ದೇಶ – ಸಂಗ್ರಾಮ TV https://sangramatv.com News & Entertainment Sun, 13 Aug 2023 03:08:07 +0000 en-US hourly 1 https://wordpress.org/?v=6.9.1 https://sangramatv.com/wp-content/uploads/2022/12/cropped-124565656-32x32.png ದೇಶ – ಸಂಗ್ರಾಮ TV https://sangramatv.com 32 32 ನಟಿ ಜಯಪ್ರದಾಗೆ ಆರು ತಿಂಗಳು ಜೈಲು ಶಿಕ್ಷೆ https://sangramatv.com/archives/1017 Sun, 13 Aug 2023 03:08:07 +0000 https://sangramatv.com/?p=1017 ಉದ್ಯೋಗಿಗಳ ರಾಜ್ಯ ವಿಮಾ ಕಾಯಿದೆಯಡಿ ಹಣ ಪಾವತಿಸಲು ವಿಫಲವಾದ ಕಾರಣಕ್ಕೆ ನಟಿ ಮತ್ತು ಮಾಜಿ ಸಂಸದೆ ಜಯಪ್ರದಾ ಅವರಿಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ತನ್ನ ಮಾಲೀಕತ್ವದ ಚಿತ್ರಮಂದಿರದ ಉದ್ಯೋಗಿಗಳಿಗೆ ನೀಡಲು ಬಾಕಿ ಇರುವ ಹಣವನ್ನು ನೌಕರರ ರಾಜ್ಯ ವಿಮಾ ನಿಗಮಕ್ಕೆ (ಇಎಸ್‌ಐಸಿ) ಪಾವತಿಸಬೇಕೆಂಬ ಶಾಸನಬದ್ಧ ಆದೇಶವನ್ನು ಪಾಲಿಸಲು ವಿಫಲವಾದ ಹಿನ್ನೆಲೆಯಲ್ಲಿ ನಟಿ ಮತ್ತು ಮಾಜಿ ಸಂಸದೆ ಜಯಪ್ರದಾ ಅವರಿಗೆ ಚೆನ್ನೈನ ನ್ಯಾಯಾಲಯ ಆರು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ.

ಇಎಸ್‌ಐಸಿಯ ದೂರನ್ನು ಪರಿಗಣಿಸಿ ಚೆನ್ನೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ತಮ್ಮ ವೇತನದಿಂದ ಇಎಸ್‌ಐ ಮೊತ್ತದ ಕೊಡುಗೆಯನ್ನು ಕಡಿತಗೊಳಿಸಲಾಗಿದ್ದರೂ ಆ ಹಣವನ್ನು ರಾಜ್ಯ ವಿಮಾ ನಿಗಮಕ್ಕೆ ನಿಯಮದ ಪ್ರಕಾರ, ಜಯಪ್ರದಾ ಒಡೆತನದ, ಆದರೆ ಈಗ ನಿಷ್ಕ್ರಿಯಗೊಂಡಿರುವ ಚಿತ್ರ ಮಂದಿರದ ಆಡಳಿತ ವರ್ಗ ಪಾವತಿಸಿಸರಲಿಲ್ಲ ಎಂದು ಇಎಸ್‌ಐಸಿ ದೂರಿತ್ತು.

ಜಯಪ್ರದಾ ಮತ್ತು ಆಕೆಯ ಸಹೋದರರಾದ ರಾಮ್‌ಕುಮಾರ್ ಹಾಗೂ ರಾಜ್ ಬಾಬು ʼಜಯಪ್ರದಾ ಸಿನಿಮಾʼ ಹೆಸರಿನ ಚಿತ್ರಮಂದಿರದದ ಪಾಲುದಾರರಾಗಿದ್ದರು. ಅದು ಸುಮಾರು 10 ವರ್ಷಗಳ ಹಿಂದೆ ಪ್ರದರ್ಶನ ಸ್ಥಗಿತಗೊಳಿಸಿತ್ತು.

ಇಎಸ್‌ಐ ಕಾಯಿದೆಯ ಸೆಕ್ಷನ್ 40ರ ಪ್ರಕಾರ, ಪ್ರಧಾನ ಉದ್ಯೋಗದಾತನು ಉದ್ಯೋಗದಾತರ ಕೊಡುಗೆಯ ಪಾಲನ್ನು ಮತ್ತು ಉದ್ಯೋಗಿಗಳ ಕೊಡುಗೆಯ ಪಾಲನ್ನು ಪಾವತಿಸಬೇಕಾಗುತ್ತದೆ. ಉದ್ಯೋಗಿಗಳ ವೇತನದಿಂದ ಆ ಕೊಡುಗೆಯ ಮೊತ್ತವನ್ನು ವಸೂಲಿ ಮಾಡಲು ಪ್ರಧಾನ ಉದ್ಯೋಗದಾತ ಅರ್ಹನಾಗಿರುತ್ತಾನೆ.

ಉದ್ಯೋಗಿಗಳ ರಾಜ್ಯ ವಿಮಾ ಕಾಯಿದೆಯು ಪ್ರಾಥಮಿಕವಾಗಿ ಉದ್ಯೋಗಿಗಳ ಪ್ರಯೋಜನಕ್ಕಾಗಿ ಜಾರಿಗೊಳಿಸಲಾದ “ಸಾಮಾಜಿಕ ಕಲ್ಯಾಣ ಶಾಸನದ ಒಂದು ಭಾಗ” ಎಂದು ಹೇಳಿರುವ ನ್ಯಾಯಾಲಯವು ವಿನಾಯತಿ ಕೋರಿದ್ದ ಜಯಪ್ರದಾ ಅವರ ಮನವಿಯನ್ನು ತಿರಸ್ಕರಿಸಿತು.

ಪ್ರಸ್ತುತ ಪ್ರಕರಣ ವಿನಾಯಿತಿ ತೋರಿಸುವ ವರ್ಗಕ್ಕೆ ಬರುವುದಿಲ್ಲ. ಅಂದರೆ ಶಿಕ್ಷೆ ವಿಧಿಸುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ. ಆರೋಪಿಗಳಿಗೆ ಶಿಕ್ಷೆ ಅನುಭವಿಸುವಂತೆ ನಿರ್ದೇಶಿಸಬೇಕು, ಅಪರಾಧದ ಗಂಭೀರ ಸ್ವರೂಪದ್ದಾಗಿರುವುದರಿಂದ ಯಾವುದೇ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಿ ಸುಂದರಪಾಂಡಿಯನ್ ಹೇಳಿದರು.

 

]]>
ಬ್ರಿಟಿಷರು 1860ರಲ್ಲಿ ಐಪಿಸಿ ರೂಪಿಸಿದ್ದು, ಕಳೆದ 160 ವರ್ಷಗಳಿಂದ ದೇಶದಲ್ಲಿ ಅಪರಾಧ ನ್ಯಾಯದಾನ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದಕ್ಕೆ ಪರ್ಯಾಯವಾಗಿ ಭಾರತೀಯ ನ್ಯಾಯ ಸಂಹಿತೆ 2023 ಜಾರಿಗೆ ಬರಲಿದೆ. https://sangramatv.com/archives/1012 Sat, 12 Aug 2023 09:58:21 +0000 https://sangramatv.com/?p=1012 1973ರಲ್ಲಿ ಸಿಆರ್‌ಪಿಸಿ ಜಾರಿಗೆ ಬಂದಿದ್ದು, ಅದಕ್ಕೆ ಬದಲಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಬರಲಿದೆ. 1872ರ ಭಾರತೀಯ ಸಾಕ್ಷ್ಯ ಕಾಯಿದೆಗೆ ಬದಲಾಗಿ ಭಾರತೀಯ ಸಾಕ್ಷ್ಯ ಮಸೂದೆ 2023 ಮಂಡಿಸಲಾಗುತ್ತದೆ

ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) 1860, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) 1973 ಮತ್ತು ಭಾರತೀಯ ಸಾಕ್ಷ್ಯ ಕಾಯಿದೆ 1872 ಅನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಭಾರತೀಯ ನ್ಯಾಯ ಸಂಹಿತೆ 2023 ಮಸೂದೆ ಮಂಡನೆ ಮಾಡಿದೆ. ಗೃಹ ಸಚಿವ ಅಮಿತ್‌ ಶಾ ಅವರು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದರು.

ಪ್ರಸ್ತಾವಿತ ಕಾನೂನಿನ ಸೆಕ್ಷನ್ 101 (ಬಿ) ಪ್ರಕಾರ, ಗುಂಪು ಹತ್ಯೆಗೈದ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಮರಣದಂಡನೆ, ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷ ಇಲ್ಲವೇ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಬದಲಿಗೆ ಭಾರತೀಯ ನ್ಯಾಯ ಸಂಹಿತೆಯನ್ನು ಸಂಸತ್ತು ಅಂಗೀಕರಿಸಿದರೆ ಗುಂಪು ಹತ್ಯೆಗೈದವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ.

]]>
ಇಂದಿನಿಂದ 8 ದಿನ ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಜಿ20 ಶೃಂಗಸಭೆ https://sangramatv.com/archives/875 Sun, 09 Jul 2023 04:03:27 +0000 https://sangramatv.com/?p=875 ಹೊಸಪೇಟೆ: ಈ ಬಾರಿ ಭಾರತ ಜಿ20 ಶೃಂಗಸಭೆಯ (G-20 Summit) ಅಧ್ಯಕ್ಷತೆ ವಹಿಸಿದ್ದು, ಜಿ20 ಶೃಂಗಸಭೆಯ ಮೂರನೇ ಪ್ರಮುಖ ಸಭೆ ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ (Hampi) ಇಂದಿನಿಂದ 8 ದಿನ (ಜು.09 ರಿಂದ ಜು.16) ರವರೆಗೆ ನಡೆಯಲಿದೆ. ಈ ಮೂಲಕ ವಿಜಯನಗರ (Vijayanagar) ವಾಸ್ತುಶಿಲ್ಪ ಶೈಲಿ, ವಿಜಯನಗರ ಸಾಮ್ರಾಜ್ಯದ ಹಿರಿಮೆ-ಗರಿಮೆಯನ್ನು ಇಡೀ ಜಗತ್ತಿಗೆ ಪರಿಚಯಿಸುವ ದೇಷ್ಟಿಯಿಂದ ಹಂಪಿಯಲ್ಲಿ ಜಿ.20 ಶೃಂಗಸಭೆ ಆಯೋಜಿಸಲಾಗಿದೆ.

Hampeಇನ್ನು ಇಂದಿನಿಂದ ಜು.13ರವರೆಗೆ ಜಿ20 ರಾಷ್ಟ್ರಗಳ ಸಾಂಸ್ಕೃತಿಕ ಕಾರ್ಯ ತಂಡದ ಸಭೆ ನಡೆಯಲಿದೆ. ಈ ತಂಡ ಭಾರತದ ಸಂಸ್ಕೃತಿ ಸೇರಿ ವಿವಿಧ ವಿಷಯಗಳ ಕುರಿತು ಚರ್ಚಿಸಲಿದೆ. ಜೊತೆಗೆ ಸದಸ್ಯ ರಾಷ್ಟ್ರಗಳ ಐತಿಹಾಸಿಕ ಪಾರಂಪರೆಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಬಗ್ಗೆ ಜಿ-20 ರಾಷ್ಟಗಳು ಸುದೀರ್ಘವಾಗಿ ಚರ್ಚೆ ನಡೆಸಲಿವೆ. ಈ ಸಭೆಯಲ್ಲಿ ದೇಶ-ವಿದೇಶದ 252 ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.

ಜಿ20 ಶೆರ್ಪಾ ಸಭೆ

ಜಿ20 ಶೆರ್ಪಾ ಸಭೆ ಜು.13ರಿಂದ 16ರವರೆಗೆ ನಡೆಯಲಿದೆ. ಜಿ20 ರಾಷ್ಟ್ರಗಳ ಪ್ರಧಾನಿಗಳ ಜೊತೆಗೆ ನೇರ ಸಂಪರ್ಕ ಹೊಂದಿರುವ ಅಧಿಕಾರಿಗಳು ಶೆರ್ಪಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜಿ20 ರಾಷ್ಟ್ರಗಳ ಸಭೆಗಳಲ್ಲಿ ಇದೊಂದು ವಿಶೇಷ ಸಭೆಯಾಗಿದೆ. ಸಭೆಯಲ್ಲಿ 20 ದೇಶಗಳ ಪೈಕಿ 19 ದೇಶಗಳ 30 ಪ್ರತಿನಿಧಿಗಳು, 9 ಆಹ್ವಾನಿತ ದೇಶಗಳ 16 ಪ್ರತಿನಿಧಿಗಳು, 4 ಸಂಸ್ಥೆಗಳ ಪ್ರತಿನಿಧಿಗಳು ಸೇರಿ ಒಟ್ಟು 52 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಉಭಯ ಸಭೆಗಳಲ್ಲಿ 200ಕ್ಕೂ ಅಧಿಕ ಅಧಿಕಾರಿಗಳೂ ಪಾಲ್ಗೊಳ್ಳಲಿದ್ದಾರೆ.

]]>
ಪತ್ನಿಯ ಒಪ್ಪಿಗೆಯಿಲ್ಲದೆ ಪತಿ ಮನೆಯ ವಸ್ತುಗಳು, ಆಭರಣ ತೆಗೆದುಕೊಳ್ಳಲು ಕಾನೂನಿನಲ್ಲಿ ಅನುಮತಿ ಇಲ್ಲ: ದೆಹಲಿ ಹೈಕೋರ್ಟ್ https://sangramatv.com/archives/690 Wed, 04 Jan 2023 09:06:49 +0000 https://sangramatv.com/?p=690 ನವದೆಹಲಿ: ತನ್ನ ಪತ್ನಿಗೆ ಮಾಹಿತಿ ನೀಡದೆ ಮತ್ತು ಆಕೆಯ ಒಪ್ಪಿಗೆ ಅಥವಾ ಆಕೆಗೆ ಅರಿವಿಲ್ಲದೆ ಪತಿ ಆಭರಣ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಪತ್ನಿಯ ದೂರಿನ ಮೇರೆಗೆ ಪತಿಯ ಬಂಧನ ಪೂರ್ವ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅಮಿತ್ ಮಹಾಜನ್ ನಡೆಸಿದರು.

ಮನೆಗೆ ಬೀಗ ಹಾಕಲಾಗಿದೆ ಮತ್ತು ತಾನು ಮನೆಯಲ್ಲಿ ಇಲ್ಲದಿರುವಾಗ ಆಭರಣಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಪತ್ನಿ ಆರೋಪಿಸಿದ್ದಾರೆ. ಯಾವುದೇ ಕಳವು ನಡೆದಿಲ್ಲ. ವೈವಾಹಿಕ ಭಿನ್ನಾಭಿಪ್ರಾಯದಿಂದಾಗಿ ತನ್ನ ಪತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪತಿಯ ಪರ ವಕೀಲರು ವಾದಿಸಿದರು.

ಆದರೆ, ‘ಅರ್ಜಿದಾರರು ದೂರುದಾರರ ಪತಿಯಾಗಿದ್ದರೂ ಸಹ, ಆಕೆಗೆ ತಿಳಿಯದೆ ಪತಿ ಕೂಡ ಆಭರಣಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಈ ರೀತಿ ತೆಗೆದುಕೊಳ್ಳಲು ಕಾನೂನಿನ ಅಡಿಯಲ್ಲಿ ಅವಕಾಶವಿಲ್ಲ. ಇಬ್ಬರ ನಡುವೆ ಏನೇ ಭಿನ್ನಾಭಿಪ್ರಾಯವಿದ್ದರೂ ಕೂಡ, ಕಾನೂನನ್ನು ಕೈಗೆತ್ತಿಕೊಳ್ಳಲು ಯಾವುದೇ ವ್ಯಕ್ತಿಗೆ ಅನುಮತಿ ನೀಡಲಾಗುವುದಿಲ್ಲ’ ಎಂದು ನ್ಯಾಯಾಲಯ ಹೇಳಿದೆ.

‘ಇಸ್ತ್ರಿಧಾನ್’ (ಆಕೆಯ ಆಸ್ತಿ) ಗೆ ಸಂಬಂಧಿಸಿದಂತೆ ಹೆಂಡತಿಯ ದೂರು ಬಾಕಿ ಉಳಿದಿರುವುದರಿಂದ, ಹೆಂಡತಿಯನ್ನು ಗುಟ್ಟಾಗಿ ಮನೆಯಿಂದ ಹೊರಹಾಕಲು ಮತ್ತು ಆಕೆಗೆ ತಿಳಿಯದೆಯೇ ಮನೆಯಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಹೋಗಲು ಪತಿಗೆ ಅವಕಾಶವಿಲ್ಲ’ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರಿಗೆ ಬಂಧನ ಪೂರ್ವ ಜಾಮೀನನ್ನು ತಿರಸ್ಕರಿಸಿದ ನ್ಯಾಯಾಲಯ, ನಿರೀಕ್ಷಣಾ ಜಾಮೀನಿನ ಸೆಕ್ಷನ್ 438ರ ಅಡಿಯಲ್ಲಿ ಈ ಅಧಿಕಾರವನ್ನು ಸಾಮಾನ್ಯ ರೀತಿಯಲ್ಲಿ ಚಲಾಯಿಸಬಾರದು ಎನ್ನಲಾಗಿದೆ. ಅರ್ಜಿದಾರರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಅವರನ್ನು ಗಾಯಗೊಳಿಸುವ ಅಥವಾ ಅವಮಾನಿಸುವ ಉದ್ದೇಶದಿಂದ ಆರೋಪ ಮಾಡಲಾಗಿದೆ ಎಂದು ತಿಳಿದುಬಂದರೆ ಮಾತ್ರ ಈ ಅಧಿಕಾರವನ್ನು ಚಲಾಯಿಸಬೇಕು ಎಂದು ಅಭಿಪ್ರಾಯಪಟ್ಟಿತು.

ಅಂತೆಯೇ, ಬಂಧನದ ನಿರೀಕ್ಷೆಯಲ್ಲಿ ಜಾಮೀನಿನ ಆದೇಶವನ್ನು ಗುರಾಣಿಯಾಗಿ ಬಳಸಲು ಅನುಮತಿಯಿಲ್ಲ. ವಿಚಾರಣೆಗೆ ಒಳಪಡದೆಯೇ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ. ಹೀಗಾಗಿ, ಆರೋಪಿಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಈ ಹಂತದಲ್ಲಿ ಹೇಳಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

]]>
ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರ ನ್ಯಾಯ ಸಮ್ಮತವಾಗಿದೆ: ಸುಪ್ರೀಂಕೋರ್ಟ್ https://sangramatv.com/archives/687 Mon, 02 Jan 2023 06:29:14 +0000 https://sangramatv.com/?p=687 ನವದೆಹಲಿ: ನೋಟುಗಳ ರದ್ದು  ತಪ್ಪಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ.

2016ರಲ್ಲಿ ಕೇಂದ್ರ ಸರ್ಕಾರ 500 ರು. ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ಘೋಷಿಸಿದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ 58 ಅರ್ಜಿಗಳ ಕುರಿತು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದೆ.

ಆರ್‌ಬಿಐ ಒಪ್ಪಿಗೆ ಪಡೆದೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ತಜ್ಞರ ಸಲಹೆ ಪಡೆದು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ, ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ, ನೋಟುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ, ಸ್ವಯಂ ಯಾವುದೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಆರ್‌ಬಿಐನ ಕೇಂದ್ರೀಯ ಮಂಡಳಿಯ ಶಿಫಾರಸುಗಳ ಅನ್ವಯ ಮಾತ್ರವೇ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಬಹುದು. ಹೀಗಾಗಿ 2016ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ಅಪನಗದೀಕರಣ ನೀತಿ ತಪ್ಪು ನಿರ್ಧಾರ ಎಂದು ವಾದಿಸಿದ್ದರು.

ಮತ್ತೊಂದೆಡೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ, ಈ ಪ್ರಕರಣದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಸರಿಯಲ್ಲ ಎಂದಿತ್ತು. ಜೊತೆಗೆ ಸಮಯವನ್ನು ಹಿಂದಕ್ಕೆ ಸರಿಸುವ, ಒಡೆದ ಮೊಟ್ಟೆಯನ್ನು ಮರುಜೋಡಿಸುವ ಇಂಥ ಯತ್ನಗಳಿಂದ ಯಾರಿಗೂ ಯಾವುದೇ ಪರಿಹಾರ ನೀಡುವುದು ಸಾಧ್ಯವಿಲ್ಲ ಎಂದಿತ್ತು. ಅಲ್ಲದೆ ನಕಲಿ ನೋಟು ತಡೆ, ಭಯೋತ್ಪಾದನೆಗೆ ಹಣ ಪೂರೈಕೆ ಜಾಲಕ್ಕೆ ಕಡಿವಾಣ, ಕಪ್ಪುಹಣ ಮತ್ತು ತೆರಿಗೆ ವಂಚನೆ ತಡೆಯಲು ಅಪನಗದೀಕರಣ ಘೋಷಿಸಲಾಗಿದೆ. ಇದು ಸಾಕಷ್ಟು ಯೋಚಿಸಿ ಕೈಗೊಂಡ ನಿರ್ಧಾರವಾಗಿತ್ತು ಎಂದು ಸ್ಪಷ್ಟಪಡಿಸಿತ್ತು.

ನೋಟು ನಿಷೇಧದಿಂದ ನಾಗರೀಕರು ಕೆಲ ಕಾಲ ಸಮಸ್ಯೆಗಳನ್ನು ಎದುರಿಸಿದ್ದರು, ಆದರೆ ದೇಶಕಟ್ಟುವ ಕೆಲಸದಲ್ಲಿ ಇದು ಅನಿವಾರ್ಯ. ಆದರೆ, ಇಂಥ ಸಮಸ್ಯೆಗಳನ್ನು ಬಳಿಕ ಲಭ್ಯ ವ್ಯವಸ್ಥೆಯ ಮೂಲಕ ಪರಿಹರಿಸಲಾಯಿತು’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌, ನ್ಯಾಯಾಲಯಕ್ಕೆ ಮಾಹಿತಿ ನೀಡಿತು.

]]>
ಕ್ರಿಕೆಟರ್ ರಿಷಬ್ ಪಂತ್ ಗೆ ಅಪಘಾತ, ಪರಿಸ್ಥಿತಿ ಗಂಭೀರ https://sangramatv.com/archives/682 Fri, 30 Dec 2022 05:05:36 +0000 https://sangramatv.com/?p=682 ನವದೆಹಲಿ: ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್ ಪಂತ್ ಅವರು ಕಾರು ಅಪಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದೆಹಲಿ ಹಾಗೂ ಡೆಹ್ರಾಡೂನ್‌ ರಾಷ್ಟ್ರೀಯ ಹೆದ್ದಾರಿಯಲ್ಲಿನ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಷಭ್‌ ಪಂತ್ ಅವರ ತಲೆ ಹಾಗೂ ಕಾಲುಗಳಿಗೆ ಗಾಯವಾಗಿದೆ. ಹಾಗಾಗಿ ಅವರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ರಿಷಭ್‌ ಪಂತ್‌ ಅವರು ದೆಹಲಿಯಿಂದ ಉತ್ತರಾಖಂಡಕ್ಕೆ ಮರಳುತ್ತಿದ್ದ ವೇಳೆ ಹಮ್ಮಾದ್‌ಪುರ್‌ ಝಾಲ್‌ ಸಮೀಪ ಈ ದುರ್ಘಟನೆ ನಡೆದಿದೆ. ಅವರು ಮರ್ಸಿಡಿಸ್‌ ಕಾರು ಚಲಾಯಿಸುತ್ತಿದ್ದರು. ಕಾರು ವೇಗವಾಗಿದ್ದ ಕಾರಣ ನಿಯಂತ್ರಣಕ್ಕೆ ಸಿಗದೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.

ರಿಷಭ್ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಅವರ ಪ್ಲಾಸ್ಟಿಕ್ ಸರ್ಜರಿ ಮಾಡಲಾಗುವುದು. ವೈದ್ಯರ ಪ್ರಕಾರ, ರಿಷಬ್ ಪಂತ್ ಅವರ ಹಣೆ ಮತ್ತು ಕಾಲಿಗೆ ಗಾಯಗಳಾಗಿವೆ.

ಸದ್ಯ ರಿಷಬ್ ಪಂತ್ಸ್ಥಿತಿ ಸ್ಥಿರವಾಗಿದ್ದು, ಅವರನ್ನು ರೂರ್ಕಿಯಿಂದ ದೆಹಲಿಗೆ ಕಳುಹಿಸಲಾಗುತ್ತಿದೆ ಎಂದು ಸಕ್ಷಮ್ ಆಸ್ಪತ್ರೆಯ ಅಧ್ಯಕ್ಷ ಡಾ ಸುಶೀಲ್ ನಗರ್ ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ರಿಷಬ್ ಅವರ ಕಾರು ರೇಲಿಂಗ್‌ಗೆ ಡಿಕ್ಕಿ ಹೊಡೆದ ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಬಹಳ ಕಷ್ಟಪಟ್ಟು ಬೆಂಕಿಯನ್ನು ಹತೋಟಿಗೆ ತರಲಾಯಿತು.

]]>
ಪ್ರಧಾನಿ ಮೋದಿಗೆ ಮಾತೃ ವಿಯೋಗ, ಗಣ್ಯರ ಸಂತಾಪ https://sangramatv.com/archives/678 Fri, 30 Dec 2022 05:02:49 +0000 https://sangramatv.com/?p=678 ಅಹಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಮೋದಿಯವರು ಗುಜರಾತ್​​ನ ಅಹಮದಾಬಾದ್​ನಲ್ಲಿ ಶುಕ್ರವಾರ ನಿಧನರಾದರು.

ಹೀರಾಬೆನ್ ಅವರಿಗೆ 100 ವರ್ಷ ವಯಸ್ಸಾಗಿತ್ತು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು  ನಗರದ ಯುಎನ್​ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದರೆ.

 

ಹೀರಾಬೆನ್ ಮೋದಿ ಅವರು 2022ರ ಜೂನ್ 18ರಂದು 100ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದರು. ಪ್ರಧಾನಿ ಮೋದಿ ಅವರು ಗಾಂಧಿನಗರ ನಿವಾಸಕ್ಕೆ ಭೇಟಿ ನೀಡಿ ತಾಯಿಗೆ ಶುಭಾಶಯ ತಿಳಿಸಿ, ಆಶೀರ್ವಾದ ಪಡೆದಿದ್ದರು. ತಾಯಿಯ ಪಾದ ತೊಳೆದು ಪೂಜಿಸಿದ್ದರು.

ಹೀರಾಬೆನ್‌ ನಿಧನಕ್ಕೆ ಗಣ್ಯರೆಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ. ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರ ನಿಧನಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್, ಗುಜರಾತ್​ ಸಿಎಂ ಭೂಪೇಂದ್ರ ಪಟೇಲ್​​, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪೂಜ್ಯ ತಾಯಿ ಹೀರಾಬೆನ್ ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತ್ಯಂತ ಬೇಸರವಾಯಿತು. ದೇಶಕ್ಕೆ ಹೆಮ್ಮೆ ತಂದ ಪುತ್ರನಿಗೆ ಜನ್ಮ ನೀಡಿದ ಮಹಾತಾಯಿಗೆ ಸದ್ಗತಿ ಕೋರುತ್ತೇನೆ. ಪ್ರಧಾನಿಯವರಿಗೆ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ  ಎಂದಿದ್ದಾರೆ.

ಕುಟುಂಬ ಪೋಷಣೆಗಾಗಿ ಹೀರಾಬೆನ್ ಅವರು ನಡೆಸಿದ ಹೋರಾಟ ಎಲ್ಲರಿಗೂ ಮಾದರಿಯಾಗಿದೆ. ಅವರ ತ್ಯಾಗದ ತಪಸ್ವಿ ಜೀವನ ಸದಾ ನಮ್ಮ ನೆನಪಿನಲ್ಲಿ ಉಳಿಯುತ್ತದೆ. ಈ ದುಃಖದ ಸಮಯದಲ್ಲಿ ಇಡೀ ರಾಷ್ಟ್ರವು ಪ್ರಧಾನಿ ಮೋದಿ ಮತ್ತು ಅವರ ಕುಟುಂಬದೊಂದಿಗೆ ನಿಂತಿದೆ. ಕೋಟಿ ಕೋಟಿ ಜನರ ಪ್ರಾರ್ಥನೆ ನಿಮ್ಮೊಂದಿಗಿದೆ. ಓಂ ಶಾಂತಿ ಎಂದು ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ.

ನರೇಂದ್ರ ಮೋದಿಯವರ ತಾಯಿಯ ನಿಧನದ ಸುದ್ದಿ ಅತ್ಯಂತ ದುಃಖ ತರಿಸಿದೆ, ತಾಯಿಯ ಮರಣವು ಜೀವನದಲ್ಲಿ ಎಂದೂ ಮರೆಯಲಾಗದ ನೋವನ್ನು ಉಂಟು ಮಾಡುತ್ತದೆ. ಈ ಸಮಯದಲ್ಲಿ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ದೇವರು ಕರುಣಿಸಲಿ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್ ಮಾಡಿದ್ದಾರೆ.

ಮಗನಿಗೆ ತಾಯಿಯೇ ಇಡೀ ಜಗತ್ತು. ತಾಯಿಯ ಸಾವು ಮಗನಿಗೆ ಭರಿಸಲಾಗದ ಮತ್ತು ತುಂಬಲಾರದ ನಷ್ಟವಾಗಿದೆ. ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಯಿಯ ನಿಧನವು ತುಂಬಾ ದುಃಖಕರವಾಗಿದೆ. ತಾಯಿಗೆ ಶ್ರೀರಾಮ ಅವರ ಪುಣ್ಯ ಪಾದದಲ್ಲಿ ಸ್ಥಾನ ನೀಡಲಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಟ್ವೀಟ್ ಮಾಡಿದ್ದಾರೆ.

ಅತ್ಯಂತ ಸರಳ ಮತ್ತು ಪ್ರೀತಿಯ ನಗು ಮುಖ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ದೇವರು ಅಗಲಿದ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಈ ದುಃಖದ ಸಮಯದಲ್ಲಿ ನರೇಂದ್ರ ಮೋದಿ ಮತ್ತು ಕುಟುಂಬಕ್ಕೆ ಶಕ್ತಿ ನೀಡಲಿ. ಓಂ ಶಾಂತಿ ಎಂದು ನಿತಿನ್ ಗಡ್ಕರಿ ಸಂತಾಪ ಸೂಚಿಸಿದ್ದಾರೆ.

]]>
ಕೋವಿಡ್ ನಿಯಮಗಳ ಪಾಲಿಸಿ, ಸಾಧ್ಯವಾಗದಿದ್ದರೆ ಭಾರತ್ ಜೋಡೋ ಯಾತ್ರೆ ರದ್ದುಗೊಳಿಸಿ: ರಾಹುಲ್ ಗಾಂಧಿಗೆ ಕೇಂದ್ರ ಸರ್ಕಾರ ಸೂಚನೆ https://sangramatv.com/archives/651 Wed, 21 Dec 2022 07:20:20 +0000 https://sangramatv.com/?p=651 ನವದೆಹಲಿ: ಕೋವಿಡ್–19 ನಿಯಮಾವಳಿಗಳನ್ನು ಪಾಲನೆ ಮಾಡಿ. ಸಾಧ್ಯವಾಗದಿದ್ದರೆ ಭಾರತ್ ಜೋಡೊ ಯಾತ್ರೆಯನ್ನು ನಿಲ್ಲಿಸಿ ಎಂದು ಕಾಂಗ್ರೆಸ್’ಗೆ ಕೇಂದ್ರ ಸರ್ಕಾರ ಬುಧವಾರ ಸೂಚನೆ ನೀಡಿದೆ.

ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಚೀನಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಭಾರತದಲ್ಲಿನ ಸ್ಥಿತಿಗತಿ ಕುರಿತು ಚರ್ಚಿಸಿ ಆರೋಗ್ಯ ಸಚಿವರು ಈ ಸೂಚನೆ ಕೊಟ್ಟಿದ್ದಾರೆಂದು ತಿಳಿದುಬಂದಿದೆ.

ಭಾರತ್ ಜೋಡೊ ಯಾತ್ರೆಯಲ್ಲಿ ಕೋವಿಡ್ ತಡೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ಪಾಲನೆಯಾಗದಿದ್ದರೇ ಯಾತ್ರೆಯನ್ನು ನಿಲ್ಲಿಸುವುದು ಸೂಕ್ತ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ವಿಚಾರವನ್ನು ತಲೆಯಲ್ಲಿಟ್ಟುಕೊಳ್ಳಿ ಎಂದು ಪತ್ರದಲ್ಲಿ ಸೂಚಿಸಿದ್ದಾರೆಂದು ವರದಿಗಳು ತಿಳಿಸಿವೆ.

ಯಾತ್ರೆಯಲ್ಲಿ ಭಾಗವಹಿಸಿದ ನಂತರ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಕೊರೋನಾ ವೈರಸ್‌ ಸೋಂಕಿಗೆ ಒಳಗಾಗಿದ್ದನ್ನು ಉಲ್ಲೇಖಿಸಿ ರಾಜಸ್ಥಾನದ ಮೂವರು ಸಂಸದರ ಬರೆದಿರುವ ಪತ್ರವನ್ನು ಕೂಡ ಕೇಂದ್ರ ಸಚಿವರು ರಾಹುಲ್​ ಗಾಂಧಿಗೆ ಕಳುಹಿಸಿರುವ ಪತ್ರದಲ್ಲಿ ಲಗತ್ತಿಸಿದ್ದಾರೆ.

ಈ ನಡುವೆ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಬುಧವಾರ ಬೆಳಿಗ್ಗೆ ಹರಿಯಾಣ ಪ್ರವೇಶಿಸಿದೆ.

]]>
ತಂತ್ರಜ್ಞಾನಕ್ಕೆ ಜವಾಬ್ದಾರಿಯುತ ನಿಯಂತ್ರಣದ ಅಗತ್ಯವಿದೆ: ಗೂಗಲ್ ಸಿಇಒ ಸುಂದರ್ ಪಿಚೈ https://sangramatv.com/archives/640 Tue, 20 Dec 2022 06:51:16 +0000 https://sangramatv.com/?p=640 ನವದೆಹಲಿ: ತಂತ್ರಜ್ಞಾನಕ್ಕೆ ಜವಾಬ್ದಾರಿಯುತ ನಿಯಂತ್ರಣದ ಅಗತ್ಯವಿದೆ. ದೇಶಗಳು ತಮ್ಮ ನಾಗರಿಕರನ್ನು ರಕ್ಷಿಸುವುದು ಮುಖ್ಯವಾಗಿದೆ ಎಂದು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ದೆಹಲಿಯಲ್ಲಿ ನಿನ್ನೆ ನಡೆದ ಗೂಗಲ್ ಫಾರ್ ಇಂಡಿಯಾ 2022 ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಮುಂದಿನ ವರ್ಷ ಮೂರು ಹೊಸ ಕಾನೂನುಗಳಾದ ಟೆಲಿಕಾಂ ಬಿಲ್, ಡೇಟಾ ಪ್ರೊಟೆಕ್ಷನ್ ಬಿಲ್ ಮತ್ತು ಡಿಜಿಟಲ್ ಇಂಡಿಯಾ ಆಕ್ಟ್ ನ್ನು ಪರಿಚಯಿಸುವ ಯೋಜನೆ ಸರ್ಕಾರದ್ದಾಗಿದ್ದು ಈ ಸಂದರ್ಭದಲ್ಲಿ ಪಿಚೈ ಹೇಳಿಕೆ ಮಹತ್ವ ಪಡೆದಿದೆ.

ಭಾರತ ಸರ್ಕಾರವು ಕಂಪನಿಗಳಿಗೆ ಹೊಸತನವನ್ನು ನೀಡಲು ಅವಕಾಶಗಳನ್ನು ನೀಡುವ ಕಾನೂನನ್ನು ಸಿದ್ಧಪಡಿಸುವಂತೆ ಪಿಚೈ ಸಲಹೆ ನೀಡಿದರು. ನೀವು ನವೀನ ಚೌಕಟ್ಟನ್ನು ರಚಿಸುತ್ತಿದ್ದೀರಿ ಇದರಿಂದ ಕಂಪನಿಗಳು ಕಾನೂನು ಚೌಕಟ್ಟಿನಲ್ಲಿ ಖಚಿತತೆಯ ಮೇಲೆ ಹೊಸತನವನ್ನು ಬೆಳೆಸಬಹುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೇಂದ್ರ ಟೆಲಿಕಾಂ ಸಚಿವ ಅಶ್ವನಿ ವೈಷ್ಣವ್ ಅವರು, ಕಾನೂನು ಮತ್ತು ನಿಯಂತ್ರಣ ಚೌಕಟ್ಟುಗಳು ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿರಬೇಕು, ಮುಂಬರುವ ಮೂರು ಕಾನೂನುಗಳು ಸರಿಯಾದ ದಿಕ್ಕಿನಲ್ಲಿವೆ ಎಂದು ಹೇಳಿದರು.

ಭಾರತದ G20 ಅಧ್ಯಕ್ಷ ಸ್ಥಾನಕ್ಕೆ ಪಿಚೈ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲವನ್ನು ನೀಡಿದರು. ಸಣ್ಣ ಉದ್ಯಮಗಳು ಮತ್ತು ಸ್ಟಾರ್ಟ್‌ಅಪ್‌ಗಳು, ಸೈಬರ್‌ ಸೆಕ್ಯುರಿಟಿ ಮತ್ತು ಕೃತಕ ಬುದ್ಧಿಮತ್ತೆ (AI)ಯನ್ನು ಹೇಗೆ ಬೆಂಬಲಿಸುತ್ತದೆ ಎಂಬುದನ್ನು ಒಳಗೊಂಡಂತೆ ಗೂಗಲ್ ಕೈಗೊಂಡ ಪ್ರಯತ್ನಗಳ ಕುರಿತು ಸುಂದರ್ ಪಿಚೈ ಪ್ರಧಾನಿಗೆ ತಿಳಿಸಿದರು.

]]>
ಆ್ಯಸಿಡ್‌ ದಾಳಿ ಪ್ರಕರಣ – ಅಮೆಜಾನ್‌, ಫ್ಲಿಪ್‌ಕಾರ್ಟ್‌ಗೆ ಕೇಂದ್ರದಿಂದ ನೋಟಿಸ್‌ ಜಾರಿ https://sangramatv.com/archives/617 Fri, 16 Dec 2022 03:57:09 +0000 https://sangramatv.com/?p=617 ನವದೆಹಲಿ (ಡಿ.16): ದೆಹಲಿ ದ್ವಾರಕಾದಲ್ಲಿ 17 ವರ್ಷದ ಶಾಲಾ ಬಾಲಕಿಯ ಮೇಲೆ ಆ್ಯಸಿಡ್‌ ಎರಚಿದವರು ಆಕೆಯ ಗೆಳೆಯರೇ ಆಗಿದ್ದರು. ಆ್ಯಸಿಡ್‌ ಅನ್ನು ಆನ್‌ಲೈನ್‌ ಮಾರಾಟ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿದ್ದರು ಎಂಬ ಆಘಾತಕಾರಿ ಮಾಹಿತಿ ತನಿಖೆಯ ನಂತರ ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿ ಸಚಿನ್‌ ಅರೋರಾ (20) ಹಾಗೂ ಆತನ ಇಬ್ಬರು ಗೆಳೆಯರು ಹರ್ಷಿತ್‌ ಅರ್ಗವಾಲ್‌ (19) ಹಾಗೂ ವಿರೇಂದರ್‌ ಸಿಂಗ್‌ (22) ಈ ಮೂವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆ ವೇಳೆ 2022 ಸೆಪ್ಟೆಂಬರ್‌ವರೆಗೂ ಸಚಿನ್‌ ಹಾಗೂ ಆ್ಯಸಿಡ್‌ ಸಂತ್ರಸ್ತೆ ನಡುವೆ ಗೆಳೆತನವಿತ್ತು.

ಸೆಪ್ಟೆಂಬರ್‌ನಲ್ಲಿ ಇಬ್ಬರ ನಡುವಿನ ಸಂಬಂಧ ಹಳಿಸಿದ್ದಕ್ಕೆ ಕೋಪಗೊಂಡ ಸಚಿನ್‌ ಆ್ಯಸಿಡ್‌ ದಾಳಿಗೆ ಮುಂದಾದ ಎಂದು ಪೊಲೀಸರು ಹೇಳಿದ್ದಾರೆ. 3ನೇ ಆರೋಪಿ ವಿರೇಂದರ್‌ ಸಚಿನ್‌ ಆ್ಯಸಿಡ್‌ ದಾಳಿ ನಡೆಸುವ ವೇಳೆಯಲ್ಲಿ ಆತನ ಮೊಬೈಲ್‌ ಹಾಗೂ ವಾಹನವನ್ನು ಬೇರೆಡೆಗೆ ಒಯ್ದು ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಅಲ್ಲದೇ ಆ್ಯಸಿಡ್‌ ಅನ್ನು ಫ್ಲಿಪ್‌ಕಾರ್ಟ್‌ನಿಂದ ತರಿಸಿಕೊಂಡಿದ್ದರು. ಅರೋರಾ ಇ-ವ್ಯಾಲೆಟ್‌ ಬಳಸಿ ಆ್ಯಸಿಡ್‌ ಖರೀದಿಗೆ ಹಣ ಪಾವತಿಸಿದ್ದಾನೆ ಎಂದು ತಿಳಿದುಬಂದಿದೆ. ಬುಧವಾರ ಮುಂಜಾನೆ 7:30 ಸುಮಾರಿಗೆ ರಾಮಾ ಪಾರ್ಕ್‌ನಲ್ಲಿ ಬಾಲಕಿ ತನ್ನ ಸಹೋದರಿ ಜತೆ ನಡೆದುಕೊಂಡು ಹೋಗುತ್ತಿರುವಾಗ ಅರೋರಾ ಹಾಗೂ ಅರ್ಗವಾಲ್‌ ಮುಸುಕು ಧರಿಸಿ ಬಂದು ಆಕೆಯ ಮುಖಕ್ಕೆ ಆ್ಯಸಿಡ್‌ ಎರಚಿದ್ದರು.

ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಆ್ಯಸಿಡ್‌ ಮಾರಾಟದ ಮೇಲೆ ನಿರ್ಬಂಧವಿದ್ದರೂ ಆ್ಯಸಿಡ್‌ ಅನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿರುವುದಕ್ಕೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಳ್‌ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಚ್‌ಗೆ ನೋಟಿಸ್‌ ಜಾರಿ ಮಾಡಿದ್ದಾರೆ. ನಿರ್ದಿಷ್ಟಲೈಸೆನ್ಸ್‌ದಾರರು ಮಾತ್ರ ಆ್ಯಸಿಡ್‌ ಮಾರಬೇಕು ಎಂದು 2013ರಲ್ಲೇ ಸುಪ್ರೀಂ ಕೋರ್ಚ್‌ ಆದೇಶಿಸಿತ್ತು. “ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಲಭವಾಗಿ ಆ್ಯಸಿಡ್‌ ಲಭ್ಯತೆ ಗಂಭೀರ ಕಾಳಜಿಯ ವಿಷಯವಾಗಿದೆ ಮತ್ತು ಇದನ್ನು ತುರ್ತಾಗಿ ಪರಿಶೀಲಿಸಬೇಕಾಗಿದೆ” ಎಂದು ಆಯೋಗವು ನೋಟಿಸ್‌ನಲ್ಲಿ ತಿಳಿಸಿದೆ.

ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಆ್ಯಸಿಡ್‌ ಮಾರಾಟಕ್ಕೆ ಅನುಮತಿ ನೀಡಿದ ಆರೋಪದ ಮೇಲೆ ದೆಹಲಿ ಮಹಿಳಾ ಆಯೋಗವು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೆ ನೋಟಿಸ್ ಜಾರಿ ಮಾಡಿದೆ. ಇನ್ನೊಂದೆಡೆ ಬಾಲಕಿಯ ಮೇಲಿನ ಆ್ಯಸಿಡ್‌ ದಾಳಿಯನ್ನು ಫ್ಲಿಪ್‌ಕಾರ್ಟ್ ಖಂಡಿಸಿದೆ ಮತ್ತು ಮಾರಾಟಗಾರನನ್ನು ತನ್ನ ವೇದಿಕೆಯಿಂದ ಕಪ್ಪುಪಟ್ಟಿಗೆ ಸೇರಿಸಿದೆ ಮತ್ತು ತನಿಖಾ ಸಂಸ್ಥೆಗಳಿಗೆ ಎಲ್ಲಾ ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿದೆ.

]]>