರವಾರ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಜನರ ಆರೋಗ್ಯದ ದೃಷ್ಟಿಯಿಂದ ಉಚಿತವಾಗಿ ಶುಗರ್ ಹಾಗೂ ಬಿಪಿ ತಪಾಸಣೆ ಮಾಡುತ್ತಿರುವುದರ ಜೊತೆಯಲ್ಲಿ ಔಷೋದಪಚಾರ ನೀಡುತ್ತಿರುವುದಾಗಿ ತಿಳಿಸಿದರು. ಈ ದಿನ ಮುಂಜಾನೆಯಿಂದಲೇ ಶುಗರ್‌ ಹಾಗೂ ಬಿಪಿ ತಪಾಸಣೆ ಮಾಡಲಾಗುತ್ತಿದ್ದು, ವಾಕಿಂಗ್ ಬರುವ ಸುಮಾರು 100ಕ್ಕೂ ಹೆಚ್ಚು ಮಂದಿಗೆ ತಪಾಸಣೆ ಮಾಡುತ್ತಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಚಂದ್ರು ಡಯಗ್ನೋಷ್ಟಿಕ್ ಸೆಂಟರ್‌ನ ಪ್ರಮುಖರಾದ ಪಾರ್ಥಸಾರಥಿ,ಗಂಗಾಧರ್,ವಿಘ್ನೇಶ್ ಹಾಗೂ ಹಲವಾರು ಮಂದಿ ಮುಖಂಡರು ಹಾಜರಿದ್ದರು.

]]>
ಬಾಲುಪಬ್ಲಿಕ್ ಶಾಲೆಯಲ್ಲಿ ಕಾನೂನು ಅರಿವು, ಜೀತ ಪದ್ದತಿ ನಿರ್ಮೂಲನೆ ದಿನಾಚರಣೆಯ ಸಮಾರಂಭ https://sangramatv.com/archives/1242 Fri, 09 Feb 2024 16:05:26 +0000 https://sangramatv.com/?p=1242 ಚನ್ನಪಟ್ಟಣ,ಫೆ:9 -ಆಟಪಾಠದಲ್ಲಿ ತೊಡಗಿಕೊಂಡು ಸುಂದರವಾದ ಭವಿಷ್ಯವನ್ನು ಕಾಣುವ ಮುಗ್ದ ಮಕ್ಕಳನ್ನು ಯಾವುದೇ ರೀತಿಯ ಕೆಲಸಗಳಿಗೆ ಬಳಸಿಕೊಳ್ಳುವುದು ಅಪರಾಧವಾಗಿದೆ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮರೀಗೌಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದ, ಬಾಲು ಪಬ್ಲಿಕ್ ಶಾಲೆ, ಬಾಲು ಆಸ್ಪತ್ರೆ , ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲ್ಲೂಕು ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿನ ಕಾನೂನು ಅರಿವು, ಜೀತ ಪದ್ದತಿ ನಿರ್ಮೂಲನೆ ದಿನಾಚರಣೆಯ ಸಮಾರಂಭದಲ್ಲಿ, ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದರು. ತಮ್ಮ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಮುಗ್ದ ಮಕ್ಕಳನ್ನು ಶಾಲೆಗೆ ಕಳುಹಿಸದೆ, ವಿವಿಧ ರೀತಿಯ ಕೆಲಸಗಳಿಗೆ ಹಚ್ಚುವುದರಿಂದ,ಮುAದಿನ ಮಕ್ಕಳ ಭವಿಷ್ಯ ಕಮರುವುದರ ಜೊತೆಯಲ್ಲಿಯೇ ನಿಮ್ಮ ಕುಟುಂಬಗಳು ಕಷ್ಟದ ಸಂಕೋಲೆಯಲ್ಲಿ ನರಳುವಂತಾಗುತ್ತದೆ ಎಂದು ತಿಳಿಸಿದರು. ಆಪ್ರಾಪ್ತ ಮಕ್ಕಳನ್ನು ಕಾರ್ಮಿಕರಾಗಿ ದುಡಿಸಿಕೊಳ್ಳುವುದು ಅಪರಾಧವಾಗಿರುವುದರ ಜೊತೆಯಲ್ಲಿ ಮಕ್ಕಳನ್ನು ಸೇರಿಸುವುದು ಕೂಡ ಅಪರಾಧವಾಗಿರುತ್ತದೆ, ಸರ್ಕಾರ ಜೀತ ಪದ್ದತಿಯಲ್ಲಿರುವ ,ಶಾಲೆ ಬಿಟ್ಟ ಮಕ್ಕಳಿಗೆ ಹಾಗೂ ವಿವಿಧ ಕಾರಣಗಳಿಗೆ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನು ಮತ್ತೆ ಶಾಲೆಗೆ ದಾಖಲಿಸಿಕೊಳ್ಳಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದ ಅವರು ಭವಿಷ್ಯದ ಉಜ್ವಲ ಪ್ರಜೆಗಳಾದ ಮಕ್ಕಳು,ತಮ್ಮ ಸುತ್ತಮುತ್ತ ಯಾರಾದರೂ 18 ವರ್ಷದಿಂದ ಕೆಳಮಟ್ಟ ಮಕ್ಕಳು ಅಂದರೆ ಅಪ್ರಾಪ್ತ ಮಕ್ಕಳು ಕೆಲ ಮನೆಗಳಲ್ಲಿ ಜೀತ ಪದ್ದತಿ ಮಾಡುವುದು, ಗ್ಯಾರೆಜ್, ರೇಷ್ಮೆಗಿರಣಿ, ಹೋಟೆಲ್ ಹಾಗೂ ಇತರೆ ಕಡೆ ಕೆಲಸ ಮಾಡುವವರು ಕಂಡು ಬಂದರೆ ಕೂಡಲೇ ಸಂಬAಧಿಸಿದ ಪೊಲೀಸ್‌ಠಾಣೆಗೆ ಮಾಹಿತಿ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಮುಖ್ಯ ಬಾಷಣಕಾರರಾಗಿ ಮಾತನಾಡಿದ ತಾಲ್ಲೂಕು ವಕೀಲರ ಸಂಘದ,ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಸುನೀಲ್ ರಾಜ್ ಅರಸ್, ಜೀತಪದ್ದತಿ ಎಂಬುದು ದೊಡ್ಡ ಪಿಡುಗಾಗಿದ್ದು. ಅದರಲ್ಲೂ ಆಪ್ರಾಪ್ತ ಮಕ್ಕಳನ್ನು ಜೀತಕ್ಕೆ ಬಳಸಿಕೊಳ್ಳುವುದು ಅಪರಾಧವಾಗಿದ ಎಂದು ಹಲವಾರು ಮಾಹಿತಿಗಳನ್ನು ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಜಂಟಿ ಕಾರ್ಯದರ್ಶಿ ವಿ.ಬಾಲಸುಬ್ರಮಣ್ಯಂ, ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ತಡೆಯುವಲ್ಲಿ ಪೊಲೀಸ್ ಇಲಾಖೆಗೆ ವಿದ್ಯಾರ್ಥಿಗಳು ಸಹಕಾರ ನೀಡಬೇಕಾಗಿರುವುದು ಜಾಬಾಬ್ದಾರಿಯಾಗಿದೆ, ಈ ನಿಟ್ಟಿನಲ್ಲಿ ಶಾಲೆಯ ವಿದ್ಯಾರ್ಥಿಗಳು ಸಮಾಜ ಮುಖೇನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ವಿ.ವೆಂಕಟಸುಬ್ಬಯ್ಯ ಚಟ್ಟಿ,  ಶಾಲೆಯ ಪ್ರಾಂಶುಪಾಲರಾದ ಕವಿತಾ ಹಾಗೂ ಹಲವಾರು ಮಂದಿ ಹಾಜರಿದ್ದರು.

]]>